ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಮಾಡಿಫೈಗೊಂಡ ಫಾರ್ಚೂನರ್ ಲೆಜೆಂಡರ್

ಟೊಯೊಟಾ ಕಿರ್ಲೋಸ್ಕರ್ ಕಂಪನಿಯು ಇತ್ತೀಚೆಗಷ್ಟೇ ತನ್ನ ಫಾರ್ಚೂನರ್ ಎಸ್‌ಯುವಿಯ ಹೊಸ ಫೇಸ್‌ಲಿಫ್ಟ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದರ ಜೊತೆಗೆ ಕಂಪನಿಯು ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಂಬ ಹೊಸ ಟಾಪ್-ಎಂಡ್ ಮಾದರಿಯನ್ನು ಸಹ ಬಿಡುಗಡೆಗೊಳಿಸಿದೆ.

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಮಾಡಿಫೈಗೊಂಡ ಫಾರ್ಚೂನರ್ ಲೆಜೆಂಡರ್

ಈ ಮಾದರಿಯು ಸ್ಪೋರ್ಟಿಯಾಗಿ ಕಾಣುತ್ತದೆ. ಹೊಸ ಲೆಜೆಂಡರ್ ಮಾದರಿಯು ವಿಭಿನ್ನವಾದ ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್ ಶೈಲಿಯನ್ನು ಹೊಂದಿದೆ. ಈ ಮಾದರಿಯು ಸಾಮಾನ್ಯ ಮಾದರಿಗಿಂತ ಪ್ರೀಮಿಯಂ ಲುಕ್ ಅನ್ನು ಹೊಂದಿದೆ. ಟೊಯೊಟಾ ಫಾರ್ಚೂನರ್ ಅಂತರರಾಷ್ಟ್ರೀಯ ಮಟ್ಟದಲ್ಲಿರುವ ಜನಪ್ರಿಯ ಎಸ್‌ಯುವಿಯಾಗಿದೆ.

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಮಾಡಿಫೈಗೊಂಡ ಫಾರ್ಚೂನರ್ ಲೆಜೆಂಡರ್

ಟೊಯೊಟಾ ಕಂಪನಿಯ ಈ ಎಸ್‌ಯುವಿಯು ಥೈಲ್ಯಾಂಡ್ ಹಾಗೂ ಫಿಲಿಪೈನ್ಸ್‌ನಂತಹ ಮಾರುಕಟ್ಟೆಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈ ಕಾರಣದಿಂದಾಗಿ ಈ ಎಸ್‌ಯುವಿಯ ಆಫ್ಟರ್ ಮಾರ್ಕೆಟ್ ಬಿಡಿಭಾಗಗಳು ಹಾಗೂ ಬಾಡಿ ಕಿಟ್‌ಗಳು ಬೇಡಿಕೆಯನ್ನು ಹೊಂದಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಮಾಡಿಫೈಗೊಂಡ ಫಾರ್ಚೂನರ್ ಲೆಜೆಂಡರ್

ಈ ಹಿಂದೆ ಟೊಯೊಟಾ ಫಾರ್ಚೂನರ್‌ ಎಸ್‌ಯುವಿಯನ್ನು ಹಲವು ರೀತಿಯಲ್ಲಿ ಮಾಡಿಫೈ ಮಾಡಲಾಗಿದೆ. ಆದರೆ ಥೈಲ್ಯಾಂಡ್‌ನ ಆಟೋಮೊಬೈಲ್ ಡಿಸೈನ್ ವರ್ಕ್‌ಶಾಪ್ ಟೈಥಮ್ ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ಗಳನ್ನು ಬಳಸಿ ಫಾರ್ಚೂನರ್ ಲೆಜೆಂಡರ್‌ ಎಸ್‌ಯುವಿಯನ್ನು ಮಾಡಿಫೈಗೊಳಿಸಿದೆ.

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಮಾಡಿಫೈಗೊಂಡ ಫಾರ್ಚೂನರ್ ಲೆಜೆಂಡರ್

ಮಾಡಿಫೈಗೊಂಡಿರುವ ಫಾರ್ಚೂನರ್‌ ಲೆಜೆಂಡರ್ ಎಸ್‌ಯುವಿಗೆ ಸಂಬಂಧಿಸಿದ ಚಿತ್ರಗಳು ಹೊರ ಬಂದಿವೆ. ಈ ಚಿತ್ರಗಳಲ್ಲಿ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಅತ್ಯುತ್ತಮ ಬಾಡಿ ಕಿಟ್ ಹೊಂದಿರುವುದನ್ನು ಕಾಣಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಮಾಡಿಫೈಗೊಂಡ ಫಾರ್ಚೂನರ್ ಲೆಜೆಂಡರ್

ಮಾಡಿಫೈಗೊಂಡಿರುವ ಈ ಎಸ್‌ಯುವಿಯು ಹೊಸ ಮುಂಭಾಗ ಹಾಗೂ ಹಿಂಭಾಗದ ಸ್ಕರ್ಟ್'ಗಳನ್ನು ಹೊಂದಿದೆ. ಕೆಳಭಾಗದಲ್ಲಿ ಬ್ಯಾಷ್ ಫಲಕಗಳನ್ನು ಹೊಂದಿದೆ. ವರ್ಟಿಕಲ್ ಸ್ಪ್ಲಿಟ್ ಮುಂಭಾಗದ ಗ್ರಿಲ್ ಹೊಂದಿದ್ದರೂ ಅದರ ಮುಂಭಾಗದ ಬಂಪರ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಮಾಡಿಫೈಗೊಂಡ ಫಾರ್ಚೂನರ್ ಲೆಜೆಂಡರ್

ಹಿಂಭಾಗದ ಸ್ಕರ್ಟ್‌ಗೆ ಫಾಕ್ಸ್ ಕ್ವಾಡ್ ಎಕ್ಸಾಸ್ಟ್ ವಿನ್ಯಾಸವನ್ನು ನೀಡಲಾಗಿದೆ. ಈ ವಿನ್ಯಾಸವು ಅದರ ಸ್ಪೋರ್ಟಿನೆಸ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರ ಜೊತೆಗೆ ಟೊಯೊಟಾ ಬ್ಯಾಡ್ಜಿಂಗ್ ಅನ್ನು ಎಸ್‌ಯುವಿಯ ನೋಸ್ ಹಾಗೂ ಟೇಲ್‌ಗೇಟ್‌ನಲ್ಲಿ ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಮಾಡಿಫೈಗೊಂಡ ಫಾರ್ಚೂನರ್ ಲೆಜೆಂಡರ್

ಕಸ್ಟಮ್ ಆಗಿ ಕಾಣುವ ಈ ಬ್ಯಾಡ್ಜಿಂಗ್ ಅತ್ಯುತ್ತಮವಾಗಿ ಕಾಣುತ್ತದೆ. ಈ ಎಸ್‌ಯುವಿಯಲ್ಲಿ ಕಪ್ಪು ಬಣ್ಣದ ಆಫ್ಟರ್ ಮಾರ್ಕೆಟ್ ಅಲಾಯ್ ವ್ಹೀಲ್'ಗಳನ್ನು ಬಳಸಲಾಗಿದೆ. ಈ ಎಸ್‌ಯುವಿಯು ವ್ಹೀಲ್ ಆರ್ಕ್ ಮೇಲೆ ಪಿಯಾನೋ ಬ್ಲಾಕ್ ಫಿನಿಷಿಂಗ್ ಹೊಂದಿದೆ.

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಮಾಡಿಫೈಗೊಂಡ ಫಾರ್ಚೂನರ್ ಲೆಜೆಂಡರ್

ಮಾಡಿಫೈಗೊಂಡಿರುವ ಎಸ್‌ಯುವಿಯ ಎರಡೂ ಬದಿಯಲ್ಲಿರುವ ಬಾಗಿಲುಗಳ ಕೆಳಗೆ ವಿನೈಲ್‌ನಲ್ಲಿ ಎಲ್.ಕೆ. ಆಟೋಶಾಪ್ ಎಂದು ಬರೆಯಲಾಗಿದೆ. ಈ ಎಸ್‌ಯುವಿಯ ಫುಟ್ ಸ್ಟೆಪ್'ಗಳಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ ಕ್ರೋಮ್ ಡೋರ್ ಹ್ಯಾಂಡಲ್‌ಗಳಿಗೆ ಕಪ್ಪು ಬಣ್ಣವನ್ನು ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆಫ್ಟರ್ ಮಾರ್ಕೆಟ್ ಬಾಡಿ ಕಿಟ್‌ನೊಂದಿಗೆ ಮಾಡಿಫೈಗೊಂಡ ಫಾರ್ಚೂನರ್ ಲೆಜೆಂಡರ್

ಹಿಂಭಾಗದ ಕ್ವಾರ್ಟರ್ ಪ್ಯಾನೆಲ್'ನಲ್ಲಿ ಆಕರ್ಷಕವಾದ ವಿನೈಲ್ ನೀಡಲಾಗಿದೆ. ಈ ಎಸ್‌ಯುವಿಯ ಸ್ಟಾಕ್ ರೂಫ್ ಮೌಂಟೆಡ್ ಸ್ಪಾಯ್ಲರ್ ಮೇಲೆ ಕಸ್ಟಮ್ ಸ್ಪಾಯ್ಲರ್ ನೀಡಲಾಗಿದೆ. ಹೊಸ ಬಾಡಿ ಕಿಟ್‌ನಿಂದಾಗಿ ಈ ಎಸ್‌ಯುವಿಯ ಅಪ್ರೋಚ್ ಹಾಗೂ ಡಿಪಾರ್ಚರ್ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಆಫ್-ರೋಡ್'ನಲ್ಲಿ ತೊಂದರೆಯಾಗಲಿದೆ.

More from DriveSpark

Article Published On: Thursday, January 14, 2021, 20:14 [IST]
English summary
Legender SUV modified with after market body kit. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+