ಕಾರ್ನಿವಾಲ್ ಕಾರು ಖರೀದಿ ಮೇಲೆ ದಾಖಲೆ ಪ್ರಮಾಣದ ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಿದ ಕಿಯಾ

ಕರೋನಾ ವೈರಸ್‌ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಆಟೋ ಉದ್ಯಮವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಚೇತರಿಸಿಕೊಳ್ಳುತ್ತಿದ್ದು, ಹಲವಾರು ಆಟೋ ಕಂಪನಿಗಳ ಹೊಸ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತಿದೆ.

ದಾಖಲೆ ಪ್ರಮಾಣದ ಡಿಸ್ಕೌಂಟ್ ಘೋಷಿಸಿದ ಕಿಯಾ ಮೋಟಾರ್ಸ್

ಕಳೆದ ವರ್ಷದ ಆರಂಭದಲ್ಲಿ ಕೋವಿಡ್ ಪರಿಣಾಮ ಕನಿಷ್ಠ ಪ್ರಮಾಣದ ಹೊಸ ವಾಹನಗಳನ್ನು ಮಾರಾಟ ಮಾಡಿದ್ದ ವಾಹನ ಕಂಪನಿಗಳಿಗೆ ಈ ವರ್ಷದ ಆರಂಭದಲ್ಲಿ ಭಾರೀ ಪ್ರಮಾಣದ ಬೇಡಿಕೆ ಹರಿದುಬಂದಿತ್ತು. ಆದರೆ ಇದೀಗ ಕೋವಿಡ್ 2ನೇ ಅಲೆ ಪರಿಣಾಮ ಮತ್ತೆ ಸಂಕಷ್ಟ ಎದುರಿಸುವಂತಾಗಿದ್ದು, ಕುಸಿದಿರುವ ಆರ್ಥಿಕ ಪರಿಸ್ಥಿತಿಯಿಂದಾಗಿ ತಗ್ಗಿರುವ ವಾಹನ ಮಾರಾಟವನ್ನು ಸುಧಾರಿಸಲು ಗ್ರಾಹಕರಿಗೆ ಹಲವಾರು ಕೊಡುಗೆಗಳನ್ನು ಪ್ರಕಟಿಸಲಾಗುತ್ತಿದೆ.

ದಾಖಲೆ ಪ್ರಮಾಣದ ಡಿಸ್ಕೌಂಟ್ ಘೋಷಿಸಿದ ಕಿಯಾ ಮೋಟಾರ್ಸ್

ಹೊಸ ವಾಹನ ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಕಿಯಾ ಮೋಟಾರ್ಸ್ ಕಂಪನಿಯು ಕೂಡಾ ಕಾರ್ನಿವಾಲ್ ಖರೀದಿ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ ಘೋಷಣೆ ಮಾಡಿದೆ.

ದಾಖಲೆ ಪ್ರಮಾಣದ ಡಿಸ್ಕೌಂಟ್ ಘೋಷಿಸಿದ ಕಿಯಾ ಮೋಟಾರ್ಸ್

ಕಾರ್ನಿವಾಲ್ ಎಂಪಿವಿ ಕಾರು ಖರೀದಿ ಮೇಲೆ ಕಂಪನಿಯು ಕನಿಷ್ಠ ರೂ.2.50 ಲಕ್ಷದಿಂದ ಗರಿಷ್ಠ ರೂ. 3.75 ಲಕ್ಷದ ತನಕ ಕ್ಯಾಶ್ ಆಫರ್ ನೀಡುತ್ತಿದ್ದು, ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಮಾದರಿಗಳ ಮೇಲೆ ರೂ. 2.50 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ಮೇಲೆ ರೂ. 3.75 ಲಕ್ಷ ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಿದೆ.

ದಾಖಲೆ ಪ್ರಮಾಣದ ಡಿಸ್ಕೌಂಟ್ ಘೋಷಿಸಿದ ಕಿಯಾ ಮೋಟಾರ್ಸ್

ಕಿಯಾ ಕಂಪನಿಯು ಘೋಷಣೆ ಮಾಡಿರುವ ಹೊಸ ಕ್ಯಾಶ್‌ಬ್ಯಾಕ್ ಆಫರ್ ಈ ತಿಂಗಳು ಕೊನೆಯ ತನಕ ಲಭ್ಯವಿರಲಿದ್ದು, ಎಂಪಿವಿ ಕಾರು ಖರೀದಿಸುವ ಗ್ರಾಹಕರಿಗೆ ಇದು ಅತ್ಯುತ್ತಮ ಅವಕಾಶ ಎನ್ನಬಹುದು.

ದಾಖಲೆ ಪ್ರಮಾಣದ ಡಿಸ್ಕೌಂಟ್ ಘೋಷಿಸಿದ ಕಿಯಾ ಮೋಟಾರ್ಸ್

ಇನ್ನು ಕಿಯಾ ಮೋಟಾರ್ಸ್ ಕಂಪನಿಯು ಸೆಲ್ಟೊಸ್ ನಂತರ ಬಿಡುಗಡೆ ಮಾಡಲಾದ ಕಾರ್ನಿವಾಲ್ ಕಾರಿನ ಮಾರಾಟದ ಮೂಲಕ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದು, ಹೊಸ ಕಾರು ಐಷಾರಾಮಿ ಸೌಲಭ್ಯಗಳೊಂದಿಗೆ ದುಬಾರಿಯಾಗಿದ್ದರೂ ಸಹ ಇನೋವಾ ಕ್ರಿಸ್ಟಾ ಕಾರಿಗೂ ಪೈಪೋಟಿ ನೀಡುತ್ತಿದೆ.

ದಾಖಲೆ ಪ್ರಮಾಣದ ಡಿಸ್ಕೌಂಟ್ ಘೋಷಿಸಿದ ಕಿಯಾ ಮೋಟಾರ್ಸ್

ಗ್ರಾಹಕರ ಬೇಡಿಕೆಯೆಂತೆ 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಮಾದರಿಯೊಂದಿಗೆ ಭಾರತದಲ್ಲಿ ಮಾರಾಟವಾಗುವ ಕಾರ್ನಿವಾಲ್ ಕಾರು ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಂಡಿದ್ದು, ಹೊಸ ಕಾರು ಪ್ರೀಮಿಯಂ, ಪ್ರೆಸ್ಟೀಜ್ ಮತ್ತು ಲಿಮೊಸಿನ್ ಎನ್ನುವ ಮೂರು ವೆರಿಯೆಂಟ್ ಹೊಂದಿದೆ.

ದಾಖಲೆ ಪ್ರಮಾಣದ ಡಿಸ್ಕೌಂಟ್ ಘೋಷಿಸಿದ ಕಿಯಾ ಮೋಟಾರ್ಸ್

ಅತ್ಯುತ್ತಮ ಫೀಚರ್ಸ್ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಹೊಸ ಕಾರು ಪ್ರೀಮಿಯಂ ಎಂಪಿವಿ ವಿಭಾಗದಲ್ಲಿ ಆಕರ್ಷಣೆಗೆ ಕಾರಣವಾಗಿದ್ದು,ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.24.95 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 33.95 ಲಕ್ಷ ಬೆಲೆ ಹೊಂದಿದೆ.

ದಾಖಲೆ ಪ್ರಮಾಣದ ಡಿಸ್ಕೌಂಟ್ ಘೋಷಿಸಿದ ಕಿಯಾ ಮೋಟಾರ್ಸ್

ಕಾರ್ನಿವಾಲ್ ಕಾರಿನಲ್ಲಿ ಸದ್ಯಕ್ಕೆ ಕೇವಲ ಒಂದೇ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 2.2-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ. ಪ್ರತಿ ವೆರಿಯೆಂಟ್‌ನಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, 200-ಬಿಎಚ್‌ಪಿ, 440-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

More from DriveSpark

Article Published On: Thursday, July 15, 2021, 15:33 [IST]
English summary
Kia Carnival MPV Gets Upto RS 3.75 lakh Cash Discounts. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+