Ioniq 7 ಎಲೆಕ್ಟ್ರಿಕ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ Hyundai

ಭವಿಷ್ಯದ ಕಾರುಗಳತ್ತ ಒಂದು ಹೆಜ್ಜೆ ಮುಂದಿಟ್ಟಿರುವ ದಕ್ಷಿಣ ಕೊರಿಯ ಮೂಲದ ಕಾರು ತಯಾರಕ ಕಂಪನಿಯಾದ ಹ್ಯುಂಡೈ (Hyundai) ಹೊಸ ಕಾನ್ಸೆಪ್ಟ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಶೀಘ್ರದಲ್ಲಿಯೇ ಅನಾವರಣಗೊಳಿಸಲಿದೆ. ಈ ಕಾನ್ಸೆಪ್ಟ್ ಮಾದರಿಯನ್ನು ಕಾನ್ಸೆಪ್ಟ್ ಸೆವೆನ್ ಎಂದು ಕರೆಯಲಾಗುತ್ತಿದೆ. ಈ ಕಾರ್ ಅನ್ನು ಮಾರುಕಟ್ಟೆಯಲ್ಲಿ ಹ್ಯುಂಡೈ Ioniq 7 ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

Ioniq 7 ಎಲೆಕ್ಟ್ರಿಕ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ Hyundai

ನವೆಂಬರ್ 17 ರಂದು ಲಾಸ್ ಏಂಜಲೀಸ್ ಆಟೋ ಶೋನಲ್ಲಿ ಕಂಪನಿಯು ಈ ಕಾನ್ಸೆಪ್ಟ್ ಕಾರ್ ಅನ್ನು ಅನಾವರಣಗೊಳಿಸಲಿದೆ. ಈ ಕಾರ್ ಅನ್ನು ಸಂಪೂರ್ಣವಾಗಿ ಅನಾವರಣಗೊಳಿಸುವ ಮೊದಲು ಹ್ಯುಂಡೈ ಕಂಪನಿಯು ಕೆಲವು ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಹ್ಯುಂಡೈ ಸೆವೆನ್ ಕಾನ್ಸೆಪ್ಟ್ ಸಂಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಏಳು ಜನರು ಕುಳಿತುಕೊಳ್ಳಬಹುದು.

ಈ ಕಾರು ಮೂರು ಸಾಲಿನ ಸೀಟುಗಳನ್ನು ಹೊಂದುವ ಸಾಧ್ಯತೆಗಳಿವೆ. ಹ್ಯುಂಡೈ Ioniq 5 ಹಾಗೂ Ioniq 6 ನಂತರ, ಈಗ Ioniq 7 ಎಲೆಕ್ಟ್ರಿಕ್ ಎಸ್‌ಯು‌ವಿಯನ್ನು ಈ ಸರಣಿಯಲ್ಲಿ ಸೇರಿಸಲಾಗುತ್ತಿದೆ. ಹ್ಯುಂಡೈ ಕಂಪನಿಯು ಬಿಡುಗಡೆಗೊಳಿಸಿರುವ ಟೀಸರ್ ನಲ್ಲಿ ಕಾರಿನ ಬಗ್ಗೆ ಹೆಚ್ಚು ಮಾಹಿತಿಯನ್ನು ಹಂಚಿ ಕೊಂಡಿಲ್ಲ. ಆದರೆ ಟೀಸರ್‌ ಚಿತ್ರಗಳು ಈ ಕಾರನ್ನು ಆಕರ್ಷಕ ವಿನ್ಯಾಸದೊಂದಿಗೆ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಅಳವಡಿಸಲಾಗುವುದು ಎಂದು ಸಾಬೀತುಪಡಿಸುತ್ತದೆ.

Ioniq 7 ಎಲೆಕ್ಟ್ರಿಕ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ Hyundai

ಕಂಪನಿಯು ಈ ಕಾರಿನ ಮುಂಭಾಗದ ಚಿತ್ರಗಳನ್ನು ಹಂಚಿಕೊಂಡಿದೆ. ಈ ಚಿತ್ರಗಳಲ್ಲಿ ಕಾರಿನಲ್ಲಿ ಪ್ಯಾರಾಮೆಟ್ರಿಕ್ ಪಿಕ್ಸೆಲ್ ಲೈಟಿಂಗ್ ಅನ್ನು ಬಳಸಲಾಗಿರುವುದನ್ನು ಕಾಣಬಹುದು. ಕಾರಿನ ಮುಂಭಾಗದಲ್ಲಿ ಎಲ್ಇಡಿ ಲೈಟ್ ಬಾರ್ ಅನ್ನು ಅಳವಡಿಸಲಾಗಿದೆ. ಅದು ಹುಡ್'ನ ಒಂದು ತುದಿಯಿಂದ ಮತ್ತೊಂದು ತುದಿಗೆ ಚಲಿಸುತ್ತದೆ. ಹುಡ್ ಅಡಿಯಲ್ಲಿ ಪ್ಯಾರಾಮೆಟ್ರಿಕ್ ಎಲ್ಇಡಿ ಪಿಕ್ಸೆಲ್'ಗಳನ್ನು ಬಳಸುವ ಎಲ್ಇಡಿ ಹೆಡ್ ಲೈಟ್ ಯುನಿಟ್ ನೀಡಲಾಗಿದೆ.

ಇದರ ಜೊತೆಗೆ ಕಾರಿನ ಚಕ್ರವನ್ನು ಸಹ ಚಿತ್ರದಲ್ಲಿ ತೋರಿಸಲಾಗಿದೆ. ಅದರ ಮೇಲೆ ಕ್ರೋಮ್ ಅನ್ನು ಸಿಲ್ವರ್ ಅಸೆಂಟ್'ನಲ್ಲಿ ಕಾಣಬಹುದು. ಈ ಎಸ್‌ಯುವಿಯು ಕಡು ಹಸಿರು ಬಣ್ಣದಲ್ಲಿದ್ದು ಮುಂಭಾಗದ ಬಂಪರ್‌ನಲ್ಲಿ ಸೆವೆನ್ ಎಂದು ಬರೆಯಲಾಗಿದೆ. ಹ್ಯುಂಡೈನ ಸೆವೆನ್ ಕಾನ್ಸೆಪ್ಟ್ ಎಸ್‌ಯುವಿಯಲ್ಲಿ ಪ್ರೀಮಿಯಂ ಇಂಟೀರಿಯರ್‌ಗಳನ್ನು ನೀಡಲಾಗಿದೆ. ಅದರ ಇಂಟಿರಿಯರ್'ನಲ್ಲಿರುವ ಪರ್ಸನಲ್ ಲಾಂಜ್ ಹೆಚ್ಚು ಗಮನ ಸೆಳೆಯುತ್ತದೆ. ಈ ಲಾಂಜ್ ರೂಂನಂತಹ ವಾತಾವರಣವನ್ನು ನೀಡುತ್ತದೆ.

Ioniq 7 ಎಲೆಕ್ಟ್ರಿಕ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ Hyundai

ಕಂಪನಿಯು ಈ ಕಾರಿನ ಇಂಟಿರಿಯರ್ ವಿನ್ಯಾಸಗೊಳಿಸಲು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿದೆ. ಎಂಜಿನ್ ಹಾಗೂ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಸೆವೆನ್ ಕಾನ್ಸೆಪ್ಟ್ ಮಾಡೆಲ್‌ನ ಶಕ್ತಿಯು ಇತರ ಹ್ಯುಂಡೈ ಐಯೊನಿಕ್ ಮಾದರಿಗಳಂತೆಯೇ ಇರಲಿದೆ. ಮಾಹಿತಿಯ ಪ್ರಕಾರ, ಈ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟರ್ 225 ಬಿಹೆಚ್‌ಪಿ ಪವರ್ ಹಾಗೂ 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಒಂದು ಬಾರಿ ಚಾರ್ಜ್ ಮಾಡಿದರೆ, ಈ ಎಸ್‌ಯುವಿಯು ಸುಮಾರು 500 ಕಿ.ಮೀಗಳಷ್ಟು ದೂರ ಚಲಿಸುತ್ತದೆ. ಪವರ್ ಉತ್ಪಾದನೆ ವಿಷಯದಲ್ಲಿ, ಈ ಕಾನ್ಸೆಪ್ಟ್ ಕಾರು ಕಿಯಾ ಇವಿ 6 ಹಾಗೂ ಫೋರ್ಡ್ ಮಸ್ಟಾಂಗ್ ಮ್ಯಾಚ್ ಜಿಟಿ ಕಾರ್ಯಕ್ಷಮತೆಯಂತಹ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ತಿಂಗಳು ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅನಾವರಣಗೊಳಿಸಿದ ನಂತರ ಕಂಪನಿಯು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಹ್ಯುಂಡೈ ಕಂಪನಿಯು ಈ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಿಲ್ಲ.

Ioniq 7 ಎಲೆಕ್ಟ್ರಿಕ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ Hyundai

ಅಂದ ಹಾಗೆ ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಫನಿಯು ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಹ್ಯುಂಡೈ ಕಾರುಗಳು ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಕಂಪನಿಯು ಭಾರತೀಯ ಗ್ರಾಹಕರ ಕಾರಿನ ಅಭಿರುಚಿಗಳನ್ನು ಅರ್ಥ ಮಾಡಿಕೊಂಡಿದೆ. ಹ್ಯುಂಡೈ ಕಂಪನಿಯು ತನ್ನ ಸರಣಿಯಲ್ಲಿ ಅತ್ಯುತ್ತಮ ಕಾರುಗಳನ್ನು ಬಿಡುಗಡೆಗೊಳಿಸಿದೆ.

ಹ್ಯುಂಡೈ ಕಾರುಗಳು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಹ್ಯುಂಡೈ ಕಾರುಗಳು ವಿಶ್ವಾಸಾರ್ಹವಾಗಿದ್ದು, ಸರ್ವಿಸ್ ಸೆಂಟರ್ ಗಳು ಭಾರತದಾದ್ಯಂತ ಲಭ್ಯವಿರುತ್ತವೆ. ಹ್ಯುಂಡೈ ಕಾರುಗಳು ಆಕರ್ಷಕ ವಿನ್ಯಾಸ, ಕೈಗೆಟುಕುವ ದರ ಹಾಗೂ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುತ್ತವೆ. ಸೆಕೆಂಡ್ ಹ್ಯಾಂಡ್ ಹ್ಯುಂಡೈ ಕಾರುಗಳನ್ನು ಖರೀದಿಸಲು ಬಯಸುವವರಿಗೆ ಸೂಕ್ತವಾದ ಕಾರುಗಳನ್ನು ನೋಡುವುದಾದರೆ:

Ioniq 7 ಎಲೆಕ್ಟ್ರಿಕ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ Hyundai

ಹ್ಯುಂಡೈ ಐ10 ಅತ್ಯುತ್ತಮ ಸಿಟಿ ಕಾರುಗಳಲ್ಲಿ ಒಂದಾಗಿದೆ. ಇದು ಸಾಕಷ್ಟು ಪವರ್ ಫುಲ್ ಮಾದರಿಯಾಗಿದೆ. ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದ್ದು, ಹೆಚ್ಚು ಮೈಲೇಜ್ ನೀಡುತ್ತದೆ. ಈ ಕಾರು ಸಣ್ಣ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಹ್ಯುಂಡೈ ಐ10 ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇವೆರಡೂ ಎಂಜಿನ್ ಗಳು ಅತ್ಯಂತ ಪರಿಷ್ಕೃತ ಎಂಜಿನ್‌ಗಳಾಗಿವೆ. ಸೆಕೆಂಡ್ ಹ್ಯಾಂಡ್ ಹ್ಯುಂಡೈ ಐ 10 ಮಾದರಿಯನ್ನು ರೂ. 2.5 ಲಕ್ಷಗಳಿಂದ - ರೂ. 3.5 ಲಕ್ಷಗಳಲ್ಲಿ ಖರೀದಿಸಬಹುದು.

ಹ್ಯುಂಡೈ ಎಲಾಂಟ್ರಾ ಜನಪ್ರಿಯ ಪ್ರೀಮಿಯಂ ಸೆಡಾನ್ ಆಗಿದೆ. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಿವಿಕ್, ಟೊಯೊಟಾ ಕೊರೊಲ್ಲಾ ಹಾಗೂ ಸ್ಕೋಡಾ ಆಕ್ಟೇವಿಯಾದಂತಹ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಕಾರು ಆರಾಮದಾಯಕವಾದ ಸವಾರಿಗೆ ಹೆಸರುವಾಸಿಯಾಗಿದೆ. ಈ ಕಾರು 2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರಿನ ಹೊಸ ಮಾದರಿಗಳು ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಹಾಗೂ ವೆಂಟಿಲೇಟೆಡ್ ಸೀಟ್‌ಗಳಂತಹ ಫೀಚರ್ ಗಳನ್ನು ಹೊಂದಿವೆ. 2014 - 2019 ರವರೆಗಿನ ಸೆಕೆಂಡ್ ಹ್ಯಾಂಡ್ ಹ್ಯುಂಡೈ ಎಲಾಂಟ್ರಾ ಕಾರುಗಳನ್ನು ರೂ. 6 ಲಕ್ಷದಿಂದ ರೂ. 15 ಲಕ್ಷಗಳ ನಡುವಿನ ಬೆಲೆಯಲ್ಲಿ ಖರೀದಿಸಬಹುದು.

Most Read Articles

Kannada
English summary
Hyundai releases teaser of ioniq 7 electric suv details
Story first published: Saturday, November 6, 2021, 19:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X