ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹ್ಯುಂಡೈ ಕಸ್ಟೋ ಎಂಪಿವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಕಸ್ಟೋ ಎಂಬ ಹೆಸರಿನ ಹೊಸ 7-ಸೀಟರ್ ಎಂಪಿವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಹ್ಯುಂಡೈ ಕಸ್ಟೋ ಎಂಪಿವಿಯು ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಲಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹ್ಯುಂಡೈ ಕಸ್ಟೋ ಎಂಪಿವಿ

ಹ್ಯುಂಡೈ ಕಸ್ಟೋ ಎಂಪಿವಿಯನ್ನು ಬೀಜಿಂಗ್ ಹ್ಯುಂಡೈ ಮತ್ತು ಚೀನಾದ ಬಿಎಐಸಿ ಮೋಟಾರ್ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಈ ಹೊಸ ಕಸ್ಟೋ ಮಿನಿವ್ಯಾನ್ ನ್ಯೂ ಜನರೇಷನ್ ಟ್ಯೂಸಾನ್ ಎಸ್‌ಯುವಿಯಿಂದ ಸ್ಟೈಲಿಂಗ್ ಅಂಶಗಳನ್ನು ಹಂಚಿಕೊಳ್ಳುತ್ತದೆ. ಇದು ಪ್ಯಾರಾಮೆಟ್ರಿಕ್ ಜ್ಯುವೆಲ್ ಥೀಮ್ ಅನ್ನು ಅದರ ಮುಂಭಾಗದ ಗ್ರಿಲ್, ಆಕರ್ಷಕ ಹೆಡ್‌ಲ್ಯಾಂಪ್‌ಗಳು ಮತ್ತು ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳನ್ನು (ಡೇಟೈಮ್ ರನ್ನಿಂಗ್ ಲೈಟ್ಸ್) ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹ್ಯುಂಡೈ ಕಸ್ಟೋ ಎಂಪಿವಿ

ಮುಂಭಾಗದ ಬಂಪರ್ ಕ್ರೋಮ್ ಸುತ್ತಮುತ್ತಲಿನ ಜೊತೆಗೆ ಪಾಗ್ ಲ್ಯಾಂಪ್ ಗಳು ಮತ್ತು ಟರ್ನ್ ಇಂಡಿಕೇಟರ್ ಗಳನ್ನು ಹೊಂದಿದೆ, ಈ 7-ಸೀಟುಗಳ ಎಂಪಿವಿ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ಸ್ ಮತ್ತು ಸ್ಕ್ವೇರ್ ವ್ಹೀಲ್ ಆರ್ಚ್‌ಗಳೊಂದಿಗೆ ಬರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹ್ಯುಂಡೈ ಕಸ್ಟೋ ಎಂಪಿವಿ

ಸ್ಟಾರಿಯಾದಂತೆಯೇ ಹ್ಯುಂಡೈ ಕಸ್ಟೋ ಮೂರನೇ ಸಾಲಿನಲ್ಲಿ ಸುಲಭವಾಗಿ ಪ್ರವೇಶಿಸಲು/ಹೊರಹೋಗಲು ಹಿಂಭಾಗದ ಡೋರನ್ನು ಸ್ಲೈಡಿಂಗ್ ಮಾಡಿ ಓಪನ್ ಮಾಡಬಹುದು. ಹಿಂಭಾಗದಲ್ಲಿ ಮಿನಿವ್ಯಾನ್ ಟೈಲ್‌ಲೈಟ್‌ಗಳಿಗಾಗಿ ಸಿಂಗಲ್-ಪೀಸ್ ವಿನ್ಯಾಸವನ್ನು ಪಡೆಯುತ್ತದೆ ಮತ್ತು ಮಧ್ಯದಲ್ಲಿ ಪ್ರಮುಖವಾದ ಹ್ಯುಂಡೈ ಲೋಗೋವನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹ್ಯುಂಡೈ ಕಸ್ಟೋ ಎಂಪಿವಿ

ಇತರ ವಿನ್ಯಾಸದ ಮುಖ್ಯಾಂಶಗಳು ರೂಫ್ ಮೌಂಟೆಡ್ ಸ್ಪಾಯ್ಲರ್, ಶಾರ್ಕ್ ಫಿನ್ ಆಂಟೆನಾ, ಸುತ್ತಲೂ ಬ್ಲ್ಯಾಕ್ ಕ್ಲಾಡಿಂಗ್ ಮತ್ತು ಬಂಪರ್‌ಗಳಲ್ಲಿ ಫಾಕ್ಸ್ ಬ್ಯಾಶ್ ಪ್ಲೇಟ್‌ಗಳು ಹೊಂದಿವೆ. ಇದು 7 ಸೀಟರುಗಳ ಎಂಪಿವಿಯಾಗಿದ್ದು, ಮಧ್ಯದಲ್ಲಿ ಎರಡು ಕ್ಯಾಪ್ಟನ್ ಸೀಟುಗಳಿವೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹ್ಯುಂಡೈ ಕಸ್ಟೋ ಎಂಪಿವಿ

ಡ್ಯಾಶ್‌ಬೋರ್ಡ್ ವಿನ್ಯಾಸವು ಚೀನಾದ ಮಾರುಕಟ್ಟೆಗೆ ಇತರ ಹುಂಡೈ ಕಾರುಗಳಿಂದ ಸ್ಫೂರ್ತಿ ಪಡೆದಿದೆ, ಇದು ಸೆಂಟ್ರಲ್ ಕನ್ಸೋಲ್‌ನಲ್ಲಿ ದೊಡ್ಡ 10.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. ಡ್ಯಾಶ್‌ಬೋರ್ಡ್ ಕನಿಷ್ಠ ವಿನ್ಯಾಸವನ್ನು ಹೊಂದಿದ್ದು, ಪ್ರೀಮಿಯಂ ಗುಣಮಟ್ಟದ ಸಾಫ್ಟ್-ಟಚ್ ವಸ್ತುಗಳನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹ್ಯುಂಡೈ ಕಸ್ಟೋ ಎಂಪಿವಿ

ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೋಲ್ ಮತ್ತು ಡೋರ್ ಟ್ರಿಮ್‌ಗಳಲ್ಲಿ ಫಾಕ್ಸ್ ವುಡ್ ಟಚ್ ಅನ್ನು ಸೇರಿಸಲಾಗಿದೆ. ಇದು ಕ್ಯಾಬಿನ್ ಅನ್ನು ಬಹಳ ಐಷಾರಾಮಿಯಾಗಿ ಮಾಡುತ್ತದೆ. ಫೀಚರ್ಸ್ ಗಳ ವಿಷಯದಲ್ಲಿ ಕ್ಲೈಮೇಂಟ್ ಕಂಟ್ರೋಲ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವ್ಹೀಲ್, , ಮಲ್ಟಿಪಲ್ ಏರ್‌ಬ್ಯಾಗ್‌ಗಳು, ರಿಯರ್-ವ್ಯೂ ಕ್ಯಾಮೆರಾ ಮತ್ತು ಇತ್ಯಾದಿಗಳನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹ್ಯುಂಡೈ ಕಸ್ಟೋ ಎಂಪಿವಿ

ಹ್ಯುಂಡೈ ಕಸ್ಟೋ ಎಂಪಿವಿಯು 495 ಮೀಟರ್ ಉದ್ದ, 1.85 ಮೀಟರ್ ಅಗಲ ಮತ್ತು 1.73 ಮೀಟರ್ ಎತ್ತರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯ ಒಳಭಾಗದಲ್ಲಿ ಉತ್ತಮ ಸ್ಪೇಸ್ ಅನ್ನು ಹೊಂದಿದೆ. ಆರಮದಾಯಕವಾಗಿ ಕುಳಿತು ಸವಾರಿ ಮಾಡಬಹುದಾಗಿದೆ. ಈ ಹೊಸ ಕಸ್ಟೋ ತಾಂತ್ರಿಕ ವಿಶೇಷಣಗಳು ಇನ್ನು ಬಹಿರಂಗವಾಗಿಲ್ಲ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹ್ಯುಂಡೈ ಕಸ್ಟೋ ಎಂಪಿವಿ

ಆದರೆ ಈ ಎಂಪಿವಿಯಲ್ಲಿ 2.0 ಎಲ್, 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಬಹದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ 237 ಬಿಹೆಚ್‍ಪಿ ಪವರ್ ಮತ್ತು 353 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹ್ಯುಂಡೈ ಕಸ್ಟೋ ಎಂಪಿವಿ

ಇನ್ನು ಈ ಎಂಜಿನ್‌ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಬಹುದು. ಇದರೊಂದಿಗೆ 1.5 ಬಿಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಕೂಡ ಅಳವಡಿಸಬಹುದು. ಇನ್ನು ಈ ಹೊಸ ಹ್ಯುಂಡೈ ಕಸ್ಟೋ ಎಂಪಿವಿಯ ಬಿಡುಗಡೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಹ್ಯುಂಡೈ ಕಸ್ಟೋ ಎಂಪಿವಿ

ಈ ಹೊಸ ಹ್ಯುಂಡೈ ಕಸ್ಟೋ ಎಂಪಿವಿಯು ಶೀಘ್ರದಲ್ಲೇ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ನಂತರ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ, ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಈ ಎಂಪಿವಿಯನ್ನು ಬಿಡುಗಡೆಗೊಳಿಸುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ,

Most Read Articles

Kannada
English summary
Hyundai revealed all new custo premium mpv details
Story first published: Friday, August 6, 2021, 19:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X