ಹ್ಯುಂಡೈ ವೆನ್ಯೂ ಕಾರಿನಲ್ಲಿ ಹೊಸದಾಗಿ ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್ ಬಿಡುಗಡೆ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ವೆರಿಯೆಂಟ್‌ಗಳಲ್ಲಿ ಪ್ರಮುಖ ಬದಲಾವಣೆ ತರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಕೆಲವು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸುವುದರ ಕೆಲವು ಹೊಸ ವೆರಿಯೆಂಟ್ ಬಿಡುಗಡೆ ಮಾಡಿದೆ.

ಹ್ಯುಂಡೈ ವೆನ್ಯೂ ಕಾರಿನಲ್ಲಿ ಹೊಸದಾಗಿ ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್ ಬಿಡುಗಡೆ

ವೆನ್ಯೂ ಕಾರಿನಲ್ಲಿ ಹ್ಯುಂಡೈ ಕಂಪನಿಯು ಹೊಸದಾಗಿ ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್‌ಗಳನ್ನು ಬಿಡುಗಡೆ ಮಾಡಿದ್ದು, ಎರಡು ವೆರಿಯೆಂಟ್‌ಗಳಲ್ಲಿ ಪ್ರಮುಖ ನಾಲ್ಕು ಮಾದರಿಗಳು ಖರೀದಿಗೆ ಲಭ್ಯವಿವೆ. ಹೊಸ ವೆರಿಯೆಂಟ್‌ಗಳು ಆರಂಭಿಕವಾಗಿ ರೂ.9.03 ಲಕ್ಷ ಬೆಲೆ ಹೊಂದಿದ್ದು, ಹೊಸ ವೆರಿಯೆಂಟ್‌ಗಳಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಲಾಗಿದೆ.

ಹ್ಯುಂಡೈ ವೆನ್ಯೂ ಕಾರಿನಲ್ಲಿ ಹೊಸದಾಗಿ ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್ ಬಿಡುಗಡೆ

ಹೊಸ ಎಸ್(ಒ) ವೆರಿಯೆಂಟ್‌ನಲ್ಲಿ ಪೆಟ್ರೋಲ್ ಐಎಂಟಿ, ಪೆಟ್ರೋಲ್ 7 ಸ್ಪೀಡ್ ಡಿಸಿಟಿ ಮತ್ತು ಡೀಸೆಲ್ ಮ್ಯಾನುವಲ್ ಮತ್ತು ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್‌ನಲ್ಲಿ ಡೀಸೆಲ್ ಮ್ಯಾನುವಲ್ ಮಾದರಿಯನ್ನು ಸೇರ್ಪಡೆಗೊಳಿಸಲಾಗಿದೆ.

ಹ್ಯುಂಡೈ ವೆನ್ಯೂ ಕಾರಿನಲ್ಲಿ ಹೊಸದಾಗಿ ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್ ಬಿಡುಗಡೆ

ವೆನ್ಯೂ ಮಾದರಿಯಲ್ಲಿ ಹ್ಯುಂಡೈ ಕಂಪನಿಯು ಇ 1.5 ಡೀಸೆಲ್ ಮ್ಯಾನುವಲ್, ಎಸ್ 1.5 ಡೀಸೆಲ್ ಮ್ಯಾನುವಲ್, ಎಸ್ 1.0 ಲೀಟರ್ ಪೆಟ್ರೋಲ್ ಐಎಂಟಿ, ಎಸ್ 1.0 ಲೀಟರ್ ಪೆಟ್ರೋಲ್ ಡಿಸಿಟಿ ಮತ್ತು ಎಸ್ಎಕ್ಸ್ (ಒ) 1.0 ಲೀಟರ್ ಪೆಟ್ರೋಲ್ ಮ್ಯಾನುವಲ್ ರೂಪಾಂತರಗಳನ್ನು ಕೈಬಿಟ್ಟಿದೆ.

ಹ್ಯುಂಡೈ ವೆನ್ಯೂ ಕಾರಿನಲ್ಲಿ ಹೊಸದಾಗಿ ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್ ಬಿಡುಗಡೆ

ಎಸ್(ಒ) ಮತ್ತು ಎಸ್ಎಕ್ಸ್ (ಒ) ಎಕ್ಸಿ‌ಕ್ಲೂಟಿವ್ ಹೊಸ ರೂಪಾಂತರಗಳಲ್ಲಿ ಹಳೆಯ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ತಂತ್ರಜ್ಞಾನ ಸೌಲಭ್ಯಗಳನ್ನು ನೀಡಲಾಗಿದ್ದು, ಅಲಾಯ್ ವ್ಹೀಲ್ ಬದಲಾಗಿ ಸ್ಟೈಲಿಶ್ ಅಲಾಯ್ ಚಕ್ರಗಳನ್ನು ಮತ್ತು ಬ್ಲ್ಯೂ ಲಿಂಕ್ ಕಾರ್ ಕನೆಕ್ಟೆಡ್ ಫೀಚರ್ಸ್‌ಗಳನ್ನು ಉನ್ನತೀಕರಿಸಲಾಗಿದೆ.

ಹ್ಯುಂಡೈ ವೆನ್ಯೂ ಕಾರಿನಲ್ಲಿ ಹೊಸದಾಗಿ ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್ ಬಿಡುಗಡೆ

ಎಸ್ (ಒ) ಆವೃತ್ತಿಯು 1.0 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಐಎಂಟಿ, 7-ಸ್ಪೀಡ್ ಡಿಸಿಟಿ ಮತ್ತು 1.5 ಲೀಟರ್ ಡೀಸೆಲ್ ಮ್ಯಾನುವಲ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದ್ದು, ಎಸ್‌ಎಕ್ಸ್ (ಒ) ಎಕ್ಸಿ‌ಕ್ಲೂಟಿವ್ ಮಾದರಿಯು 1.5-ಲೀಟರ್ ಡೀಸೆಲ್ ಮ್ಯಾನುವಲ್ ಆವೃತ್ತಿಯೊಂದಿಗೆ ಮಾತ್ರ ಖರೀದಿಗೆ ಲಭ್ಯವಿದೆ.

ಹ್ಯುಂಡೈ ವೆನ್ಯೂ ಕಾರಿನಲ್ಲಿ ಹೊಸದಾಗಿ ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್ ಬಿಡುಗಡೆ

ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್ ಒಳಗೊಂಡು ಹೊಸ ವೆನ್ಯೂ ಕಾರು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6. 92 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.78 ಲಕ್ಷ ಬೆಲೆ ಹೊಂದಿದೆ.

ಹ್ಯುಂಡೈ ವೆನ್ಯೂ ಕಾರಿನಲ್ಲಿ ಹೊಸದಾಗಿ ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್ ಬಿಡುಗಡೆ

2019 ಮೇ ಅವಧಿಯಲ್ಲಿ ಬಿಡುಗಡೆಗೊಂಡಿದ್ದ ಹ್ಯುಂಡೈ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಬಿಡುಗಡೆಯಾದ ಕೆಲವೇ ಒಂದೇ ವರ್ಷದ ಅವಧಿಯಲ್ಲಿ 1 ಲಕ್ಷಕ್ಕೂ ಅಧಿಕ ಕಾರು ಮಾರಾಟ ದಾಖಲೆ ಕಂಡಿದ್ದು, ಟಾಪ್ ಎಂಡ್ ಮಾದರಿಯಾದ 1.0-ಲೀಟರ್ ಟರ್ಬೋ ಎಂಜಿನ್ ಮಾದರಿಗೆ ಅತಿ ಹೆಚ್ಚು ಬೇಡಿಕೆ ಹೊಂದಿದೆ.

ಹ್ಯುಂಡೈ ವೆನ್ಯೂ ಕಾರಿನಲ್ಲಿ ಹೊಸದಾಗಿ ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್ ಬಿಡುಗಡೆ

ವೆನ್ಯೂ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದರೆ ಡಿಸೇಲ್ ಎಂಜಿನ್‌ನಲ್ಲಿ ಒಂದು ಆಯ್ಕೆಯನ್ನು ನೀಡಲಾಗಿದ್ದು, ಇ, ಎಸ್, ಎಸ್ಎಕ್ಸ್, ಎಸ್ಎಕ್ಸ್(0) ಮತ್ತು ಎಸ್ಎಕ್ಸ್ ಪ್ಲಸ್ ವೆರಿಯೆಂಟ್‌ಗಳಲ್ಲಿ ಹೊಸ ವೆನ್ಯೂ ಕಾರು ಖರೀದಿಗೆ ಲಭ್ಯವಿದೆ.

ಹ್ಯುಂಡೈ ವೆನ್ಯೂ ಕಾರಿನಲ್ಲಿ ಹೊಸದಾಗಿ ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್ ಬಿಡುಗಡೆ

ಬಿಎಸ್-6 ಎಮಿಷನ್ ಕಡ್ಡಾಯ ನಂತರ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಜೋಡಿಸಲಾಗಿದ್ದು, ಟರ್ಬೊ ಪೆಟ್ರೋಲ್ ಮಾದರಿಯು 118-ಬಿಎಚ್‌ಪಿ, 172-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಮಾದರಿಯು 100-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Hyundai Venue S(O) & SX(O) Executive Variants Added. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X