ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಮೇಡ್ ಇನ್ ಇಂಡಿಯಾ Suzuki Baleno

ಇತ್ತೀಚೆಗೆ ಮೇಡ್-ಇನ್-ಇಂಡಿಯಾ ಸುಜುಕಿ ಸ್ವಿಫ್ಟ್ ಲ್ಯಾಟಿನ್ NCAP ಕ್ರ್ಯಾಶ್-ಟೆಸ್ಟ್ ನಲ್ಲಿ ಶೂನ್ಯ-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿತ್ತು. ಇದೀಗ ಲ್ಯಾಟಿನ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಅಥವಾ ಲ್ಯಾಟಿನ್ ಎನ್‌ಸಿಎಪಿ ಮೇಡ್-ಇನ್-ಇಂಡಿಯಾ ಸುಜುಕಿ ಬಲೆನೊ ಕಾರನ್ನು ಕೂಡ ಟೆಸ್ಟ್ ಮಾಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಮೇಡ್ ಇನ್ ಇಂಡಿಯಾ Suzuki Baleno

ಮೇಡ್-ಇನ್-ಇಂಡಿಯಾ ಸುಜುಕಿ ಬಲೆನೊ ಕಾರು ಕೂಡ ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ. ಸುಜುಕಿ ಬಲೆನೊವನ್ನು ಸುಜುಕಿಯ ಗುಜರಾತ್ ಮೂಲದ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಪರೀಕ್ಷಿಸಿದ ಮಾದರಿಯು ಎರಡು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್‌ನಂತೆ ಹೊಂದಿತ್ತು. ಇದು ವಯಸ್ಕ ಪ್ರಯಾಣಿಕರ ವಿಭಾಗದಲ್ಲಿ ಶೇ.20.03 ರಷ್ಟು ಮತ್ತು ಮಕ್ಕಳ ವಿಭಾಗದಲ್ಲಿ ಶೇ. 17.06 ರಷ್ಟು ಅಂಕವನ್ನು ಗಳಿಸಿದೆ. ಪಾದಚಾರಿ ರಕ್ಷಣೆ ಮತ್ತು ದುರ್ಬಲ ರಸ್ತೆ ಬಳಕೆಯಲ್ಲಿ ಶೇ.64.06 ಹಾಗೂ ಸುರಕ್ಷತೆ ಸಹಾಯದ ವೈಶಿಷ್ಟ್ಯಗಳಿಗೆಬಂದಾಗ, ಸ್ಕೋರ್ ನಿರಾಶಾದಾಯಕ ಶೇಕಡಾ 6.98 ಕ್ಕೆ ಕುಸಿಯಿತು.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಮೇಡ್ ಇನ್ ಇಂಡಿಯಾ Suzuki Baleno

ಶೂನ್ಯ-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಸುಜುಕಿ ಬಲೆನೊ ಕಳಪೆ ಅಡ್ಡ ಪರಿಣಾಮದ ರಕ್ಷಣೆ, ಹಿಂಬದಿಯ ಪರಿಣಾಮ ಪರೀಕ್ಷೆಗೆ UN32 ಪುರಾವೆಯ ಕೊರತೆಯಿಂದಾಗಿ ಕಡಿಮೆ ವಿಪ್ಲ್ಯಾಶ್ ಸ್ಕೋರ್, ಗುಣಮಟ್ಟದ ಸೈಡ್ ಹೆಡ್ ಪ್ರೊಟೆಕ್ಷನ್ ಏರ್‌ಬ್ಯಾಗ್‌ಗಳ ಕೊರತೆ, ಸ್ಟ್ಯಾಂಡರ್ಡ್ ESC ಕೊರತೆ ಮತ್ತು ಮಕ್ಕಳ ಪರೀಕ್ಷೆಗಾಗಿ ಚೈಲ್ಡ್ ರೆಸ್ಟಂಟ್ ಸಿಸ್ಟಂ(CRS) ಹೊಂದಿಲ್ಲ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಮೇಡ್ ಇನ್ ಇಂಡಿಯಾ Suzuki Baleno

ಯುರೋಪಿಯನ್-ಸ್ಪೆಕ್ ಸುಜುಕಿ ಬಾಲೆನೊ 6 ಏರ್‌ಬ್ಯಾಗ್‌ಗಳನ್ನು ಮತ್ತು ESC ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿತ್ತು, ಲ್ಯಾಟಿನ್ ಅಮೇರಿಕನ್ ಮಾಡೆಲ್ ಸೈಡ್ ಬಾಡಿ ಮತ್ತು ಸೈಡ್ ಹೆಡ್ ಏರ್‌ಬ್ಯಾಗ್‌ಗಳನ್ನು ಮತ್ತು ESC ಅನ್ನು ಸ್ಟ್ಯಾಂಡರ್ಡ್ ಅನ್ನು ಕಳೆದುಕೊಳ್ಳುತ್ತದೆ. ಸುಜುಕಿ ತನ್ನ ಕಾರ್ಯಕ್ಷಮತೆಯನ್ನು ತೋರಿಸಲು ಆಯ್ಕೆಯ ಸಲಕರಣೆಗಳನ್ನು ಪರೀಕ್ಷಿಸಲು ನಿರಾಕರಿಸಿತು, ಇದು ಆ ಹೆಚ್ಚುವರಿ ಸುರಕ್ಷತಾ ಅಂಶಗಳ ಪರಿಣಾಮಕಾರಿತ್ವದ ಪ್ರಶ್ನೆ ಸೃಷ್ಟಿಯಾಗುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಮೇಡ್ ಇನ್ ಇಂಡಿಯಾ Suzuki Baleno

ಸುಜುಕಿ ಬಲೆನೊವನ್ನು ಮುಂಭಾಗದ ಪರಿಣಾಮ ಮತ್ತು ಅಡ್ಡ ಪರಿಣಾಮ, ವಿಪ್ಯಾಸ್ ಮತ್ತು ಪಾದಚಾರಿ ರಕ್ಷಣೆಯಲ್ಲಿ ಪರೀಕ್ಷಿಸಲಾಯಿತು. ಮುಂಭಾಗದ ಪ್ರಭಾವದಲ್ಲಿ, ಬಲೆನೊ ಸ್ಥಿರವಾದ ರಚನೆಯ ಕಾರ್ಯಕ್ಷಮತೆಯನ್ನು ತೋರಿಸಿದೆ. ಸೈಡ್ ಇಂಪ್ಯಾಕ್ಟ್ ಪರೀಕ್ಷೆಯ ಸಮಯದಲ್ಲಿ ವಯಸ್ಕ ಪ್ರಯಾಣಿಕನ ಎದೆಗೆ ಕಳಪೆ ರಕ್ಷಣೆಯನ್ನು ತೋರಿಸಿದೆ. ವಿಪ್ಯಾಸ್ ಪರೀಕ್ಷೆಯು ಕನಿಷ್ಠ ಕುತ್ತಿಗೆ ರಕ್ಷಣೆಯನ್ನು ತೋರಿಸಿದೆ. ಪಾದಚಾರಿ ರಕ್ಷಣೆಯ ಕಾರ್ಯಕ್ಷಮತೆಯು ಸಮಂಜಸವಾದ ಮಟ್ಟವನ್ನು ಹೊಂದಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಮೇಡ್ ಇನ್ ಇಂಡಿಯಾ Suzuki Baleno

ಲ್ಯಾಟಿನ್ ಎನ್‌ಸಿಎಪಿಯ ಪ್ರಧಾನ ಕಾರ್ಯದರ್ಶಿ ಅಲೆಜಾಂಡ್ರೊ ಫುರಾಸ್ ಮಾತನಾಡಿ, ಕೆಕೆಲವು ವಾರಗಳ ಹಿಂದೆ ಸ್ವಿಫ್ಟ್‌ನ ಶೂನ್ಯ ಸ್ಟಾರ್ ರೇಟಿಂಗ್ ನಂತರ ಬಲೆನೊದ ಶೂನ್ಯ ಸ್ಟಾರ್ ರೇಟಿಂಗ್ ಪಡೆದಿರುವುದು ನಿರಾಶೆಯ ಭಾಗವಾಗಿದೆ. ಲ್ಯಾಟಿನ್ ಅಮೇರಿಕನ್ ಗ್ರಾಹಕರಿಗೆ ಸುಜುಕಿಯಿಂದ ವಯಸ್ಕ ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ ವಿಶೇಷವಾಗಿ ಕಳಪೆ ಸುರಕ್ಷತಾ ಕಾರ್ಯಕ್ಷಮತೆ ಹೊಂದಿದೆ ಎಂದರು.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಮೇಡ್ ಇನ್ ಇಂಡಿಯಾ Suzuki Baleno

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಮಾರುತಿ ಸುಜುಕಿ ಬಲೆನೊ ಬಗ್ಗೆ ಹೇಳುವುದಾದರೆ, ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ಈ ವಿಭಾಗದಲ್ಲಿ ಹ್ಯುಂಡೈ ಐ20, ಟಾಟಾ ಆಲ್ಟ್ರೊಜ್, ಹೋಂಡಾ ಜಾಝ್, ಫೋಕ್ಸ್‌ವ್ಯಾಗನ್ ಪೊಲೊ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಮೇಡ್ ಇನ್ ಇಂಡಿಯಾ Suzuki Baleno

ಮಾರುತಿ ಸುಜುಕಿ 2015 ರಲ್ಲಿ ಬಿಡುಗಡೆಯಾದಗಿನಿಂದ ತಯಾರಕರು ಹ್ಯಾಚ್‌ಬ್ಯಾಕ್‌ನಲ್ಲಿ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಬಿಎಸ್ 6 ಮಾಲಿನ್ಯ ನಿಮಕ್ಕೆ ಅನುಗುಣವಾಗಿ ನವೀಕರಣಗೊಂಡ ಮೊದಲ ಹ್ಯಾಚ್‌ಬ್ಯಾಕ್ ಬಲೆನೊ ಆಗಿದೆ.ಈ ಸಂದರ್ಭದಲ್ಲಿ ಬಲೆನೊ ಕಾರಿನಲ್ಲಿ ಕೆಲವು ಕಾಸ್ಮೆಟಿಕ್ ಬದಲಾವೆಣೆಗಳನ್ನು ಮಾಡಲಾಗಿತ್ತು.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಮೇಡ್ ಇನ್ ಇಂಡಿಯಾ Suzuki Baleno

ಇದೀಗ ದೊಡ್ಡ ಲೋವರ್ ಗ್ರಿಲ್‌ನೊಂದಿಗೆ ಪರಿಷ್ಕೃತ ಮುಂಭಾಗದ ಬಂಪರ್ ಅನ್ನು ಪಡೆಯುತ್ತದೆ. ಮುಂಭಾಗದ ಗ್ರಿಲ್‌ನಲ್ಲಿನ ವಿನ್ಯಾಸವು ಬಿಎಸ್ 4 ಮಾದರಿಯಿಂದ ಭಿನ್ನವಾಗಿದೆ.ಬಲೆನೊ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು (ಟಾಪ್-ಎಂಡ್ ಟ್ರಿಮ್‌ನೊಂದಿಗೆ ಲಭ್ಯವಿದೆ)ಮತ್ತು ಬಲೆನೊದಲ್ಲಿನ ಇತರ ಪೀಚರ್ ಗಳನ್ನು ಒಳಗೊಂಡಿದ್ದಾರೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಮೇಡ್ ಇನ್ ಇಂಡಿಯಾ Suzuki Baleno

ಇನ್ನು ಬಲೆನೊ ಕಾರಿನ ಸೈಡ್ ಪ್ರೊಫೈಲ್‌ಗೆ ಬರುತ್ತಿರುವಾಗ ಡೋರುಗಳ ಹ್ಯಾಂಡಲ್‌ಗಳಲ್ಲಿ ಕ್ರೋಮ್ ಅಲಂಕರಿಸಲು ಕಂಡುಬರುತ್ತದೆ ಮತ್ತು ಇದು ಸ್ಪೋರ್ಟಿ ಆಗಿ ಕಾಣುವ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಸಹ ಪಡೆಯುತ್ತದೆ.ಅದರೆ ಮಾರುತಿ ಬಲೆನೊ ಕಾರಿನ ಬಹಳ ವಿಶಾಲವಾದ ಕ್ಯಾಬಿನ್ ಒಳಗೊಂಡಿದೆ. ಇದು ಫ್ಯಾಬ್ರಿಕ್ ಸೀಟುಗಳನ್ನು ಪಡೆಯುತ್ತದೆ ಮತ್ತು ಅಪ್ಹೋಲ್ಸ್ಟರಿ ಬ್ಲೂ ಮತ್ತು ಬ್ಲ್ಯಾಕ್ ಥೀಮ್ ಅನ್ನು ಪಡೆಯುತ್ತದೆ. ಇದರಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ನೀಡಲಾಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಮೇಡ್ ಇನ್ ಇಂಡಿಯಾ Suzuki Baleno

ಇನ್ನು ಇದರಲ್ಲಿ ಮಧ್ಯದಲ್ಲಿ ಡಿಜಿಟಲ್ ಎಂಐಡಿಯೊಂದಿಗೆ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ. ಇದರೊಂದಿಗೆ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ಕ್ಲೈಮೇಟ್ ಕಂಟ್ರೋಲ್ ನಂತರಹ ಫೀಚರ್ ಗಳನ್ನು ಕೂಡ ನೀಡಿದ್ದಾರೆ. ಮಾರುತಿ ಬಲೆನೊ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 82 ಬಿಎಚ್‌ಪಿ ಪವರ್ ಮತ್ತು 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಮೇಡ್ ಇನ್ ಇಂಡಿಯಾ Suzuki Baleno

ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ. ಮಾರುತಿ ಬಲೆನೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿತ್ತು. ಆದರೆ ಬಿಎಸ್ 6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಮಾರುತಿ ಸುಜುಕಿ ಕಂಪನಿಯು ಎಲ್ಲಾ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

Most Read Articles

Kannada
English summary
Made in india suzuki baleno get zero star rating latin ncap crash test details
Story first published: Friday, October 29, 2021, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X