ಇದು ಭಾರತದ ಮೊದಲ ಮಾಡಿಫೈಡ್ ಕಿಯಾ ಸೊನೆಟ್ ಎಸ್‍ಯುವಿ

ಕಿಯಾ ಮೋಟಾರ್ಸ್ ಇಂಡಿಯಾ ಕಂಪನಿಯು ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಸೊನೆಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಈ ಕಿಯಾ ಸೊನೆಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ಇದು ಭಾರತದ ಮೊದಲ ಮಾಡಿಫೈಡ್ ಕಿಯಾ ಸೊನೆಟ್ ಎಸ್‍ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಬಹುಬೇಡಿಕೆಯ ಎಸ್‍ಯುವಿಯಾಗಿದೆ. ಇದರ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ ಗಳಿಗೆ ಭಾರತೀಯ ಗ್ರಾಹಕರುಫಿದಾ ಆಗಿದ್ದಾರೆ. ಈ ಕಿಯಾ ಸೊನೆಟ್ ಅನ್ನು ಮಾಡಿಫೈಗೊಳಿಸಿರುವ ವೀಡಿಯೋವನ್ನು ಇಂಡರ್ ಐ ರೈಡರ್ ಎಂಬ ಯೂಟ್ಯೂಬ್ ಚಾನೆಲ್‌ ಅಪ್ಲೋಡ್ ಮಾಡಿದ್ದಾರೆ. ಇದು ಭಾರತದಲಿ 20 ಇಂಚಿನ ಅಲಾಯ್ ವ್ಹೀಲ್ ನೊಂದಿಗೆ ಮಾಡಿಫೈಗೊಂಡ ಮೊದಲ ಎಸ್‍ಯುವಿಯಾಗಿದೆ.

ಇದು ಭಾರತದ ಮೊದಲ ಮಾಡಿಫೈಡ್ ಕಿಯಾ ಸೊನೆಟ್ ಎಸ್‍ಯುವಿ

ಸೊನೆಟ್ ಎಸ್‍ಯುವಿಯಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಕೇವಲ 20 ಇಂಚಿನ ಅಲಾಯ್ ವ್ಹೀಲ್ ಅನ್ನು ಅಳವಡಿಸಿದ್ದಾರೆ. ಈ ಅಲಾಯ್ ವ್ಹೀಲ್ ನಲ್ಲಿ ಕಿಯಾ ಸೊನೆಟ್ ಸಖತ್ ರಗಡ್ ಲುಕ್ ಅನ್ನು ಹೊಂದಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಇದು ಭಾರತದ ಮೊದಲ ಮಾಡಿಫೈಡ್ ಕಿಯಾ ಸೊನೆಟ್ ಎಸ್‍ಯುವಿ

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಎಂಜಿನ್ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಇದು ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಯುನಿಟ್ ಮತ್ತು 1.0-ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಅನ್ನು ಹೊಂದಿದೆ.

ಇದು ಭಾರತದ ಮೊದಲ ಮಾಡಿಫೈಡ್ ಕಿಯಾ ಸೊನೆಟ್ ಎಸ್‍ಯುವಿ

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ 1.2-ಲೀಟರ್ ಯುನಿಟ್ 84 ಬಿಹೆಚ್‌ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಇದು ಭಾರತದ ಮೊದಲ ಮಾಡಿಫೈಡ್ ಕಿಯಾ ಸೊನೆಟ್ ಎಸ್‍ಯುವಿ

ಇನ್ನು ಟಾಪ್ ಸ್ಪೆಕ್ 1.0-ಲೀಟರ್ ಯುನಿಟ್ 119 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಅಥವಾ 6-ಸ್ಪೀಡ್ ಐಎಂಟಿ ಅನ್ನು ಜೋಡಿಸಲಾಗಿದೆ.

ಇದು ಭಾರತದ ಮೊದಲ ಮಾಡಿಫೈಡ್ ಕಿಯಾ ಸೊನೆಟ್ ಎಸ್‍ಯುವಿ

ಇನ್ನು ಈ ಕಾಂಪ್ಯಾಕ್ಟ್ ಎಸ್‍ಯುವಿಯ ಡೀಸೆಲ್ ಎಂಜಿನ್ ಬಗ್ಗೆ ಹೇಳುವುದಾದರೆ, 1.5-ಲೀಟರ್ ಡೀಸೆಲ್ ಡಬ್ಲ್ಯುಜಿಟಿ ಎಂಜಿನ್ 99 ಬಿಹೆಚ್‌ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಿಜಿಟಿ ಎಂಜಿನ್ 114 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಗ್ರಾಹಕರು ಕಿಯಾ ಕಾರುಗಳ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫಿಧಾ ಆಗುತ್ತಾರೆ. ಕಿಯಾ ಮೋಟಾರ್ಸ್ ಹಲವು ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಅದು ಕಿಯಾ ಕಾರುಗಳ ಸ್ಪೆಷಾಲಿಟಿ ಎಂದು ಹೇಳಬಹುದು.

ಇದು ಭಾರತದ ಮೊದಲ ಮಾಡಿಫೈಡ್ ಕಿಯಾ ಸೊನೆಟ್ ಎಸ್‍ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಬಿಡುಗಡೆಯಾದ ಆರಂಭದಲ್ಲೇ ಅತಿ ಹೆಚ್ಚು ಪೈಪೋಟಿ ಹೊಂದಿರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಕಿಯಾ ಸೊನೆಟ್ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ.

More from DriveSpark

Article Published On: Saturday, January 16, 2021, 20:19 [IST]
English summary
India’s First Modified Kia Sonet. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+