ಭಾರತದಲ್ಲಿ ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Seltos X Line

ಕೊರಿಯಾ ಮೂಲದ ಜನಪ್ರಿಯ ವಾಹನ ತಯಾರಕ Kia ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ Seltos X Line ವೆರಿಯೆಂಟ್ ಅನ್ನು ಅನಾವರಣಗೊಳಿಸಿದೆ. ಇದು Seltos ಎಸ್‍ಯುವಿಯ ಲೈನ್‌ಅಪ್‌ನಲ್ಲಿ ಹೊಸ ಟಾಪ್-ಆಫ್-ಲೈನ್ ವೆರಿಯೆಂಟ್ ಆಗಿದೆ.

ಭಾರತದಲ್ಲಿ ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Seltos X Line

ಹೊಸ Kia Seltos X Line ವೆರಿಯೆಂಟ್ ಕೆಲವು ಬಾಹ್ಯ ವಿನ್ಯಾಸ ಬದಲಾವಣೆಗಳನ್ನು ಮತ್ತು ಕ್ಯಾಬಿನ್ ಒಳಗೆ ಕನಿಷ್ಠ ಬದಲಾವಣೆಗಳನ್ನು ಹೊಂದಿದೆ.ಬಾನೆಟ್ ಅಡಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಹೊಸ Kia Seltos X Line ವೆರಿಯೆಂಟ್ ನಲ್ಲಿ ಸೆಗ್ಮೆಂಟ್-ಅತಿದೊಡ್ಡ 18-ಇಂಚಿನ ಕ್ರಿಸ್ಟಲ್-ಕಟ್ ಮ್ಯಾಟ್ ಗ್ರ್ಯಾಫೈಟ್ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ. ಇದು ಹೊಸ ಇಂಡಿಗೋ ಪೆರಾ ಲೆಥೆರೆಟ್ ಅಪ್‌ಹೋಲ್ಸ್ಟರಿಯನ್ನು ಪಡೆಯುತ್ತದೆ. ಈ X Line ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Seltos X Line

ಈ ಎಸ್‌ಯುವಿಯು ಆರೇಂಜ್ ಬಣ್ಣದ ಅಸ್ಸೆಂಟ್ ಗಳು ಮತ್ತು ಬಾಡಿಯ ಸುತ್ತಲೂ ಬ್ಲ್ಯಾಕ್ ಒಳಸೇರಿಸುವಿಕೆಯೊಂದಿಗೆ ಬರುತ್ತದೆ. ಈ ಆರೇಂಜ್ ಬಣ್ಣದ ಅಸ್ಸೆಂಟ್ ಗಳನ್ನು ಗ್ರಿಲ್‌ನ ಕೆಳ ಭಾಗದಲ್ಲಿ, ಕೆಳಗಿನ ಹಿಂಭಾಗದ ಬಂಪರ್ ಮತ್ತು ಪಕ್ಕದ ಡೋರುಗಳ ಕೆಳಭಾಗದಲ್ಲಿ ನೀಡಲಾಗುತ್ತದೆ.

ಭಾರತದಲ್ಲಿ ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Seltos X Line

ಈ 2021ರ ಕಿಯಾ ಸೆಲ್ಟೋಸ್ ಎಕ್ಸ್ ಲೈನ್ ಅನ್ನು ಮ್ಯಾಟ್ ಬಣ್ಣವನ್ನು ಹೊಂದಿದೆ, ಇದನ್ನು 'ಎಕ್ಸ್‌ಕ್ಲೂಸಿವ್ ಮ್ಯಾಟ್ ಗ್ರ್ಯಾಫೈಟ್' ಎಂದು ಕರೆಯುತ್ತಾರೆ. ಕ್ರೀಮ್ ಅಂಶಗಳು ಮತ್ತು ಒಆರ್‌ವಿಎಮ್‌ಗಳು ಸ್ಪೋರ್ಟಿ ನೋಟವನ್ನು ನೀಡಲು ಅಲ್ಲಿ ಬ್ಲ್ಯಾಕ್ ಬಣ್ಣವನ್ನು ನೀಡಲಾಗಿದೆ.

ಭಾರತದಲ್ಲಿ ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Seltos X Line

ಹೊಸ Seltos X Line ವೆರಿಯೆಂಟ್ ಮುಂಭಾಗದ ಗ್ರಿಲ್, ಬಂಪರ್ ಟ್ರಿಮ್, ಆಫ್ ಫಾಗ್ ಲ್ಯಾಂಪ್ ಹೌಸಿಂಗ್‌ಗಳು, ಸೈಡ್‌ಬೋರ್ಡ್‌ಗಳ ಉದ್ದಕ್ಕೂ ಕ್ರೋಮ್ ಆಪ್ಲಿಕ್, ಜಿಟಿ-ಲೈನ್ ಟ್ರಿಮ್‌ನಂತೆಯೇ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಡಾರ್ಕ್ ಕ್ರೋಮ್ ಬಾರ್ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಕನೆಕ್ಟ್ ಮಾಡುತ್ತದೆ.

ಭಾರತದಲ್ಲಿ ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Seltos X Line

ಇನ್ನು ಮುಖ ಫಾಕ್ಸ್ ಸ್ಕಫ್ ಪ್ಲೇಟ್, ಬ್ರೌನ್ಸ್ ಅಸ್ಸೆಂಟ್ ಗಳು, ಟೈಲ್‌ಗೇಟ್ ಅಡ್ಡಲಾಗಿ ಬ್ಯಾಡ್ಜಿಂಗ್, ಮುಂಭಾಗದ ಗ್ರಿಲ್ ಮತ್ತು ಡೋರುಗಳ ಮೇಲೆ ಎಕ್ಸ್-ಲೈನ್ ಲೋಗೊವನ್ನು ಹೊಂದಿದೆ. ಕೆಲವು ಬದಲಾವಣೆಗಳನ್ನು ಹೊರತುಪಡಿಸಿ, ಕ್ಯಾಬಿನ್ ಲೇಔಟ್ ಒಂದೇ ಆಗಿರುತ್ತದೆ. ನೀಲಿ ಛಾಯೆಯಲ್ಲಿ ಲೆಥೆರೆಟ್ ಅಪ್ಹೋಲ್ಸ್ಟರಿಯನ್ನು ಪಡೆಯುತ್ತದೆ,

ಭಾರತದಲ್ಲಿ ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Seltos X Line

ಕಿಯಾ ಇದನ್ನು ಇಂಡಿಗೋ ಪೆರಾ ಎಂದು ಕರೆಯುತ್ತದೆ ಸೀಟುಗಳು Seltos ಟೆಕ್ ಲೈನ್ ರೂಪಾಂತರದಲ್ಲಿ ನಾವು ಈಗಾಗಲೇ ನೋಡಿದ ಮಾದರಿಯನ್ನು ಪಡೆದುಕೊಂಡಿವೆ. ಈ ಟಾಪ್-ಆಫ್-ಲೈನ್ ವೆರಿಯಂಟ್ ಪ್ರಸ್ತುತ ಟಾಪ್-ಸ್ಪೆಕ್ ಮಾದರಿಯಲ್ಲಿ ಲಭ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ.

ಭಾರತದಲ್ಲಿ ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Seltos X Line

ಈ Seltos X Line ವೆರಿಯೆಂಟ್ ನಲ್ಲಿ ಹಿಂಭಾಗದ ಎಸಿ ವೆಂಟ್‌ಗಳು, ಎಲೆಕ್ಟ್ರಿಕಲ್ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, 360 ಡಿಗ್ರಿ ಕ್ಯಾಮೆರಾ, ಆಂಬಿಯೆಂಟ್ ಲೈಟಿಂಗ್, ಇಂಟಿಗ್ರೇಟೆಡ್ ಏರ್ ಪ್ಯೂರಿಫೈಯರ್, ಇತ್ಯಾದಿಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಪಡೆಯುತ್ತದೆ. ಇನ್ನು ಇದರಲ್ಲಿ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ ಕಿಯಾ UVO ಕನೆಕ್ಟಿವಿಟಿ ಕಾರ್ ಟೆಕ್. ಇದು ಎಂಟು-ಸ್ಪೀಕರ್ ಪ್ರೀಮಿಯಂ ಬೋಸ್ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Seltos X Line

2020ರ ಆಟೋ ಎಕ್ಸ್‌ಪೋದಲ್ಲಿ ಕಿಯಾ X-Line ಕಾನ್ಸೆಪ್ಟ್ ಅನ್ನು ಪ್ರದರ್ಶಿಸಿದರು. ನಂತರ 2019ರ ಲಾಸ್ ಏಂಜಲೀಸ್ ಆಟೋ ಶೋನಲ್ಲಿ ತನ್ನ ಜಾಗತಿಕ ಪ್ರೀಮಿಯರ್ ನಲ್ಲಿ ಅನಾವರಣಗೊಳಿಸಿತು. 2021ರ ಕಿಯಾ Seltos X-Line ವೆರಿಯೆಂಟ್ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಭಾರತದಲ್ಲಿ ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Seltos X Line

ಇದರಲ್ಲಿ ಅದೇ 1.5-ಲೀಟರ್ ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ನಾಲ್ಕು-ಪಾಟ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 115 ಬಿಹೆಚ್‍ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಇನ್ನು 1.4-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಭಾರತದಲ್ಲಿ ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Seltos X Line

ಈ ಎಂಜಿನ್ 140 ಬಿಹೆಚ್‍ಪಿ ಪವರ್ ಮತ್ತು 242 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರಲ್ಲಿ ಡೀಸೆಲ್ ಎಂಜಿನ್ ನೊಂದಿಗೆ 6-ಸ್ಪೀಡ್ ಟಾರ್ಕ್ ಕರ್ನಾವಟರ್ ಹೊಂದಿದ್ದು, 1.4L ಮತ್ತು 1.5L ಪೆಟ್ರೋಲ್ ಎಂಜಿನ್ ಗಳೊಂದಿಗೆ ಕ್ರಮವಾಗಿ 7DCT ಮತ್ತು IVT ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Seltos X Line

ಇನ್ನು Kia India ಭಾರತೀಯ ಮಾರುಕಟ್ಟೆಯಲ್ಲಿ 3 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ. ಕಿಯಾ ಇಂಡಿಯಾ 3 ಲಕ್ಷ ಯೂನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ತಲುಪಿದ ಭಾರತದ ಅತಿ ವೇಗದ ಕಾರು ತಯಾರಕವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್‌ ಆಗಿರುವ ಕಿಯಾ ಸೆಲ್ಟೋಸ್ ಮತ್ತು ಸೊನೆಟ್ ಎಸ್‍ಯುವಿ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ . ಕಿಯಾ Seltos ಕಾಂಪ್ಯಾಕ್ಟ್ ಎಸ್‌ಯುವಿಯು ಅದರ ಒಟ್ಟಾರೆ ಮಾರಾಟದ ಶೇಕಡಾ 66 ರಷ್ಟಿದೆ.

ಭಾರತದಲ್ಲಿ ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Seltos X Line

ಇನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸ್ಪೋರ್ಟಿ ಲುಕ್ ಹೊಂದಿರುವ ವಾಹನಗಳು ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ. ಇದರಿಂದ ಕಿಯಾ ಕೂಡ ತನ್ನ ಜನಪ್ರಿಯ Seltos ಎಸ್‍ಯುವಿಯನ್ನು ಸ್ಪೋರ್ಟಿ ಥೀಮ್ ಎಕ್ಸ್-ಲೈನ್ ವೆರಿಯೆಂಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ವೆರಿಯೆಂಟ್ ಸೆಪ್ಟಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಈ ಕಿಯಾ Seltos X-Line ವೆರಿಯೆಂಟ್ ಕೂಡ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Friday, August 27, 2021, 18:38 [IST]
English summary
Kia unveiled new seltos x line variant india launch will be next month details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+