ಕೆಯುವಿ100 ಮತ್ತು ಮರಾಜೋ ಕಾರುಗಳನ್ನು ಸ್ಥಗಿತಗೊಳಿಸಲಿದೆ ಮಹೀಂದ್ರಾ

ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮೇಲೆ ಹೆಚ್ಚಿನ ಆಸಕ್ತಿ ಹೊಂದಿರುವ ಮಹೀಂದ್ರಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪ್ರಮುಖ ಕಾರುಗಳ ಮಾರಾಟ ಮಹತ್ವದ ಬದಲಾವಣೆ ತರುತ್ತಿದ್ದು, ಹೊಸ ಕಾರು ಮಾದರಿಗಳಿಗಾಗಿ ಕೆಯುವಿ100 ಮೈಕ್ರೊ ಎಸ್‌ಯುವಿ ಮತ್ತು ಮರಾಜೋ ಎಂಪಿವಿ ಕಾರುಗಳನ್ನು ಸ್ಥಗಿತಗೊಳಿಸುವ ಸುಳಿವು ನೀಡಿದೆ.

ಕೆಯುವಿ100 ಮತ್ತು ಮರಾಜೋ ಕಾರುಗಳನ್ನು ಸ್ಥಗಿತಗೊಳಿಸಲಿದೆ ಮಹೀಂದ್ರಾ

ಗ್ರಾಹಕರ ಬೇಡಿಕೆಗೆ ಪೂರೈಸಲು ಹೊಸ ಪ್ಲ್ಯಾಟ್‌ಫಾರ್ಮ್ ಅಡಿ ಅಭಿವೃದ್ದಿಗೊಳಿಸಲಾಗುತ್ತಿರುವ ಕಾರು ಮಾದರಿಗಳ ಮೇಲೆ ಹೆಚ್ಚಿನ ನೀರಿಕ್ಷೆಯಿಟ್ಟುಕೊಂಡಿರುವ ಮಹೀಂದ್ರಾ ಕಂಪನಿಯು ಎಂಟ್ರಿ ಲೆವಲ್ ಮಾದರಿಯಾದ ಕೆಯುವಿ100 ಮತ್ತು ಮರಾಜೋ ಎಂಪಿವಿ ಮಾದರಿಯನ್ನು ಮುಂದಿನ ಸ್ಟಾಕ್ ಪ್ರಮಾಣದ ತನಕ ಮಾತ್ರ ಮಾರಾಟ ಮುಂದುವರಿಸಿದ್ದು, ಸ್ಟಾಕ್ ಮುಕ್ತಾಯದ ನಂತರ ಎರಡು ಕಾರು ಮಾದರಿಗಳ ಮಾರಾಟ ಸ್ಥಗಿತವನ್ನು ಅಧಿಕೃತವಾಗಿ ಘೋಷಿಸಲಿದೆ.

ಕೆಯುವಿ100 ಮತ್ತು ಮರಾಜೋ ಕಾರುಗಳನ್ನು ಸ್ಥಗಿತಗೊಳಿಸಲಿದೆ ಮಹೀಂದ್ರಾ

ವಿವಿಧ ಕಾರು ಮಾದರಿಗಳ ಅಬ್ಬರದ ನಡುವೆ ಕೆಯುವಿ100 ಮಾದರಿಯು ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಕೇವಲ 21 ಯುನಿಟ್ ಮಾರಾಟಗೊಂಡಿದ್ದರೆ ಮಾರಾಜೋ ಕಾರು ಮಾದರಿಯು ಇದೇ ಅವಧಿಯಲ್ಲಿ 711 ಯುನಿಟ್ ಮಾರಾಟಗೊಂಡಿದೆ.

ಕೆಯುವಿ100 ಮತ್ತು ಮರಾಜೋ ಕಾರುಗಳನ್ನು ಸ್ಥಗಿತಗೊಳಿಸಲಿದೆ ಮಹೀಂದ್ರಾ

ಮಾರಾಜೋ ಪ್ರತಿಸ್ಪರ್ಧಿಯಾಗಿರುವ ಮಾರುತಿ ಎರ್ಟಿಗಾ ಕಾರು ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಬರೋಬ್ಬರಿ 37 ಸಾವಿರ ಯುನಿಟ್ ಮಾರಾಟಗೊಂಡಿದ್ದು, ಎರ್ಟಿಗಾ ಕಾರಿಗಿಂತಲೂ ಉತ್ತಮ ಎಂಜಿನ್ ಆಯ್ಕೆ ಮತ್ತು ಆಕರ್ಷಕ ಕ್ಯಾಬಿನ್ ಸೌಲಭ್ಯ ಹೊಂದಿದ್ದರೂ ಮರಾಜೋ ಕಾರು ಕೇವಲ 711 ಯುನಿಟ್ ಮಾತ್ರ ಮಾರಾಟವಾಗಿದೆ.

ಕೆಯುವಿ100 ಮತ್ತು ಮರಾಜೋ ಕಾರುಗಳನ್ನು ಸ್ಥಗಿತಗೊಳಿಸಲಿದೆ ಮಹೀಂದ್ರಾ

ಈ ಹಿನ್ನಲೆಯಲ್ಲಿ ಮುಂದಿನ ಸ್ಟಾಕ್ ಪ್ರಮಾಣದ ತನಕ ಮಾತ್ರ ಕೆಯುವಿ100 ಮತ್ತು ಮರಾಜೋ ಕಾರುಗಳ ಮಾರಾಟವನ್ನು ಮುಂದುವರಿಸಲಿರುವ ಮಹೀಂದ್ರಾ ಕಂಪನಿಯು ಹಂತ-ಹಂತವಾಗಿ ಮಾರಾಟ ಸ್ಥಗಿತಗೊಳಿಸಲಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಚ್ಚ ಹೊಸ ಕಾರು ಮಾದರಿಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿದೆ. ಹೊಸ ಕಾರು ಮಾದರಿಗಳಿಗಾಗಿ ಈಗಾಗಲೇ ಸಿದ್ದತೆ ನಡೆಸಿರುವ ಮಹೀಂದ್ರಾ ಕಂಪನಿಯು ಹೊಸ ಕಾರುಗಳೊಂದಿಗೆ ಮೈಕ್ರೊ ಎಸ್‌ಯುವಿ, ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಫುಲ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಕೆಯುವಿ100 ಮತ್ತು ಮರಾಜೋ ಕಾರುಗಳನ್ನು ಸ್ಥಗಿತಗೊಳಿಸಲಿದೆ ಮಹೀಂದ್ರಾ

ಪ್ರಸ್ತುತ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ500, ಎಕ್ಸ್‌ಯುವಿ300, ಬೊಲೆರೊ, ಸ್ಕಾರ್ಪಿಯೋ ಮಾದರಿಯೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಹೊಂದಿರುವ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಅಭಿವೃದ್ದಿಪಡಿಸುತ್ತಿದೆ.

ಕೆಯುವಿ100 ಮತ್ತು ಮರಾಜೋ ಕಾರುಗಳನ್ನು ಸ್ಥಗಿತಗೊಳಿಸಲಿದೆ ಮಹೀಂದ್ರಾ

ಹೊಸ ಕಾರುಗಳ ಬಿಡುಗಡೆಗಾಗಿ ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲಿ ನೋಂದಣಿಯನ್ನು ಕೂಡಾ ಮಾಡಲಾಗಿದ್ದು, ಎಕ್ಸ್‌ಯುವಿ ಸರಣಿಯಲ್ಲಿ ಒಟ್ಟು ಐದು ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಕೆಯುವಿ100 ಮತ್ತು ಮರಾಜೋ ಕಾರುಗಳನ್ನು ಸ್ಥಗಿತಗೊಳಿಸಲಿದೆ ಮಹೀಂದ್ರಾ

ಕೇಂದ್ರ ಸಾರಿಗೆ ಇಲಾಖೆಯಲ್ಲಿ ದಾಖಲಿಸಲಾಗಿರುವ ಹೊಸ ಹಕ್ಕು ಸ್ವಾಮ್ಯ ಪ್ರತಿಯಲ್ಲಿ ಮಹೀಂದ್ರಾ ಕಂಪನಿಯ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಎಕ್ಸ್‌ಯುವಿ700 ಮಾದರಿಯೊಂದಿಗೆ ಎಕ್ಸ್‌ಯುವಿ100, ಎಕ್ಸ್‌‌ಯುವಿ400, ಎಕ್ಸ್‌ಯುವಿ900 ಎಸ್‌ಯುವಿ, ಎಕ್ಸ್‌ಯುವಿ900 ಕೂಪೆ ಸೇರಿ ಒಟ್ಟು ಐದು ಹೊಸ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

ಕೆಯುವಿ100 ಮತ್ತು ಮರಾಜೋ ಕಾರುಗಳನ್ನು ಸ್ಥಗಿತಗೊಳಿಸಲಿದೆ ಮಹೀಂದ್ರಾ

ಹೊಸ ಕಾರುಗಳಲ್ಲಿ ಎಕ್ಸ್‌ಯುವಿ100 ಮಾದರಿಯು ಕೆಯುವಿ100 ಸ್ಥಾನಕ್ಕೆ ಸಿದ್ದಪಡಿಸಲಾಗಿದೆ ಎನ್ನಲಾಗಿದ್ದು, ಹೈ ಎಂಡ್ ಮಾದರಿಯಾದ ಎಕ್ಸ್‌ಯುವಿ900 ಮಾದರಿಯು ಸ್ಥಗಿತವಾಗಲಿರುವ ಅಲ್ಟುರಾಸ್ ಜಿ4 ಸ್ಥಾನ ತುಂಬುವುದರ ಜೊತೆಗೆ ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಕೆಯುವಿ100 ಮತ್ತು ಮರಾಜೋ ಕಾರುಗಳನ್ನು ಸ್ಥಗಿತಗೊಳಿಸಲಿದೆ ಮಹೀಂದ್ರಾ

ಮಹೀಂದ್ರಾ ಹೊಸ ಕಾರುಗಳ ಅಭಿವೃದ್ದಿ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿದ್ದು, ವಿವಿಧ ಹಂತದ ರೋಡ್ ಟೆಸ್ಟಿಂಗ್ ನಡೆಸಲಿದೆ. ಹೊಸ ಕಾರು ಮುಂದಿನ 2 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಬಿಡುಗಡೆಯಾಗಲಿದ್ದು, ಮಹೀಂದ್ರಾ ಕಂಪನಿಯ ಮೊದಲ ಎಂಪಿವಿ ಕಾರಿನ ಮಾರಾಟವು ಹೊಸ ಕಾರುಗಳ ಮಾರಾಟದೊಂದಿಗೆ ಅಂತ್ಯಗೊಳ್ಳಲಿದೆ.

Article Published On: Wednesday, May 12, 2021, 12:45 [IST]
English summary
Mahindra Marazzo & KUV100 To Be Discontinued In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+