ಬೊಲೆರೊ ಮಾಡಿಫೈ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಕಾರು ಮಾದರಿಗಳಿಗಾಗಿ ಅಧಿಕೃತ ಮಾಡಿಫೈ ಪ್ಯಾಕೇಜ್‌ಗಳನ್ನು ಪರಿಚಯಿಸಿದ್ದು, ಬೊಲೆರೊ ಕಾರು ಮಾದರಿಯಲ್ಲಿ ಆ್ಯಟಿಟ್ಯೂಡ್ ಮಾಡಿಫೈ ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಬೊಲೆರೊ ಮಾಡಿಫೈ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಮಹೀಂದ್ರಾ

ಭಾರತದಲ್ಲಿ ವಾಹನಗಳ ಮಾಡಿಫೈಡ್ ಪ್ರಕ್ರಿಯೆಯನ್ನು ಕಾನೂನು ಬಾಹಿರ ಎಂದು ಘೋಷಣೆ ಮಾಡಲಾಗಿದ್ದರೂ ಕೂಡಾ ವಾಹನ ಉತ್ಪಾದನಾ ಕಂಪನಿಗಳೇ ಜೋಡಣೆ ಮಾಡುವ ಕೆಲವು ಮಾಡಿಫೈ ಬಿಡಿಭಾಗಗಳಿಗೆ ಮಾನ್ಯತೆಗಳಿದ್ದು, ಸಾರಿಗೆ ಇಲಾಖೆಯ ನಿಯಮಗಳ ಅನುಸಾರವಾಗಿ ಮಹೀಂದ್ರಾ ಕಂಪನಿಯು ಇದೀಗ ಅಧಿಕೃತವಾಗಿ ಮಾಡಿಫೈ ವಾಹನಗಳ ಅಭಿವೃದ್ದಿಗೊಳಿಸಿ ಮಾರಾಟಕ್ಕೆ ಚಾಲನೆ ನೀಡುತ್ತಿದೆ.

ಬೊಲೆರೊ ಮಾಡಿಫೈ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಮಾಡಿಫೈ ವಾಹನಗಳ ಮಾಹಿತಿ ಮತ್ತು ಬಿಡಿಭಾಗಗಳ ಮಾಹಿತಿಗಾಗಿ ಪ್ರತ್ಯೇಕವಾದ ವೆಬ್‌ಸೈಟ್ ಆರಂಭಿಸಿದ್ದು, ತನ್ನ ಜನಪ್ರಿಯ ಎಸ್‌ಯುವಿ ಕಾರು ಮಾದರಿಗಳಿಗಾಗಿ ವಿವಿಧ ಮಾದರಿಯ ಮಾಡಿಫೈ ವಿನ್ಯಾಸಗಳನ್ನು ಸಿದ್ದಪಡಿಸಿದೆ.

ಬೊಲೆರೊ ಮಾಡಿಫೈ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಜೋಡಣೆ ಮಾಡುವ ಮಾಡಿಫೈ ಬಿಡಿಭಾಗಗಳು ಸಾರಿಗೆ ಇಲಾಖೆಯು ನಿಗದಿಪಡಿಸಿರುವ ಮಾಡಿಫೈ ಮಿತಿಯೊಳಗೆ ಸಿದ್ದವಾಗಿದ್ದು, ಆಕರ್ಷಕ ಬೆಲೆಗಳಲ್ಲಿ ಮಾಡಿಫೈ ಸೌಲಭ್ಯಗಳನ್ನು ಒದಗಿಸಲಿದೆ.

ಬೊಲೆರೊ ಮಾಡಿಫೈ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಮಹೀಂದ್ರಾ

ಸದ್ಯಕ್ಕೆ ಮಹೀಂದ್ರಾ ಕಂಪನಿಯು ಪ್ರಮುಖ ಮೂರು ಕಾರು ಮಾದರಿಗಳಾದ ಥಾರ್, ಸ್ಕಾರ್ಪಿಯೋ ಮತ್ತು ಬೊಲೆರೊ ಕಾರು ಮಾದರಿಗಳಿಗಾಗಿ ಮಾತ್ರ ಮಾಡಿಫೈ ಸೌಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯು ಕಸ್ಟಮೈಜ್ಡ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ.

ಬೊಲೆರೊ ಮಾಡಿಫೈ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಮಹೀಂದ್ರಾ

ಥಾರ್ ಎಸ್‌ಯುವಿ ಮಾಡಿಫೈ ಪ್ಯಾಕೇಜ್‌‌ನಲ್ಲಿ ಥಾರ್ ಅಡ್ವೆಂಚರ್(ಹಾರ್ಡ್ ಟಾಪ್, ಸಾಫ್ಟ್ ಟಾಪ್ ಮತ್ತು ಓಪನ್ ಟಾಪ್), ಥಾರ್ ಬೈಸನ್, ಥಾರ್ ಬಗ್ಗಿ, ಥಾರ್ ಮಿಡ್‌ನೈಟ್ ಮತ್ತು ಥಾರ್ ಡೇ ಬ್ರೇಕ್(ಹಾರ್ಡ್ ಮತ್ತು ಸಾಫ್ಟ್ ಟಾಪ್) ಒಳಗೊಂಡಿದೆ.

ಬೊಲೆರೊ ಮಾಡಿಫೈ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಮಹೀಂದ್ರಾ

ಹಾಗೆಯೇ ಸ್ಕಾರ್ಪಿಯೋ ಮತ್ತು ಬೊಲೆರೊದಲ್ಲೂ ಕೂಡಾ ವಿವಿಧ ಮಾಡಿಫೈ ಪ್ಯಾಕೇಜ್‌ಗಳಿದ್ದು, ಸ್ಕಾರ್ಪಿಯೋದಲ್ಲಿ ನೀಡಲಾಗಿರುವ ಡಾರ್ಕ್‌ಹಾರ್ಸ್, ಲೈಫ್‌ಸ್ಟೈಲ್, ಮೌಂಟೆನೈರ್ ಮತ್ತು ಎಕ್ಸ್‌ಟ್ರಿಮ್ ಪ್ಯಾಕೇಜ್ ಆಕರ್ಷಕ ಲುಕ್ ಹೊಂದಿವೆ.

ಬೊಲೆರೊ ಮಾಡಿಫೈ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಮಹೀಂದ್ರಾ

ಬೊಲೆರೊದಲ್ಲಿ ಆ್ಯಟಿಟ್ಯೂಡ್, ಸ್ಟಿಂಜರ್, ಎಕ್ಸ್‌ಲುಸಿವ್ ಮತ್ತು ಲಿಮಿಟೆಡ್ ಎಡಿಷನ್ ಮಾಡಿಫೈ ಪ್ಯಾಕೇಜ್‌ಗಳನ್ನು ಲಭ್ಯವಿದ್ದು, ಮಾಡಿಫೈ ವಾಹನಗಳಿಗಾಗಿ ಗ್ರಾಹಕರು ತಮ್ಮ ಕಾರುಗಳನ್ನು ಮುಂಬೈನಲ್ಲಿರುವ ಬ್ರಾಂಡ್ ಸ್ಟುಡಿಯೋಗೆ ತರಬೇಕಾಗುತ್ತದೆ.

ಬೊಲೆರೊ ಮಾಡಿಫೈ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಮಹೀಂದ್ರಾ

ಇದಕ್ಕಾಗಿ ಮಹೀಂದ್ರಾ ಕಂಪನಿಯು ಲಾಜಿಸ್ಟಿಕ್ ಸೌಲಭ್ಯವನ್ನು ಸಹ ತೆರೆದಿದ್ದು, ಮಾಡಿಫೈಗೊಳ್ಳಲಿರುವ ವಾಹನಗಳು ಮಹೀಂದ್ರಾ ಕಂಪನಿಯು ನಡೆಸಲಿರುವ ಕೆಲವು ಪೂರ್ವ ಪರೀಕ್ಷೆಗಳನ್ನು ಎದುರಿಸಿದ ನಂತರ ಮಾಡಿಫೈ ಸೌಲಭ್ಯಕ್ಕೆ ಅರ್ಹವಾಗಿದೆ ಎಂಬುವುದನ್ನು ಖಾತ್ರಿಪಡಿಸುತ್ತದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಬೊಲೆರೊ ಮಾಡಿಫೈ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಮಹೀಂದ್ರಾ

ಮಾಡಿಫೈಗೊಳ್ಳಲಿರುವ ಎಸ್‌ಯುವಿ ಕಾರು ತಾಂತ್ರಿಕವಾಗಿ ಉತ್ತಮ ಸ್ಥಿತಿಯಲ್ಲಿದೆ ಎಂದು ಖಚಿತಪಡಿಸಿದ ನಂತರ ಮಾಡಿಫೈ ಸೌಲಭ್ಯವು ಲಭ್ಯವಾಗಲಿದ್ದು, ಮಾಡಿಫೈ ವಿನ್ಯಾಸಗಳ ಆಧಾರದ ಮೇಲೆ ದರ ನಿಗದಿ ಮಾಡಲಾಗುತ್ತದೆ.

ಬೊಲೆರೊ ಮಾಡಿಫೈ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಮಹೀಂದ್ರಾ

ಸದ್ಯ ಮೂರು ಎಸ್‌ಯುವಿ ಕಾರು ಮಾದರಿಗಳಲ್ಲಿ ಮಾತ್ರವೇ ಮಾಡಿಫೈ ಕಿಟ್ ಸೌಲಭ್ಯವನ್ನು ನೀಡುತ್ತಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಟಿಯುವಿ300, ಎಕ್ಸ್‌ಯುವಿ500 ಮತ್ತು ಕೆಯುವಿ100 ಕಾರು ಮಾದರಿಗಳಲ್ಲೂ ಮಾಡಿಫೈ ಕಿಟ್ ಪರಿಚಯಿಸುವ ಯೋಜನೆಯಲ್ಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಬೊಲೆರೊ ಮಾಡಿಫೈ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಮಾಡಿಫೈ ಕಿಟ್ ಹೊರತುಪಡಿಸಿ ಸಾಮಾನ್ಯ ಕಾರುಗಳಲ್ಲಿ ಈಗಾಗಲೇ ವಿಭಿನ್ನವಾದ ಗ್ರಿಲ್, ಹೆಡ್‌ಲ್ಯಾಂಪ್, ಟೈಲ್‌ಲ್ಯಾಂಪ್, ಟೈಲ್‌ಲೈಟ್, ಅಲಾಯ್ ವೀಲ್ಹ್, ರೋಲ್ ಬಾರ್, ರಾಕ್ ಸ್ಲೈಡರ್, ಬುಲ್ ಬಾರ್, ವಿಂಚ್ ಸೇರಿದಂತೆ ವಿವಿಧ ಮಾಡಿಫೈ ಬಿಡಿಭಾಗಗಳನ್ನು ಅಧಿಕೃತವಾಗಿ ಮಾರಾಟ ಮಾಡುತ್ತಿದೆ.

ಬೊಲೆರೊ ಮಾಡಿಫೈ ವರ್ಷನ್ ಬಿಡುಗಡೆ ಮಾಡಲು ಸಜ್ಜಾದ ಮಹೀಂದ್ರಾ

ಆದರೆ ಇದೀಗ ಹೊಸದಾಗಿ ಆರಂಭಿಸಿರುವ ಮಾಡಿಫೈ ಸೌಲಭ್ಯವು ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ಮಹೀಂದ್ರಾ ಕಸ್ಟ್‌ಮೈಜ್ಡ್ ವೆಬ್‌ಸೈಟ್‍ಗೆ ಭೇಟಿ ನೀಡಿ.

Article Published On: Saturday, April 10, 2021, 19:29 [IST]
English summary
Mahindra Bolero Attitude Official Modified Model Revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+