ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಮಹೀಂದ್ರಾ ಬೊಲೆರೊ ನಿಯೋ ಬಿಡುಗಡೆ
ಮಹೀಂದ್ರಾ ಕಂಪನಿಯು ತನ್ನ ಬೊಲೆರೊ ಎಸ್‌ಯುವಿ ಮಾದರಿಯಲ್ಲಿ ಹೊಸದಾಗಿ ಬೊಲೆರೊ ನಿಯೋ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.48 ಲಕ್ಷ ಬೆಲೆ ಹೊಂದಿದೆ.

ಹೊಸ ಎಮಿಷನ್ ಅನುಸಾರವಾಗಿ ಟಿಯುವಿ300 ಮಾದರಿಯ ಮಾರಾಟವನ್ನು ತಡೆಹಿಡಿದ್ದ ಮಹೀಂದ್ರಾ ಕಂಪನಿಯು ಹೊಸ ಚಾರ್ಸಿ ಪ್ರೇರಿತ ಫೇಸ್‌ಲಿಫ್ಟ್ ಮಾದರಿಯನ್ನು ಬೊಲೆರೊ ನಿಯೋ ಹೆಸರಿನಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದು, ಹೊಸ ಕಾರನ್ನು ಸ್ಕಾರ್ಪಿಯೋ ಮತ್ತು ಥಾರ್ ಮ್ಯಾಡುಲರ್ ಚಾರ್ಸಿ ಸೌಲಭ್ಯದೊಂದಿಗೆ ಹಲವು ಹೊಸ ತಾಂತ್ರಿಕ ಅಂಶಗಳೊಂದಿಗೆ ಬಿಡುಗಡೆ ಮಾಡಿದೆ.

ಟಿಯುವಿ300 ಫೇಸ್‌ಲಿಫ್ಟ್ ಮಾದರಿಯಾಗಿರುವ ಬೊಲೊರೊ ನಿಯೋ ಮಾದರಿಯು ಸ್ಟ್ಯಾಂಡರ್ಡ್ ಬೊಲೆರೊ ಮಾದರಿಗಿಂತಲೂ ಉನ್ನತ ಮಟ್ಟದ ಮಾದರಿಯಾಗಿ ಮಾರಾಟಗೊಳ್ಳಲಿದ್ದು, 7 ಸೀಟರ್ ಸೌಲಭ್ಯದೊಂದಿಗೆ ಎನ್4, ಎನ್8, ಎನ್10 ಮತ್ತು ಎನ್10 ಆಪ್ಷನ್ ಎನ್ನುವ ನಾಲ್ಕು ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದೆ.

ಮಹೀಂದ್ರಾ ಕಂಪನಿಯು ಸದ್ಯಕ್ಕೆ ಹೊಸ ಕಾರಿನ ಎನ್4 (ರೂ.8.48 ಲಕ್ಷ), ಎನ್8(ರೂ.9.48 ಲಕ್ಷ) ಮತ್ತು ಎನ್10(ರೂ.9.99 ಲಕ್ಷ) ಬೆಲೆಗಳನ್ನು ಮಾತ್ರ ಘೋಷಿಸಿದ್ದು, ಶೀಘ್ರದಲ್ಲೇ ಎನ್10 ಆಪ್ಷನ್ ಮಾದರಿಯ ಬೆಲೆಯನ್ನು ಘೋಷಣೆ ಮಾಡಲಿದೆ.

ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಎಸ್‌ಯುವಿ ಸರಣಿಯಲ್ಲಿ ಸಾಕಷ್ಟು ಬದಲಾವಣೆ ತಂದಿರುವ ಮಹೀಂದ್ರಾ ಕಂಪನಿಯು ಟಿಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಮಾರಾಟವನ್ನು ಸ್ಥಗಿತಗೊಳಿಸಿದರೂ ಸಹ ಹೊಸ ಹೆಸರಿನೊಂದಿಗೆ ಟಿವಿಯುವಿ300 ಫೇಸ್‌ಲಿಫ್ಟ್ ಮಾದರಿಯನ್ನು ಮಾರುಕಟ್ಟೆಯಲ್ಲಿ ಉಳಿಸಿಕೊಂಡಿದೆ.

ಬೊಲೆರೊ ನಿಯೋದೊಂದಿಗೆ ಹೊಸ ಕಾರಿನಲ್ಲಿ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್, ಮಾಡಿಫೈಗೊಳಿಸಿದ ಹೆಡ್‌ಲ್ಯಾಂಪ್, ಹಾರಿಜಂಟಲ್ ಆಗಿರುವ ಎಲ್‌ಇಡಿ ಡಿಆರ್‌ಎಲ್ ಲೈಟ್‌ಗಳನ್ನು ಹೊಂದಿದೆ.

ಇದರ ಜೊತೆಗೆ ಹೊಸ ಕಾರಿನಲ್ಲಿ ವಿಶಾಲವಾದ ಏರ್ ಡ್ಯಾಂ, ಸರ್ಕ್ಯೂಲರ್ ಫಾಗ್ ಲೈಟ್, ಮರುವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್, ಹೊಸ ಬೊಲೆರೊ ನಿಯೋ ಬ್ಯಾಡ್ಜಿಂಗ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳು ಈ ಎಸ್‌ಯುವಿಯಲ್ಲಿ ಕಾಣಬಹುದಾಗಿದ್ದು, ಕಾರಿನ ಹೊರಭಾಗದಲ್ಲಿ ಮಾತ್ರವಲ್ಲದೆ ಒಳಭಾಗದ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

ಹೊಸ ಬೊಲೆರೊ ನಿಯೋ ಎಸ್‌ಯುವಿಯಲ್ಲಿ ಹಲವಾರು ತಾಂತ್ರಿಕ ಅಂಶಗಳನ್ನು ಅಳವಡಿಸಲಾಗಿದ್ದು, ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆರ್ಮ್ ರೆಸ್ಟ್, ಸ್ಮಾರ್ಟ್‌ಪೋನ್ ಕನೆಕ್ಟಿವಿಟಿ ಹೊಂದಿರುವ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ, ಹೊಂದಾಣಿಕೆ ಮಾಡಬಹುದಾದ ಸ್ಟೀರಿಂಗ್ ವೀಲ್ಹ್, ಎಸಿ, ಇಕೋ ಮೋಡ್, ಎರಡನೇ ಸಾಲಿಗೂ ಆರ್ಮ್ ರೆಸ್ಟ್ ಮತ್ತು ಬಿಜ್ ಬಣ್ಣದ ಫ್ರ್ಯಾಬಿಕ್ ಆಸಸಗಳನ್ನು ನೀಡಲಾಗಿದೆ.

ಬೊಲೆರೊ ನಿಯೋ ಎಸ್‌ಯುವಿಯಲ್ಲಿ ಮಹೀಂದ್ರಾ ಕಂಪನಿಯು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸಿಬಿಸಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಫೀಚರ್ಸ್‌ಗಳನ್ನು ನೀಡಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್
ಬೊಲೆರೊ ನಿಯೋ ಮಾದರಿಯಲ್ಲಿ ಈ ಹಿಂದಿನ ಟಿಯುವಿ300 ಮಾದರಿಯಲ್ಲಿ ಅಳವಡಿಸಲಾಗುತ್ತಿದ್ದ 1.5-ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 100-ಬಿಎಚ್‌ಪಿ ಮತ್ತು 260 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

ಹೊಸ ಕಾರಿನಲ್ಲಿ ಮಹೀಂದ್ರಾ ಕಂಪನಿಯು ರಾಕಿ ಬಿಜ್, ಮೆಜೆಸ್ಟಿಕ್ ಸಿಲ್ವರ್, ಹೈವೆ ರೆಡ್, ಪರ್ಲ್ ವೈಟ್, ಡೈಮಂಡ್ ವೈಟ್, ನಪೊಲಿ ಬ್ಲ್ಯಾಕ್ ಮತ್ತು ರಾಯಲ್ ಗೋಲ್ಡ್ ಬಣ್ಣಗಳ ಆಯ್ಕೆ ನೀಡಿದ್ದು, ಹೊಸ ಕಾರು ಬೆಲೆ ವಿಚಾರದಲ್ಲಿ ಪ್ರಮುಖ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.


Click it and Unblock the Notifications