Just In
- 50 min ago
ಮಕ್ಕಳಿಗಾಗಿ 60-70 ಕಿ.ಮೀ ಮೈಲೇಜ್ ನೀಡುವ ಮಿನಿ ಎಲೆಕ್ಟ್ರಿಕ್ ಜೀಪ್ ತಯಾರಿಸಿದ ತಂದೆ
- 1 hr ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 3 hrs ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 3 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
Don't Miss!
- News
ಮಂಗಳೂರು; ಇಂದಿನಿಂದ ರಂಝಾನ್ ಉಪವಾಸ ಆಚರಣೆ
- Sports
19 ವರ್ಷದ ಈ ಬ್ಯಾಟ್ಸ್ಮನ್ ಬಾರಿಸಿರೋ 8 ಐಪಿಎಲ್ ಸಿಕ್ಸರ್ ಸಾಮಾನ್ಯದ್ದಲ್ಲ!
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Movies
ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾರಿನೊಳಗೆ ಅಲಂಕಾರಿಕ ವಸ್ತುಗಳಿಡುವುದನ್ನು ನಿಷೇಧಿಸಿದ ಸರ್ಕಾರ
ಕಾರುಗಳ ಒಳಗೆ ಯಾವುದೇ ರೀತಿಯ ಅಲಂಕಾರಿಕ ವಸ್ತುಗಳನ್ನು ಇಡುವಂತಿಲ್ಲವೆಂದು ಕೇರಳ ಸರ್ಕಾರವು ಆದೇಶ ಹೊರಡಿಸಿದೆ. ಹೊಸ ಮಾರ್ಗಸೂಚಿಯ ಪ್ರಕಾರ ಚಾಲಕರ ವೀಕ್ಷಣೆಗೆ ಅಡ್ಡಿಯುಂಟುಮಾಡುವ ಅಲಂಕಾರಿಕ ವಸ್ತುಗಳನ್ನು ಕಾರಿನಲ್ಲಿ ಇಡುವುದನ್ನು ನಿಷೇಧಿಸಲಾಗಿದೆ.

ಈ ರೀತಿಯ ವಸ್ತುಗಳನ್ನು ಹೊಂದುವ ಕಾರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವು ಸಾರಿಗೆ ಆಯುಕ್ತರಿಗೆ ಸೂಚನೆ ನೀಡಿದೆ. ಈಗ ಹಲವು ಕಾರುಗಳಲ್ಲಿ ಹಿಂಭಾಗದ ಮಿರರ್'ಗೆ ಅಡ್ಡಿ ಪಡಿಸುವಂತಹ ಕಲಾಕೃತಿ ಹಾಗೂ ಹೂಮಾಲೆಗಳನ್ನು ಇಡಲಾಗುತ್ತಿದೆ. ಇವುಗಳು ಚಾಲಕನ ನೋಟಕ್ಕೆ ಅಡ್ಡಿಪಡಿಸಿ ಅಪಘಾತಗಳಿಗೆ ಕಾರಣವಾಗುತ್ತಿವೆ ಎಂದು ಕೇರಳ ಸರ್ಕಾರ ಹೇಳಿದೆ.

ಇನ್ನು ಮುಂದೆ ಗೊಂಬೆ, ಕುಷನ್ ಹಾಗೂ ಇನ್ನಿತರ ಅಲಂಕಾರಿಕ ವಸ್ತುಗಳನ್ನು ಕಾರಿನ ಹಿಂದಿನ ಪಾರ್ಸೆಲ್ ಟ್ರೇನಲ್ಲಿ ಇಡುವುದನ್ನು ಕಾನೂನುಬಾಹಿರವೆಂದುಪರಿಗಣಿಸಲಾಗುತ್ತದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕೇರಳ ಸಾರಿಗೆ ಇಲಾಖೆಯು ಈಗಾಗಲೇ ಹೈಕೋರ್ಟ್ ಮಾರ್ಗಸೂಚಿಗಳ ಅನುಸಾರವಾಗಿ ಸನ್ ಫಿಲ್ಮ್ ಬಳಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ.ಈಗ ಅಲಂಕಾರಿಕ ವಸ್ತುಗಳನ್ನು ಇಡುವುದನ್ನು ನಿಷೇಧಿಸಲಾಗಿದೆ.

ಯಾವುದೇ ಕಾರುಗಳಲ್ಲಿ ಅಳವಡಿಸಿರುವ ಸ್ಕ್ರೀನ್ ಹಾಗೂ ಸ್ಯಾನ್ ಫಿಲ್ಮ್ ಗಳನ್ನು ತೆಗೆದುಹಾಕುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿದೆ. ಕಾರುಗಳಲ್ಲಿ ಇಡುವಅಲಂಕಾರಿಕ ವಸ್ತುಗಳು ಚಾಲಕನ ನೋಟಕ್ಕೆ ಅಡ್ಡಿಪಡಿಸುತ್ತವೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಅಲಂಕಾರಿಕ ವಸ್ತುಗಳಲ್ಲಿ ಹೆಚ್ಚಿನವು ಸಡಿಲವಾಗಿ ಅಚ್ಚು ಹಾಕಲ್ಪಟ್ಟಿರುತ್ತವೆ. ಅವುಗಳು ಸುರಕ್ಷಿತವಾಗಿರುವುದಿಲ್ಲ. ಅಪಘಾತ ಸಂಭವಿಸಿದಲ್ಲಿ ಈ ವಸ್ತುಗಳು ಅದರಲ್ಲೂ ಸಣ್ಣ ಆಟಿಕೆಗಳು ಸ್ಪೋಟಕಗಳಾಗಿ ಪರಿಣಮಿಸಬಹುದು.

ಇದರಿಂದ ಕಾರಿನಲ್ಲಿರುವ ಚಾಲಕ ಅಥವಾ ಪ್ರಯಾಣಿಕರಿಗೆ ಗಾಯಗಳಾಗಬಹುದು. ಮೊಬೈಲ್ ಫೋನ್ ಹಾಗೂ ಪರ್ಸ್'ಗಳನ್ನು ಸಹ ಕಾರಿನಲ್ಲಿ ಸುರಕ್ಷಿತವಾಗಿಡಬೇಕು. ಈ ಎಲ್ಲ ವಸ್ತುಗಳನ್ನು ಡ್ಯಾಶ್ ಬೋರ್ಡ್'ನಲ್ಲಿಡುವುದು ಒಳ್ಳೆಯದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರಿನ ಒಳಭಾಗವನ್ನು ಅಲಂಕರಿಸಲು ಬಯಸುವವರು ಚಾಲಕನ ನೋಟಕ್ಕೆ ಅಡ್ಡಿಪಡಿಸದಂತಹ ವಸ್ತುಗಳನ್ನು ಇಡಬಹುದು. ಚಿಕ್ಕ ಚಿಕ್ಕ ಅಲಂಕಾರಿಕ ವಸ್ತುಗಳನ್ನು ಕಾರಿನ ಡ್ಯಾಶ್‌ಬೋರ್ಡ್ ಮೇಲೆ ಇಡಬಹುದು.

ಸ್ಟಿಕ್ಕರ್ ಹಾಗೂ ಕಾಗದದ ಅಲಂಕಾರಗಳನ್ನು ಬಳಸಿ ಸೀಟ್ ಕವರ್'ಗಳನ್ನು ಅಲಂಕೃತಗೊಳಿಸಬಹುದು. ಇದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ. ಅಲಂಕಾರಿಕ ವಸ್ತುಗಳನ್ನು ತೆಗೆದು ಹಾಕಲು ತಿಳಿಸಿರುವ ಕೇರಳ ಸರ್ಕಾರದ ಕ್ರಮವು ನಿಜಕ್ಕೂ ಶ್ಲಾಘನೀಯ.