ಹೊಸ ಫೀಚರ್ಸ್ ಹೊಂದಿರುವ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟೀಸರ್ ಬಿಡುಗಡೆ

ಇಸುಝು ಕಂಪನಿಯು ತನ್ನ ಜನಪ್ರಿಯ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಹೊಸ ಆವೃತ್ತಿಯನ್ನು ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಆವೃತ್ತಿಗಿಂತಲೂ ಹಲವಾರು ಹೊಸ ಬದಲಾವಣೆಗಳೊಂದಿಗೆ ಅಭಿವೃದ್ದಿಗೊಂಡಿದೆ.

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟೀಸರ್ ಬಿಡುಗಡೆ

ಕೋವಿಡ್ ಪರಿಣಾಮ ಆಟೋ ಉದ್ಯಮದಲ್ಲಿನ ಏರಿಳಿತದಿಂದಾಗಿ ಬಿಎಸ್-6 ಡಿ-ಕ್ರಾಸ್ ವಿ-ಕ್ರಾಸ್ ಲೈಫ್‌ಸ್ಟೈಲ್ ಪಿಕ್‌ಅಪ್ ಟ್ರಕ್ ಮಾದರಿಯ ಬಿಡುಗಡೆಯನ್ನು ಮುಂದೂಡಿಕೆ ಮಾಡುತ್ತಾ ಬಂದಿದ್ದ ಇಸುಝು ಕಂಪನಿಯ ಇದೀಗ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದ್ದು, ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಉತ್ಪಾದನಾ ಮಾದರಿಯ ಟೀಸರ್ ಚಿತ್ರವನ್ನು ಸಹ ಹಂಚಿಕೊಂಡಿದೆ.

ಹೊಸ ಫೀಚರ್ಸ್ ಹೊಂದಿರುವ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟೀಸರ್ ಬಿಡುಗಡೆ

ಹೊಸ ಎಮಿಷನ್‌ಗೆ ಅನುಗುಣವಾಗಿ ಎಂಜಿನ್ ಹೊಂದಿರುವ ವಿ-ಕ್ರಾಸ್ ಪಿಕ್‌ಅಪ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸದ್ಯ ಸ್ಟ್ಯಾಂಡರ್ಡ್, ಹೈ ಜೆಡ್, ಜೆಡ್ ಪ್ರೆಸ್ಟಿಸ್ ಮಾದರಿಗಳನ್ನು ಹೊಂದಿದ್ದು, ಗ್ರಾಹಕರ ಬೇಡಿಕೆ ಅನುಸಾರವಾಗಿ ಹೊಸದಾಗಿ ಹೈ ಲ್ಯಾಂಡರ್ ಬೆಸ್ ವೆರಿಯೆಂಟ್ ಪಡೆದುಕೊಳ್ಳಲಿದೆ.

ಹೊಸ ಫೀಚರ್ಸ್ ಹೊಂದಿರುವ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟೀಸರ್ ಬಿಡುಗಡೆ

ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಯು ಸದ್ಯ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪೂರ್ಣಗೊಳಿಸುತ್ತಿದ್ದು, ಹೊಸ ವಾಹನ ಬಿಡುಗಡೆಗೂ ಮುನ್ನ ಪ್ರಮುಖ ಡೀಲರ್ಸ್ ಯಾರ್ಡ್‌ಗಳಲ್ಲಿ ಹೊಸ ವಾಹನವನ್ನು ಸ್ಟಾಕ್ ಮಾಡುತ್ತಿರುವುದು ಕಂಡುಬಂದಿದೆ.

ಹೊಸ ಫೀಚರ್ಸ್ ಹೊಂದಿರುವ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟೀಸರ್ ಬಿಡುಗಡೆ

ಹೊಸ ಪಿಕ್‌ಅಪ್ ವಾಹನದಲ್ಲಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಟೈಲ್‌ಗೆಟ್ ವಿಭಾಗವನ್ನು ಬದಲಾವಣೆಯಾಗಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದ್ದು, ಹೊಸ ಪಿಕ್ಅಪ್ ಎಸ್‌ಯುವಿಯ ಒಳಭಾಗದ ತಾಂತ್ರಿಕ ಅಂಶಗಳಲ್ಲೂ ಬದಲಾವಣೆ ಮಾಡಲಾಗಿದೆ. ಡೀಲರ್ಸ್ ಯಾರ್ಡ್ ‌ನಲ್ಲಿ ಕಂಡುಬಂದ ಬೆಸ್ ವೆರಿಯೆಂಟ್‌ನಲ್ಲೇ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಹೈ ಎಂಡ್ ಮಾದರಿಯಲ್ಲಿ ಮತ್ತಷ್ಟು ಹೊಸ ಫೀಚರ್ಸ್ ಜೋಡಣೆಯಾಗಿರಲಿವೆ.

ಹೊಸ ಫೀಚರ್ಸ್ ಹೊಂದಿರುವ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟೀಸರ್ ಬಿಡುಗಡೆ

ಬಿಎಸ್-6 ವಿ-ಕ್ರಾಸ್ ಮಾದರಿಯು 1.9-ಲೀಟರ್ 4-ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್‌ ಅನ್ನು ಹೊಂದಿರಲಿದ್ದು, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 161 ಬಿಹೆಚ್‌ಪಿ ಮತ್ತು 360 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಫೀಚರ್ಸ್ ಹೊಂದಿರುವ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟೀಸರ್ ಬಿಡುಗಡೆ

ಹೊಸ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಯಲ್ಲಿ ಕಂಪನಿಯು 2 ವೀಲ್ಹ್ ಡ್ರೈವ್ ಸಿಸ್ಟಂ ಮತ್ತು ಆಲ್ ವೀಲ್ಹ್ ಡ್ರೈವ್ ಆಯ್ಕೆ ನೀಡಿದ್ದು, ಆಲ್ ವೀಲ್ಹ್ ಡ್ರೈವ್‌ನೊಂದಿಗೆ ಟಾರ್ಕ್ ಮೋಡ್ ಮೂಲಕ ಶಿಫ್ಟ್-ಆನ್-ದಿ-ಫ್ಲೈ ಸಿಸ್ಟಂ ಅನ್ನು ಪಡೆಯುತ್ತದೆ

ಹೊಸ ಫೀಚರ್ಸ್ ಹೊಂದಿರುವ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟೀಸರ್ ಬಿಡುಗಡೆ

ಹೊಸ ಡಿ-ಮ್ಯಾಕ್ಸ್ ಟ್ರಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ಮತ್ತು ಆಂಟಿ-ರೋಲ್ ಬಾರ್ ಮತ್ತು ಸಾಫ್ಟ್ ರೈಡ್, ಹಿಂಭಾಗದಲ್ಲಿ ಲೀಫ್ ಸ್ಪಿರ್ಗ್ ಡಬಲ್ ವಿಷ್ಬೋನ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಹೊಸ ಫೀಚರ್ಸ್ ಹೊಂದಿರುವ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟೀಸರ್ ಬಿಡುಗಡೆ

ಹೊಸ ಕಾರಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಇದರಲ್ಲಿ ವ್ಯಾಕ್ಯೂಮ್ ಅಸಿಸ್ಟೆಡ್ ಹೈಡ್ರಾಲಿಕ್ ಬ್ರೇಕ್, ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿರಲಿದ್ದು, 3,095 ಎಂಎಂ ಉದ್ದದ ವ್ಹೀಲ್‌ಬೇಸ್‌‌ನೊಂದಿಗೆ 5,295 ಎಂಎಂ ಉದ್ದ, 1,860 ಎಂಎಂ ಅಗಲ ಮತ್ತು 1,840 ಎಂಎಂ ಎತ್ತರ ಹೊಂದಿದೆ.

ಹೊಸ ಫೀಚರ್ಸ್ ಹೊಂದಿರುವ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟೀಸರ್ ಬಿಡುಗಡೆ

ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟ್ರಕ್ ಸ್ಪೈನೆಲ್ ರೆಡ್, ಟೈಟಾನಿಯಂ ಸಿಲ್ವರ್, ಕಾಸ್ಮಿಕ್ ಬ್ಲ್ಯಾಕ್, ಗಲೆನಾ ಗ್ರೇ, ಸಿಲ್ಕಿ ವೈಟ್ ಪರ್ಲ್, ಸರ್ಪೈರ್ ಬ್ಲೂ ಮತ್ತು ಸ್ಪ್ಲಾಷ್ ವೈಟ್ ಎಂಬ ಏಳು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದ್ದು, ಸುರಕ್ಷತೆಗಾಗಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ ), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್‌ಎಎಸ್), ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ), ಸೈಡ್ ಏರ್‌ಬ್ಯಾಗ್, ರೂಫ್ ಕರ್ಟನ್ ಮತ್ತು ಟ್ರಾಸ್‌ಫರ್‌ಕೇಸ್ ಪ್ರೊಟೆಕ್ಟರ್ ಫೀಚರ್ ಗಳನ್ನು ಒಳಗೊಂಡಿರುತ್ತದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಫೀಚರ್ಸ್ ಹೊಂದಿರುವ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಟೀಸರ್ ಬಿಡುಗಡೆ

ಹೊಸ ಪಿಕ್ಅಪ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 18 ಲಕ್ಷದಿಂದ ರೂ. 21 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಹೊಸ ಮಾದರಿಯಲ್ಲಿ ಕಂಪನಿಯು ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳನ್ನು ನೀಡುತ್ತಿದೆ.

Article Published On: Tuesday, May 4, 2021, 20:22 [IST]
English summary
Isuzu D-Max V-Cross BS6 Teased Once Again. Read in Kannada.
Read more on ಇಸುಝು isuzu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+