ನ್ಯೂ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ500 ಬಿಡುಗಡೆ ಮಾಹಿತಿ ಬಹಿರಂಗ

ಮಹೀಂದ್ರಾ ಕಂಪನಿಯು ತನ್ನ ನ್ಯೂ ಜನರೇಷನ್ ಎಕ್ಸ್‌ಯುವಿ500 ಕಾರು ಮಾದರಿಯ ಬಿಡುಗಡೆ ಯೋಜನೆಯನ್ನು ಕಾರಣಾಂತರಗಳಿಂದ ಮುಂದೂಡಿಕೆ ಮಾಡುತ್ತಿದ್ದು, ಕಳೆದ ಒಂದೂವರೆ ವರ್ಷಗಳಿಂದ ರೋಡ್ ಟೆಸ್ಟಿಂಗ್ ನಡೆಸುತ್ತಿರುವ ಹೊಸ ಕಾರಿನ ಬಿಡುಗಡೆ ಕುರಿತಂತೆ ಇದೀಗ ಮಹತ್ವದ ಮಾಹಿತಿ ಲಭ್ಯವಾಗಿದೆ.

ನ್ಯೂ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ500 ಬಿಡುಗಡೆ ಮಾಹಿತಿ ಬಹಿರಂಗ

ಎಕ್ಸ್‌ಯುವಿ500 ಎಸ್‌ಯುವಿ ಕಾರು ಮಾದರಿಯನ್ನು ಮಹೀಂದ್ರಾ ಕಂಪನಿಯು ಹಲವಾರು ಹೊಸ ಬದಲಾವಣೆಗಳೊಂದಿಗೆ ಪರಿಚಯಿಸುತ್ತಿದ್ದು, ಹೊಸ ಕಾರಿನ ಕಾರ್ಯಕ್ಷಮತೆ ಕುರಿತಂತೆ ಕಂಪನಿಯು ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ನಡೆಸುತ್ತಿದೆ. ಹೊಸ ಎಕ್ಸ್‌ಯುವಿ500 ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಗಳಲ್ಲೇ ಹಲವು ಹೊಸ ಐಷಾರಾಮಿ ಫೀಚರ್ಸ್‌ಗಳನ್ನು ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಇದೇ ತಿಂಗಳು ಬಿಡುಗಡೆಯಾಗಬೇಕಿದ್ದ ಹೊಸ ಕಾರನ್ನು ಕಾರಣಾಂತರಗಳಿಂದ ಮತ್ತೆ ಮುಂದೂಡಿಕೆ ಮಾಡಲಾಗಿದೆ.

ನ್ಯೂ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ500 ಬಿಡುಗಡೆ ಮಾಹಿತಿ ಬಹಿರಂಗ

ಜಾಗತಿಕ ಮಾರುಕಟ್ಟೆಯಲ್ಲಿ ತಲೆದೊರಿರುವ ಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯಿಂದಾಗಿ ಹೊಸ ಕಾರುಗಳ ಬಿಡುಗಡೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದ್ದು, ಎಕ್ಸ್‌‌ಯುವಿ500 ಮಾದರಿಯನ್ನು ಮುಂಬರುವ ಜುಲೈ ಹೊತ್ತಿಗೆ ಬಿಡುಗಡೆ ಮಾಡುವ ಭರವಸೆ ಸಿಕ್ಕಿದೆ.

ನ್ಯೂ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ500 ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರುಗಳು ಮತ್ತು ಕಂಪನಿಯ ಯೋಜನೆ ಕುರಿತಂತೆ ಮಾಧ್ಯಮ ಸಂಸ್ಥಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಮಹೀಂದ್ರಾ ಆಟೋ ಸಿಇಒ ವಿಜಯ್ ನಕ್ರಾ ಅವರು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೊಸ ತಲೆಮಾರಿನ ಎಕ್ಸ್‌ಯುವಿ500ಯನ್ನು 2ನೇ ತ್ರೈಮಾಸಿಕ ಮತ್ತು 3ನೇ ತ್ರೈಮಾಸಿಕ ನಡುವೆ ಬಿಡುಗಡೆಗೆ ನಿರ್ಧರಿಸಲಾಗಿದೆ ಎಂದಿದ್ದಾರೆ.

ನ್ಯೂ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ500 ಬಿಡುಗಡೆ ಮಾಹಿತಿ ಬಹಿರಂಗ

ಹೀಗಾಗಿ ಹೊಸ ಕಾರು ಮುಂಬರುವ ಜೂನ್ ಅಥವಾ ಜುಲೈ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ನ್ಯೂ ಜನರೇಷನ್ ಮಾದರಿಯು ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಿದ್ದವಾಗಿದೆ. ಹೊಸ ಕಾರು ಮಹೀಂದ್ರಾ ನೂತನ ಮೊನೊಕೊಕ್ ಪ್ಲಾಟ್‌ಫಾರ್ಮ್‌ನ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ನವೀಕರಿಸಲಾದ ಮುಂಭಾಗದ ಗ್ರಿಲ್, ಹೊಸ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಹಿಂಭಾಗದಲ್ಲಿ ನವೀಕರಿಸಲಾದ ಬಂಪರ್ ಪ್ರಮುಖ ಆಕರ್ಷಣೆಯಾಗಲಿದೆ.

ನ್ಯೂ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ500 ಬಿಡುಗಡೆ ಮಾಹಿತಿ ಬಹಿರಂಗ

ಹಾಗೆಯೇ ಹೊಸ ಕಾರು ಪ್ರಸ್ತುತ ಮಾದರಿಗಿಂತಲೂ ಭಾರೀ ಬದಲಾವಣೆಯನ್ನು ಪಡೆದುಕೊಂಡಿದ್ದು, ನವೀಕೃತ ಮುಂಭಾಗದ ಗ್ರಿಲ್, ಬ್ಯಾನೆಟ್, ಬಂಪರ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್ ಕ್ಲಸ್ಟರ್, ಹಿಂಭಾಗದ ಬಂಪರ್, ಟೈಲ್‌ಗೆಟ್ ವಿನ್ಯಾಸವು ಆಕರ್ಷಕವಾಗಿರಲಿವೆ.

ನ್ಯೂ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ500 ಬಿಡುಗಡೆ ಮಾಹಿತಿ ಬಹಿರಂಗ

50:50 ಅನುಪಾತದ ಆಸನಗಳ ಸೌಲಭ್ಯದಿಂದಾಗಿ ಬೂಟ್ ಸ್ಪೆಸ್ ಸೌಲಭ್ಯವನ್ನು ಅಗತ್ಯ ಸಂದರ್ಭಗಳಲ್ಲಿ ವಿಸ್ತರಣೆ ಮಾಡಿಕೊಳ್ಳಬಹುದಾಗಿದ್ದು, ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ 6 ಮತ್ತು 7 ಸೀಟುಗಳ ಆಯ್ಕೆ ಪಡೆದುಕೊಳ್ಳಬಹುದು.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ನ್ಯೂ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ500 ಬಿಡುಗಡೆ ಮಾಹಿತಿ ಬಹಿರಂಗ

ಇದರೊಂದಿಗೆ ಹೊಸ ಕಾರಿನಲ್ಲಿ ರಡಾರ್ ಸೌಲಭ್ಯವನ್ನು ಅಳವಡಿಸಲಾಗಿದ್ದು, ಇದು ಅಗತ್ಯ ಸಂದರ್ಭಗಳಲ್ಲಿ ಅಟೊನೊಮಸ್ ಬ್ರೇಕಿಂಗ್ ಸಿಸ್ಟಂನೊಂದಿಗೆ ರಸ್ತೆ ಗುಂಡಿಗಳ ಬಗೆಗೆ ಚಾಲಕನಿಗೆ ಎಚ್ಚರಿಸಲಿದೆ. ಈ ಮೂಲಕ ರಸ್ತೆ ಮೇಲೆ ನಿಗಾ ಇಡಲಿರುವ ಹೊಸ ತಂತ್ರಜ್ಞಾನ ಸೌಲಭ್ಯವು ವಾಯ್ಸ್ ಮೂಲಕ ಚಾಲಕನಿಗೆ ಎಚ್ಚರಿಕೆಯ ಸಂದೇಶ ರವಾನಿಸಲಿದ್ದು, ರಿವರ್ಸ್ ಸಂದರ್ಭದಲ್ಲಿ 3ಡಿ ಪನೊರಮಿಕ್ ವ್ಯೂ ಸೌಲಭ್ಯ ಒದಗಿಸುತ್ತದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ನ್ಯೂ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ500 ಬಿಡುಗಡೆ ಮಾಹಿತಿ ಬಹಿರಂಗ

ಎಂಜಿನ್ ಮತ್ತು ಪರ್ಫಾಮೆನ್ಸ್

ನ್ಯೂ ಜನರೇಷನ್ ಎಕ್ಸ್‌ಯುವಿ500 ಕಾರು ಮಾದರಿಯು 180-ಬಿಎಚ್‌ಪಿ ಪ್ರೇರಿತ 2.2 ಡೀಸೆಲ್ ಎಂಜಿನ್ ಜೊತೆಗೆ 190-ಬಿಎಚ್‌ಪಿ ಪ್ರೇರಿತ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಯನ್ನು ಪಡೆದುಕೊಳ್ಳಲಿದ್ದು, ಇದು ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಜೀಪ್ ಕಂಪಾಸ್, ಎಂಜಿ ಹೆಕ್ಟರ್ ಪ್ಲಸ್ ಮತ್ತು ಟಾಟಾ ಸಫಾರಿ ಕಾರಿಗಿಂತಲೂ ಉತ್ತಮ ಎಂಜಿನ್ ಆಯ್ಕೆ ಎನ್ನಲಾಗಿದೆ.

ನ್ಯೂ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ500 ಬಿಡುಗಡೆ ಮಾಹಿತಿ ಬಹಿರಂಗ

ಈ ಮೂಲರಕ ಹೊಸ ಕಾರು ವಿವಿಧ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.50 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿದ್ದು, ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.

Article Published On: Monday, April 5, 2021, 21:01 [IST]
English summary
New Gen Mahindra XUV500 Launch Timeline Revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+