ಪ್ರೀಮಿಯಂ ಇಂಟಿರಿಯರ್'ನೊಂದಿಗೆ ಕಸ್ಟಮೈಸ್ ಆದ ಕಿಯಾ ಸೊನೆಟ್
ಕಿಯಾ ಮೋಟಾರ್ಸ್ ಕಂಪನಿಯು ತನ್ನ ಸೊನೆಟ್ ಎಸ್‌ಯುವಿಯನ್ನು ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಸೊನೆಟ್ ಎಸ್‌ಯುವಿಯನ್ನು ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ ಮೆಂಟಿನಲ್ಲಿ ಮಾರಾಟ ಮಾಡಲಾಗುತ್ತದೆ.

ಸೊನೆಟ್ ಎಸ್‌ಯುವಿಯು ಈ ಸೆಗ್ ಮೆಂಟಿನಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ 300, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಹಲವು ಕಾರುಗಳಿಗೆ ಪೈಪೋಟಿ ನೀಡುತ್ತದೆ. ಹಲವಾರು ಫೀಚರ್ ಹಾಗೂ ಪ್ರೀಮಿಯಂ ಎಕ್ಸ್'ಟಿರಿಯರ್ ಲುಕ್'ನಿಂದಾಗಿ ಕಿಯಾ ಸೊನೆಟ್ ಎಸ್‌ಯುವಿಯು ಹೆಚ್ಚು ಜನಪ್ರಿಯವಾಗಿದೆ.

ಈ ಎಸ್‌ಯುವಿಯ ಟಾಪ್ ಎಂಡ್ ಮಾದರಿಗಳಲ್ಲಿ ಹಲವಾರು ಹೈ ಎಂಡ್ ಫೀಚರ್'ಗಳನ್ನು ನೀಡಲಾಗಿದೆ. ಇತ್ತೀಚೆಗೆ ಹೊಸ ಕಿಯಾ ಸೊನೆಟ್ ಎಸ್‌ಯುವಿಯ ಹೆಚ್‌ಟಿಕೆ ಮಾದರಿಗೆ ಸಂಬಂಧಿಸಿದ ವೀಡಿಯೊವನ್ನು ಯೂಟ್ಯೂಬ್'ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಈ ಎಸ್‌ಯುವಿಯ ಇಂಟಿರಿಯರ್ ಅನ್ನು ಕಸ್ಟಮೈಸ್ ಮಾಡಲಾಗಿದ್ದು, ಪ್ರೀಮಿಯಂ ಲುಕ್ ನೀಡಲಾಗಿದೆ. ಈ ವೀಡಿಯೊವನ್ನು ವಿಐಜಿ ಆಟೋ ಅಕ್ಸೆಸರೀಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ.

ಕಿಯಾ ಸೊನೆಟ್ ಎಸ್‌ಯುವಿಯ ಕಸ್ಟಮೈಸ್ ಡೋರ್ ಪ್ಯಾನೆಲ್'ಗಳಿಂದ ಆರಂಭವಾಗಿದೆ. ಡೋರುಗಳು ಬ್ಲಾಕ್ ಸ್ಟಿಚಿಂಗ್ ಹೊಂದಿರುವ ವೈಟ್ ಲೆದರ್ ಪ್ಯಾಡಿಂಗ್ ಹೊಂದಿವೆ. ಇದರ ಜೊತೆಗೆ ಡೋರುಗಳಲ್ಲಿ ಪ್ರಕಾಶಮಾನವಾದ ಸ್ಕಫ್ ಪ್ಲೇಟ್‌ಗಳನ್ನು ಸಹ ಕಾಣಬಹುದು.
MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಫ್ಲೋರ್ ಮ್ಯಾಟ್'ಗಳನ್ನು ವಜ್ರದ ಆಕಾರದಿಂದ ಸ್ಟಿಚ್ ಮಾಡಲಾಗಿದೆ. ಫುಟ್ ವಾಲ್ ಏರಿಯಾದಲ್ಲಿ ಆಫ್ಟರ್ ಮಾರ್ಕೆಟ್ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ. ಕ್ಯಾಬಿನ್'ಗೆ ಹೊಂದಿಕೊಳ್ಳುವಂತಹ ಬಿಳಿ ಹಾಗೂ ಕಪ್ಪು ಬಣ್ಣದ ಸ್ಟೀಯರಿಂಗ್ ಕವರ್ ನೀಡಲಾಗಿದೆ.

ಈ ಎಸ್‌ಯುವಿಯಲ್ಲಿ ಅಲ್ಟ್ರಾ ಸಾಫ್ಟ್ ಡ್ಯುಯಲ್ ಟೋನ್ ಸೀಟ್ ಕವರ್ ಅಳವಡಿಸಲಾಗಿದೆ. ಇದರ ಮುಂಭಾಗವು ಐಸ್ ಪರ್ಲ್ ವೈಟ್ ಫಿನಿಶ್ ಹೊಂದಿದ್ದರೆ, ಹಿಂಭಾಗವು ಕಪ್ಪು ಫಿನಿಶ್ ಹೊಂದಿದೆ.
MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಈ ಆಫ್ಟರ್ ಮಾರ್ಕೆಟ್ ಸೀಟ್ ಕವರ್‌ಗಳ ಫಿಟ್ ಹಾಗೂ ಫಿನಿಶಿಂಗ್ ಉತ್ತಮವಾಗಿದೆ. ಮುಂಭಾಗದ ಸೀಟುಗಳ ಮೇಲೆ ಕುಷನ್ ಅಳವಡಿಸಲಾಗಿದ್ದು, ಎಲ್ಲಾ ಡೋರುಗಳಲ್ಲಿಯೂ ಡಂಪಿಂಗ್ ಮಾಡಲಾಗಿದೆ.
ಈ ಕ್ಯಾಬಿನ್‌ನಲ್ಲಿ ಎನ್‌ವಿಹೆಚ್ ಲೆವೆಲ್ ಸುಧಾರಿಸಲಾಗಿದೆ. ಈ ಎಸ್‌ಯುವಿಯ ಎಕ್ಸ್'ಟಿರಿಯರ್ ಅನ್ನು ಸಹ ಮಾಡಿಫೈ ಮಾಡಲಾಗಿದೆ. ಈ ಎಸ್‌ಯುವಿಯ ರೂಫ್ ರೇಲ್, ಕ್ರೋಮ್ ಡೋರ್ ಹ್ಯಾಂಡಲ್ ಹಾಗೂ ರೇನ್ ವೈಸರ್'ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಈ ಕಿಯಾ ಸೊನೆಟ್ ಎಸ್‌ಯುವಿಯ ಗ್ಲಾಸ್ ಮೇಲೆ ಹೈ ಇನ್ಫ್ರಾರೆಡ್ ಹೀಟ್ ರಿಜೆಕ್ಟ್ ಕ್ಲಿಯರ್ ಫಿಲ್ಮ್ ಅಳವಡಿಸಲಾಗಿದೆ. ಈ ಎಸ್‌ಯುವಿಯ ಡೋರಿನ ಕೆಳಭಾಗದಲ್ಲಿ ಕ್ರೋಮ್ ಬೀಡಿಂಗ್ ಅಳವಡಿಸಲಾಗಿದೆ. ಈ ಕಿಯಾ ಸೊನೆಟ್ ಎಸ್‌ಯುವಿಯಲ್ಲಿದ್ದ ಬಲ್ಬ್ ಬದಲಿಸಿ ಎಲ್ಇಡಿ ಯುನಿಟ್ ಅಳವಡಿಸಲಾಗಿದೆ.


Click it and Unblock the Notifications








