ಆತ್ಮನಿರ್ಭರ ಭಾರತ: ಮೇಡ್ ಇನ್ ಇಂಡಿಯಾ ಹೊಸ ಐ20 ಕಾರಿನ ರಫ್ತು ಆರಂಭಿಸಿದ ಹ್ಯುಂಡೈ

ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್(ಎಚ್‌ಎಂಐಎಲ್) ತನ್ನ ನ್ಯೂ ಜನರೇಷನ್ ಐ20 ಪ್ರೀಮಿಯಂ ಕಾರನ್ನು ವಿದೇಶಕ್ಕೆ ರಫ್ತು ಮಾಡಲು ಪ್ರಾರಂಭಿಸಿದೆ. ಈ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.

ಆತ್ಮನಿರ್ಭರ ಭಾರತ: ಮೇಡ್ ಇನ್ ಇಂಡಿಯಾ ಹೊಸ ಐ20 ಕಾರಿನ ರಫ್ತು ಆರಂಭಿಸಿದ ಹ್ಯುಂಡೈ

ಹ್ಯುಂಡೈ ಇಂಡಿಯಾ ದೇಶದ ಅತಿ ಹೆಚ್ಚು ಪ್ರಯಾಣಿಕ ಕಾರುಗಳ ರಫ್ತುದಾರ ಮತ್ತು 'ಆತ್ಮನಿರ್ಭಾರ ಭಾರತ್'ಗೆ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಹೊಸ ಐ20 ಕಾರಿನ ಮೊದಲ ಬ್ಯಾಚ್ 180 ಕಾರುಗಳನ್ನು ಹೊಂದಿದ್ದು, ಇದನ್ನು ದಕ್ಷಿಣ ಆಫ್ರಿಕಾ, ಚಿಲಿ ಮತ್ತು ಪೆರುವಿಗೆ ರಫ್ತು ಮಾಡಲಾಗುವುದು. ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಭಾರತದಲ್ಲಿ ತಯಾರಿಸಿದ ಕಾರುಗಳನ್ನು ಐದು ಖಂಡಗಳಾದ್ಯಂತ 88 ದೇಶಗಳಿಗೆ ರಫ್ತು ಮಾಡುತ್ತದೆ.

ಆತ್ಮನಿರ್ಭರ ಭಾರತ: ಮೇಡ್ ಇನ್ ಇಂಡಿಯಾ ಹೊಸ ಐ20 ಕಾರಿನ ರಫ್ತು ಆರಂಭಿಸಿದ ಹ್ಯುಂಡೈ

ಇನ್ನು ನ್ಯೂ ಜನರೇಷನ್ ಹ್ಯುಂಡೈ ಐ20 ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಐ20 ಹೆಚ್ಚು ಸ್ಪೋರ್ಟಿ ಮತ್ತು ಬೋಲ್ಡ್ ಲುಕ್ ಅನ್ನು ಹೊಂದಿದೆ. ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಹ್ಯುಂಡೈ ಐ20 ಗ್ರಾಹಕರನ್ನು ತನ್ನತ ಸೆಳೆಯುವಂತಹ ಆಕರ್ಷಕ ಲುಕ್ ಮತ್ತು ಸ್ಟೈಲಿಶ್ ನಿಂದ ಹೆಚ್ಚು ಜನಪ್ರಿಯವಾಗಿದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಆತ್ಮನಿರ್ಭರ ಭಾರತ: ಮೇಡ್ ಇನ್ ಇಂಡಿಯಾ ಹೊಸ ಐ20 ಕಾರಿನ ರಫ್ತು ಆರಂಭಿಸಿದ ಹ್ಯುಂಡೈ

ಇನ್ನು ಈ ಹೊಸ ಹ್ಯುಂಡೈ ಐ20 ಕಾರಿನ ಮುಂಭಾಗದಲ್ಲಿರು ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ. ಹಿಂದಿನ ಐ20 ಮಾದರಿಗೆ ಹೋಲಿಸಿದರೆ ಹೆಡ್ ಲ್ಯಾಂಪ್ ಮತ್ತು ಸೈಡ್ ಫ್ರೋಪೈಲ್ ವಿನ್ಯಾಸವನ್ನು ನವೀಕರಿಸಲಾಗಿದೆ ದೊಡ್ಡ ಕ್ರೀಸ್ ಲೈನ್ ಗಳನ್ನು ಒಳಗೊಂಡಿದೆ.

ಆತ್ಮನಿರ್ಭರ ಭಾರತ: ಮೇಡ್ ಇನ್ ಇಂಡಿಯಾ ಹೊಸ ಐ20 ಕಾರಿನ ರಫ್ತು ಆರಂಭಿಸಿದ ಹ್ಯುಂಡೈ

ಹೊಸ ಹುಂಡೈ ಐ20 ಕಾರಿನ ಪಿಲ್ಲರ್‍‍ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ವಿಡಬ್ಲ್ಯೂ ಟೈಗನ್‍‍‍ನಲ್ಲಿ ಇರುವಂತಹ ಕೆಂಪು ಇ‍ಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಇ‍ಲ್‍ಇಡಿ ಟೇಲ್‍‍ಲೈಟ್ ಹೊಂದಿದೆ. ಇನ್ನು ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍‍ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಆತ್ಮನಿರ್ಭರ ಭಾರತ: ಮೇಡ್ ಇನ್ ಇಂಡಿಯಾ ಹೊಸ ಐ20 ಕಾರಿನ ರಫ್ತು ಆರಂಭಿಸಿದ ಹ್ಯುಂಡೈ

ಹೊಸ ಹ್ಯುಂಡೈ ಐ20 ಕಾರು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 83 ಬಿಹೆಚ್‌ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆತ್ಮನಿರ್ಭರ ಭಾರತ: ಮೇಡ್ ಇನ್ ಇಂಡಿಯಾ ಹೊಸ ಐ20 ಕಾರಿನ ರಫ್ತು ಆರಂಭಿಸಿದ ಹ್ಯುಂಡೈ

ಇದರೊಂದಿಗೆ 1.0ಎಲ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5ಎಲ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯು ಕೂಡ ಲಭ್ಯವಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಆತ್ಮನಿರ್ಭರ ಭಾರತ: ಮೇಡ್ ಇನ್ ಇಂಡಿಯಾ ಹೊಸ ಐ20 ಕಾರಿನ ರಫ್ತು ಆರಂಭಿಸಿದ ಹ್ಯುಂಡೈ

ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ತಲೆಮಾರಿನ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಾಗಿ 35,000 ಬುಕ್ಕಿಂಗ್ ಅನ್ನು ಸ್ವೀಕರಿಸಿದೆ. ಹೊಸ ಹ್ಯುಂಡೈ ಐ20 ಕಾರು ದಾಖಲೆಯ ಮಟ್ಟದ ಬುಕ್ಕಿಂಗ್ ಅನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆತ್ಮನಿರ್ಭರ ಭಾರತ: ಮೇಡ್ ಇನ್ ಇಂಡಿಯಾ ಹೊಸ ಐ20 ಕಾರಿನ ರಫ್ತು ಆರಂಭಿಸಿದ ಹ್ಯುಂಡೈ

ಈ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಹೊಸ ಸಂಚಲವನ್ನು ಮೂಡಿಸಿದೆ. ನವೆಂಬರ್ 5 ರಂದು ಬಿಡುಗಡೆಯಾಗುವ ವೇಳೆ 10,000 ಪ್ರಿ-ಬುಕ್ಕಿಂಗ್ ಪಡೆದುಕೊಂಡಿತ್ತು. ಹೀಗೆ ಕೇವಲ 20 ದಿನಗಳಲ್ಲಿ 20,000 ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿತ್ತು. ಇದೀಗ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು ಬುಕ್ಕಿಂಗ್ ನಲ್ಲಿ 35,000 ಗಡಿ ತಲುಪಿದೆ.

ಆತ್ಮನಿರ್ಭರ ಭಾರತ: ಮೇಡ್ ಇನ್ ಇಂಡಿಯಾ ಹೊಸ ಐ20 ಕಾರಿನ ರಫ್ತು ಆರಂಭಿಸಿದ ಹ್ಯುಂಡೈ

ಹೊಸ ಹ್ಯುಂಡೈ ಕಾರು ಅತ್ಯಾಧುನಿಕ ಫೀಚರ್, ಆಕರ್ಷಕ ವಿನ್ಯಾಸ ಮತ್ತು ಪವರ್ ಫುಲ್ ಎಂಜಿನ್ ಅನ್ನು ಹೊಂದಿದೆ. ಈ ಎಲ್ಲಾ ಕಾರಣದಿಂದ ಈ ಹೊಸ ಹ್ಯುಂಡೈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆದುಕೊಂಡಿದೆ.

More from DriveSpark

Article Published On: Monday, January 4, 2021, 18:48 [IST]
English summary
Made-In-India New Hyundai i20 Export Begins. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+