ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ತಡೆಯಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿವೆ. ಈ ಹೀನೆಲೆಯಲ್ಲಿ ಕೆಲವು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನ ನೀತಿಗಳನ್ನು ಜಾರಿಗೊಳಿಸಿವೆ.

ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

ಈ ನೀತಿಗಳ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಮಾರಾಟವನ್ನು ಉತ್ತೇಜಿಸಲಾಗುತ್ತಿದೆ. ಈ ನೀತಿಯನ್ವಯ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳ ತೆರೆಯುವಂತಹ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರವು ಸಹ ತನ್ನ ರಾಜ್ಯಕ್ಕೆ ಪ್ರತ್ಯೇಕ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೊಳಿಸಿದೆ.

ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

ಮಹಾರಾಷ್ಟ್ರದ ರಾಜ್ಯ ಸರ್ಕಾರದ ಎಲೆಕ್ಟ್ರಿಕ್ ವಾಹನ ನೀತಿಯನ್ನು ಕೆಲವು ತಿಂಗಳ ಹಿಂದೆ ಜಾರಿಗೊಳಿಸಲಾಯಿತು. ಮಹಾರಾಷ್ಟ್ರ ರಾಜ್ಯ ಸರ್ಕಾರದ ಎಲೆಕ್ಟ್ರಿಕ್ ವಾಹನ ನೀತಿಯು ಈ ವರ್ಷದ ಜುಲೈ 23 ರಂದು ಜಾರಿಗೆ ಬಂದಿದೆ. ಈ ನೀತಿಯ ಅಡಿಯಲ್ಲಿ 2025 ರ ವೇಳೆಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 15% ನಷ್ಟು ಬಸ್ಸುಗಳನ್ನು ಶೂನ್ಯ ಹೊರಸೂಸುವಿಕೆ ವಾಹನಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಲಾಗಿದೆ.

ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಹೋಟೆಲ್ ವಲಯಕ್ಕೆ ಮನವಿಯೊಂದನ್ನು ಮಾಡಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರದ ಎಲೆಕ್ಟ್ರಿಕ್ ವೆಹಿಕಲ್ ನೀತಿಯ ಸಮರ್ಪಕ ಅನುಷ್ಠಾನಕ್ಕಾಗಿ ಮುಂದೆ ಬರುವಂತೆ ಅಲ್ಲಿನ ಹೊಟೇಲ್ ಉದ್ಯಮಕ್ಕೆ ಮಹಾರಾಷ್ಟ್ರ ಸರ್ಕಾರವು ಮನವಿ ಮಾಡಿದೆ. ಮಹಾರಾಷ್ಟ್ರದ ಪ್ರವಾಸೋದ್ಯಮ ಹಾಗೂ ಪರಿಸರ ಸಚಿವರಾದ ಆದಿತ್ಯ ಉತ್ತಮ್ ಠಾಕ್ರೆ ಈ ಮನವಿ ಮಾಡಿದ್ದಾರೆ.

ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

ಎಲೆಕ್ಟ್ರಿಕ್ ವಾಹನ ನೀತಿಯನ್ನು ಸಂಪೂರ್ಣವಾಗಿ ಜಾರಿಗೆ ತರುವುದು ಮುಖ್ಯ ಎಂದು ಹೇಳಿರುವ ಆದಿತ್ಯ ಉತ್ತಮ್ ಠಾಕ್ರೆ, ಖಾಸಗಿ ವಲಯದ ಸಹಭಾಗಿತ್ವವಿಲ್ಲದೆ ಇದನ್ನು ಯಶಸ್ವಿಯಾಗಿ ಜಾರಿಗೆ ತರಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಆದಿತ್ಯ ಉತ್ತಮ್ ಠಾಕ್ರೆ ರವರು ಮಹಾರಾಷ್ಟ್ರದ ಹೊಟೇಲ್ ಉದ್ಯಮಿಗಳ ಜೊತೆಗಿನ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

ಮಹಾರಾಷ್ಟ್ರ ರಾಜ್ಯದ ಎಲೆಕ್ಟ್ರಿಕ್ ವಾಹನ ನೀತಿಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಹೊಟೇಲ್ ಉದ್ಯಮವನ್ನು ಕೋರಲಾಗಿದೆ. ಈ ಹಿಂದೆ ಮಹಾರಾಷ್ಟ್ರದ ಹೋಟೆಲ್ ಉದ್ಯಮವು ತಮ್ಮ ವಾಹನಗಳನ್ನು 100% ನಷ್ಟು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ಭರವಸೆ ನೀಡಿತ್ತು. ಇದರ ಜೊತೆಗೆ ಹೋಟೆಲ್ ಉದ್ಯಮ ಮತ್ತೊಂದು ಮಹತ್ವದ ಭರವಸೆಯನ್ನು ನೀಡಿದೆ.

ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

ಎಲ್ಲಾ ಹೋಟೆಲ್‌ ಹಾಗೂ ಸಂಬಂಧಿತ ವಾಣಿಜ್ಯ ಕಚೇರಿಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವುದಾಗಿ ಉದ್ಯಮವು ತಿಳಿಸಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುವ ನಿರೀಕ್ಷೆಗಳಿವೆ. ಇದರ ಹೊರತಾಗಿ, ಮಹಾರಾಷ್ಟ್ರ ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ವಾಹನ ನೀತಿಯ ಅಡಿಯಲ್ಲಿ ಹಲವಾರು ಇತರ ಗುರಿಗಳನ್ನು ನಿಗದಿಪಡಿಸಿದೆ.

ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

2025 ರ ವೇಳೆಗೆ ಮಹಾರಾಷ್ಟ್ರದಲ್ಲಿ ನೋಂದಾಯಿಸಲಾಗುವ ಒಟ್ಟು ಹೊಸ ವಾಹನಗಳ ಪೈಕಿ ಎಲೆಕ್ಟ್ರಿಕ್ ವಾಹನಗಳ ಪಾಲನ್ನು 10% ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಮಹಾರಾಷ್ಟ್ರ ಸರ್ಕಾರವು ಈ ಗುರಿಗಳನ್ನು ಸಾಧಿಸುವ ಕಾರ್ಯದಲ್ಲಿ ನಿರತವಾಗಿದೆ. ಮಹಾರಾಷ್ಟ್ರ ಮಾತ್ರವಲ್ಲದೆ ಇತರ ಹಲವು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿವೆ.

ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

ಇವುಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಸಹ ಪ್ರಮುಖವಾದುದು. ದೆಹಲಿಯಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳಿಂದ ಗಾಳಿಯು ಹೆಚ್ಚು ಕಲುಷಿತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ರಾಜಧಾನಿ ದೆಹಲಿಯನ್ನು ಭಾರತದ ಎಲೆಕ್ಟ್ರಿಕ್ ವಾಹನಗಳ ರಾಜಧಾನಿಯನ್ನಾಗಿ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ.

ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

ದೆಹಲಿ ರಾಜ್ಯ ಸರ್ಕಾರದ ಎಲೆಕ್ಟ್ರಿಕ್ ವಾಹನ ನೀತಿಯು ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ನೀತಿಗಳಲ್ಲಿ ಒಂದಾಗಿದೆ. ಫೇಮ್ 2 ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರಗಳು ಮಾತ್ರವಲ್ಲದೆ ಕೇಂದ್ರ ಸರ್ಕಾರವೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಇನ್ನು ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ವೈಯಕ್ತಿಕ ವಾಹನಗಳ ಬಳಕೆಗೆ ಆದ್ಯತೆ ನೀಡಿದರು. ಸ್ವಂತ ವಾಹನಗಳನ್ನು ಖರೀದಿಸುವ ಸಂದರ್ಭದಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಹೆಚ್ಚು ಆಸಕ್ತಿಯನ್ನು ತೋರಿಸಿದರು. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ರವರು ಬುಧವಾರ ಸಂಸತ್ತಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಅಗ್ರ ಪಟ್ಟಿಯಲ್ಲಿರುವ ಭಾರತೀಯ ರಾಜ್ಯಗಳ ಪಟ್ಟಿಯನ್ನು ಬಹಿರಂಗಪಡಿಸಿದರು. ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ಉತ್ತರ ಪ್ರದೇಶ, ದೆಹಲಿ ಹಾಗೂ ಕರ್ನಾಟಕ ರಾಜ್ಯಗಳು ಮೊದಲ ಮೂರು ಸ್ಥಾನಗಳಲ್ಲಿವೆ. ಭಾರತದಲ್ಲಿ ಇದುವರೆಗೂ 8,70,141 ಯುನಿಟ್ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 2,55,700 ಯುನಿಟ್ ಎಲೆಕ್ಟ್ರಿಕ್ ವಾಹನಗಳನ್ನು ನೋಂದಾಯಿಸಲಾಗಿದೆ. ದೆಹಲಿಯಲ್ಲಿ 1,25,347 ಯುನಿಟ್ ಎಲೆಕ್ಟ್ರಿಕ್ ವಾಹನಗಳು ಹಾಗೂ ಕರ್ನಾಟಕದಲ್ಲಿ 72,544 ಯುನಿಟ್‌ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ. ಅಗ್ರ ಐದು ರಾಜ್ಯಗಳ ಪಟ್ಟಿಯಲ್ಲಿ ಬಿಹಾರ ರಾಜ್ಯವು 58,014 ಯುನಿಟ್ ಎಲೆಕ್ಟ್ರಿಕ್ ವಾಹನಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ರಾಜ್ಯವು 52,506 ಯುನಿಟ್ ಎಲೆಕ್ಟ್ರಿಕ್ ವಾಹನಗಳ ನೋಂದಣಿಯೊಂದಿಗೆ ಐದನೇ ಸ್ಥಾನದಲ್ಲಿದೆ.

ಇವಿ ಬಳಕೆ ಉತ್ತೇಜನಕ್ಕೆ ಕೈಜೋಡಿಸುವಂತೆ ಹೊಟೇಲ್ ಉದ್ಯಮಕ್ಕೆ ಕರೆ ನೀಡಿದ ಮಹಾರಾಷ್ಟ್ರ ಸರ್ಕಾರ

ಎಲೆಕ್ಟ್ರಿಕ್ ವಾಹನಗಳ ಮಾರಾಟ ಹಾಗೂ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ, ಕೇಂದ್ರ ಸರ್ಕಾರವು 2015ರಲ್ಲಿ ಫೇಮ್ ಯೋಜನೆಯನ್ನು ಆರಂಭಿಸಿತು. 2019ರ ಏಪ್ರಿಲ್ ನಲ್ಲಿ ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯನ್ನು ಘೋಷಿಸುವ ಮೂಲಕ ರೂ. 10,000 ಕೋಟಿಗಳ ಹೆಚ್ಚುವರಿ ಬಜೆಟ್ ಅನ್ನು ಘೋಷಿಸಿ, ಈ ಯೋಜನೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಿತು.

Most Read Articles

Kannada
English summary
Maharashtra government asks hotel industry to support ev policy details
Story first published: Tuesday, December 21, 2021, 18:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X