7 ಸೀಟರ್ ಸೌಲಭ್ಯದ ವಿನೂತನ ಎಂಪಿವಿ ಅನಾವರಣಗೊಳಿಸಿದ ಹ್ಯುಂಡೈ

ವಿವಿಧ ಮಾದರಿಯ ಪ್ಯಾಸೆಂಜರ್ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ಹ್ಯುಂಡೈ ಕಂಪನಿಯು ವಿಶ್ವದ 8ನೇ ಅತಿದೊಡ್ಡ ಕಾರು ಮಾರಾಟ ಕಂಪನಿಯಾಗಿ ಹೊರಹೊಮ್ಮಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸುವ ಇರಾದೆಯಲ್ಲಿದೆ.

7 ಸೀಟರ್ ಸೌಲಭ್ಯದ ವಿನೂತನ ಎಂಪಿವಿ ಅನಾವರಣಗೊಳಿಸಿದ ಹ್ಯುಂಡೈ

ಪ್ರಸ್ತುತ ಮಾರುಕಟ್ಟೆಯಲ್ಲಿ ಹ್ಯುಂಡೈ ಮೋಟಾರ್ಸ್ ಕಂಪನಿಯು ಹ್ಯಾಚ್‌ಬ್ಯಾಕ್, ಕಂಪ್ಯಾಕ್ಟ್ ಎಸ್‌ಯುವಿ, ಎಸ್‌ಯುವಿ, ಸೆಡಾನ್ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸಿದ್ದು, ಎಂಪಿವಿ ಕಾರುಗಳ ಮಾರಾಟ ವಿಭಾಗದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಕಂಪನಿಯು ಹಿನ್ನಡೆ ಅನುಭವಿಸುತ್ತಿದೆ. ಎಂಪಿವಿ ಕಾರು ಮಾದರಿಗಳನ್ನು ಈಗಾಗಲೇ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟ ಸೌಲಭ್ಯ ಹೊಂದಿದ್ದರೂ ಸಹ ಅವುಗಳ ಕೆಲವೇ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿವೆ.

7 ಸೀಟರ್ ಸೌಲಭ್ಯದ ವಿನೂತನ ಎಂಪಿವಿ ಅನಾವರಣಗೊಳಿಸಿದ ಹ್ಯುಂಡೈ

ಜಾಗತಿಕ ಮಾರುಕಟ್ಟೆಯಲ್ಲಿನ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ವಿಭಾಗದಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಳ್ಳಲು ಯತ್ನಿಸುತ್ತಿರುವ ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ತನ್ನ ಕಾನ್ಸೆಪ್ಟ್ ಎಂಪಿವಿ ಕಾರುಗಳನ್ನು ಉತ್ಪಾದನೆ ಚಾಲನೆ ನೀಡುತ್ತಿದ್ದು, ಹೊಸ ಯೋಜನೆ ಅಡಿ ನಿರ್ಮಾಣವಾಗುತ್ತಿರುವ ಮೊದಲ ಕಾರಿನ ಟೀಸರ್ ಅನಾವರಣಗೊಳಿಸಿದೆ.

7 ಸೀಟರ್ ಸೌಲಭ್ಯದ ವಿನೂತನ ಎಂಪಿವಿ ಅನಾವರಣಗೊಳಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಎಂಪಿವಿ ಕಾರುಗಳ ವಿಭಾಗದಲ್ಲಿ ಹೊಸ ಬೇಡಿಕೆಯ ನೀರಿಕ್ಷೆಯೊಂದಿಗೆ ವಿನೂತನ ವಿನ್ಯಾಸದ ಸ್ಟಾರಿಯಾ ಕಾರು ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಮೂರು ಸಾಲುಗಳ ಆಸನ ಸೌಲಭ್ಯದೊಂದಿಗೆ 7 ಸೀಟರ್ ಮತ್ತು 6 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಾಗುತ್ತಿದೆ.

7 ಸೀಟರ್ ಸೌಲಭ್ಯದ ವಿನೂತನ ಎಂಪಿವಿ ಅನಾವರಣಗೊಳಿಸಿದ ಹ್ಯುಂಡೈ

ಸರಳವಾದ ವಿನ್ಯಾಸದೊಂದಿಗೆ ಹಲವಾರು ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿರುವ ಹ್ಯುಂಡೈ ಹೊಸ ಸ್ಟಾರಿಯಾ ಕಾರು ಮಾದರಿಯು ಏಷ್ಯಾದ ಪ್ರಮುಖ ರಾಷ್ಟ್ರಗಳಿಗಾಗಿ ಅಭಿವೃದ್ದಿಪಡಿಸುತ್ತಿದ್ದು, ಹೊಸ ಕಾರು ಭಾರತದಲ್ಲಿ ಮಾತ್ರವಲ್ಲ ಮಲೇಷಿಯಾ, ಥೈಲ್ಯಾಂಡ್‍ನಲ್ಲೂ ಮಾರಾಟವಾಗಲಿದೆ. ಸದ್ಯಕ್ಕೆ ಹೊಸ ಕಾರಿನ ಚಿತ್ರಗಳನ್ನು ಹೊರತುಪಡಿಸಿ ಯಾವುದೇ ತಾಂತ್ರಿಕ ಮಾಹಿತಿ ಬಿಟ್ಟುಕೊಡದ ಹ್ಯುಂಡೈ ಕಂಪನಿಯು ಉತ್ಪಾದನಾ ಆವೃತ್ತಿಯ ಅಭಿವೃದ್ದಿಗಾಗಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳಲಿದೆ.

7 ಸೀಟರ್ ಸೌಲಭ್ಯದ ವಿನೂತನ ಎಂಪಿವಿ ಅನಾವರಣಗೊಳಿಸಿದ ಹ್ಯುಂಡೈ

ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಎಂಪಿವಿ ಕಾರನ್ನು ಸಿದ್ದಪಡಿಸಿದ್ದು, ಹೊಸ ಕಾರನ್ನು ನ್ಯೂ ಜನರೇಷನ್ ಕ್ರೆಟಾ ಕಾರಿನ ಪ್ಲ್ಯಾಟ್‌ಫಾರ್ಮ್ ಆಧರಿಸಿ ನಿರ್ಮಾಣ ಮಾಡುವ ಸಾಧ್ಯತೆಗಳಿವೆ.

MOST READ: ಗ್ರಾಹಕರ ದೂರು ಹಿನ್ನೆಲೆ...ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಸಬ್ಸಿಡಿ ರದ್ದು

7 ಸೀಟರ್ ಸೌಲಭ್ಯದ ವಿನೂತನ ಎಂಪಿವಿ ಅನಾವರಣಗೊಳಿಸಿದ ಹ್ಯುಂಡೈ

ಹೊಸ ಕಾರಿನಲ್ಲಿ ಹ್ಯುಂಡೈ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸಿದ್ದು, ದೊಡ್ಡದಾದ ಗ್ರಿಲ್ ಸಿಸ್ಟಂ, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್, ಅಗಲವಾದ ಕಿಟಿಕಿಗಳನ್ನು ಜೋಡಿಸಲಾಗಿದೆ.

7 ಸೀಟರ್ ಸೌಲಭ್ಯದ ವಿನೂತನ ಎಂಪಿವಿ ಅನಾವರಣಗೊಳಿಸಿದ ಹ್ಯುಂಡೈ

ಕಾರಿನ ಒಳಭಾಗವು ಕೂಡಾ ಗ್ರಾಹಕರನ್ನು ಆಕರ್ಷಿಸಲಿದ್ದು, ಕನೆಕ್ಟಿವಿ ಸೌಲಭ್ಯಗಳು, ಅರಾಮದಾಯಕವಾದ ಆಸನಗಳೊಂದಿಗೆ ಎಂಪಿವಿ ಕಾರು ಖರೀದಿದಾರರನ್ನು ಸೆಳೆಯಲಿದ್ದು, ಹೊಸ ಕಾರಿನ ಎಂಜಿನ್ ಕುರಿತಾಗಿ ಯಾವುದೇ ಮಾಹಿತಿಗಳಿಲ್ಲ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

7 ಸೀಟರ್ ಸೌಲಭ್ಯದ ವಿನೂತನ ಎಂಪಿವಿ ಅನಾವರಣಗೊಳಿಸಿದ ಹ್ಯುಂಡೈ

ಹೊಸ ಕಾರು ಮುಂಬರುವ ಕೆಲವೇ ತಿಂಗಳಿನಲ್ಲಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ನಂತರ ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳಲಿದ್ದು, ಹಂತ ಹಂತವಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
Hyundai has revealed first set of teaser images of it's all new Staria MPV car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X