ಕ್ರ್ಯಾಶ್ ಟೆಸ್ಟ್‌ನಲ್ಲಿ ಮೇಡ್ ಇನ್ ಇಂಡಿಯಾ Hyundai Verna ಕಾರು ವಿಫಲ: ಶೂನ್ಯ ಸ್ಟಾರ್ ರೇಟಿಂಗ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ವೆರ್ನಾ ಕಾರನ್ನು ಲ್ಯಾಟಿನ್ NCAP ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿದೆ. ಈ ಲ್ಯಾಟಿನ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಹ್ಯುಂಡೈ ವೆರ್ನಾ ಸೆಡಾನ್ ಮಾದರಿಯು ಶೂನ್ಯ ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮೇಡ್ ಇನ್ ಇಂಡಿಯಾ Hyundai Verna ಕಾರು ವಿಫಲ: ಶೂನ್ಯ ಸ್ಟಾರ್ ರೇಟಿಂಗ್

ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿದ ಮಾದರಿಯು ಭಾರತದಲ್ಲಿ ತಯಾರಿಸಲ್ಪಟ್ಟಿದೆ. ಅದೇ ತಲೆಮಾರಿನ ಮಾದರಿಯು ಭಾರತದಲ್ಲಿ ಮಾರಾಟವಾಗೂತಿದ್ದರೂ, ಲ್ಯಾಟಿನ್ ಮಾರುಕಟ್ಟೆಯಲ್ಲಿ ಕಡಿಮೆ ಗುಣಮಟ್ಟದ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಕ್ರ್ಯಾಶ್ ಟೆಸ್ಟ್ ಮಾಡೆಲ್ ಸಿಂಗಲ್ ಡ್ರೈವರ್ ಸೈಡ್ ಏರ್‌ಬ್ಯಾಗ್, ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್, ಎಬಿಎಸ್ ವಿತ್ ಇಬಿಡಿ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಪ್ಯಾಸೆಂಜರ್ ಸೀಟ್ ಬೆಲ್ಟ್ ರಿಮೈಂಡರ್, ಕೋ-ಡ್ರೈವರ್ ಏರ್‌ಬ್ಯಾಗ್ ಮತ್ತು ಸೈಡ್ ಏರ್‌ಬ್ಯಾಗ್‌ಗಳನ್ನು ಆಯ್ಜೆಯಾಗಿ ಟಾಪ್-ಎಂಡ್ ರೂಪಾಂತರಗಳಲ್ಲಿ ನಿರ್ದಿಷ್ಟಪಡಿಸಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮೇಡ್ ಇನ್ ಇಂಡಿಯಾ Hyundai Verna ಕಾರು ವಿಫಲ: ಶೂನ್ಯ ಸ್ಟಾರ್ ರೇಟಿಂಗ್

ಹ್ಯುಂಡೈ ವೆರ್ನಾ ಸೆಡಾನ್ ಕ್ರ್ಯಾಶ್ ಟೆಸ್ಟ್‌ನಲ್ಲಿ, ವಯಸ್ಕ ಪ್ರಯಾಣಿಕರ ವಿಭಾಗದಲ್ಲಿ ಶೇ.9 ಅಂಕ ಮತ್ತು ಮಕ್ಕಳ ಸುರಕ್ಷತೆಯಲ್ಲಿ ಶೇ.13 ರಷ್ಟು ಅಂಕಗಳನ್ನು ಪಡೆದಿದೆ. ಪಾದಚಾರಿ ರಕ್ಷಣೆಯಲ್ಲಿ ಶೇ,53 ಅಂಕ ಮತ್ತು ಸೇಫ್ಟಿ ಅಸಿಸ್ಟ್ ಫೀಚರ್ಸ್ ಗಳ ವಿಭಾಗದಲ್ಲಿ ಶೇ.7 ರಷ್ಟು ಅಂಕವನ್ನು ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮೇಡ್ ಇನ್ ಇಂಡಿಯಾ Hyundai Verna ಕಾರು ವಿಫಲ: ಶೂನ್ಯ ಸ್ಟಾರ್ ರೇಟಿಂಗ್

ಕ್ರ್ಯಾಶ್ ಟೆಸ್ಟ್‌ನಲ್ಲಿ, ವೆರ್ನಾ ಕಾರಿನ ಚಾಲಕ ಮತ್ತು ಪ್ರಯಾಣಿಕರ ಕುತ್ತಿಗೆ ಮತ್ತು ತಲೆಗೆ ಉತ್ತಮ ರಕ್ಷಣೆ ನೀಡಿತು. ಚಾಲಕನ ಎದೆಯು ಸಾಕಷ್ಟು ರಕ್ಷಣೆಯನ್ನು ತೋರಿಸಿದೆ ಮತ್ತು ಪ್ರಯಾಣಿಕರ ಎದೆಯು ಕಳಪೆ ರಕ್ಷಣೆಯನ್ನು ತೋರಿಸಿದೆ. ಚಾಲಕನ ಮೊಣಕಾಲುಗಳು ಮತ್ತು ಒಬ್ಬ ಪ್ರಯಾಣಿಕರ ಮೊಣಕಾಲು ಕನಿಷ್ಠ ರಕ್ಷಣೆಯನ್ನು ತೋರಿಸಿದೆ ಏಕೆಂದರೆ ಅವುಗಳು ಡ್ಯಾಶ್‌ಬೋರ್ಡ್‌ನ ಹಿಂದಿನ ರಚನೆಗಳೊಂದಿಗೆ ಪ್ರಭಾವ ಬೀರಬಹುದು.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮೇಡ್ ಇನ್ ಇಂಡಿಯಾ Hyundai Verna ಕಾರು ವಿಫಲ: ಶೂನ್ಯ ಸ್ಟಾರ್ ರೇಟಿಂಗ್

ಪ್ರಯಾಣಿಕರ ಒಂದು ಮೊಣಕಾಲು ಉತ್ತಮ ರಕ್ಷಣೆಯನ್ನು ತೋರಿಸಿದೆ. ಈ ಅಂಶಗಳಿಂದಾಗಿ, ಮುಂಭಾಗದ ಆಫ್‌ಸೆಟ್ ಪರೀಕ್ಷೆಯಲ್ಲಿ ಸೆಡಾನ್ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿತು. ಆದರೆ ಅದರ ಬಾಡಿಶೆಲ್ ಮತ್ತು ಫುಟ್‌ವೆಲ್ ಪ್ರದೇಶವನ್ನು ಸ್ಥಿರವೆಂದು ರೇಟ್ ಮಾಡಲಾಗಿದೆ ಮತ್ತು ಹೆಚ್ಚಿನ ಹೊರೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ವೆರ್ನಾವು CRS ಅನ್ನು ಸಹ ನೀಡುವುದಿಲ್ಲ ಮತ್ತು ಆದ್ದರಿಂದ ಇದು ಮಕ್ಕಳ ಸುರಕ್ಷತೆಯಲ್ಲೂ ಕಳಪೆ ಸ್ಕೋರ್ ಮಾಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮೇಡ್ ಇನ್ ಇಂಡಿಯಾ Hyundai Verna ಕಾರು ವಿಫಲ: ಶೂನ್ಯ ಸ್ಟಾರ್ ರೇಟಿಂಗ್

ಸೆಡಾನ್ ಕ್ರ್ಯಾಶ್ ಟೆಸ್ಟ್‌ನಿಂದ ಹೊರಗುಳಿಯಲು ಮುಖ್ಯ ಕಾರಣವೆಂದರೆ ಕಳಪೆ ಎಂಜಿನಿಯರಿಂಗ್‌ಗಿಂತ ಮೂಲಭೂತ ಸುರಕ್ಷತಾ ವೈಶಿಷ್ಟ್ಯಗಳಾಗಿವೆ. ಸೆಡಾನ್ ಕೆಲವು ADAS (ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ವೈಶಿಷ್ಟ್ಯಗಳಾದ ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್, ಲೇನ್ ಬದಲಾವಣೆ ಅಲರ್ಟ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಅನ್ನು ಸಹ ಹೊಂದಿಲ್ಲ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮೇಡ್ ಇನ್ ಇಂಡಿಯಾ Hyundai Verna ಕಾರು ವಿಫಲ: ಶೂನ್ಯ ಸ್ಟಾರ್ ರೇಟಿಂಗ್

ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹ್ಯುಂಡೈ ವೆರ್ನಾ ಕಾರಿನಲ್ಲಿ , ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್ ಮತ್ತು ISOFIX ಸೀಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ. ರೇಂಜ್-ಟಾಪ್ ವೇರಿಯಂಟ್‌ಗಳು ಸೈಡ್ ಮತ್ತು ಕರ್ಟೈನ್ ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ, ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮೇಡ್ ಇನ್ ಇಂಡಿಯಾ Hyundai Verna ಕಾರು ವಿಫಲ: ಶೂನ್ಯ ಸ್ಟಾರ್ ರೇಟಿಂಗ್

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆರ್ನಾ ಕಾರು ಎಸ್, ಎಸ್ ಪ್ಲಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒ) ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ವೆರ್ನಾ ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಲಾಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮೇಡ್ ಇನ್ ಇಂಡಿಯಾ Hyundai Verna ಕಾರು ವಿಫಲ: ಶೂನ್ಯ ಸ್ಟಾರ್ ರೇಟಿಂಗ್

ಈ 1.5 ಲೀಟರ್ ಲೀಟರ್ ಹೊರತಾಗಿ ಟಾಪ್-ಸ್ಪೆಕ್ ಎಸ್‌ಎಕ್ಸ್ (ಒ) ರೂಪಾಂತರದಲ್ಲಿ ಪ್ರತ್ಯೇಕವಾಗಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ 1.0-ಲೀಟರ್ ಟರ್ಬೊ-ಪೆಟ್ರೋಲ್ 120 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7 ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಇದರ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‍ ಗಳು ಕ್ರಮವಾಗಿ 115 ಬಿಹೆಚ್‍ಪಿ ಪವರ್ ಮತ್ತು 144 ಎನ್ಎಂ ಟಾರ್ಕ್, 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್‍ ಗಳೊಂದಿಗೆ 6-ಸ್ಪೀಡ್ ಮ್ಯಾನುವರ್ ಗೇರ್‌ಬಾಕ್ಸ್‌ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ನೀಡಲಾಗಿದೆ,

ಕ್ರ್ಯಾಶ್ ಟೆಸ್ಟ್‌ನಲ್ಲಿ ಮೇಡ್ ಇನ್ ಇಂಡಿಯಾ Hyundai Verna ಕಾರು ವಿಫಲ: ಶೂನ್ಯ ಸ್ಟಾರ್ ರೇಟಿಂಗ್

ಈ ಹ್ಯುಂಡೈ ವೆರ್ನಾ ಕಾರಿನಲ್ಲಿ 8.0-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ. ಇದರೊಂದಿಗೆ ಹೊಸ ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಫ್ಲಕ್ಸ್ ವುಡ್ ಡ್ಯಾಶ್‌ಬೋರ್ಡ್, ಅಲ್ಯುಮಿನಿಯಂ ಟ್ರಿಮ್, ಹೊಸ ಮಾದರಿಯ ಎಸಿ ವೆಂಟ್ಸ್ ಮತ್ತು ಸೀಟ್‍ ಗಳ ಡಿಸೈನ್ ಬದಲಾವಣೆಗೊಳಿಸಲಾಗಿದೆ. ಇದರೊಂದಿಗೆ ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್ ಓಪನಿಂಗ್, ವೈರ್‌ಲೆಸ್ ಮೊಬೈಲ್ ಫೋನ್ ಚಾರ್ಜರ್, ಸನ್‌ರೂಫ್ ಮತ್ತು ಇದರೊಂದಿಗೆ 45 ಫೀಚರ್ಸ್‍ಗಳೊಂದಿಗೆ ಬ್ರಾಂಡ್‌ನ ಬ್ಲೂ ಲಿಂಕ್ ಕನೆಕ್ಟಿವಿಟಿ ಸೂಟ್‌ ಆಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮೇಡ್ ಇನ್ ಇಂಡಿಯಾ Hyundai Verna ಕಾರು ವಿಫಲ: ಶೂನ್ಯ ಸ್ಟಾರ್ ರೇಟಿಂಗ್

ವೆರ್ನಾ ಕಾರಿನ ಮುಂಭಾಗದ ಗ್ರಿಲ್ ಸ್ಲಾಟ್ ನಲ್ಲಿಯು ಸಾಕಷ್ಟು ಬದಲಾವಣೆಯನ್ನು ಮಾಡಲಾಗಿದೆ. ಈ ಹೊಸ ಕಾರಿನ ಮುಂಭಾಗ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಟೈಲ್ ಲ್ಯಾಂಪ್, ಬೂಟ್ ಲಿಡ್ ಮತ್ತು ಸ್ಪೋರ್ಟಿ ಮಾದರಿಯ ಕ್ರೊಮ್ ನೀಡಿದೆ. ಈ ಹ್ಯುಂಡೈ ವೆರ್ನಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಿಯಾಜ್, ಹೋಂಡಾ ಸಿಟಿ, ಸ್ಕೋಡಾ ರ‍್ಯಾಪಿಡ್ ಮತ್ತು ಪೋಕ್ಸ್‌ವ್ಯಾಗನ್ ವೆಂಟೊ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Hyundai verna sedan gets zero star safety rating latin ncap crash test details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X