ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ಕಿಯಾ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಮಲ್ಟಿ ಪರ್ಪಸ್ ಕಾರು ಮಾದರಿಯಾದ ಕೆರೆನ್ಸ್ ಆವೃತ್ತಿಯನ್ನು ಇದೇ ತಿಂಗಳು 16ರಂದು ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳಿಸುತ್ತಿದ್ದು, ಹೊಸ ಕಾರು ಆಕರ್ಷಕ ಬೆಲೆಯೊಂದಿಗೆ ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ಹೊಸ ಕೆರೆನ್ಸ್ ಎಂಪಿವಿ ಆವೃತ್ತಿಯ ಉತ್ಪಾದನಾ ಮಾದರಿಯ ರೇಖಾಚಿತ್ರಗಳನ್ನು ಹಂಚಿಕೊಂಡಿರುವ ಕಿಯಾ ಕಂಪನಿಯು ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಿದ ನಂತರ ಮುಂಬರುವ ಜನವರಿ ಮಧ್ಯಂತರದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡಲಿದ್ದು, ಹೊಸ ಕಾರು ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಉತ್ಪನ್ನವನ್ನು ಸಿದ್ದಪಡಿಸಲಾಗಿದೆ.

ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ಕಿಯಾ ಹೊಸ ಕೆರೆನ್ಸ್ ಕಾರು ಭಾರತ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶಿಸಲಿದ್ದು, ಕಾರು ಅನಾವರಣಕ್ಕೂ ಮುನ್ನ ಕಿಯಾ ಕಂಪನಿಯು ಈಗಾಗಲೇ ಹೊಸ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ.

ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ಕೆರೆನ್ಸ್ ಕಾರು ಮಾದರಿಯು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿರುವುದು ಈಗಾಗಲೇ ಬಹಿರಂಗವಾಗಿದೆ.

ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ಹೊಸ ಕೆರೆನ್ಸ್ ಕಾರು ಮಾದರಿಯು ಮಧ್ಯಮ ಕ್ರಮಾಂಕದ ಎಂಪಿವಿ ಮಾದರಿಯಾಗಿದ್ದು, ಹೊಸ ಕಾರು ಸೆಲ್ಟೊಸ್ ಮಾದರಿಯಲ್ಲಿಯೇ ತಾಂತ್ರಿಕ ಸೌಲಭ್ಯಗಳೊಂದಿಗೆ ವಿಭಿನ್ನವಾದ ಹೊಸ ವಿನ್ಯಾಸವನ್ನು ಪಡೆದುಕೊಳ್ಳಲಿದೆ.

ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ಸದ್ಯ ಮಾರುಕಟ್ಟೆಯಲ್ಲಿರುವ ಕಿಯಾ ಕಾರ್ನಿವಾಲ್ ಎಂಪಿವಿ ಕಾರು ಮಾದರಿಯು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಹೊಸ ಕಾರಿನ ಬೆಲೆ ಇಳಿಕೆಗಾಗಿ ಸೆಲ್ಟೊಸ್ ಪ್ಲ್ಯಾಟ್‌ಫಾರ್ಮ್ ಮಾದರಿಯನ್ನು ಆಧರಿಸಿ ಹೊಸ ಎಂಪಿವಿ ಕಾರನ್ನು ಉತ್ಪಾದಿಸಲಾಗುತ್ತಿದೆ.

ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಭರ್ಜರಿ ಬೇಡಿಕೆ ಗಿಟ್ಟಿಸಿಕೊಳ್ಳವ ನೀರಿಕ್ಷೆಯಲ್ಲಿದ್ದು, ಬೆಲೆಯಲ್ಲಿ ಎರ್ಟಿಗಾ ಕಾರಿಗಿಂತಲೂ ತುಸು ದುಬಾರಿಯಾದರೂ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗಿಂತಲೂ ಕಡಿಮೆ ಬೆಲೆಯೊಂದಿಗೆ ಮಾರಾಟಗೊಳ್ಳಲಿದೆ.

ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ಮಧ್ಯಮ ಗಾತ್ರದ ಎಂಪಿವಿ ಕಾರು ಮಾದರಿಯ ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಎರ್ಟಿಗಾ ಕಾರು ಅಧಿಕ ಬೇಡಿಕೆಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ದುಬಾರಿ ಬೆಲೆ ನಡುವೆಯೂ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಎರ್ಟಿಗಾ ಮಾದರಿಯಷ್ಟೇ ಬೇಡಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ.

ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ಆದರೆ ಎರ್ಟಿಗಾ ಕಾರಿಗಿಂತಲೂ ದುಪ್ಪಟ್ಟು ಬೆಲೆ ಹೊಂದಿರುವ ಇನೋವಾ ಕ್ರಿಸ್ಟಾ ಕಾರು ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಂಡಿದ್ದು, ಎರ್ಟಿಗಾ ಮತ್ತು ಇನೋವಾ ಕ್ರಿಸ್ಟಾ ನಡುವಿನ ಬೆಲೆ ಅಂತರವು ಸಾಕಷ್ಟಿದೆ.

ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ಹೀಗಾಗಿ ಈ ಎರಡು ಕಾರುಗಳ ನಡುವಿನ ಸ್ಥಾನದಲ್ಲಿದ್ದ ಮಹೀಂದ್ರಾ ಮರಾಜೋ ಕಾರು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವಲ್ಲಿ ವಿಫಲವಾಗುತ್ತಿದ್ದು, ಇನೋವಾ ಮತ್ತು ಎರ್ಟಿಗಾ ನಡುವಿನ ಸ್ಥಾನವನ್ನು ತುಂಬಲು ಕಿಯಾ ಕಂಪನಿಯು ಹೊಸ ಎಂಪಿವಿ ಕಾರು ಉತ್ಪನ್ನವನ್ನು ಸಿದ್ದಪಡಿಸುತ್ತಿದೆ.

ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ಯೋಜನೆಯೆಂತೆ ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗಬೇಕಿದ್ದ ಹೊಸ ಕಾರನ್ನು ಕೋವಿಡ್ ಕಾರಣಕ್ಕೆ 2022ಕ್ಕೆ ಮುಂದೂಡಿಕೆ ಮಾಡಿರುವ ಕಿಯಾ ಕಂಪನಿಯು ಹೊಸ ಕಾರನ್ನು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡುತ್ತಿದೆ.

ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ಹೊಸ ಕಾರಿನಲ್ಲಿ ಮಾಹಿತಿಗಳ ಪ್ರಕಾರ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ 1.4-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಬಹುದಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ಸದ್ಯ ಆಟೋ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಉಳಿದ ಕಾರು ಮಾದರಿಗಳಿಂತಲೂ ಹೆಚ್ಚು ಬೇಡಿಕೆಯಲ್ಲಿದ್ದು, ತದನಂತರ ಎಸ್‌ಯುವಿ ಮತ್ತು ಎಂಪಿವಿ ಕಾರುಗಳು ಸಹ ಹೆಚ್ಚಿನ ಮಟ್ಟದ ಬೇಡಿಕೆಯಲ್ಲಿರುವ ಕಾರು ಮಾದರಿಗಳಾಗಿವೆ.

ಟರ್ಬೊ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ ಕಿಯಾ ಕೆರೆನ್ಸ್ ಎಂಪಿವಿ ಕಾರು

ಆದರೆ ಎಂಪಿವಿ ಮಾದರಿಗಳಲ್ಲಿ ಕೆಲವು ಮಾದರಿಗಳಿರುವುದರಿಂದ ಪ್ರತಿಸ್ಪರ್ಧಿ ಕಡಿಮೆಯಿದ್ದು, ಮಾರುಕಟ್ಟೆಯಲ್ಲಿರುವ ಕೆಲವೇ ಕೆಲವು ಎಂಪಿವಿ ಕಾರು ಮಾದರಿಗಳು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿವೆ. ಇದೇ ಕಾರಣಕ್ಕೆ ಮಧ್ಯಮ ಗಾತ್ರದ ಎಂಪಿವಿ ವಿಭಾಗಕ್ಕೆ ಪ್ರವೇಶಿಸಲು ಸಿದ್ದವಾಗಿರುವ ಕಿಯಾ ಕಂಪನಿಯು ಹೊಸ ಮಾದರಿಯ ಎಂಪಿವಿ ಮಾದರಿಯೊಂದನ್ನು ಅಭಿವೃದ್ದಿಗೊಳಿಸಿದ್ದು, ಡಿಸೆಂಬರ್ 16ರಂದು ಅನಾವರಣಗೊಳ್ಳಲಿರುವ ಹೊಸ ಕಾರು 2022ರ ಆರಂಭದಲ್ಲಿ ಬಿಡುಗಡೆಯಾಗಲಿದೆ.

More from DriveSpark

Article Published On: Friday, December 10, 2021, 13:03 [IST]
English summary
Kia new carens mpv will offer 1 4 litre turbo engine with dct details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+