ಬೊಲೆರೊ ನಿಯೋ ಕಾರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಹೊಸ ಬೊಲೆರೊ ನಿಯೋ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮೂಲಕ ಮೊದಲ ತಿಂಗಳಿನಲ್ಲಿಯೇ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರಿಗಾಗಿ ಮಹೀಂದ್ರಾ ಕಂಪನಿಯು ವಿಶೇಷ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದೆ.

ಹೊಸ ಬೊಲೆರೊ ನಿಯೋ ಕಾರಿಗಾಗಿ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಬೊಲೆರೊ ನಿಯೋ ಆವೃತ್ತಿಯು ಮೊದಲ ತಿಂಗಳ ಅವಧಿಯಲ್ಲೇ ಸುಮಾರು 5,500 ಯುನಿಟ್‌ಗಳಿಗೆ ಬೇಡಿಕೆ ಪಡೆದುಕೊಂಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪ್ರಮುಖ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದೆ. ಹೊಸ ಕಾರು ವಿವಿಧ ವೆರಿಯೆಂಟ್‌ಗಳೊಂದಿಗೆ ಅತ್ಯುತ್ತಮ ಬೆಲೆಯಲ್ಲಿ ಮಾರಾಟಗೊಳ್ಳುತ್ತಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗುತ್ತಿದೆ.

ಹೊಸ ಬೊಲೆರೊ ನಿಯೋ ಕಾರಿಗಾಗಿ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಟಿಯುವಿ300 ಮಾದರಿಯ ಹೊಸ ಆವೃತ್ತಿಯನ್ನೇ ಬೊಲೆರೊ ನಿಯೋ ಮಾದರಿಯಾಗಿ ಬಿಡುಗಡೆಗೊಳಿಸಿದ್ದು, 7 ಸೀಟರ್ ಸೌಲಭ್ಯದೊಂದಿಗೆ ಎನ್4, ಎನ್8, ಎನ್10 ಮತ್ತು ಎನ್10 ಆಪ್ಷನ್ ಎನ್ನುವ ನಾಲ್ಕು ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಬೊಲೆರೊ ನಿಯೋ ಕಾರಿಗಾಗಿ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಬೊಲೆರೊ ನಿಯೋ ಕಾರು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.48 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.99 ಲಕ್ಷ ಬೆಲೆ ಹೊಂದಿದ್ದು, ಹೆಚ್ಚುವರಿ ಮೊತ್ತದೊಂದಿಗೆ ಇದೀಗ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಲಾಗಿದೆ.

ಹೊಸ ಬೊಲೆರೊ ನಿಯೋ ಕಾರಿಗಾಗಿ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಸ್ಟ್ಯಾಂಡರ್ಡ್ ಫೀಚರ್ಸ್ ಹೊರತುಪಡಿಸಿ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ವಿವಿಧ ಪರಿಕರಗಳು ಕಾರಿನ ಬಲಿಷ್ಠತೆ ಹೆಚ್ಚಿಸಲು ಸಹಕಾರಿಯಾಗಲಿದ್ದು, ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಗ್ರಾಹಕರು ಆಯ್ದ ಪರಿಕರಗಳನ್ನು ಇಲ್ಲವೇ ಸಂಪೂರ್ಣ ಪ್ಯಾಕೇಜ್ ಅನ್ನು ಆಕರ್ಷಕ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಹೊಸ ಬೊಲೆರೊ ನಿಯೋ ಕಾರಿಗಾಗಿ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಬಾಡಿ ಕ್ಯಾಡಿಂಗ್ ಕಿಟ್, ಪ್ರೀಮಿಯಂ ಸೈಡ್ ಸ್ಟೆಪ್ಸ್, ವ್ಹೀಲ್ ಆರ್ಚ್ ಸೆಟ್, ಡೈಮಂಡ್ ಕಟ್ ಅಲಾಯ್ ವ್ಹೀಲ್, ರಿಯರ್ ಬಂಪರ್ ಜೊತೆ ರಿಯರ್ ಸ್ಟೇಪ್, ರೂಫ್ ಕ್ಯಾರಿಯರ್, ರಿಯರ್ ಗಾರ್ಡ್, ರಿವರ್ಸ್ ಕ್ಯಾಮೆರಾ, ನಂಬರ್ ಪ್ಲೇಟ್ ಕ್ರೋಮ್ ಗಾರ್ನಿಶ್, ಬಾಡಿ ಕವರ್, ಬಾಡಿ ಸೈಡ್ ಮೊಲ್ಡಿಂಗ್ ಸೌಲಭ್ಯಗಳಿವೆ.

ಹೊಸ ಬೊಲೆರೊ ನಿಯೋ ಕಾರಿಗಾಗಿ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಕಾರಿನ ಒಳಭಾಗದ ಅಂದವನ್ನು ಹೆಚ್ಚಿಸಲು ಸಹ ವಿವಿಧ ಆಕ್ಸೆಸರಿಸ್ ಪ್ಯಾಕೇಜ್ ನೀಡಲಾಗಿದ್ದು, ಇಂಟಿರಿಯರ್ ಆಕ್ಸೆಸರಿಸ್‌ನಲ್ಲಿ ಫ್ಲಕ್ಸ್ ಲೆದರ್ ಸೀಟ್, ಫ್ಲೋರ್ ಲ್ಯಾಮಿನೆಷನ್ ಮ್ಯಾಟ್ಸ್, ಮ್ಯಾಟ್ ಸೆಟ್, ಕಾರ್ಪೆಟ್ ಮ್ಯಾಟ್ ಸೆಟ್, ಸನ್ ಶೆಡ್ಸ್, ಕಾರ್ ರೆಡಿಯೋ ಪ್ಲೇಯರ್, ಕಾರ್ ಡಿವಿಡಿ ಪ್ಲೇಯರ್, ಟಚ್ ಸ್ಕ್ರೀನ್ ಕಾರ್ ಆಡಿಯೋ, ಏರ್ ಫ್ರೆಶನರ್ಸ್‌ಗಳನ್ನು ನೀಡಲಾಗಿದೆ.

ಹೊಸ ಬೊಲೆರೊ ನಿಯೋ ಕಾರಿಗಾಗಿ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಬೊಲೆರೊ ನಿಯೋ ಮಾದರಿಯಾಗಿಯೇ ವಿಶೇಷವಾಗಿ ನೀಡಲಾಗಿರುವ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ವಿವಿಧ ಪರಿಕರಗಳು ರೂ. 199ರಿಂದ ರೂ. 25 ಸಾವಿರ ತನಕ ಬೆಲೆ ಹೊಂದಿದ್ದು, ಹೆಚ್ಚುವರಿ ಪರಿಕರಗಳಿಗಾಗಿ ಸುಮಾರು ರೂ. 1 ಲಕ್ಷದೊಳಗೆ ಪ್ರಮುಖ ಆಕ್ಸೆಸರಿಸ್ ಖರೀದಿಸಬಹುದಾಗಿದೆ.

ಹೊಸ ಬೊಲೆರೊ ನಿಯೋ ಕಾರಿಗಾಗಿ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಇನ್ನು ಹೊಸ ಬೊಲೆರೊ ನಿಯೋ ಕಾರು ಸ್ಕಾರ್ಪಿಯೋ ಮತ್ತು ಥಾರ್ ಮ್ಯಾಡುಲರ್ ಚಾರ್ಸಿ ಸೌಲಭ್ಯದೊಂದಿಗೆ ಹಲವು ಹೊಸ ತಾಂತ್ರಿಕ ಅಂಶಗಳನ್ನು ಒಳಗೊಂಡಿದ್ದು, ಟಿಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಮಾರಾಟವನ್ನು ಸ್ಥಗಿತಗೊಳಿಸಿದರೂ ಸಹ ಹೊಸ ಹೆಸರಿನೊಂದಿಗೆ ಟಿವಿಯುವಿ300 ಫೇಸ್‌ಲಿಫ್ಟ್ ಮಾದರಿಯನ್ನು ಮಾರುಕಟ್ಟೆಯಲ್ಲಿ ಉಳಿಸಿಕೊಂಡಿದೆ.

ಹೊಸ ಬೊಲೆರೊ ನಿಯೋ ಕಾರಿಗಾಗಿ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಬೊಲೆರೊ ನಿಯೋದೊಂದಿಗೆ ಹೊಸ ಕಾರಿನಲ್ಲಿ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್, ಮಾಡಿಫೈಗೊಳಿಸಿದ ಹೆಡ್‌ಲ್ಯಾಂಪ್‌, ಹಾರಿಜಂಟಲ್ ಆಗಿರುವ ಎಲ್‌ಇಡಿ ಡಿಆರ್‌ಎಲ್ ಲೈಟ್‌ಗಳನ್ನು ಹೊಂದಿದೆ.

ಹೊಸ ಬೊಲೆರೊ ನಿಯೋ ಕಾರಿಗಾಗಿ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಇದರ ಜೊತೆಗೆ ಹೊಸ ಕಾರಿನಲ್ಲಿ ವಿಶಾಲವಾದ ಏರ್ ಡ್ಯಾಂ, ಸರ್ಕ್ಯೂಲರ್ ಫಾಗ್ ಲೈಟ್, ಮರುವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್, ಹೊಸ ಬೊಲೆರೊ ನಿಯೋ ಬ್ಯಾಡ್ಜಿಂಗ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳು ಈ ಎಸ್‌ಯುವಿಯಲ್ಲಿ ಕಾಣಬಹುದಾಗಿದ್ದು, ಕಾರಿನ ಹೊರಭಾಗದಲ್ಲಿ ಮಾತ್ರವಲ್ಲದೆ ಒಳಭಾಗದ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

ಹೊಸ ಬೊಲೆರೊ ನಿಯೋ ಕಾರಿಗಾಗಿ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಬೊಲೆರೊ ನಿಯೋ ಎಸ್‌ಯುವಿಯಲ್ಲಿ ಮಹೀಂದ್ರಾ ಕಂಪನಿಯು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌, ಎಬಿಎಸ್ ಜೊತೆ ಇಬಿಡಿ, ಸಿಬಿಸಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಫೀಚರ್ಸ್‌ಗಳನ್ನು ನೀಡಿದೆ.

ಹೊಸ ಬೊಲೆರೊ ನಿಯೋ ಕಾರಿಗಾಗಿ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಬೊಲೆರೊ ನಿಯೋ ಮಾದರಿಯಲ್ಲಿ ಈ ಹಿಂದಿನ ಟಿಯುವಿ300 ಮಾದರಿಯಲ್ಲಿ ಅಳವಡಿಸಲಾಗುತ್ತಿದ್ದ 1.5-ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 100-ಬಿಎಚ್‌ಪಿ ಮತ್ತು 260 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

ಹೊಸ ಬೊಲೆರೊ ನಿಯೋ ಕಾರಿಗಾಗಿ ಆಕರ್ಷಕ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಕಾರಿನಲ್ಲಿ ಮಹೀಂದ್ರಾ ಕಂಪನಿಯು ರಾಕಿ ಬಿಜ್, ಮೆಜೆಸ್ಟಿಕ್ ಸಿಲ್ವರ್, ಹೈವೆ ರೆಡ್, ಪರ್ಲ್ ವೈಟ್, ಡೈಮಂಡ್ ವೈಟ್, ನಪೊಲಿ ಬ್ಲ್ಯಾಕ್ ಮತ್ತು ರಾಯಲ್ ಗೋಲ್ಡ್ ಬಣ್ಣಗಳ ಆಯ್ಕೆ ನೀಡಿದ್ದು, ಹೊಸ ಕಾರು ಬೆಲೆ ವಿಚಾರದಲ್ಲಿ ಪ್ರಮುಖ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Article Published On: Thursday, August 12, 2021, 11:27 [IST]
English summary
Mahindra bolero neo accessories package details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+