ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಹ್ಯುಂಡೈ ಕಂಪನಿಯು ತನ್ನ ಹೊಸ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯನ್ನು 2021ರ ಗೈಕಿಂಡೋ ಇಂಡೋನೇಷ್ಯಾ ಇಂಟರ್‌ನ್ಯಾಶನಲ್ ಆಟೋ ಶೋ (GIIAS) ನಲ್ಲಿ ಜಾಗತಿಕವಾಗಿ ಅನಾವರಣಗೊಳಿಸಿದೆ. 2022ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್(Hyundai Creta Facelift) ಎಸ್‍ಯುವಿಯು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ನ್ಯೂ ಜನರೇಷನ್ ಟ್ಯೂಸಾನ್ ಮಾದರಿಯಂತೆ ಸ್ಪೋರ್ಟಿನೆಸ್ ವಿನ್ಯಾಸವನ್ನು ಕ್ರೆಟಾ ಫೇಸ್‌ಲಿಫ್ಟ್ ಪಡೆದುಕೊಂಡಿದೆ. ಹೆಚ್ಚು ಯುವ ಗ್ರಾಹಕರನ್ನು ಸೆಳೆಯುವಂತಿದೆ. ಅದರ ಮುಂಭಾಗವು ಹ್ಯುಂಡೈ ಕ್ರೆಟಾ ಗ್ರ್ಯಾಂಡ್ ಮಾದರಿಯಿಂದ ಎರವಲು ಪಡೆದುಕೊಂಡಿದೆ. 2022ರ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿ ಹೊಸ ಪ್ಯಾರಾಮೆಟ್ರಿಕ್ ಜ್ಯುವೆಲ್ ಪ್ಯಾಟರ್ನ್ ಗ್ರಿಲ್ ಅನ್ನು ಹೊಂದಿದ್ದು ಅದು ಎಲ್‌ಇಡಿ ಡಿಆರ್‌ಎಲ್‌ ಗಳನ್ನು ಸಂಯೋಜಿಸುತ್ತದೆ. ಇದು ಎಸ್‍ಯುವಿಯನ್ನು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ತೆಳ್ಳನೆಯ ಏರ್ ಇನ್ ಟೆಕ್ ನೊಂದಿಗೆ ಪರಿಷ್ಕೃತ ಬಂಪರ್, ಸಿಲ್ವರ್ ಬಣ್ಣದ ಫಾಕ್ಸ್ ಸ್ಕಿಡ್ ಪ್ಲೇಟ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಫಾಗ್ ಲ್ಯಾಂಪ್ ಅಸೆಂಬ್ಲಿ ಅದರ ಸ್ಪೋರ್ಟಿಯರ್ ನೋಟವನ್ನು ಇನ್ನಷ್ಟು ಹೆಚ್ಚಿಸುತ್ತದೆ

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಈ ಎಸ್‍ಯುವಿಯಲ್ಲಿ ಹೊಸ, ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಇದರ ಸೈಡ್ ಪ್ರೊಫೈಲ್ ಬದಲಾಗದೆ ಉಳಿಯುತ್ತದೆ. ಪ್ರಸ್ತುತ ಮಾದರಿಗಿಂತ ಭಿನ್ನವಾಗಿ, ಹೊಸ ಕ್ರೆಟಾದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಟೈಲ್‌ಗೇಟ್‌ನ ಅಗಲದಲ್ಲಿ ಚಲಿಸುವ ಸಂಪರ್ಕಿಸುವ ಪಟ್ಟಿಯನ್ನು ತಪ್ಪಿಸುತ್ತದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಇಂಟಿರಿಯರ್ ವಿನ್ಯಾಸವು ಬದಲಾಗದೆ ಹಾಗೇ ಉಳಿದಿದೆ, ಆದರೆ ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಈ ಎಸ್‍ಯುವಿಯು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ನೊಂದಿಗೆ ಬರುತ್ತದೆ. ಇದನ್ನು ಇಂಡಿಯಾ-ಸ್ಪೆಕ್ ಮಾದರಿಯಲ್ಲಿ ಸಹ ನೀಡಬಹುದು. ಹೊಸ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ನವೀಕರಿಸಿದ ಬ್ಲೂಲಿಂಕ್ ಕನೆಕ್ಟಿವಿಟಿಯ ಕಾರ್ ತಂತ್ರಜ್ಞಾನ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ, ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಕದ್ದ ವಾಹನ ಟ್ರ್ಯಾಕಿಂಗ್ ಪೀಚರ್ ಅನ್ನು ಹೊಂದಿದೆ. ಕಾರು ಕಳ್ಳತನವಾದಗ ಪತ್ತೆಹಚ್ಚಲು ಈ ಫೀಚರ್ ಸಹಕಾರಿಯಾಗಿರುತ್ತದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಇಂಡೋನೇಷ್ಯಾದಲ್ಲಿ, ಹೊಸ ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗುತ್ತದೆ. ಈ ಎಂಜಿನ್ 114 ಬಿಹೆಚ್‍ಪಿ ಪವರ್ ಮತ್ತು 142 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಇಂಡಿಯಾ-ಸ್ಪೆಕ್ ಮಾದರಿಯ ರೀತಿ 1.4 ಲೀಟರ್ GDI ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 138 ಬಿಹೆಚ್‍ಪಿ ಪವರ್ ಮತ್ತು 242 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರ ಜೊತೆಗೆ 1.5 ಲೀಟರ್ CRDi ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಇನ್ನು ಗೇರ್ ಬಾಕ್ಸ್ ಆಯ್ಕೆಗಳು ಪ್ರಸ್ತುತ ಮಾದರಿಯಂತೆ ಇರಲಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಹ್ಯುಂಡೈ ಕಂಪನಿಯು ಮೆಕ್ಸಿಕೋದಲ್ಲಿ ಕ್ರೆಟಾ ಗ್ರ್ಯಾಂಡ್ ಎಂಬ ಹೆಸರಿನಲ್ಲಿ ಅಲ್ಕಾಜರ್ ಎಸ್‍ಯುವಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಮೂಲಭೂತವಾಗಿ ಈ ಎಸ್‍ಯುವಿಯು ಕ್ರೆಟಾದ ಮೂರು-ಸಾಲು ಆವೃತ್ತಿಯಾಗಿದೆ. ಮಿಡ್ ಸೈಜ್ ಎಸ್‍ಯುವಿಯನ್ನು ಮೆಕ್ಸಿಕನ್ ಮಾರುಕಟ್ಟೆಯಲ್ಲಿ ಕ್ರೆಟಾ ಗ್ರ್ಯಾಂಡ್ ಆಗಿ ಮಾರಾಟ ಮಾಡಲಾಗುತ್ತದೆ ಈ ಎಸ್‍ಯುವಿಯು ಮೆಕ್ಸಿಕೋದಲ್ಲಿ GLS ಪ್ರೀಮಿಯಂ ಮತ್ತು ಲಿಮಿಟೆಡ್ AT ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಎಸ್‍ಯುವಿ ಸ್ಟೈಲಿಂಗ್ ಮತ್ತು ವಿಶೇಷಣಗಳ ವಿಷಯದಲ್ಲಿ ಇಂಡಿಯಾ-ಸ್ಪೆಕ್ ಅಲ್ಕಾಜರ್‌ಗೆ ಹೋಲುತ್ತದೆ. ಇದು ಅಲ್ಕಾಜರ್‌ನಂತೆಯೇ ಅದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಹೊಸ ಹ್ಯುಂಡೈ ಕ್ರೆಟಾ ಗ್ರ್ಯಾಂಡ್ 7-ಸೀಟರ್ ಮಾದರಿಯು ಪ್ರಸ್ತುತ ತಲೆಮಾರಿನ ಹ್ಯುಂಡೈ ಕ್ರೆಟಾವನ್ನು ಆಧರಿಸಿದೆ, ಇದು ಆಯಾ ವಿಭಾಗದಲ್ಲಿ ಜನಪ್ರಿಯ ಮಾದರಿಯಾಗಿದೆ. ಈ ಎಸ್‍ಯುವಿಯ ಒಳಭಾಗದಲ್ಲಿ ಉತ್ತಮ ಸ್ಪೇಸ್ ಅನ್ನು ಹೊಂದಿದ್ದು, 7 ಜನರು ಉತ್ತಮವಾಗಿ ಕುಳಿತು ಪ್ರಯಾಣಿಸಬಹುದು. ಈ ಹ್ಯುಂಡೈ ಕ್ರೆಟಾ ಗ್ರ್ಯಾಂಡ್ 7-ಸೀಟರ್ ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ. ಹ್ಯುಂಡೈ ಕ್ರೆಟಾ ಗ್ರ್ಯಾಂಡ್ ಕ್ರೆಟಾವನ್ನು ಆಧರಿಸಿದೆ ಆದರೆ, ಅದರ ಕೆಲವು ಸ್ಪರ್ಧಿಗಳಿಗಿಂತ ಭಿನ್ನವಾಗಿ, ಹ್ಯುಂಡೈ ಎರಡೂ ಎಸ್‌ಯುವಿಗಳನ್ನು ಪ್ರತ್ಯೇಕಿಸಲು ಕಾರಿನಲ್ಲಿ ಕೆಲವು ಕಾಸ್ಮೆಟಿಕ್ ಮತ್ತು ಯಾಂತ್ರಿಕ ಬದಲಾವಣೆಗಳನ್ನು ಮಾಡಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಕ್ರೆಟಾ ಗ್ರ್ಯಾಂಡ್ ಎಸ್‍ಯುವಿಯು ಟೈಪೂನ್ ಸಿಲ್ವರ್, ಟೈಟಾನ್ ಗ್ರೇ, ಟೈಗಾ ಬ್ರೌನ್, ಸ್ಟೇರಿ ನೈಟ್, ಪೊಲಾರ್ ವೈಟ್ ಮತ್ತು ಪ್ಯಾಂಥಮ್ ಬ್ಲ್ಯಾಕ್ ಬಣ್ಣಗಳು ಸೇರಿ ಎರಡು ಡ್ಯುಯಲ್ ಟೋನ್ ಮಾದರಿಗಳು ಖರೀದಿಗೆ ಲಭ್ಯವಿರುತ್ತದೆ. ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಈ ಎಸ್‍ಯುವಿಯಲ್ಲಿ ಕ್ರೂಸ್ ಕಂಟ್ರೋಲ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಬ್ಲೈಂಡ್ ವ್ಯೂ ಮಾನಿಟರ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಇತರ ಫೀಚರ್ಸ್ ಗಳನ್ನು ಒಳಗೊಂಡಿವೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Hyundai Creta ಫೇಸ್‌ಲಿಫ್ಟ್ ಎಸ್‍ಯುವಿ

ಹ್ಯುಂಡೈ ಕಂಪನಿಯು ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯ ಅಧಿಕೃತ ಬಿಡುಗಡೆಯ ಟೈಮ್‌ಲೈನ್ ಅನ್ನು ಬಹಿರಂಗಪಡಿಸಿಲ್ಲ. ಇನ್ನು ಈ ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಒಟ್ಟಾರೆಯಾಗಿ. 2022ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಪ್ರಮುಖ ನವೀಕರಣಗಳನ್ನು ಪಡೆದುಕೊಂಡಿದೆ. ಪ್ರಮುಖವಾಗಿ ಸ್ಪೋರ್ಟಿ ವಿನ್ಯಾಸ ಮತ್ತು ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿವೆ.

Most Read Articles

Kannada
English summary
Hyundai unveiled 2022 creta facelift suv with adas tech details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X