ಉಚಿತ ಇವಿ ಚಾರ್ಜಿಂಗ್ ಸೇವೆಯನ್ನು ರದ್ದು ಪಡಿಸಿದ ವಿದ್ಯುತ್ ಮಂಡಳಿ

ಎಲೆಕ್ಟ್ರಿಕ್ ವಾಹನಗಳಿಗಾಗಿ ಕೆಲವು ರಾಜ್ಯಗಳಲ್ಲಿ ಉಚಿತ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಕಾರಣಾಂತರಗಳಿಂದಾಗಿ ಈ ಉಚಿತ ಚಾರ್ಜಿಂಗ್ ಕೇಂದ್ರಗಳನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಯಾವ ಕಾರಣಕ್ಕೆ ಈ ಚಾರ್ಜಿಂಗ್ ಕೇಂದ್ರಗಳ ಸೇವೆಯನ್ನು ನಿಲ್ಲಿಸಲಾಗುವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಉಚಿತ ಇವಿ ಚಾರ್ಜಿಂಗ್ ಸೇವೆಯನ್ನು ರದ್ದು ಪಡಿಸಿದ ವಿದ್ಯುತ್ ಮಂಡಳಿ

ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಭರದಿಂದ ಸಾಗಿದೆ. ಭಾರತದಲ್ಲೂ ಎಲೆಕ್ಟ್ರಿಕ್ ವಾಹನಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇವುಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡುವುದು, ನೋಂದಣಿ ಶುಲ್ಕಕ್ಕೆ ವಿನಾಯಿತಿ ನೀಡುವುದು ಸೇರಿದಂತೆ ವಿವಿಧ ರೀತಿಯ ಕೊಡುಗೆಗಳು ಸೇರಿವೆ.

ಉಚಿತ ಇವಿ ಚಾರ್ಜಿಂಗ್ ಸೇವೆಯನ್ನು ರದ್ದು ಪಡಿಸಿದ ವಿದ್ಯುತ್ ಮಂಡಳಿ

ನಮ್ಮ ನೆರೆಯ ರಾಜ್ಯಗಳಲ್ಲಿ ಒಂದಾದ ಕೇರಳದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ರಾಜ್ಯದ ಕೆಲವು ಭಾಗಗಳಲ್ಲಿ ಉಚಿತ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ. ಈ ಉಚಿತ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳ ಸೇವೆಗಳನ್ನು ಶೀಘ್ರದಲ್ಲೇ ನಿಲ್ಲಿಸಲಾಗುವುದು ಎಂದು ವರದಿಯಾಗಿದೆ.

ಉಚಿತ ಇವಿ ಚಾರ್ಜಿಂಗ್ ಸೇವೆಯನ್ನು ರದ್ದು ಪಡಿಸಿದ ವಿದ್ಯುತ್ ಮಂಡಳಿ

ಈ ಚಾರ್ಜಿಂಗ್ ಕೇಂದ್ರಗಳ ಮೂಲಕ ವಾಹನ ಸವಾರರಿಗೆ ಉಚಿತವಾಗಿ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಅವಕಾಶ ನೀಡಲಾಗುತ್ತಿತ್ತು. ಇನ್ನು ಎರಡು ವಾರಗಳಲ್ಲಿ ಈ ಉಚಿತ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಯೋಜನೆಯನ್ನು ನಿಲ್ಲಿಸಲಾಗುತ್ತದೆ. ನಂತರ ಈ ಚಾರ್ಜಿಂಗ್ ಕೇಂದ್ರಗಳನ್ನು ಬಳಸಲು ಶುಲ್ಕ ವಿಧಿಸಲಾಗುತ್ತದೆ. ಪ್ರತಿ ಯುನಿಟ್ ವಿದ್ಯುತ್'ಗೆ ರೂ. 15 ಗಳವರೆಗೆ ಶುಲ್ಕ ವಿಧಿಸಬಹುದು ಎಂದು ವರದಿಯಾಗಿದೆ.

ಉಚಿತ ಇವಿ ಚಾರ್ಜಿಂಗ್ ಸೇವೆಯನ್ನು ರದ್ದು ಪಡಿಸಿದ ವಿದ್ಯುತ್ ಮಂಡಳಿ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವೂ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ವಿವಿಧ ವಿಶೇಷ ಕೊಡುಗೆಗಳನ್ನು ಘೋಷಿಸುತ್ತಿವೆ. ಅದರಂತೆ ಗುಜರಾತ್ ಸರ್ಕಾರ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಿಗಾಗಿ ಬೃಹತ್ ಅನುದಾನವನ್ನು ಘೋಷಿಸಿದೆ. ಇಂತಹ ಸನ್ನಿವೇಶದಲ್ಲಿ, ಕೇರಳ ಸರ್ಕಾರದ ಈ ಕ್ರಮವು ಎಲೆಕ್ಟ್ರಿಕ್ ವಾಹನ ಖರೀದಿಸ ಬಯಸುವವರಿಗೆ ಆಘಾತವನ್ನುಂಟು ಮಾಡಿರುವುದು ಸುಳ್ಳಲ್ಲ.

ಉಚಿತ ಇವಿ ಚಾರ್ಜಿಂಗ್ ಸೇವೆಯನ್ನು ರದ್ದು ಪಡಿಸಿದ ವಿದ್ಯುತ್ ಮಂಡಳಿ

ಈ ಬಗ್ಗೆ ಕೇರಳ ರಾಜ್ಯ ವಿದ್ಯುತ್ ಮಂಡಳಿ ಮಾಹಿತಿ ನೀಡಿದೆ. ಪ್ರತಿ ಯುನಿಟ್ ವಿದ್ಯುತ್ ಬಳಕೆಗೆ ರೂ. 15 ರವರೆಗೆ ಶುಲ್ಕ ವಿಧಿಸಲಾಗುವುದು ಎಂದು ಮಂಡಳಿ ತಿಳಿಸಿದೆ. ಉಚಿತ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳಿಗೆ ಪರೀಕ್ಷಾರ್ಥವಾಗಿ ಚಾಲನೆ ನೀಡಲಾಗಿತ್ತು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಉಚಿತ ಇವಿ ಚಾರ್ಜಿಂಗ್ ಸೇವೆಯನ್ನು ರದ್ದು ಪಡಿಸಿದ ವಿದ್ಯುತ್ ಮಂಡಳಿ

ಮೂರು ತಿಂಗಳ ಕಾಲ ನಡೆದ ಈ ಯೋಜನೆ ಈಗ ಪೂರ್ಣಗೊಳ್ಳುವ ಹಂತದಲ್ಲಿದೆ. ರಾಜ್ಯದಾದ್ಯಂತವಿರುವ ಎಲೆಕ್ಟ್ರಿಕ್ ವಾಹನಗಳ ಬಳಕೆದಾರರಿಗೆ ನೆರವು ನೀಡುವ ಸಲುವಾಗಿ ಕೇರಳ ರಾಜ್ಯ ಸರ್ಕಾರವು ಈಗ ಹೊಸ ಅಪ್ಲಿಕೇಷನ್ ಅನ್ನು ಪರಿಚಯಿಸಿದೆ. ಎಲೆಕ್ಟ್ರಿಫೈ ಎಂಬ ಹೆಸರಿನ ಈ ಅಪ್ಲಿಕೇಷನ್ ಸಮೀಪದಲ್ಲಿರುವ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳ ಬಗ್ಗೆ ಎಲೆಕ್ಟ್ರಿಕ್ ವಾಹನ ಸವಾರರಿಗೆ ಮಾಹಿತಿ ನೀಡುತ್ತದೆ.

ಉಚಿತ ಇವಿ ಚಾರ್ಜಿಂಗ್ ಸೇವೆಯನ್ನು ರದ್ದು ಪಡಿಸಿದ ವಿದ್ಯುತ್ ಮಂಡಳಿ

ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಕೇರಳ ರಾಜ್ಯದ ಪ್ರಮುಖ ನಗರಗಳಾದ ತ್ರಿಶೂರ್, ಕೋಯಿಕ್ಕೋಡ್ ಹಾಗೂ ತಿರುವನಂತಪುರಂನಲ್ಲಿ ತೆರೆಯಲಾಗಿತ್ತು. ಇವುಗಳಲ್ಲಿ ತ್ರಿಶೂರ್ ಹಾಗೂ ಕೋಯಿಕ್ಕೋಡ್ ನಗರಗಳಲ್ಲಿ ಅತಿ ಹೆಚ್ಚು ವಿದ್ಯುತ್ ಬಳಕೆಯಾಗಿದೆ. ಇನ್ನು ತಿರುವನಂತಪುರಂನ ಎಲೆಕ್ಟ್ರಿಕ್ ವಾಹನ ಬಳಕೆದಾರರು ಕೆಲವೇ ಕೆಲವು ಚಾರ್ಜಿಂಗ್ ಕೇಂದ್ರಗಳನ್ನು ಬಳಸಿದ್ದಾರೆ.

ಉಚಿತ ಇವಿ ಚಾರ್ಜಿಂಗ್ ಸೇವೆಯನ್ನು ರದ್ದು ಪಡಿಸಿದ ವಿದ್ಯುತ್ ಮಂಡಳಿ

ಇನ್ನು ಮುಂದೆ ಪ್ರತಿ ಯೂನಿಟ್‌ ವಿದ್ಯುತ್ ಬಳಕೆಗೆ ರೂ. 5 ಶುಲ್ಕ ವಿಧಿಸಲಾಗುತ್ತದೆ. ಜಿ‌ಎಸ್‌ಟಿ ಹಾಗೂ ಸೇವಾ ಶುಲ್ಕವನ್ನು ವಿಧಿಸಿದ ನಂತರ ಈ ದರವು ಪ್ರತಿ ಯುನಿಟ್'ಗೆ ರೂ. 15 ಆಗುತ್ತದೆ. ಕೇರಳ ರಾಜ್ಯ ಸರ್ಕಾರವು ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ಪ್ರಕ್ರಿಯೆಯಲ್ಲಿ ನಿರತವಾಗಿದೆ.

ಉಚಿತ ಇವಿ ಚಾರ್ಜಿಂಗ್ ಸೇವೆಯನ್ನು ರದ್ದು ಪಡಿಸಿದ ವಿದ್ಯುತ್ ಮಂಡಳಿ

ಅದರಂತೆ ಕೇರಳ ರಾಜ್ಯದಾದ್ಯಂತ 25 ಹೊಸ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಾಗುವುದು. ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಬ್ಸಿಡಿ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಿದ ಕಾರಣಕ್ಕೆ ಕೇರಳದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ವರ್ಷ 3,313 ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಕೇರಳ ರಾಜ್ಯದಲ್ಲಿ ನೋಂದಾಯಿಸಲಾಗಿದೆ.

ಉಚಿತ ಇವಿ ಚಾರ್ಜಿಂಗ್ ಸೇವೆಯನ್ನು ರದ್ದು ಪಡಿಸಿದ ವಿದ್ಯುತ್ ಮಂಡಳಿ

ಅದರಲ್ಲೂ ವಿಶೇಷವಾಗಿ ಈ ವರ್ಷದ ಏಪ್ರಿಲ್ ಹಾಗೂ ಜುಲೈ ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಿವೆ. ಏಪ್ರಿಲ್‌ ತಿಂಗಳಿನಲ್ಲಿ 631 ಹಾಗೂ ಜುಲೈ ತಿಂಗಳಿನಲ್ಲಿ 668 ಯುನಿಟ್ ಎಲೆಕ್ಟ್ರಿಕ್ ವಾಹನಗಳನ್ನು ನೋಂದಾಯಿಸಲಾಗಿದೆ. ಈ ನಡುವೆ ರಾಜ್ಯ ಸರ್ಕಾರವು ಉಚಿತ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಯೋಜನೆಯನ್ನು ದಿಢಿರನೇ ಕೊನೆಗೊಳಿಸಿದೆ.

ಉಚಿತ ಇವಿ ಚಾರ್ಜಿಂಗ್ ಸೇವೆಯನ್ನು ರದ್ದು ಪಡಿಸಿದ ವಿದ್ಯುತ್ ಮಂಡಳಿ

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಅನಿವಾರ್ಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಕೇಂದ್ರ ಸರ್ಕಾರವು ತನ್ನ ಫೇಮ್ 2 ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸಬ್ಸಿಡಿ ನೀಡುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗುವುದು ಖಚಿತ.

Most Read Articles

Kannada
English summary
Kerala electricity board to stop free charging scheme for electric vehicles details
Story first published: Thursday, August 26, 2021, 10:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X