ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Jeep Compass ಎಸ್‍ಯುವಿ
ಅಮೆರಿಕಾ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಈ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಆಂತರಿಕ ಮತ್ತು ಬಾಹ್ಯ ನವೀಕರಣಗಳೊಂದಿಗೆ ಪರಿಚಯಿಸಿದ್ದರು.

2021ರ ಜೀಪ್ ಕಂಪಾಸ್ ಎಸ್‍ಯುವಿಯು ಸ್ಪೋರ್ಟ್ಸ್, ಲಾಂಗಿಟ್ಯೂಡ್, ಲಿಮಿಟೆಡ್, ಲಿಮಿಟೆಡ್ (ಒ),ಮತ್ತು ಹೊಸದಾಗಿ ಸೇರಿಸಲಾದ ಟಾಪ್-ಎಂಡ್ ಮಾಡೆಲ್ ಎಸ್ ಎಂಬ ವೆರಿಯೆಂಟ್ ಗಳಲ್ಲಿ ಲಭ್ಯವಿದೆ. ಮೂರು ವರ್ಷಗಳ ಬಳಿಕ ಜೀಪ್ ಕಂಪಾಸ್ ಮಿಡ್-ಲೈಫ್ ನವೀಕರಣವನ್ನು ಪಡೆದುಕೊಂಡಿತ್ತು, ಇದೀಗ ಜೀಪ್ ಇಂಡಿಯಾ ಕಂಪನಿಯು ತನ್ನ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆ ಏರಿಕೆ ಮಾಡಿದೆ. ಸ್ಪೋರ್ಟ್ ಮತ್ತು ಲಾಂಗಿಟ್ಯೂಡ್ (O) ವೆರಿಯಂಟ್‌ಗಳ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು ಇದರ ಬೆಲೆಯನ್ನು ರೂ,10,000 ಹೆಚ್ಚು ಮಾಡಿದ್ದಾರೆ. ಉಳಿದಂತೆ ಎಸ್‌ಯುವಿಯ ಟಾಪ್-ಸ್ಪೆಕ್ ವೆರಿಯಂಟ್‌ಗಳ ಬೆಲೆಯನ್ನು ರೂ,20,000 ಗಳವರೆಗೆ ಹೆಚ್ಚಿಸಲಾಗಿದೆ.

ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡ 2021ರ ಜೀಪ್ ಕಂಪಾಸ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುದಾದರೆ, ಕೆಲವು ಸೂಕ್ಷ್ಮ ನವೀಕರಣಗಳನ್ನು ಪಡೆದುಕೊಂಡಿದ್ದರೆ, ಫೀಚರ್ ಗಳ ವಿಭಾಗದಲ್ಲಿ ಗಣನೀಯ ನವೀಕರಣಗಳನ್ನು ಪಡೆದುಕೊಂಡಿದೆ. ಹೊರಗಿನ ನವೀಕರಣಗಳು ಹತ್ತಿರದಿಂದ ಗಮನಿಸಿದರೆ ಮಾತ್ರ ತಿಳಿದುಬರುತ್ತದೆ.

ಈ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಸೂಕ್ಷ್ಮ ನವೀಕರಣಗಳು ಮತ್ತು ಬದಲಾವಣೆಗಳನ್ನು ಒಳಗೊಂಡಿದೆ. ಜೀಪ್ ಕಂಪಾಸ್‌ನ ಕ್ಯಾಬಿನ್ ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿದೆ. ಈ ಎಸ್‍ಯುವಿಯ ಒಳಭಾಗದಲ್ಲಿ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿವೆ.

ಈ ಎಸ್‍ಯುವಿಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ 10.1-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ. ಇದು ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಂ ಹೊಂದಿರುವ ಎಫ್‌ಸಿಎಯ ಹೊಸ ಯುಕನೆಕ್ಟ್ 5 ತಂತ್ರಜ್ಞಾನವನ್ನು ಒಳಗೊಂಡಿದೆ.

ಇದ್ದರಿಂದ ಇದು ಈಗ ವಾಯ್ಸ್ ಕಮಾಂಡ್ ಅಸಿಸ್ಟ್ ಮತ್ತು ಓವರ್-ದಿ-ಏರ್ (ಒಟಿಎ) ಅಪ್‌ಡೇಟ್ ಫೀಚರ್ ಗಳನ್ನು ಒಳಗೊಂಡಿವೆ. ಹಿಲ್ ಅಸಿಸ್ಟ್ (ಎಚ್‌ಎ) ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ) ಎಂಬ ಮೋಡ್ ಗಳನ್ನು ಈ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಕೂಡ ಹೊಂದಿದೆ.

ಇನ್ನು ಜೀಪ್ ಕಂಪನಿಯು ಕಂಪಾಸ್ ಮಾಡೆಲ್ ಎಸ್ ವೆರಿಯಂಟ್ ಅನ್ನು ನವೀಕರಿಸಿದೆ. ಈ ವೆರಿಯೆಂಟ್ ನಲ್ಲಿ ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಆಟೋಮ್ಯಾಟಿಕ್ ವೆಂಟಿಲೇಟೆಡ್ ಡ್ರೈವರ್ ಸೀಟ್‌ನೊಂದಿಗೆ ನವೀಕರಿಸಿದ್ದಾರೆ. ಈ ಮಾಡೆಲ್ ಎಸ್ (ಒ 2) ವೆರಿಯೆಂಟ್ ಐದನೇ ತಲೆಮಾರಿನ ಆರ್ 1 ಹೈ 10.1 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಇದು ಈಗ ನ್ಯಾವಿಗೇಷನ್ ಸಿಸ್ಟಂ ಜೊತೆಗೆ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಹೊಂದಿಕೊಳ್ಳುತ್ತದೆ.

ಜೊತೆಗೆ ಫೋನ್, ಮೀಡಿಯಾ, ರೇಡಿಯೋ, ಕ್ಲೈಮೇಂಟ್ ಕಂಟ್ರೋಲ್ ಮತ್ತು ಸಂಚರಣೆಗಳ ಹ್ಯಾಂಡ್ಸ್-ಫ್ರೀ ಕಾರ್ಯಾಚರಣೆಗಾಗಿ ಯುನಿಟ್ ವಾಯ್ಸ್ ಕಾಮೆಂಡ್ ಗಳನ್ನು ಬೆಂಬಲಿಸುತ್ತದೆ.ಈ ಹೊಸ ಇನ್ಫೋಟೈನ್‌ಮೆಂಟ್ ಯುನಿಟ್ 6 ಜಿಬಿ RAM ಮತ್ತು 40 ಕೆ ಎಂಐಪಿಎಸ್ ಚಿಪ್‌ಸೆಟ್‌ನೊಂದಿಗೆ ಬರುತ್ತದೆ, ಇದು ಹಳೆಯ ಯುನಿಟ್ ಗಿಂತ ವೇಗವಾಗಿದೆ ಎಂದು ಹೇಳಲಾಗಿದೆ. ಮಾಡೆಲ್ ಎಸ್ ವೆರಿಯೆಂಟ್ O2) ಕ್ಯಾಬಿನ್ ತಾಪಮಾನ 26.5 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾದಾಗ ಆನ್ ಆಗುವ ಆಟೋಮ್ಯಾಟಿಕ್ ವೆಂಟಿಲೇಟೆಡ್ ಡ್ರೈವರ್ ಸೀಟ್ ಅನ್ನು ಪಡೆದುಕೊಂಡಿದೆ.

ಈ ಜೀಪ್ ಕಂಪಾಸ್ ಎಸ್‍ಯುವಿಯಲ್ಲಿ ಹೊಸದಾಗಿ 1.4 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ. ಇದರಲ್ಲಿ 1.4 ಲೀಟರ್ ಟರ್ಬೊ-ಪೆಟ್ರೋಲ್ 163 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 2.0 ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಈ ಎರಡು ಎಂಜಿನ್‌ಗಳು ಸ್ಟ್ಯಾಂಡರ್ಡ್ ಆಗಿ ಆರು-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತವೆ. ಕಂಪಾಸ್ ಪೆಟ್ರೋಲ್ ಏಳು-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆಯುತ್ತದೆ ಮತ್ತು ಡೀಸೆಲ್ ಒಂಬತ್ತು-ಸ್ಪೀಡ್ ಟಾರ್ಕ್ ಕರ್ನವಾಟರ್ ಆಯ್ಕೆಯನ್ನು ಪಡೆಯುತ್ತದೆ.

ಇನ್ನು ಇತ್ತೀಚೆಗೆ ಜೀಪ್ ತನ್ನ ಹೊಸ ಕಮಾಂಡರ್ ಎಸ್‌ಯುವಿಯನ್ನು ಬ್ರೆಜಿಲ್‌ನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಇದನ್ನು ಕಂಪಾಸ್ ಐದು ಸೀಟಿನ ಮಾದರಿಗೆ ಹೋಲಿಸಿದರೆ ಗಮನಾರ್ಹ ವ್ಯತ್ಯಾಸಗಳನ್ನು ಹೊಂದಿದೆ. ಅಲ್ಲದೇ ಹೊಸ ಜೀಪ್ ಕಮಾಂಡರ್ ಎಸ್‍ಯುವಿಯು ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಹೊಸ ಮಾದರಿಯನ್ನು ಆಂತರಿಕವಾಗಿ ಜೀಪ್ ಲೋ-ಡಿ ಎಂದು ಕರೆಯಲಾಗುತ್ತಿತ್ತು. ಇದು ಕಂಪಾಸ್ ಎಸ್‌ಯುವಿಗಿಂತ ಉದ್ದವಾದ ಹೆಚ್ಚು ವಿಶಾಲವಾದ ಮತ್ತು ಪ್ರೀಮಿಯಂ ಆವೃತ್ತಿಯಾಗಿದೆ.

ಇನ್ನು ಈ ಹೊಸ 7-ಸೀಟರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಮೆರಿಡಿಯನ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಈ ಜೀಪ್ 7-ಸೀಟರ್ ಎಸ್‌ಯುವಿಯು ಮೊದಲು ಬ್ರೆಜಿಲ್‌ನಲ್ಲಿ ಬಿಡುಗಡೆಯಾಗಲಿದೆ, ಭಾರತದಲ್ಲಿ ಈ ಎಸ್‍ಯುವಿಯು 2022ರ ಮಧ್ಯದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಜೀಪ್ ಕಂಪಾಸ್ ಎಸ್‍ಯುವಿಯ ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ನಿರೀಕ್ಷಿಸುತ್ತೇವೆ,


Click it and Unblock the Notifications








