ಹೊಸ ಫೀಚರ್ ಪಡೆಯಲಿದೆ ಜನಪ್ರಿಯ Lamborghini Huracan

ಲ್ಯಾಂಬೊರ್ಗಿನಿ ಹುರಾಕನ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಲ್ಯಾಂಬೊರ್ಗಿನಿ ಹುರಾಕನ್ ಮಾದರಿಗಳು ತಮ್ಮ ಇನ್ಫೋಟೈನ್‌ಮೆಂಟ್ ಸಿಸ್ಟಂಗಳಲ್ಲಿ ಪ್ರಮುಖ ಬದಲಾವಣೆಯನ್ನು ಪಡೆಯಲು ಸಿದ್ಧವಾಗಿವೆ.

ಹೊಸ ಫೀಚರ್ ಪಡೆಯಲಿದೆ ಜನಪ್ರಿಯ Lamborghini Huracan

ಭವಿಷ್ಯದ ಲ್ಯಾಂಬೊರ್ಗಿನಿ ಹುರಾಕನ್ ಸ್ಪೋರ್ಟ್ಸ್‌ಕಾರ್‌ what3words ನಿಂದ ಅಭಿವೃದ್ಧಿಪಡಿಸಲಾದ ವಿಶೇಷ ನ್ಯಾವಿಗೇಷನ್ ಸಿಸ್ಟಂ ಅನ್ನು ಪಡೆದುಕೊಳುತ್ತದೆ .GPS ನಿರ್ದೇಶಾಂಕಗಳ ಆಧಾರದ ಮೇಲೆ ಸ್ಥಳಗಳನ್ನು ನಿರ್ಧರಿಸುವ ಸಾಂಪ್ರದಾಯಿಕ ನ್ಯಾವಿಗೇಷನ್ ಸಿಸ್ಟಮ್‌ಗಳಿಗಿಂತ ಭಿನ್ನವಾಗಿ, ಹೊಸ ನ್ಯಾವಿಗೇಷನ್ ಸಿಸ್ಟಂ ಭೂಮಿಯ ಮೇಲಿನ ಯಾವುದೇ ಸ್ಥಳಕ್ಕೆ ಸರಳವಾದ ಮೂರು-ಪದದ ಹೆಸರನ್ನು ಪಡೆಯುತ್ತದೆ. ತಂತ್ರಜ್ಞಾನ ಪೂರೈಕೆದಾರ ಕಂಪನಿಯು ಹೇಳಿಕೊಂಡಂತೆ, ಇದು ಪ್ರಪಂಚವನ್ನು 57 ಟ್ರಿಲಿಯನ್ 10 ಅಡಿ ಚೌಕಗಳಾಗಿ ವಿಭಜಿಸುವ ಮೂಲಕ ಮತ್ತು ಈ ಪ್ರತಿಯೊಂದು ಚೌಕಗಳಿಗೆ ಮೂರು ಪದಗಳನ್ನು ನಿಗದಿಪಡಿಸುವ ಮೂಲಕ ನ್ಯಾವಿಗೇಷನ್ ಸಿಸ್ಟಂ ಅನ್ನು ರಚಿಸಿದೆ.

ಹೊಸ ಫೀಚರ್ ಪಡೆಯಲಿದೆ ಜನಪ್ರಿಯ Lamborghini Huracan

ಮತ್ತೊಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ ಈ ನ್ಯಾವಿಗೇಷನ್ ಸಿಸ್ಟಮ್ ಅನ್ನು ಆಫ್‌ಲೈನ್‌ನಲ್ಲಿ ಬಳಸಬಹುದು ಮತ್ತು ಇದನ್ನು ಸೂಪರ್‌ಕಾರ್ ಈಗಾಗಲೇ ಬಳಸುತ್ತಿರುವ ಅಲೆಕ್ಸಾ ವಾಯ್ಸ್ ಸಹಾಯಕದೊಂದಿಗೆ ಸಂಯೋಜಿಸಬಹುದು.

ಹೊಸ ಫೀಚರ್ ಪಡೆಯಲಿದೆ ಜನಪ್ರಿಯ Lamborghini Huracan

ಲ್ಯಾಂಬೊರ್ಗಿನಿ ಕಂಪನಿಯ ಸಂಪರ್ಕ ವಿಭಾಗದ ಮುಖ್ಯಸ್ಥ ಲುಕಾ ಗಿಯಾರ್ಡಿನೊ ಮಾತನಾಡಿ, ಚಲನಶೀಲತೆಯ ಭವಿಷ್ಯವು ಅತ್ಯಾಧುನಿಕ ತಂತ್ರಜ್ಞಾನವನ್ನು ಬಯಸುತ್ತದೆ ಮತ್ತು ಅದಕ್ಕಾಗಿಯೇ ಲ್ಯಾಂಬೊರ್ಗಿನಿ ಮುಂದಿನ ವರ್ಷದ ಮಧ್ಯಭಾಗದಿಂದ ಹೊಸ ನ್ಯಾವಿಗೇಷನ್ ಸಿಸ್ಟಮ್ ಅನ್ನು ಬಳಸಲು ಪ್ರಾರಂಭಿಸುತ್ತದೆ .ಈ ನ್ಯಾವಿಗೇಷನ್ ಸಿಸ್ಟಂ ಭವಿಷ್ಯದ ಲ್ಯಾಂಬೊರ್ಗಿನಿ ಹುರಾಕನ್ ಮಾಲೀಕರಿಗೆ ಧ್ವನಿಯ ಮೂಲಕ ನ್ಯಾವಿಗೇಟ್ ಮಾಡಲು ಅತ್ಯಂತ ತಡೆರಹಿತ ಮಾರ್ಗವನ್ನು ಒದಗಿಸುತ್ತದೆ ಎಂದು ಹೇಳಿದರು.

ಹೊಸ ಫೀಚರ್ ಪಡೆಯಲಿದೆ ಜನಪ್ರಿಯ Lamborghini Huracan

ಕುತೂಹಲಕಾರಿಯಾಗಿ, ಲ್ಯಾಂಬೊರ್ಗಿನಿ ಈ ನ್ಯಾವಿಗೇಷನ್ ಸಿಸ್ಟಮ್ ಅನ್ನು ಬಳಸುವ ಏಕೈಕ ವಾಹನ ತಯಾರಕರಲ್ಲ. ಹಿಂದೆ, ಜರ್ಮನ್ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಬೆಂಝ್ 2018 ರಲ್ಲಿ ತನ್ನ ಕಾರುಗಳಲ್ಲಿ ಈ ನ್ಯಾವಿಗೇಷನ್ ಸಿಸ್ಟಮ್ ಅನ್ನು ಬಳಸಿದ ಮೊದಲ ಆಟೋ ಮೇಜರ್ ಆಗಿತ್ತು. ಈ ತಂತ್ರಜ್ಞಾನವನ್ನು ಬಳಸುವ ಇತರ ವಾಹನ ತಯಾರಕರು ಟಾಟಾ ಮೋಟಾರ್ಸ್, ಲೋಟಸ್, ಫೋರ್ಡ್ ಇತ್ಯಾದಿಗಳಿದೆ,

ಹೊಸ ಫೀಚರ್ ಪಡೆಯಲಿದೆ ಜನಪ್ರಿಯ Lamborghini Huracan

ನಿರ್ದಿಷ್ಟ ಸ್ಥಳವನ್ನು ನ್ಯಾವಿಗೇಟ್ ಮಾಡಲು ಅಲೆಕ್ಸಾ ಸಂಯೋಜನೆಯು ಬಳಕೆದಾರರಿಗೆ ಶ್ರೇಣಿಯ ಅನುಭವವನ್ನು ನೀಡುತ್ತದೆ. ಈ ನ್ಯಾವಿಗೇಷನ್ ಸಿಸ್ಟಂ ಪಡೆದ ಮೊದಲ ಲ್ಯಾಂಬೊರ್ಗಿನಿ ಸೂಪರ್‌ಕಾರ್ ಆಗಿರುವ ಹುರಾಕನ್, ಇತರ ಯಾವ ಮಾದರಿಗಳು ತಂತ್ರಜ್ಞಾನವನ್ನು ಸ್ವೀಕರಿಸುತ್ತವೆ ಎಂಬುದನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಹೊಸ ಫೀಚರ್ ಪಡೆಯಲಿದೆ ಜನಪ್ರಿಯ Lamborghini Huracan

ಲ್ಯಾಂಬೊರ್ಗಿನಿ ತನ್ನ ಹೊಸ ಹುರಾಕನ್ ಎಸ್‌ಟಿಒ ಸುಪರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಮಾದರಿಯು ಹುರಾಕನ್ ಪರ್ಫಾರ್ಮೆಂಟೆ ಮತ್ತು ಹುರಾಕನ್ ಇವೊ ಮಾದರಿಗಳಂತೆಯೇ ಒಂದೇ ರೀತಿಯ ಎಂಜಿನ್ ಅನ್ನು ಬಳಸುತ್ತದೆ. ಕಡಿಮೆ ಟಾರ್ಕ್ ಅನ್ನು ಸರಿದೂಗಿಸಲು ಹುರಾಕನ್ ಎಸ್‌ಟಿಒ ಹುರಾಕನ್ ಪರ್ಫಾರ್ಮೆಂಟೆಗಿಂತ 43 ಕಿ.ಗ್ರಾಂ ಹಗುರವಾಗಿರುತ್ತದೆ.

ಹೊಸ ಫೀಚರ್ ಪಡೆಯಲಿದೆ ಜನಪ್ರಿಯ Lamborghini Huracan

ಟ್ರ್ಯಾಕ್ ಕಾರ್ಯಕ್ಷಮತೆಗೆ ಮತ್ತಷ್ಟು ಸಹಾಯ ಮಾಡಲು, ಹುರಾಕನ್ ರೋಡೈನಾನಿಕ್ ಅನ್ನು ಮತ್ತಷ್ಟು ತಿರುಚಲಾಗಿದೆ. ಇದು ಕ್ರಮವಾಗಿ ಶೇ.37 ಮತ್ತು ಶೇ.53 ಏರೋಡೈನಾನಿಕ್ ದಕ್ಷತೆ ಮತ್ತು ಡೌನ್‌ಫೋರ್ಸ್‌ನಲ್ಲಿ ಹೆಚ್ಚಾಗುತ್ತದೆ. ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರಿನ ಬಾಡಿಯ ಶೇ.75 ರಷ್ಟು ಫೈಬರ್ ಬಳಸಿ ಮತ್ತು ಮೆಗ್ನೀಸಿಯಮ್ ವ್ಹೀಲ್ ಗಳನ್ನು ಬಳಸುವ ಮೂಲಕ 43 ಕಿ.ಗ್ರಾಂ ತೂಕ ಉಳಿತಾಯ ಮಾಡಲಾಗಿದೆ.

ಹೊಸ ಫೀಚರ್ ಪಡೆಯಲಿದೆ ಜನಪ್ರಿಯ Lamborghini Huracan

ಇದರ ಬಾನೆಟ್, ಬಂಪರ್ ಮತ್ತು ಮಡ್‌ಗಾರ್ಡ್ ಅನ್ನು ಒಂದೇ ಯುನಿಟ್ ಆಗಿ ಮಾಡುವ ಮೂಲಕ ಮತ್ತಷ್ಟು ತೂಕ ಉಳಿತಾಯ ಮಾಡಲಾಗಿದೆ. ಇನ್ನು ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರಿನಲ್ಲಿ 5.2-ಲೀಟರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 640 ಹೆಚ್‌ಪಿ ಪವರ್ ಮತ್ತು 565 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಫೀಚರ್ ಪಡೆಯಲಿದೆ ಜನಪ್ರಿಯ Lamborghini Huracan

ಹೊಸ ಕಾರು ಕೇವಲ 3 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಕೇವಲ 9 ಸೆಕೆಂಡುಗಳಲ್ಲಿ 200 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಈ ಸೂಪರ್ ಕಾರ್ 310 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದೆ.ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಸ್‌ಟಿಒ, ಟ್ರೋಫಿಯೊ ಮತ್ತು ಪಿಯೋಗಿಯಾ ಎಂಬ ಡ್ರೈವಿಂಗ್ ಮೋಡ್ ಗಳನ್ನು ಹೊಂದಿವೆ.

ಹೊಸ ಫೀಚರ್ ಪಡೆಯಲಿದೆ ಜನಪ್ರಿಯ Lamborghini Huracan

ಮುಂಭಾಗದ ವ್ಹೀಲ್‌ಹೌಸ್‌ಗಳಲ್ಲಿ ಫ್ರಂಟ್ ಸ್ಪ್ಲಿಟರ್ ಮತ್ತು ಲೌವರ್‌ಗಳು, ಎನ್‌ಎಸಿಎ ಏರ್, ಏರ್ ಸ್ಕೂಪ್ ಮತ್ತು ಇಂಟಿಗ್ರೇಟೆಡ್ ಶಾರ್ಕ್ ಫಿನ್‌ನೊಂದಿಗೆ ಹಿಂಭಾಗದ ಎಂಜಿನ್ ಬಾನೆಟ್ ಮತ್ತು ಕೈಯಾರೆ ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ವಿಂಗ್ ಅನ್ನು ಹೊಂದಿದೆ.

ಹೊಸ ಫೀಚರ್ ಪಡೆಯಲಿದೆ ಜನಪ್ರಿಯ Lamborghini Huracan

ಈ ಹುರಾಕನ್ ಎಸ್‌ಟಿಒ ಕಾರಿನ ಇಂಟಿರಿಯರ್ ನಲ್ಲಿ ಸ್ಪೋರ್ಟಿ ಬಕೆಟ್ ಸೀಟುಗಳನ್ನು ಹೊಂದಿವೆ. ಈ ಕಾರಿನಲ್ಲಿ ಕ್ಲೈಮೇಟ್ ಕಂಟ್ರೋಲ್, ದೊಡ್ಡ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಟೀಯರಿಂಗ್ ವ್ಹೀಲ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್‌ಗಳು, ಅಲ್ಯೂಮಿನಿಯಂ ಸ್ವಿಚ್ ಗಳು ಮತ್ತು ಸೆಂಟರ್ ಕನ್ಸೋಲ್ ನಲ್ಲಿ ಎಸ್‌ಟಿಒ ಬ್ಯಾಡ್ಜ್ ಅನ್ನು ಹೊಂದಿದೆ. ಕರೋನಾ ವೈರಸ್ ಆರ್ಭಟದಿಂದಾಗಿ 2021ರ ಹಣಕಾಸು ವರ್ಷದಲ್ಲಿ ಬಹುತೇಕ ಎಲ್ಲಾ ಐಷಾರಾಮಿ ಕಾರುಗಳ ಮಾರಾಟವು ತೀವ್ರವಾಗಿ ಕುಸಿದಿದೆ. ಆದರೆ ಲ್ಯಾಂಬೊರ್ಗಿನಿ ಕಾರುಗಳ ಮಾರಾಟ ಪ್ರಮಾಣವು ದ್ವಿಗುಣಗೊಂಡಿತ್ತು.

ಹೊಸ ಫೀಚರ್ ಪಡೆಯಲಿದೆ ಜನಪ್ರಿಯ Lamborghini Huracan

ಇದರಿಂದ ಲ್ಯಾಂಬೊರ್ಗಿನಿ ತಮ್ಮ ಹೊಸ ಸೂಪರ್ ಕಾರುಗಳನ್ನು ಭಾರತದಲ್ಲಿ ಇತ್ತೀಚೆಗೆ ಪರಿಚಯಿಸಲಾಗಿದೆ. ಈ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಸೂಪರ್ ಕಾರುಗಳಲ್ಲಿ ಒಂದಾಗಿದೆ. ಈ ಜನಪ್ರಿಯ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಮಾದರಿ ಕೂಡ ಇತರ ಲ್ಯಾಂಬೊರ್ಗಿನಿ ಸೂಪರ್ ಕಾರುಗಳಂತೆ ಭಾರತೀಯ ಮಾರುಕಟ್ಟೆಯ ಗ್ರಾಹಕರನ್ನು ಸೆಳೆದಿದೆ.

Most Read Articles

Kannada
English summary
Lamborghini planning to introduce new navigation system in huracan details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X