ಮುಂದಿನ ವರ್ಷದಿಂದ ಆರಂಭವಾಗಲಿದೆ Hyundai ಕಂಪನಿಯ ಹೊಸ ಆಪರೇಟಿಂಗ್ ಪ್ಲಾಟ್‌ಫಾರಂ

ಕಂಪನಿಯ ಆಟೋಮೋಟಿವ್ ಆಪರೇಟಿಂಗ್ ಪ್ಲಾಟ್‌ಫಾರಂ ಅನ್ನು ಮುಂದಿನ ವರ್ಷ ಆರಂಭಿಸಲಾಗುವುದು ಎಂದು ಹ್ಯುಂಡೈ ಮೋಟಾರ್ ಗ್ರೂಪ್ ನವೆಂಬರ್ 11 ರಂದು ಪ್ರಕಟಿಸಿದೆ. ಕಂಪನಿಯು ಬಿಡುಗಡೆಗೊಳಿಸಿರುವ ಮಾಹಿತಿಯ ಪ್ರಕಾರ, ಈ ಪ್ಲಾಟ್ ಫಾರಂ ಸ್ವಾಯತ್ತ ಚಾಲನೆ, ಹಸಿರು ತಂತ್ರಜ್ಞಾನ, ಆಟೋಮೋಟಿವ್ ಎಐ, ಭವಿಷ್ಯದ ಚಲನಶೀಲತೆ ಹಾಗೂ ಲಾಜಿಸ್ಟಿಕ್ಸ್ ಬೆಳವಣಿಗೆಗೆ ಕೊಡುಗೆ ನೀಡಲು ದೊಡ್ಡ ಡೇಟಾವನ್ನು ಹೊಂದಿರುತ್ತದೆ.

ಮುಂದಿನ ವರ್ಷದಿಂದ ಆರಂಭವಾಗಲಿದೆ Hyundai ಕಂಪನಿಯ ಹೊಸ ಆಪರೇಟಿಂಗ್ ಪ್ಲಾಟ್‌ಫಾರಂ

ಈ ಪ್ಲಾಟ್‌ಫಾರಂ ಸಂಪರ್ಕಿತ ಕಾರ್ ಸೇವಾ ಅಪ್ಲಿಕೇಶನ್, ಸ್ವಾಯತ್ತ ಚಾಲನೆ, ಚಲನ ಶೀಲತೆ ಸೇವೆ, ಪವರ್ ಪ್ಲಾಟ್‌ಫಾರಂ ಹಾಗೂ ಸಾಫ್ಟ್‌ವೇರ್‌ನ ಸಂಯೋಜನೆಯಾಗಿದೆ ಎಂದು ಹ್ಯುಂಡೈ ಕಂಪನಿ ಮಾಹಿತಿ ನೀಡಿದೆ. ಕಂಪನಿಯು ಈ ಪ್ಲಾಟ್ ಫಾರಂ ಅಂತರ ವಾಹನ ಸಂಪರ್ಕ ಹಾಗೂ ಚಲನಶೀಲತೆಯನ್ನು ಉತ್ತಮಗೊಳಿಸುತ್ತದೆ ಎಂದು ಹೇಳಿದೆ.

ಮುಂದಿನ ವರ್ಷದಿಂದ ಆರಂಭವಾಗಲಿದೆ Hyundai ಕಂಪನಿಯ ಹೊಸ ಆಪರೇಟಿಂಗ್ ಪ್ಲಾಟ್‌ಫಾರಂ

ಈ ಪ್ಲಾಟ್ ಫಾರಂ ಅನ್ನು ಅಭಿವೃದ್ಧಿಪಡಿಸಲು, ಹ್ಯುಂಡೈ ಗ್ರೂಪ್ ಈ ವರ್ಷ ಏಪ್ರಿಲ್‌ನಲ್ಲಿ ಸಾರಿಗೆ ಸೇವೆ (TaaS) ವಿಭಾಗವನ್ನು ಆಯೋಜಿಸಿತ್ತು. ವರದಿಗಳ ಪ್ರಕಾರ, ಆಪಲ್ ಹಾಗೂ ಮೈಕ್ರೋಸಾಫ್ಟ್‌ನಲ್ಲಿ ಸಾಫ್ಟ್‌ವೇರ್ ಪರಿಣತರಾಗಿರುವ ಕಂಪನಿಯ ಅಧ್ಯಕ್ಷರಾದ ಸಾಂಗ್ ಚಾಂಗ್ ಹ್ಯುನ್ ಈ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಮುಂದಿನ ವರ್ಷದಿಂದ ಆರಂಭವಾಗಲಿದೆ Hyundai ಕಂಪನಿಯ ಹೊಸ ಆಪರೇಟಿಂಗ್ ಪ್ಲಾಟ್‌ಫಾರಂ

ಇದರ ಜೊತೆಗೆ, ಪ್ಲಾಟ್‌ಫಾರಂ ಆಧಾರಿತ ಚಲನಶೀಲತೆಯ ಸೇವೆಗಳ ಮಾರುಕಟ್ಟೆಯನ್ನು ರಚಿಸಲು ಹ್ಯುಂಡೈ ಮೋಟಾರ್ ಗ್ರೂಪ್ 23 ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಳ್ಳಲು ಚಿಂತನೆ ನಡೆಸುತ್ತಿದೆ. ಹುಂಡೈ ಕಂಪನಿಯ ಇನ್ನಿತರ ಸುದ್ದಿಗಳ ಬಗ್ಗೆ ಹೇಳುವುದಾದರೆ ಕಂಪನಿಯು ಇತ್ತೀಚೆಗೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾವನ್ನು ಬಿಡುಗಡೆಗೊಳಿಸಿದೆ.

ಮುಂದಿನ ವರ್ಷದಿಂದ ಆರಂಭವಾಗಲಿದೆ Hyundai ಕಂಪನಿಯ ಹೊಸ ಆಪರೇಟಿಂಗ್ ಪ್ಲಾಟ್‌ಫಾರಂ

ಹೊಸ 2022 ಹ್ಯುಂಡೈ ಕ್ರೆಟಾವನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಹೊಸ ಕ್ರೆಟಾ ಕಾರಿನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಕಾರಿನ ಹೊರ ಭಾಗವನ್ನು ಸಂಪೂರ್ಣವಾಗಿ ಹೊಸದಾಗಿ ಮಾಡಲಾಗಿದೆ. ಇದರ ಜೊತೆಗೆ ಕಾರಿನ ಇಂಟೀರಿಯರ್ ನಲ್ಲೂ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಹುಂಡೈ ಕ್ರೆಟಾ ಕಾರಿನಲ್ಲಿ ಹಲವು ಫೀಚರ್ ಹಾಗೂ ಸಲಕರಣೆಗಳನ್ನು ಸೇರಿಸಲಾಗಿದೆ.

ಮುಂದಿನ ವರ್ಷದಿಂದ ಆರಂಭವಾಗಲಿದೆ Hyundai ಕಂಪನಿಯ ಹೊಸ ಆಪರೇಟಿಂಗ್ ಪ್ಲಾಟ್‌ಫಾರಂ

ಹೊಸ ಕಾರ್ ಅನ್ನು ಸಿಂಗಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇದರ ಮೊದಲ ನೋಟವನ್ನು ಕೆಲವು ವಾರಗಳ ಹಿಂದೆ ತೋರಿಸಲಾಗಿತ್ತು. 2022 ಹ್ಯುಂಡೈ ಕ್ರೆಟಾದ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಕಾರಿನ ಮುಂಭಾಗದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳಿಂದಾಗಿ ಹೊಸ ಕ್ರೆಟಾ ಕಾರು ಹೊಸ ಟಕ್ಸನ್ ಕಾರ್ ಅನ್ನು ಹೋಲುತ್ತದೆ.

ಮುಂದಿನ ವರ್ಷದಿಂದ ಆರಂಭವಾಗಲಿದೆ Hyundai ಕಂಪನಿಯ ಹೊಸ ಆಪರೇಟಿಂಗ್ ಪ್ಲಾಟ್‌ಫಾರಂ

ಹೊಸ ಕ್ರೆಟಾ ಜ್ಯುವೆಲ್ ಗ್ರಿಲ್ ಹಾಗೂ ಜ್ಯುವೆಲ್ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದ್ದು ಅವುಗಳನ್ನು ಗ್ರಿಲ್‌ನಲ್ಲಿಯೇ ಸಂಯೋಜಿಸಲಾಗಿದೆ. ಈ ಕಾರಿನ ಹಿಂಭಾಗದಲ್ಲಿ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿರುವಂತಹ ಬೂಮರಾಂಗ್ ಆಕಾರದ ಎಲ್ಇಡಿ ಟೇಲ್ ಲೈಟ್ ಅಳವಡಿಸಲಾಗಿದೆ. ಇದೇ ವೇಳೆ ಕಾರಿನ ಹಿಂಭಾಗದ ಮೇಲ್ಭಾಗದಲ್ಲಿ ಸ್ಟಾಪ್ ಲೈಟ್ ನೀಡಲಾಗಿದೆ.

ಮುಂದಿನ ವರ್ಷದಿಂದ ಆರಂಭವಾಗಲಿದೆ Hyundai ಕಂಪನಿಯ ಹೊಸ ಆಪರೇಟಿಂಗ್ ಪ್ಲಾಟ್‌ಫಾರಂ

ಹೊಸ ಕಾರಿನ ಇಂಟಿರಿಯರ್ ಬಗ್ಗೆ ಹೇಳುವುದಾದರೆ, 2022 ಹ್ಯುಂಡೈ ಕ್ರೆಟಾ ವಿನ್ಯಾಸವನ್ನು ಹಳೆಯ ಮಾದರಿಯಿಂದಲೇ ತೆಗೆದುಕೊಳ್ಳಲಾಗಿದೆ. ಈ ಕಾರು ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಮಧ್ಯದಲ್ಲಿ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪ್ರೀಮಿಯಂ 8 ಸ್ಪೀಕರ್ ಬೋಸ್ ಸೌಂಡ್ ಸಿಸ್ಟಂ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್‌ಪ್ಲೇ, ಪನೋರಾಮಿಕ್ ಸನ್‌ರೂಫ್, ವೆಂಟಿಲೇಟೆಡ್, ಕೂಲ್ಡ್ ಗ್ಲೋವ್ ಬಾಕ್ಸ್, ಆಂಬಿಯೆಂಟ್ ಲೈಟಿಂಗ್ ಗಳನ್ನು ಹೊಂದಿದೆ.

ಮುಂದಿನ ವರ್ಷದಿಂದ ಆರಂಭವಾಗಲಿದೆ Hyundai ಕಂಪನಿಯ ಹೊಸ ಆಪರೇಟಿಂಗ್ ಪ್ಲಾಟ್‌ಫಾರಂ

ನವೀಕರಿಸಿದ ಈ ಹೊಸ ಕ್ರೆಟಾ ಎಸ್‌ಯುವಿಯು ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಈಗ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಕಾರಿನ ಆರಂಭಿಕ ಬೆಲೆ ರೂ. 14.56 ಲಕ್ಷಗಳಾಗಿದೆ. ಹೊಸ ಕ್ರೆಟಾ ಕಾರ್ ಅನ್ನು ಆಕ್ಟಿವ್, ಪ್ರೈಮ್, ಸ್ಟೈಲ್ ಹಾಗೂ ಟ್ರೆಂಡ್ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಮುಂದಿನ ವರ್ಷದಿಂದ ಆರಂಭವಾಗಲಿದೆ Hyundai ಕಂಪನಿಯ ಹೊಸ ಆಪರೇಟಿಂಗ್ ಪ್ಲಾಟ್‌ಫಾರಂ

ಹೊಸ ಕಾರು ಭಾರತದಲ್ಲಿ ಬಿಡುಗಡೆಯಾದ ನಂತರ ಈಗಾಗಲೇ ದೇಶದಲ್ಲಿ ಮಾರಾಟದಲ್ಲಿರುವ MG Aster ಹಾಗೂ Mahindra XUV 700 ಕಾರುಗಳಿಗೆ ಪೈಪೋಟಿ ನೀಡಲಿದೆ. ಹ್ಯುಂಡೈನ ಕಾರುಗಳ ಮಾರಾಟವು ಪ್ರಸ್ತುತ ಜೋರಾಗಿದೆ. ಈ ಸಂದರ್ಭದಲ್ಲಿ ಕಂಪನಿಯು ಹೊಸ ಕ್ರೆಟಾ ಕಾರ್ ಅನ್ನು ಬಿಡುಗಡೆಗೊಳಿಸಿದರೆ ಅದು ಖಂಡಿತವಾಗಿಯೂ ಹ್ಯುಂಡೈ ಕಂಪನಿಯ ಮಾರಾಟವನ್ನು ಬದಲಾಯಿಸುತ್ತದೆ ಎಂದು ಹೇಳಲಾಗಿದೆ.

ಮುಂದಿನ ವರ್ಷದಿಂದ ಆರಂಭವಾಗಲಿದೆ Hyundai ಕಂಪನಿಯ ಹೊಸ ಆಪರೇಟಿಂಗ್ ಪ್ಲಾಟ್‌ಫಾರಂ

ಹ್ಯುಂಡೈ ಮೋಟಾರ್ಸ್ ಕಂಪನಿಯು 2020ರ ಅಕ್ಟೋಬರ್ ತಿಂಗಳಿನಲ್ಲಿ 56,605 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದ್ದರೆ, ಈ ವರ್ಷದ ಅಕ್ಟೋಬರ್‌ನಲ್ಲಿ ಕೇವಲ 37,021 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಈ ಮೂಲಕ ಕಂಪನಿಯ ಮಾರಾಟ ಪ್ರಮಾಣದಲ್ಲಿ 34.6% ನಷ್ಟು ಕುಸಿತ ಕಂಡು ಬಂದಿದೆ.

ಮುಂದಿನ ವರ್ಷದಿಂದ ಆರಂಭವಾಗಲಿದೆ Hyundai ಕಂಪನಿಯ ಹೊಸ ಆಪರೇಟಿಂಗ್ ಪ್ಲಾಟ್‌ಫಾರಂ

ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯುಂಡೈ ಕಾರು ಎಂಬ ಹೆಗ್ಗಳಿಕೆಗೆ ವೆನ್ಯೂ (Venue) ಕಾರು ಪಾತ್ರವಾಗಿದೆ. 2020ರ ಅಕ್ಟೋಬರ್ ತಿಂಗಳಿನಲ್ಲಿ ವೆನ್ಯೂ ಕಾರಿನ ಮಾರಾಟವು 8,828 ಯುನಿಟ್'ಗಳನ್ನು ಮಾರಾಟ ಮಾಡಲಾಗಿದ್ದರೆ, ಈ ಅಕ್ಟೋಬರ್‌ನಲ್ಲಿ 10,554 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ.

ಮುಂದಿನ ವರ್ಷದಿಂದ ಆರಂಭವಾಗಲಿದೆ Hyundai ಕಂಪನಿಯ ಹೊಸ ಆಪರೇಟಿಂಗ್ ಪ್ಲಾಟ್‌ಫಾರಂ

ಸೆಮಿ ಕಂಡಕ್ಟರ್ ಕೊರತೆ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಭಾರತದಲ್ಲಿ ಕಾರುಗಳ ಮಾರಾಟ ಕುಸಿತಕ್ಕೆ ಪ್ರಮುಖ ಅಂಶಗಳಾಗಿವೆ. ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಇಂಧನ ಚಾಲಿತ ಹೊಸ ವಾಹನಗಳ ಮಾರಾಟ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಇದರಿಂದಾಗಿ ಈ ಬಾರಿಯ ಹಬ್ಬದ ಋತುವು ವಾಹನ ತಯಾರಕ ಕಂಪನಿಗಳಿಗೆ ಸಿಹಿ ನೀಡಲಿಲ್ಲವೆಂದೇ ಹೇಳಬಹುದು.

Most Read Articles

Kannada
English summary
Hyundai to introduce its automotive operating platform in 2022 details
Story first published: Friday, November 12, 2021, 14:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X