ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹುಂಡೈ ತನ್ನ ಜನಪ್ರಿಯ ಕ್ರೆಟಾವನ್ನು ಮಿಡ್-ಲೈಫ್ ಅಪ್‌ಡೇಟ್ ಗಳೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ (Hyundai Creta Facelift) ಎಸ್‍ಯುವಿಯು ಕೆಲವು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಹ್ಯುಂಡೈ ಕಂಪನಿಯು ಇದೀಗ ಕ್ರೆಟಾ ಫೇಸ್‌ಲಿಫ್ಟ್‌ಗಾಗಿ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಟೀಸರ್ ನಲ್ಲಿ ಹ್ಯುಂಡೈ ಬ್ಲೂಲಿಂಕ್ ಅಪ್ಲಿಕೇಶನ್ ಮೂಲಕ ರಿಮೋಟ್ ಸ್ಟಾರ್ಟ್/ಸ್ಟಾಪ್ ಜೊತೆಗೆ ಎಲ್ಲಾ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುವ ಅದರ ಒಳಾಂಗಣವನ್ನು ಬಹಿರಂಗಪಡಿಸುತ್ತದೆ. ಲೇನ್ ಡ್ರೈವ್ ಅಸಿಸ್ಟ್ ಕಾರ್ಯಕ್ಕಾಗಿ ಸ್ಟೀರಿಂಗ್ ಚಕ್ರದಲ್ಲಿ ಸಂಯೋಜಿತವಾಗಿರುವ ಕಂಟ್ರೋಲ್ ಬಟನ್ ಹೊಂದಿದೆ, ಹೊಸ ತಲೆಮಾರಿನ ಟ್ಯೂಸಾನ್ ಸೇರಿದಂತೆ ಹುಂಡೈನ ಪ್ರೀಮಿಯಂ ವಾಹನಗಳಲ್ಲಿ ಇದನ್ನು ಸಾಮಾನ್ಯವಾಗಿ ನೀಡಲಾಗುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಇದರಲ್ಲಿ ಎಸ್‌ಯುವಿಯು ಪ್ರೀಮಿಯಂ ಬೋಸ್ ಸೌಂಡ್ ಸಿಸ್ಟಂ, ಪನೋರಮಿಕ್ ಸನ್‌ರೂಫ್‌ನೊಂದಿಗೆ ಬರುತ್ತಲೇ ಇದೆ. ವರದಿಗಳ ಪ್ರಕಾರ ಹೊಸ ಕ್ರೆಟಾವು ಅದರ ಹೊಸದಾಗಿ ಬಿಡುಗಡೆಯಾದ ಪ್ರತಿಸ್ಪರ್ಧಿ ಎಂಜಿ ಆಸ್ಟರ್‌ನಂತೆಯೇ ಲೆವೆಲ್ 2 ADAS ನೊಂದಿಗೆ ಬರಬಹುದು. ಈಗಿನಂತೆ, ಈ ವೈಶಿಷ್ಟ್ಯಗಳನ್ನು ಇಂಡಿಯಾ-ಸ್ಪೆಕ್ ಹೊಸ ಹ್ಯುಂಡೈ ಕ್ರೆಟಾ 2022ರ ಮಾದರಿಯಲ್ಲಿ ನೀಡಲಾಗುವುದು ಅಥವಾ ಇಲ್ಲವೇ ಎಂಬ ಸ್ಪಷ್ಟತೆ ಇಲ್ಲ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಭಾರತದಲ್ಲಿ ಈ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಮುಂದಿನ ವರ್ಷದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಟೀಸರ್ ನಲ್ಲಿ ಹ್ಯುಂಡೈ ಫೇಸ್‌ಲಿಫ್ಟ್‌ನಲ್ಲಿ ಮಾಡಿರುವ ಬದಲಾವಣೆಗಳನ್ನು ತೋರಿಸುತ್ತದೆ. ಇದರಲ್ಲಿ ಮುಂಭಾಗವನ್ನು ನವೀಕರಸಿರುವುದನ್ನು ನೋಡಬಹುದು. ಹೊಸ ನವೀಕರಣಗಳೊಂದಿಗೆ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಆಕರ್ಷಕ ಲುಕ್ ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಈ ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ವಿನ್ಯಾಸದ ಪ್ಯಾರಾಮೆಟ್ರಿಕ್ ಗ್ರಿಲ್ ಹ್ಯುಂಡೈನ ಸೆನ್ಸೂಯಸ್ ಸ್ಪೋರ್ಟಿನೆಸ್ ವಿನ್ಯಾಸದೊಂದಿಗೆ ರಿಫ್ರೆಶ್ ಲುಕ್ ನೀಡುತ್ತದೆ. ಈಗಿರುವ ಮಾದರಿಗೆ ಹೋಲಿಸಿದರೆ, ಹೊಸದು ಹೆಚ್ಚು ಆಯತಾಕಾರದ ಆಕಾರದ ಹೆಡ್ ಲ್ಯಾಂಪ್ ಯುನಿಟ್‌ಗಳನ್ನು ಮೊದಲಿದ್ದಕ್ಕಿಂತ ಸ್ವಲ್ಪ ಕೆಳಗೆ ಇರಿಸಲಾಗಿದೆ. ಅಡ್ಡಲಾಗಿರುವ ಕ್ರೋಮ್ ಸ್ಲ್ಯಾಟ್‌ಗಳನ್ನು ತೆಗೆದುಹಾಕಿದ್ದಾರೆ. ಹೊಸ ಕ್ರೆಟಾ ಫೇಸ್‌ಲಿಫ್ಟ್ ಪರಿಷ್ಕೃತ ಬಂಪರ್‌ಗಳು, ಹೊಸ ಫಾಕ್ಸ್ ಸ್ಕಿಡ್ ಪ್ಲೇಟ್ ಮತ್ತು ಫಾಗ್ ಲ್ಯಾಂಪ್ ಜೋಡಣೆ, ಹೊಸದಾಗಿ ವಿನ್ಯಾಸಗೊಳಿಸಿದ ಅಲಾಯ್ ವ್ಹೀಲ್ ಗಳು ಮತ್ತು ಸ್ಪ್ಲಿಟ್ ಟೈಲ್‌ಲ್ಯಾಂಪ್‌ಗಳೊಂದಿಗೆ ಬರುವ ಸಾಧ್ಯತೆಯಿದೆ. 2022ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್‌ ಆಂತರಿಕ ವಿನ್ಯಾಸವು ಬದಲಾಗದೆ ಉಳಿಯುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಎಚ್‍ಯುಡಿ (ಹೆಡ್-ಅಪ್ ಯುನಿಟ್), 360 ಡಿಗ್ರಿ ಕ್ಯಾಮೆರಾ ಮತ್ತು ADAS (ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಂ) ಸೇರಿದಂತೆ ಕೆಲವು ಸುಧಾರಿತ ಫೀಚರ್ಸ್ ಗಳೊಂದಿಗೆ ವಾಹನ ತಯಾರಕರು ಹೊಸ ಮಾದರಿಯನ್ನು ಸಜ್ಜುಗೊಳಿಸಬಹುದು ಎಂದು ವದಂತಿಗಳಿವೆ. ಉಳಿದ ಫೀಚರ್ಸ್ ಗಳು ಈಗಿರುವ ಮಾದರಿಯಿಂದ ಮುಂದೆ ಸಾಗಿಸಲಾಗುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಹೊಸ ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು 1.5 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ 1.5 ಲೀಟರ್ ನ್ಯಾಚುರಲ್ ಪೆಟ್ರೋಲ್ ಎಂಜಿನ್, 1.4 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುವ ಸಾಧ್ಯತೆಗಳಿದೆ,

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಇನ್ನು ಪ್ರಸ್ತುತ ಮಾದರಿಯಂತೆಯೇ, 2022ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಟರ್ಬೊ-ಪೆಟ್ರೋಲ್ ರೂಪಾಂತರಗಳು ಕೇವಲ 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ,

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಈ ಹೊಸ ಕ್ರೆಟಾ ಎಸ್‍ಯುವಿಯಲ್ಲಿ ಹೊಸ 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಆಯ್ಕೆಯೊಂದಿಗೆ ನೀಡಲಾಗಿದೆ. ಈ ಎಸ್‌ಯುವಿಯು ಬ್ರಾಂಡ್‌ನ ಹೊಸ ಸ್ಪೋರ್ಟಿ ವಿನ್ಯಾಸದ ಶೈಲಿಯನ್ನು ಆಧರಿಸಿದೆ. ಇದನ್ನು ನಾವು ಈಗಾಗಲೇ ಅಲ್ಕಾಜರ್, ಟ್ಯೂಸಾನ್ ಮತ್ತು ಪಾಲಿಸೇಡ್ ಸೇರಿದಂತೆ ದೊಡ್ಡ ಹುಂಡೈ ಕಾರುಗಳಲ್ಲಿ ನೋಡಿದ್ದೇವೆ .ಹ್ಯುಂಡೈ ಕಂಪನಿಯು ಬ್ರೆಜಿಲ್ ನಲ್ಲಿರುವ ಕಂಪನಿಯ ಪಿರಾಸಿಕ್ಯಾಬಾ ಕಾರು ತಯಾರಕ ಘಟಕದಲ್ಲಿ ಈ ಎಸ್‍ಯುವಿಯ ಉತ್ಪಾದನೆಯನ್ನು ಆರಂಭಿಸಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಇದರ ಕ್ಯಾಬಿನ್ ಒಳಗೆ, ಹೊಸ ಹುಂಡೈ ಕ್ರೆಟಾ ಭಾರತ-ಸ್ಪೆಕ್ ಮಾದರಿಯಂತೆಯೇ ಅದೇ ವಿನ್ಯಾಸವನ್ನು ಪಡೆಯುತ್ತದೆ. ಇದು ಸ್ಮಾರ್ಟ್ ಫೋನ್ ಕನೆಕ್ಟ್, ಆಟೋಮ್ಯಾಟಿಕ್ ಎಸಿ, ವೈರ್ ಲೆಸ್ ಚಾರ್ಜರ್, ಚಾಲಿತ ಚಾಲಕನ ಆಸನ, ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಇತರವುಗಳೊಂದಿಗೆ ದೊಡ್ಡ 10.25-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಇನ್ಫೋಟೈನ್ಮೆಂಟ್ ಸಿಸ್ಟಂ ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಒಳಗೊಂಡಿದೆ. ಹೊಸ ಫೇಸ್‌ಲಿಫ್ಟ್ ನಲ್ಲಿ ಇದೇ ಫೀಚರ್ಸ್ ಗಳನ್ನು ಒಳಗೊಂಡರುತ್ತದೆ.

ಹ್ಯುಂಡೈ ಕಂಪನಿಯು ಕ್ರೆಟಾ ಎಸ್‍ಯುವಿಯ ಮಾರಾಟದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಕಂಪನಿಯು ಮಿಡ್-ಲೈಫ್ ಅಪ್‌ಡೇಟ್ ನೊಂದಿಗೆ ಪರಿಚಯಿಸಲಿದೆ. ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್‍ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ 2022ರ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಹ್ಯುಂಡೈ ಕಂಪನಿಯು ಕ್ರೆಟಾ ಎಸ್‍ಯುವಿಯ ಮಾರಾಟದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಕಂಪನಿಯು ಮಿಡ್-ಲೈಫ್ ಅಪ್‌ಡೇಟ್ ನೊಂದಿಗೆ ಪರಿಚಯಿಸಲಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್‍ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Hyundai shared interior images of 2022 creta facelift suv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X