ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ಬೆಂಗಳೂರು ಮೂಲದ ಟೆಕ್ ಲಾಜಿಸ್ಟಿಕ್ಸ್ ಕಂಪನಿಯಾದ LetsTransport, 12 ನಗರಗಳಲ್ಲಿ ತನ್ನ 1,000 ಎಲೆಕ್ಟ್ರಿಕ್ ವಾಹನಗಳಿಗೆ ಪಾರ್ಕಿಂಗ್ ಹಾಗೂ ಚಾರ್ಜಿಂಗ್ ಮೂಲಸೌಕರ್ಯ ಒದಗಿಸುವ ಸಲುವಾಗಿ ಭಾರತದ ಪ್ರಮುಖ ಇವಿ ಚಾರ್ಜಿಂಗ್ ಸೌಲಭ್ಯ ಪೂರೈಕೆದಾರ ಕಂಪನಿಯಾದ EVRE ಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಪಾಲುದಾರಿಕೆಯ ಅಡಿಯಲ್ಲಿ EVRE ಮುಂದಿನ ಆರು ತಿಂಗಳೊಳಗೆ ಭಾರತದಾದ್ಯಂತ 1,000 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ಈ ಚಾರ್ಜಿಂಗ್ ಕೇಂದ್ರಗಳನ್ನು LetsTransport ಹಾಗೂ ಇತರ ಇವಿ ಫ್ಲೀಟ್ ಮಾಲೀಕರು ಬಳಸಬಹುದು. LetsTransport ಕಂಪನಿಯು ದೇಶಾದ್ಯಂತ 1,00,000 ವಾಹನಗಳ ಸಕ್ರಿಯ ಫ್ಲೀಟ್ ಅನ್ನು ಹೊಂದಿದ್ದು, 100% ನಷ್ಟು ಎಲೆಕ್ಟ್ರಿಕ್ ಫ್ಲೀಟ್ ಅನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ವೆಚ್ಚವನ್ನು ಕಡಿಮೆ ಮಾಡಲು ಲೆಟ್ಸ್‌ಟ್ರಾನ್ಸ್‌ಪೋರ್ಟ್ ಕಂಪನಿಯು ಕಳೆದ ತಿಂಗಳಷ್ಟೇ 1,000 ಎಲೆಕ್ಟ್ರಿಕ್ ವಾಹನಗನ್ನು ತನ್ನ ಫ್ಲೀಟ್‌ನಲ್ಲಿ ಸೇರ್ಪಡೆಗೊಳಿಸಿತು.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ಕಂಪನಿಯು ತನ್ನ ಲಾಸ್ಟ್ ಮೈಲ್ ಲಾಜಿಸ್ಟಿಕ್ಸ್ ಸೇವೆಗಳಿಗಾಗಿ ಬಲವಾದ ಇವಿ ಫ್ಲೀಟ್ ಅನ್ನು ನಿರ್ಮಿಸಲು ಹಲವಾರು ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಇನ್ನು EVRE ಕಂಪನಿಯು ದೇಶದ 12 ನಗರಗಳಲ್ಲಿ ಲೆಟ್‌ಟ್ರಾನ್ಸ್‌ಪೋರ್ಟ್‌ನ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯಗಳನ್ನು ಒದಗಿಸಲು ಚಾರ್ಜಿಂಗ್ ಮೂಲಸೌಕರ್ಯವನ್ನು ನಿರ್ಮಿಸಿ, ನಿರ್ವಹಿಸಲಿದೆ.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

EVRE ಈಗ ಅಸ್ತಿತ್ವದಲ್ಲಿರುವ ಚಾರ್ಜರ್‌ಗಳಿಗೆ, ಭವಿಷ್ಯದಲ್ಲಿ ಬರುವ ಎಲ್ಲಾ ಚಾರ್ಜರ್‌ಗಳಿಗಾಗಿ ತಂತ್ರಜ್ಞಾನವನ್ನು ಹೊಂದಿದೆ. ಎಲೆಕ್ಟ್ರಿಕ್ ವಾಹನಗಳ ಅಗತ್ಯತೆಗಳ ಆಧಾರದ ಮೇಲೆ, EVRE ಚಾರ್ಜಿಂಗ್ ಕೇಂದ್ರಗಳನ್ನು ಎಲ್ಲಿ ಸ್ಥಾಪಿಸಬೇಕು ಎಂಬುದನ್ನು ನಿರ್ಣಯಿಸಲು LetsTransport ನೆರವಾಗಲಿದೆ. EVRE 12 ನಗರಗಳಲ್ಲಿ ಈ ಇವಿ ಫ್ಲೀಟ್ ಅನ್ನು ನಿಲುಗಡೆ ಮಾಡಲು ಹಾಗೂ ಚಾರ್ಜ್ ಮಾಡಲು ಸ್ಥಳವನ್ನು ಸಹ ಒದಗಿಸಲಿದೆ.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ಈ ಪಾಲುದಾರಿಕೆಯ ಬಗ್ಗೆ ಮಾತನಾಡಿದ, ಲೆಟ್ಸ್‌ಟ್ರಾನ್ಸ್‌ಪೋರ್ಟ್‌ನ ಸಿಇಒ ಹಾಗೂ ಸಹ ಸಂಸ್ಥಾಪಕರಾದ ಪುಷ್ಕರ್ ಸಿಂಗ್, ಲೆಟ್ಸ್‌ಟ್ರಾನ್ಸ್‌ಪೋರ್ಟ್‌ನಲ್ಲಿ ನಾವು ಯಾವಾಗಲೂ ಸುಸ್ಥಿರ ಬೆಳವಣಿಗೆಯ ಮಾದರಿ ರಚಿಸುವುದನ್ನು ನಂಬಿದ್ದೇವೆ. ನಾವು ನಮ್ಮ ಗ್ರಾಹಕರೊಂದಿಗೆ ಕಳೆದ ಒಂದು ವರ್ಷದಿಂದ ದೇಶಾದ್ಯಂತ ಇವಿ ಪೈಲಟ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ಎಲೆಕ್ಟ್ರಿಕ್ ವಾಹನಗಳು ಭವಿಷ್ಯದಲ್ಲಿ ನಗರ ಸರಕು ಸಾಗಣೆಯ ವಿಶೇಷವಾಗಿ ಲಾಸ್ಟ್ ಮೈಲ್ ಮೊಬಿಲಿಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾವು ನಂಬುತ್ತೇವೆ. ಉದ್ಯಮದಲ್ಲಿ ಇವಿ ಅಳವಡಿಕೆಯ ಸವಾಲನ್ನು ಎದುರಿಸಲು EVRE ನೊಂದಿಗೆ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದರು.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ಈ ಸಹಭಾಗಿತ್ವದ ಕುರಿತು ಪ್ರತಿಕ್ರಿಯೆ ನೀಡಿದ ಇವಿಆರ್‌ಇಯ ಸಹ ಸಂಸ್ಥಾಪಕ ಹಾಗೂ ಸಿಇಒ ಕೃಷ್ಣ ಕೆ ಜಸ್ತಿ, ದೊಡ್ಡ ಇವಿ ಫ್ಲೀಟ್‌ಗೆ ಚಾರ್ಜಿಂಗ್ ಸೌಲಭ್ಯಗಳನ್ನು ಒದಗಿಸುವಲ್ಲಿ ಇವಿಆರ್‌ಇ ಯಾವಾಗಲೂ ಮುಂಚೂಣಿಯಲ್ಲಿದೆ. ನಾವು ದೇಶದಲ್ಲಿ ಹಬ್ ಮಾಡೆಲ್‌ಗಳಿಂದ 650 ಕ್ಕೂ ಹೆಚ್ಚು ಸಾರ್ವಜನಿಕ ಇವಿ ಚಾರ್ಜಿಂಗ್ ಹೊಂದಿದ್ದೇವೆ. ನಾವು ಯಾವುದೇ ಇವಿ ಫ್ಲೀಟ್ ಮಾಲೀಕರಿಗೆ ನಮ್ಮ ಅತ್ಯುತ್ತಮ ಚಾರ್ಜಿಂಗ್ ಮೂಲಸೌಕರ್ಯವನ್ನು ಒದಗಿಸುತ್ತೇವೆ.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ಅವರ ಕಾರ್ಬನ್ ಡೈ ಆಕ್ಸೈಡ್ ಹೊರ ಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತೇವೆ. ನಾವು ಪ್ರತಿಯೊಬ್ಬ ಗ್ರಾಹಕರನ್ನು ಪರಸ್ಪರ ಬೆಂಬಲಿಸುವ ಮೂಲಕ LetsTransport ನೊಂದಿಗೆ ಪಾಲುದಾರರಾಗಲು ಹೆಮ್ಮೆ ಪಡುತ್ತೇವೆ ಎಂದು ಹೇಳಿದರು. EVRE ಬೆಂಗಳೂರಿನಲ್ಲಿ 200, ದೆಹಲಿಯಲ್ಲಿ 200 ಹಾಗೂ ಉಳಿದ 600 ಚಾರ್ಜಿಂಗ್ ಕೇಂದ್ರಗಳನ್ನು 2022 ರ ಅಂತ್ಯದ ವೇಳೆಗೆ ಹಂತ ಹಂತವಾಗಿ ಸ್ಥಾಪಿಸಲಿದೆ. ಈ ನಗರಗಳಲ್ಲದೆ, ಚೆನ್ನೈ, ಪುಣೆ ಹಾಗೂ ಹೈದರಾಬಾದ್‌ ನಗರಗಳಲ್ಲಿಯೂ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ವಿಶ್ವಾದ್ಯಂತ ದಿನೇ ದಿನೇ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಪರಿಸರ ಸ್ನೇಹಿಯಾಗಿರುವ ಹಿನ್ನೆಲೆಯಲ್ಲಿ ಹಲವಾರು ದೇಶಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿವೆ. ನಾರ್ವೆ ಸೇರಿದಂತೆ ಯುರೋಪಿನ ಹಲವು ದೇಶಗಳಲ್ಲಿ 2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಭಾರತದಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಫೇಮ್ 2ನಂತಹ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತದೆ.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮುಂದಾಗಿವೆ. ವಾಹನ ತಯಾರಕ ಕಂಪನಿಗಳು ಮಾತ್ರವಲ್ಲದೇ ಸೆಲ್ ಫೋನ್ ತಯಾರಕ ಕಂಪನಿಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಮುಂದಾಗಿವೆ.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ಕೆಲವು ತಿಂಗಳ ಹಿಂದಷ್ಟೇ Lenovo ಕಂಪನಿಯು ತನ್ನ ಸ್ಕೂಟರ್ ಮಾದರಿಯ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆಗೊಳಿಸಿತ್ತು. ಲೆನೊವೊ, ಆಪಲ್, ಹುವೈ ನಂತಹ ಮೊಬೈಲ್ ಫೋನ್ ತಯಾರಕ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ತೊಡಗಿವೆ. ಗೂಗಲ್ ಹಾಗೂ ಅಮೆಜಾನ್ ನಂತಹ ಕಂಪನಿಗಳು ಸ್ವಯಂಚಾಲಿತ ವಾಹನಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ನಿರತವಾಗಿವೆ.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ಈ ಸಾಲಿಗೆ ಶಿಯೋಮಿ ಕಂಪನಿಯ ಜೊತೆಗೆ ರಿಯಲ್ ಮೀ ಹೊಸ ಸೇರ್ಪಡೆಯಾಗಿದೆ. ರಿಯಲ್ ಮೀ ಕಂಪನಿಯ ಸೆಲ್ ಫೋನ್'ಗಳು ಮೊಬೈಲ್ ಮಾರುಕಟ್ಟೆಯಲ್ಲಿ ತಮ್ಮದೇ ಆದ ಪ್ರಾಬಲ್ಯವನ್ನು ಸಾಧಿಸಿವೆ. ಕಂಪನಿಯ ಮೊಬೈಲ್ ಗಳು ಭಾರತದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ ಎಂಬುದು ಗಮನಾರ್ಹ.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ಕಂಪನಿಯು ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿಯೂ ತನ್ನ ಅಧಿಪತ್ಯವನ್ನು ಸ್ಥಾಪಿಸುವ ನಿರೀಕ್ಷೆಗಳಿವೆ. ರಿಯಲ್ ಮೀ ಕಂಪನಿಯು ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ ಗಳಿರುವ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡುತ್ತದೆ. ಇದೇ ರೀತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಬಹುದು ಎಂಬುದು ವಾಹನ ಪ್ರಿಯರ ನಿರೀಕ್ಷೆ.

ಇವಿ ಚಾರ್ಜಿಂಗ್ ಕೇಂದ್ರ ತೆರೆಯಲು EVRE ಜೊತೆಗೆ ಕೈಜೋಡಿಸಿದ LetsTransport

ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ. ವಾಹನ ಸವಾರರ ನಾಡಿ ಮಿಡಿತವನ್ನು ಅರಿತಿರುವ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಗೆ ಆದ್ಯತೆ ನೀಡುತ್ತಿವೆ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Letstransport partners with evre to setup charging infrastructure details
Story first published: Friday, November 26, 2021, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X