ಭಾರತದಲ್ಲಿ ಹೊಸ ಕಾರು ಅಭಿವೃದ್ದಿಗೆ ಸಿಟ್ರನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ ಜೀಪ್

ಕಂಪಾಸ್ ಎಸ್‌ಯುವಿಯೊಂದಿಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿರುವ ಜೀಪ್ ಇಂಡಿಯಾ ಕಂಪನಿಯು ಮುಂಬರುವ ದಿನಗಳಲ್ಲಿ ಮೂರು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರುಗಳ ಅಭಿವೃದ್ದಿಗಾಗಿ ಜೀಪ್ ಕಂಪನಿಯು ಸಿಟ್ರನ್ ಕಂಪನಿಯ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳುವ ಬಗ್ಗೆ ವರದಿಯಾಗಿದೆ.

ಭಾರತದಲ್ಲಿ ಹೊಸ ಕಾರು ಅಭಿವೃದ್ದಿಗೆ ಸಿಟ್ರನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ ಜೀಪ್

ಹೌದು, ಯುರೋಪಿನ್ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ ಮೊದಲ ಬಾರಿಗೆ ಭಾರತದಲ್ಲಿ ಕಾರು ಮಾರಾಟವನ್ನು ಆರಂಭಿಸುತ್ತಿದ್ದು, ಸಿಟ್ರನ್ ಕಂಪನಿಯು ತನ್ನ ಮೊದಲ ಕಾರು ಬಿಡುಗಡೆಗೂ ಮುನ್ನ ಕಂಪನಿಯು ಜೀಪ್ ಜೊತೆಗೆ ಭಾರತದಲ್ಲಿ ಕಾರು ಉತ್ಪಾದನಾ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳುವ ಮಾಹಿತಿ ಲಭ್ಯವಾಗಿದೆ.

ಕಳೆದ ಕೆಲ ತಿಂಗಳ ಹಿಂದಷ್ಟೇ ಯುರೋಪ್ ಮಾರುಕಟ್ಟೆಯಲ್ಲಿ ಜೀಪ್ ಮಾತೃಸಂಸ್ಥೆಯಾದ ಫಿಯೆಟ್ ಕ್ಲೈಸರ್ ಮತ್ತು ಸಿಟ್ರನ್ ಮಾತೃಸಂಸ್ಥೆಯಾದ ಪಿಎಸ್ಎ ಗ್ರೂಪ್ ಕಂಪನಿಯು ವಿಲೀನವಾಗುವ ಮೂಲಕ ಹೊಸ ಸ್ಟೆಲ್ಯಾಂಡಿಸ್ ಎನ್ನುವ ಕಾರು ತಯಾರಕ ಕಂಪನಿಯನ್ನು ಹುಟ್ಟುಹಾಕಿದ್ದು, ಹೊಸ ಯೋಜನೆಯ ಭಾಗವಾಗಿ 14 ಕಾರ್ ಬ್ರಾಂಡ್‌ಗಳು ಹೊಸ ಕಾರು ಕಂಪನಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಭಾರತದಲ್ಲಿ ಹೊಸ ಕಾರು ಅಭಿವೃದ್ದಿಗೆ ಸಿಟ್ರನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ ಜೀಪ್

ಸ್ಟೆಲ್ಯಾಂಡಿಸ್ ಅಧೀನದಲ್ಲಿ ಸಿಟ್ರನ್, ಜೀಪ್ ಕಂಪನಿಗಳು ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಸಹಭಾಗೀತ್ವ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಭಾರತದಲ್ಲೂ ಈ ಎರಡು ಕಂಪನಿಗಳು ಹೊಸ ಕಾರುಗಳ ಉತ್ಪಾದನಾ ವೆಚ್ಚ ನಿರ್ವಹಣೆಗಾಗಿ ತಂತ್ರಜ್ಞಾನ ಮತ್ತು ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡಿಕೊಳ್ಳಲಿವೆ.

ಭಾರತದಲ್ಲಿ ಹೊಸ ಕಾರು ಅಭಿವೃದ್ದಿಗೆ ಸಿಟ್ರನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ ಜೀಪ್

ಸಿಟ್ರನ್ ಕಂಪನಿಯ ಹೊಸ ಕಾಮನ್ ಮ್ಯಾಡಲರ್ ಪ್ಲ್ಯಾಟ್‌ಫಾರ್ಮ್(ಸಿಎಂಪಿ) ಬಳಕೆ ಮಾಡಿಕೊಳ್ಳುವ ಬಗ್ಗೆ ಜೀಪ್ ಇಂಡಿಯಾ ಕಂಪನಿಯೇ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಎರಡು ಕಂಪನಿಗಳು ಭಾರತದಲ್ಲಿ ಸಹಭಾಗೀತ್ವ ಯೋಜನೆಯನ್ನು ಘೋಷಣೆ ಮಾಡದೆ ಕೇವಲ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಹಂಚಿಕೊಳ್ಳುವಿಕೆ ಮತ್ತು ತಂತ್ರಜ್ಞಾನ ಎರವಲು ಪಡೆದುಕೊಳ್ಳಲು ನಿರ್ಧರಿಸಿದೆ.

ಭಾರತದಲ್ಲಿ ಹೊಸ ಕಾರು ಅಭಿವೃದ್ದಿಗೆ ಸಿಟ್ರನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ ಜೀಪ್

ಹಣಕಾಸು, ಹೂಡಿಕೆ, ಕಾರು ಉತ್ಪಾದನಾ ಯೋಜನೆಗಳನ್ನು ಸದ್ಯಕ್ಕೆ ಸ್ವತಂತ್ರವಾಗಿ ನಿರ್ವಹಣೆ ಮಾಡಲಿರುವ ಎರಡು ಕಂಪನಿಗಳು ವಿಭಿನ್ನವಾದ ಕಾರು ಮಾದರಿಗಳ ಮೂಲಕ ಗ್ರಾಹಕರನ್ನು ಸೆಳೆಯಲಿದ್ದು, ಸಿಟ್ರನ್ ಕಂಪನಿಯ ಕಾರು ಉತ್ಪಾದನಾ ತಂತ್ರಜ್ಞಾನವು ಖಂಡಿತವಾಗಿಯೂ ಭಾರತದಲ್ಲಿ ಜೀಪ್ ಕಂಪನಿಗೆ ಭಾರೀ ಪ್ರಮಾಣದ ಆದಾಯ ತಂದುಕೊಡುವ ನೀರಿಕ್ಷೆಯಿದೆ. ಏಕೆಂದರೆ ಸಿಟ್ರನ್ ಕಂಪನಿಯು ಶೇ.90ರಷ್ಟು ಸ್ಥಳೀಯ ಬಿಡಿಭಾಗಗಳನ್ನು ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಉತ್ಪಾದನಾ ವೆಚ್ಚದಲ್ಲಿನ ನಿರ್ವಹಣೆಯು ಜೀಪ್ ಕಂಪನಿಯ ಲಾಭಾಂಶದಲ್ಲಿ ಹೆಚ್ಚಳ ಮಾಡಲಿದೆ.

ಭಾರತದಲ್ಲಿ ಹೊಸ ಕಾರು ಅಭಿವೃದ್ದಿಗೆ ಸಿಟ್ರನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ ಜೀಪ್

ಇದೇ ಕಾರಣಕ್ಕೆ ಜೀಪ್ ಕಂಪನಿಯು ತನ್ನ ಬಹುನೀರಿಕ್ಷಿತ ರೆನೆಗಡ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತಿದ್ದು, ಸಿಟ್ರನ್ ಕಂಪನಿಯ ಕಾರು ಆರಂಭಕ್ಕೂ ಮುನ್ನ ರನೆಗಡ್ ಬಿಡುಗಡೆ ಯೋಜನೆಯಲ್ಲಿದ್ದರೂ ಪ್ರತಿಸ್ಪರ್ಧಿ ಕಾರಿಗಿಂತಲೂ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿಂದ ಹಿಂದೆ ಸರಿದಿತ್ತು.

ಭಾರತದಲ್ಲಿ ಹೊಸ ಕಾರು ಅಭಿವೃದ್ದಿಗೆ ಸಿಟ್ರನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ ಜೀಪ್

ರೆನೆಗಡ್ ಕಾರು ಮಾದರಿಯನ್ನು ರೂ. 10 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟ ಮಾಡಬೇಕೆಂಬ ಜೀಪ್ ಕಂಪನಿಯ ಲೆಕ್ಕಾಚಾರವು ರೋಡ್ ಟೆಸ್ಟಿಂಗ್ ವೇಳೆ ಮಣ್ಣಪಾಲಾಗಿತ್ತು. ಯಾಕೆಂದರೆ ಹೊಸ ರೆನೆಗಡ್ ಮಾದರಿಯನ್ನು ಸ್ಥಳೀಯವಾಗಿ ಹಲವಾರು ಬಿಡಿಭಾಗಗಳನ್ನು ಜೋಡಣೆ ಮಾಡಿದರು ಅಂತಿಮವಾಗಿ ಹೊಸ ಕಾರಿನ ಬೆಲೆಯು ಟೆಸ್ಟಿಂಗ್ ವೇಳೆ ರೂ.14 ಲಕ್ಷದಿಂದ ರೂ. 20 ಲಕ್ಷಕ್ಕೆ ತಲುಪುತ್ತಿತ್ತು.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಭಾರತದಲ್ಲಿ ಹೊಸ ಕಾರು ಅಭಿವೃದ್ದಿಗೆ ಸಿಟ್ರನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ ಜೀಪ್

ಆದರೆ ಸಿಟ್ರನ್ ಹೊಸ ಸಿಎಫ್ಎ ಪ್ಲ್ಯಾಟ್‌ಫಾರ್ಮ್ ಬಳಕೆಯು ಜೀಪ್ ಹೊಸ ಕಾರುಗಳ ಉತ್ಪಾದನಾ ವೆಚ್ಚ ತಗ್ಗಿಸುವುದರ ಜೊತೆಗೆ ಸ್ಪರ್ಧಾತ್ಮಕ ಬೆಲೆ ನಿರ್ಧಾರಕ್ಕೆ ಸಹಕಾರಿಯಾಗಲಿದ್ದು, ರೆನೆಗಡ್ ಕಾರು ಸಿಟ್ರನ್ ಸಿ3 ಏರ್‌ಕ್ರಾಸ್ ಮಾದರಿಯಲ್ಲಿ ಅಳವಡಿಸಲು ನಿರ್ಧರಿಸಿರುವ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ.

ಭಾರತದಲ್ಲಿ ಹೊಸ ಕಾರು ಅಭಿವೃದ್ದಿಗೆ ಸಿಟ್ರನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ ಜೀಪ್

ಸಿಟ್ರನ್ ಕಂಪನಿಯು ಸದ್ಯ ಬಿಡುಗಡೆಗೆ ಸಿದ್ದವಾಗಿರುವ ಸಿ5 ಏರ್‌ಕ್ರಾಸ್ ಮಾದರಿಯಲ್ಲಿ 2.0-ಲೀಟರ್ ಡೀಸೆಲ್ ಎಂಜಿನ್ ಜೋಡಿಸಿದ್ದು, ಸಿ5 ಏರ್‌ಕ್ರಾಸ್ ಹೊರತುಪಡಿಸಿ ಮುಂಬರುವ ಕಾರುಗಳಲ್ಲಿ ಕೇವಲ ಪೆಟ್ರೋಲ್ ಎಂಜಿನ್ ಮಾತ್ರವೇ ಜೋಡಿಸುವುದಾಗಿ ಸಿಟ್ರನ್ ಕಂಪನಿಯು ಹೇಳಿಕೊಂಡಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಭಾರತದಲ್ಲಿ ಹೊಸ ಕಾರು ಅಭಿವೃದ್ದಿಗೆ ಸಿಟ್ರನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ ಜೀಪ್

ಇದರಿಂದ ಜೀಪ್ ರನೆಗಡ್ ಕಾರು ಮಾದರಿಯು ಸಿಟ್ರನ್ ಭಾರತದಲ್ಲಿ ಬಿಡುಗಡೆ ಮಾಡಲಿರುವ ಎರಡನೇ ಕಾರು ಮಾದರಿಯಾದ ಸಿ3 ಏರ್‌ಕ್ರಾಸ್ ಮಾದರಿಯಲ್ಲೇ ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಲಿದ್ದು, ಹೊಸ ರೆನೆಗಡ್ ಕಾರು ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಕಿಯಾ ಸೊನೆಟ್ ಮತ್ತು ಹ್ಯುಂಡೈ ವೆನ್ಯೂ ಪೈಪೋಟಿಯಾಗಿ ಬೆಲೆ ಪಡೆದುಕೊಳ್ಳುವ ನೀರಿಕ್ಷೆಗಳಿವೆ. ಇನ್ನು ಜೀಪ್ ಹೊಸ ಕಾರು ಪಟ್ಟಿಯಲ್ಲಿರುವ ಮೂರು ಹೊಸ ಕಾರುಗಳಲ್ಲಿ ಕಂಪಾಸ್ 7 ಸೀಟರ್ ಮೊದಲು ಬಿಡುಗಡೆಯಾಗಲಿದ್ದು, ಈ ವರ್ಷಾಂತ್ಯಕ್ಕೆ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯಾಗಲಿದೆ.

Most Read Articles

Kannada
Read more on ಜೀಪ್ jeep
English summary
Jeep is likely to use citroen platform and powertrain for its upcoming new compact SUV in India.
Story first published: Sunday, February 14, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X