ಜನಪ್ರಿಯ Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ಅಧಿಕೃತವಾಗಿ ಸೊನೆಟ್ ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್(Kia Sonet Anniversary Edition) ಬೆಲೆಯು ರೂ.10.79 ಲಕ್ಷಗಳಾಗಿದೆ.

ಜನಪ್ರಿಯ Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಸೊನೆಟ್ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕಿಯಾ ಸೊನೆಟ್ ದೇಶದಲ್ಲಿ 1 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಖಲಿಸಿದೆ. ಈ ಹೊಸ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಟರ್ಬೊ ಐಎಂಟಿ, ಟರ್ಬೊ ಡಿಸಿಟಿ, ಡೀಸೆಲ್ ಎಂಟಿ ಮತ್ತು ಡೀಸೆಲ್ ಎಟಿ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಆನಿವರ್ಸರಿ ಎಡಿಷನ್ ಮಿಡ್-ಲೆವೆಲ್ HTX ಟ್ರಿಮ್ ಅನ್ನು ಆಧರಿಸಿದೆ. ಸೊನೆಟ್ ಆನಿವರ್ಸರಿ ಎಡಿಷನ್ ಅನ್ನು ಅರೋರಾ ಬ್ಲಾಕ್ ಪರ್ಲ್, ಗ್ರಾವಿಟಿ ಗ್ರೇ, ಸಿಲ್ವರ್ ಸ್ಟೀಲ್ ಮತ್ತು ಗ್ಲೇಸಿಯರ್ ವೈಟ್ ಪರ್ಲ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಜನಪ್ರಿಯ Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಬಿಡುಗಡೆ

ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಮಾದರಿಯಲ್ಲಿ ಕಾಸ್ಮೆಟಿಕ್ ನವೀಕರಣಗಳು ಪಡೆದಿದೆ. ಇದು ಟ್ರಾಂಚರಿನ್ ಆಕ್ಸೆಂಟ್ಸ್‌ನೊಂದಿಗೆ ಅರೋಚ್ಸ್ ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್‌ಗಳನ್ನು ಪಡೆಯುತ್ತದೆ. ಅರೋಚ್ಸ್ ಸೈಡ್ ಸ್ಕಿಡ್ ಪ್ಲೇಟ್‌ಗಳು, ಕಿಯಾ ಸಿಗ್ನೇಚರ್ ಟೈಗರ್ ಗ್ರಿಲ್ ಹೀಟ್ ಸ್ಟ್ಯಾಂಪ್ಡ್ ಟ್ಯಾಂಗರಿನ್ ಅಸ್ಸೆಂಟ್ ಗಳು, ಹಾರ್ಟ್ ಬೀಟ್ ಎಲ್ಇಡಿ ಟೈಲ್-ಲ್ಯಾಂಪ್‌ಗಳು, ಕ್ರೌನ್ ಜೊವವ್ ಲ್‌ಇಡಿ ಹೆಡ್‌ಲ್ಯಾಂಪ್‌ಗಳು ಎಲ್‌ಇಡಿ ಡಿಆರ್‌ಎಲ್ ಮತ್ತು ಸೆಮಿ ಲೆಥೆರೆಟ್ ಸೀಟ್‌ಗಳನ್ನು ಒಳಗೊಂಡಿದೆ.

ಜನಪ್ರಿಯ Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಬಿಡುಗಡೆ

ಈ ಆನಿವರ್ಸರಿ ಎಡಿಷನ್ HTX ರೂಪಾಂತರಗಳಲ್ಲಿ ಪ್ರವೇಶಿಸಬಹುದಾದ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಎಸಿ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಕೀಲೆಸ್ ಎಂಟ್ರಿ, ಚಾಲಿತ ಒಆರ್‌ವಿಎಂಗಳು, ಕ್ರೂಸ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ ಮತ್ತು ಇತರವುಗಳೊಂದಿಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಎಸ್‌ಯುವಿ ಪಡೆಯುತ್ತದೆ.

ಜನಪ್ರಿಯ Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಬಿಡುಗಡೆ

ಇನ್ನು ಈ ಎಸ್‍ಯುವಿಯಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ಬ್ರೇಕ್ ಅಸಿಸ್ಟ್ ನಂತಹ ಸುರಕ್ಷತಾ ವೈಶಿಷ್ಟ್ಯಗಳಾಗಿವೆ.

ಜನಪ್ರಿಯ Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಬಿಡುಗಡೆ

ಈ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಮಾದರಿಯಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಇದು 1.5-ಲೀಟರ್ ಸಿಆರ್ಡಿಐ ಡೀಸೆಲ್ ಮತ್ತು 1.0-ಲೀಟರ್ ಜಿಡಿಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳಾಗಿದೆ. ಇದರಲ್ಲಿ 1.5-ಲೀಟರ್ ಸಿಆರ್ಡಿಐ ಡೀಸೆಲ್ ಎಂಜಿನ್ ಅನ್ನು ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ.

ಜನಪ್ರಿಯ Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಬಿಡುಗಡೆ

ಇದರಲ್ಲಿ 1.5-ಲೀಟರ್ ಸಿಆರ್ಡಿಐ ಡೀಸೆಲ್ ಎಂಜಿನ್ ಮ್ಯಾನುವಲ್ ಮಾದರಿಯು 99 ಬಿಹೆಚ್‍ಪಿ ಪವರ್ ಮತ್ತು 220 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಾದರಿಯು 113 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಜನಪ್ರಿಯ Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಬಿಡುಗಡೆ

ಇನ್ನು ಇದರೊಂದಿಗೆ 1.0L ಟರ್ಬೊ ಪೆಟ್ರೋಲ್ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಕ್ಲಚ್-ಲೋ ಐಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ,

ಜನಪ್ರಿಯ Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಬಿಡುಗಡೆ

ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಅನ್ನು ಬಿಡುಗಡೆಗೊಳಿಸಿದ ಬಳಿಕ, ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಟೇ-ಜಿನ್ ಪಾರ್ಕ್ ಅವರು ಮಾತನಾಡಿ, ಭಾರತದಲ್ಲಿ ಕಿಯಾ ಯಶಸ್ಸಿಗೆ ಕೊಡುಗೆ ನೀಡಿದ ನಮ್ಮ ಪ್ರಗತಿ ಉತ್ಪನ್ನಗಳಲ್ಲಿ ಸೊನೆಟ್ ಒಂದು. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳ ಮಾರಾಟದೊಂದಿಗೆ, ಸೊನೆಟ್ ಈಗಾಗಲೇ ಭಾರತದ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಒಂದಾಗಿದೆ.

ಜನಪ್ರಿಯ Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಬಿಡುಗಡೆ

ಈ ಯಶಸ್ಸನ್ನು ಸಂಭ್ರಮಿಸಲು ಸೊನೆಟ್ ಆನಿವರ್ಸರಿ ಎಡಿಷನ್ ಅನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಸಂಪೂರ್ಣ ವಿನ್ಯಾಸದ ಉತ್ಕೃಷ್ಟತೆಯಿಂದ ಮಾಡಲಾಗಿದೆ. ಆನಿವರ್ಸರಿ ಎಡಿಷನ್ ಸೊನೆಟ್ ಅರೋಚ್‌ಗಳ ಪರಿಕಲ್ಪನೆಯನ್ನು ಆಧರಿಸಿದೆ ಮತ್ತು ನಮ್ಮ ಯುವ ಗ್ರಾಹಕರಿಗೆ ಧೈರ್ಯಶಾಲಿ ಮತ್ತು ಪ್ರೀಮಿಯಂ ಚಾಲನಾ ಅನುಭವವನ್ನು ನೀಡುವ ಮಸ್ಕಲರ್ ಲುಕ್ ಅನ್ನು ಹೊಂದಿದೆ ಎಂದು ಹೇಳಿದರು.

ಜನಪ್ರಿಯ Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಬಿಡುಗಡೆ

ಕಿಯಾ ಮೋಟಾರ್ಸ್ ಕಂಪನಿಯು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಸೊನೆಟ್( ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಸೆಲ್ಟೋಸ್ ಬಳಿಕ ಕಿಯಾ ಮೋಟಾರ್ಸ್ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿ 1 ಲಕ್ಷ ಯುನಿಟ್ ಗಳ ಮಾರಾಟ ಮೈಲಿಗಲ್ಲು ಸಾಧಿಸಿದೆ. ಕಳೆದ ವರ್ಷ ಬಿಡುಗಡೆಯಾದ ಎಸ್‌ಯುವಿ ಅದರ ಬೆಲೆ ಮತ್ತು ವೈಶಿಷ್ಟ್ಯಗಳ ಕಾರಣದಿಂದಾಗಿ ಸಾಕಷ್ಟು ಗಮನ ಸೆಳೆಯಿತು. ಈ ಎಸ್‍ಯುವಿಯು ಬಿಡುಗಡೆಯಾದ ಒಂದು ವರ್ಷದೊಳಗೆ ಈ ಹೆಗ್ಗುರುತನ್ನು ಸಾಧಿಸಿತು.

ಜನಪ್ರಿಯ Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಬಿಡುಗಡೆ

ಕಡಿಮೆ ಅವಧಿಯಲ್ಲಿ ಕಿಯಾ ಸೊನೆಟ್ ಹೆಚ್ಚು ಮಾರಾಟವಾದ ವಾಹನಗಳಲ್ಲಿ ಒಂದಾಗಿದೆ.ರಿಫ್ರೆಶ್ ಮಾಡಿದ ಕಿಯಾ ಸೊನೆಟ್ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬ್ರಾಂಡ್‌ನ ಹೊಸ ಲೋಗೋ ಮತ್ತು ವೈಶಿಷ್ಟ್ಯಗಳ ವಿಸ್ತಾರವಾದ ಪಟ್ಟಿ ಮತ್ತು ಹಲವಾರು ಸೆಗ್ಮೆಂಟ್-ಫಸ್ಟ್‌ಗಳೊಂದಿಗೆ ಮಾರಾಟಕ್ಕೆ ಬಂದಿತು. ಇದು ಎರಡು ಟ್ರಿಮ್‌ಗಳಲ್ಲಿ 17 ರೂಪಾಂತರಗಳಲ್ಲಿ ಲಭ್ಯವಿದೆ. ಇದು ಟೆಕ್ ಲೈನ್ ಮತ್ತು ಜಿಟಿ -ಲೈನ್ ಅನ್ನು ಪವರ್‌ಟ್ರೇನ್‌ಗಳು ಮತ್ತು ಟ್ರಾನ್ಸ್‌ಮಿಷನ್‌ಗಳ ಆಧಾರದ ಮೇಲೆ ಹಲವಾರು ಆಯ್ಕೆಗಳಲ್ಲಿ ವರ್ಗೀಕರಿಸಲಾಗಿದೆ.

ಜನಪ್ರಿಯ Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಬಿಡುಗಡೆಯಾದ ಆರಂಭದಲ್ಲೇ ಅತಿ ಹೆಚ್ಚು ಪೈಪೋಟಿ ಹೊಂದಿರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲವನ್ನು ಮೂಡಿಸಿತು. ಕಿಯಾ ಸೊನೆಟ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ. ಕಿಯಾ ಸೊನೆಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್ ಮತ್ತು ಟಾಟಾ ನೆಕ್ಸಾನ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ.

Most Read Articles

Kannada
English summary
Kia india launched sonet first anniversary edition price features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X