2022ರ ಹ್ಯುಂಡೈ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಹ್ಯುಂಡೈ ತನ್ನ ಜನಪ್ರಿಯ ಸೆಡಾನ್ ಎಲಾಂಟ್ರಾ ಕಾರಿನಾ ಪರ್ಫಾಮೆನ್ಸ್ ಮಾದರಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಹ್ಯುಂಡೈ ಎಲಾಂಟ್ರಾ ಎನ್ ಎಂದು ಕರೆಯಲ್ಪಡುವ ಈ ಹೊಸ ಪರ್ಫಾಮೆನ್ಸ್ ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಹುನಿರೀಕ್ಷಿತ ಪರ್ಫಾಮೆನ್ಸ್ ಕಾರುಗಳಲ್ಲಿ ಒಂದಾಗಿದೆ.

2022ರ ಹ್ಯುಂಡೈ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

2022ರ ಎಲಾಂಟ್ರಾ ಎನ್ ಕಾರು ಹ್ಯುಂಡೈಯ ಎನ್ ಸರಣಿಯ ಕಾರುಗಳಲ್ಲಿ ಆರನೇ ಸ್ಥಾನದಲ್ಲಿದೆ. ಹ್ಯುಂಡೈ ಕಂಪನಿಯು ಇದೀಗ ಈ ಹೊಸ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಹ್ಯುಂಡೈ ಕಂಪನಿಯು ಕೋನಾ ಎನ್ ಪರ್ಫಾಮೆನ್ಸ್ ಮಾದರಿಯನ್ನು ಏಪ್ರಿಲ್‌ನಲ್ಲಿ ಅನಾವರಣಗೊಳಿಸಿದ ಬಳಿಕ ಇದೀಗ ಮತ್ತೊಂದು ಎನ್ ಸರಣಿಯ ಎಲಾಂಟ್ರಾ ಎನ್ ಕಾರನ್ನು ಅನಾವರಣಗೊಳಿಸಲು ಸಜ್ಜಾಗುತ್ತಿದೆ.

2022ರ ಹ್ಯುಂಡೈ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

2022ರ ಏಪ್ರಿಲ್‌ನಲ್ಲಿ ಪರಿಚಯಿಸಲಾದ ಎಲಾಂಟ್ರಾ ಸ್ಟ್ಯಾಂಡರ್ಡ್ ಮಾದರಿ ಮತ್ತು ಎಲಾಂಟ್ರಾ ಎನ್ ಪರ್ಫಾಮೆನ್ಸ್ ಮಾದರಿಯನ್ನು ಅದರ ‘ಪ್ಯಾರಮೆಟ್ರಿಕ್ ಡೈನಾಮಿಕ್ಸ್' ವಿನ್ಯಾಸ ಥೀಮ್‌ನಿಂದ ಸುಲಭವಾಗಿ ಗುರುತಿಸಬಹುದು, ಇದು ಎನ್ ಪರ್ಫಾಮೆನ್ಸ್ ಮಾದರಿಗೆ ಸ್ಪೋರ್ಟಿ ಲುಕ್ ನೀಡುತ್ತದೆ.

2022ರ ಹ್ಯುಂಡೈ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಹ್ಯುಂಡೈ ಮೋಟಾರ್ ಕಂಪನಿಯ ಎನ್ ಬ್ರಾಂಡ್ ಮ್ಯಾನೇಜ್‌ಮೆಂಟ್ ಮತ್ತು ಮೋಟಾರ್ಸ್ಪೋರ್ಟ್ ಉಪವಿಭಾಗದ ಉಪಾಧ್ಯಕ್ಷ ಟಿಲ್ ವಾರ್ಟೆನ್‌ಬರ್ಗ್ ಅವರು ಮಾತನಾಡಿ, ಎಲಾಂಟ್ರಾ ಎನ್ ಉನ್ನತ-ಕಾರ್ಯಕ್ಷಮತೆಯ ಸೆಡಾನ್ ಆಗಿದ್ದು, ಇದು ಅತ್ಯಾಕರ್ಷಕ ಎನ್ ಬ್ರ್ಯಾಂಡ್ ಹೊಸ ಎಲಾಂಟ್ರಾ ಕಾರಿನ ಟಿಸರ್ ಮೂಲಕ ಸ್ಪೋರ್ಟಿಯರ್ ಭಾಗವನ್ನು ಬಹಿರಂಗಪಡಿಸಿದ್ದೇವೆ,

2022ರ ಹ್ಯುಂಡೈ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ನಾವು ಇದನ್ನು ಪರ್ಫಾಮೆನ್ಸ್ ಕಾರುಗಳನ್ನು ಇಷ್ಟಪಡುವ ಶೈಲಿಯೊಂದಿಗೆ ಸ್ಪೋರ್ಟ್ಸ್ ಕಾರ್ ಮಾದರಿಯಲ್ಲಿ ಇದನ್ನು ವಿನ್ಯಾಸಗೊಳಿಸಿದ್ದೇವೆ. ಶೀಘ್ರದಲ್ಲೇ ಡಿಜಿಟಲ್ ವರ್ಲ್ಡ್ ಪ್ರೀಮಿಯರ್ ಮುಖಾಂತರ ಈ ಕಾರನ್ನು ಅನಾವರಣಗೊಳಿಸುತ್ತೇವೆ ಎಂದು ಹೇಳಿದರು.

2022ರ ಹ್ಯುಂಡೈ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

2022ರ ಹ್ಯುಂಡೈ ಎಲಾಂಟ್ರಾ ಎನ್ ಕಾರು ಡೆಡಿಕೇಟೆಡ್ ಸೈಡ್ ಸಿಲ್ಗಳನ್ನು ಹೊಂದಿದೆ, ಹಿಂಭಾಗದ ಸ್ಪಾಯ್ಲರ್ ಹಿಂಭಾಗದ ಅಂಚಿನ ಮೇಲೆ ಏರ್ ಫ್ಲೋ ಬೀಳದಂತೆ ತಡೆಯುವ ಮೂಲಕ ಲಿಫ್ಟ್ ಅನ್ನು ಪ್ರತಿರೋಧಿಸುತ್ತದೆ ಮತ್ತು ಹೆಚ್ಚಿನ ವೇಗದಲ್ಲಿಯು ಚಾಲನಾ ಸ್ಥಿರತೆಯನ್ನು ಹೆಚ್ಚಿಸುತ್ತದೆ.

2022ರ ಹ್ಯುಂಡೈ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಈ ಹೊಸ ಪರ್ಪಾಮೆನ್ಸ್ ಕಾರಿನಲ್ಲಿ ಡ್ಯುಯಲ್ ಸಿಂಗಲ್ ಎಕ್ಸಾಸ್ಟ್ ಅನ್ನು ಹೊಂದಿದೆ. ಇದು ಸ್ಟ್ಯಾಂಡರ್ಡ್ ಮಾದರಿಯಿಂದ ಸಾಕಷ್ಟು ಭಿನ್ನವಾಗಿ ಕಾಣುತ್ತದೆ.ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರಿನ ಎಂಜಿನ್ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

2022ರ ಹ್ಯುಂಡೈ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಹೊಸ ಹ್ಯುಂಡೈ ಎಲಾಂಟ್ರಾ ಎನ್ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖತೆಯನ್ನು ನೀಡಬಹುದು. ಈ ಕಾರಿನಲ್ಲಿ ಸುರಕ್ಷತೆಗಾಗಿ ರಿವರ್ಸ್ ಕ್ಯಾಮೆರಾ, ಕ್ಲ್ಯಾಮೇಟ್ ಕಂಟ್ರೋಲರ್,ಟಯರ್ ಫ್ರೆಶ್ರರ್ ಮಾನಿಟರಿಂಗ್ ಸಿಸ್ಟಮ್, ಸೆಪ್ಟಿ ಕಿಟ್, 6 ಏರ್‍‍ಬ್ಯಾಗ್, ಎಬಿ‍ಎಸ್, ಇಬಿಡಿ ವಾಹನ ನಿಯಂತ್ರಣ ಮುಂತಾದ ಫೀಚರ್‍‍‍‍ಗಳನ್ನು ಹೊಂದಿರಲಿದೆ.

2022ರ ಹ್ಯುಂಡೈ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಸೆಡಾನ್ ಎಲಾಂಟ್ರಾವನ್ನು ಹೊಸ ಸ್ಟ್ಯಾಂಡರ್ಡ್ ಎಲಾಂಟ್ರಾ ಮತ್ತು ಎಲಾಂಟ್ರಾ ಹೈಬ್ರಿಡ್ ಸೇರಿದಂತೆ ಪರ್ಫಾಮೆನ್ಸ್ ಮಾದರಿಯಾಗಿಯು ಪರಿಚಯಿಸುತ್ತಿದೆ. ಹೊಸ ಎಲಾಂಟ್ರಾ ಎನ್ ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೋಂಡಾ ಸಿವಿಕ್ ಟೈಪ್ ಆರ್ ಕಾರಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Hyundai Teases 2022 Elantra N Performance Model. Read In Kannada.
Story first published: Tuesday, June 22, 2021, 20:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X