ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ವೆರ್ನಾ ಕಾರು ಮಾರಾಟದಲ್ಲಿ ಶೇ.259ರಷ್ಟು ಹೆಚ್ಚಳ

ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ ದೇಶದ ಎರಡನೇ ಅತಿದೊಡ್ಡ ಕಾರು ತಯಾರಕರಾಗಿ ಮುಂದುವರೆದಿದೆ. ಹ್ಯುಂಡೈ ಕಂಪನಿಯು ಕಳೆದ ತಿಂಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. ಹ್ಯುಂಡೈ ಕಾರುಗಳು ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ವೆರ್ನಾ ಕಾರು ಮಾರಾಟದಲ್ಲಿ ಶೇ.259ರಷ್ಟು ಹೆಚ್ಚಳ

ಕಳೆದ ತಿಂಗಳು ಹ್ಯುಂಡೈ ಕಂಪನಿಯು ದೇಶದಲ್ಲಿ ಒಟ್ಟು 51,600 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ತಿಂಗಳ ಹ್ಯುಂಡೈ ಕಾರುಗಳ ಮಾರಾಟದಲ್ಲಿ ವೆರ್ನಾ ಮಾದರಿಯು ಉತ್ತಮ ಕೊಡುಗೆಯನ್ನು ನೀಡಿದೆ. ಕಳೆದ ತಿಂಗಳು ಹ್ಯುಂಡೈ ವೆರ್ನಾದ 2,047 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ವೆರ್ನಾದ 570 ಯುನಿಟ್‌ಗಳು ಮಾರಾಟವಾಗಿತ್ತು. ವರ್ಷದಿಂದ ವರ್ಷಕ್ಕೆ ಹ್ಯುಂಡೈ ವೆರ್ನಾ ಕಾರು ಮಾರಾಟದಲ್ಲಿ ಶೇ.259 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ವೆರ್ನಾ ಕಾರು ಮಾರಾಟದಲ್ಲಿ ಶೇ.259ರಷ್ಟು ಹೆಚ್ಚಳ

ಈ ವರ್ಷದ ಮೊದಲ ತಿಂಗಳಿಗೆ ಹೋಲಿಸಿದರೆ ಮಾರಾಟದಲ್ಲಿ ವೆರ್ನಾ ಶೇ.2 ರಷ್ಟು ಬೆಳವಣಿಗೆಯಾಗಿದೆ. ಐದನೇ ತಲೆಮಾರಿನ ಹೋಂಡಾ ಸಿಟಿಯ ಹಿಂದೆ ವೆರ್ನಾ ತನ್ನ ವಿಭಾಗದ ಮಾರಾಟ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ವೆರ್ನಾ ಕಾರು ಮಾರಾಟದಲ್ಲಿ ಶೇ.259ರಷ್ಟು ಹೆಚ್ಚಳ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆರ್ನಾ ಕಾರು ಎಸ್, ಎಸ್ ಪ್ಲಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒ) ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ವೆರ್ನಾ ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ವೆರ್ನಾ ಕಾರು ಮಾರಾಟದಲ್ಲಿ ಶೇ.259ರಷ್ಟು ಹೆಚ್ಚಳ

ಈ 1.5 ಲೀಟರ್ ಲೀಟರ್ ಹೊರತಾಗಿ ಟಾಪ್-ಸ್ಪೆಕ್ ಎಸ್‌ಎಕ್ಸ್ (ಒ) ರೂಪಾಂತರದಲ್ಲಿ ಪ್ರತ್ಯೇಕವಾಗಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ 1.0-ಲೀಟರ್ ಟರ್ಬೊ-ಪೆಟ್ರೋಲ್ 120 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ವೆರ್ನಾ ಕಾರು ಮಾರಾಟದಲ್ಲಿ ಶೇ.259ರಷ್ಟು ಹೆಚ್ಚಳ

ಇದರ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‍ ಗಳು ಕ್ರಮವಾಗಿ 115 ಬಿಹೆಚ್‍ಪಿ ಪವರ್ ಮತ್ತು 144 ಎನ್ಎಂ ಟಾರ್ಕ್, 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್‍ ಗಳೊಂದಿಗೆ 6-ಸ್ಪೀಡ್ ಮ್ಯಾನುವರ್ ಗೇರ್‌ಬಾಕ್ಸ್‌ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ವೆರ್ನಾ ಕಾರು ಮಾರಾಟದಲ್ಲಿ ಶೇ.259ರಷ್ಟು ಹೆಚ್ಚಳ

ವೆರ್ನಾ ಕಾರಿನಲ್ಲಿ 8.0-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ. ಇದರೊಂದಿಗೆ ಹೊಸ ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಫ್ಲಕ್ಸ್ ವುಡ್ ಡ್ಯಾಶ್‌ಬೋರ್ಡ್, ಅಲ್ಯುಮಿನಿಯಂ ಟ್ರಿಮ್, ಹೊಸ ಮಾದರಿಯ ಎಸಿ ವೆಂಟ್ಸ್ ಮತ್ತು ಸೀಟ್‍ ಗಳ ಡಿಸೈನ್ ಬದಲಾವಣೆಗೊಳಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ವೆರ್ನಾ ಕಾರು ಮಾರಾಟದಲ್ಲಿ ಶೇ.259ರಷ್ಟು ಹೆಚ್ಚಳ

ಇದರೊಂದಿಗೆ ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್ ಓಪನಿಂಗ್, ವೈರ್‌ಲೆಸ್ ಮೊಬೈಲ್ ಫೋನ್ ಚಾರ್ಜರ್, ಸನ್‌ರೂಫ್ ಮತ್ತು ಇದರೊಂದಿಗೆ 45 ಫೀಚರ್ಸ್‍ಗಳೊಂದಿಗೆ ಬ್ರಾಂಡ್‌ನ ಬ್ಲೂ ಲಿಂಕ್ ಕನೆಕ್ಟಿವಿಟಿ ಸೂಟ್‌ ಆಗಿದೆ.

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ವೆರ್ನಾ ಕಾರು ಮಾರಾಟದಲ್ಲಿ ಶೇ.259ರಷ್ಟು ಹೆಚ್ಚಳ

ವೆರ್ನಾ ಕಾರಿನ ಮುಂಭಾಗದ ಗ್ರಿಲ್ ಸ್ಲಾಟ್ ನಲ್ಲಿಯು ಸಾಕಷ್ಟು ಬದಲಾವಣೆಯನ್ನು ಮಾಡಲಾಗಿದೆ. ಈ ಹೊಸ ಕಾರಿನ ಮುಂಭಾಗ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಟೈಲ್ ಲ್ಯಾಂಪ್, ಬೂಟ್ ಲಿಡ್ ಮತ್ತು ಸ್ಪೋರ್ಟಿ ಮಾದರಿಯ ಕ್ರೊಮ್ ನೀಡಿದೆ.

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ವೆರ್ನಾ ಕಾರು ಮಾರಾಟದಲ್ಲಿ ಶೇ.259ರಷ್ಟು ಹೆಚ್ಚಳ

ಇನ್ನು ಹೊಸ ವೆರ್ನಾ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ರೇರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಮುಂಭಾಗದ ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ. ಹೆಚ್ಚಿನ ರೂಪಾಂತರಗಳು ಒಟ್ಟು ಆರು ಏರ್‌ಬ್ಯಾಗ್‌ಗಳು, ಇಎಸ್‍ಸಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್(ಟಾಪ್ ವೆರಿಯೆಂಟ್ ನಲ್ಲಿ ಮಾತ್ರ) ಮತ್ತು ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಅನ್ನು ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ವೆರ್ನಾ ಕಾರು ಮಾರಾಟದಲ್ಲಿ ಶೇ.259ರಷ್ಟು ಹೆಚ್ಚಳ

ಹ್ಯುಂಡೈ ವೆರ್ನಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಿಯಾಜ್, ಹೋಂಡಾ ಸಿಟಿ, ಸ್ಕೋಡಾ ರ‍್ಯಾಪಿಡ್ ಮತ್ತು ಪೋಕ್ಸ್‌ವ್ಯಾಗನ್ ವೆಂಟೊ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Hyundai Verna Sales Increase By 259% In February 2021. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X