ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಹೊಸ ವರ್ಷದ ಸಂಭ್ರಮದಲ್ಲಿ ಕಾರು ಖರೀದಿದಾರರನ್ನು ಸೆಳೆಯಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದ್ದ ಮಹೀಂದ್ರಾ ಕಂಪನಿಯು ಫೆಬ್ರುವರಿ ಅವಧಿಗೂ ವಿಸ್ತರಿಸಿದ್ದು, ಕಾರು ಮಾದರಿಗಳಿಗೆ ಅನುಗುಣವಾಗಿ ಕನಿಷ್ಠ ರೂ. 24 ಸಾವಿರದಿಂದ ಗರಿಷ್ಠ ರೂ. 3.06 ಲಕ್ಷದ ತನಕ ಉಳಿತಾಯ ಮಾಡಬಹುದಾಗಿದೆ.

ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಕೋವಿಡ್ ಪರಿಣಾಮ ಕಾರು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದ ಮಹೀಂದ್ರಾ ಕಂಪನಿಯು ಕಳೆದ ಕೆಲ ತಿಂಗಳಿನಿಂದ ಹೊಸ ಕಾರುಗಳ ಮಾರಾಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಹೊಸ ಆಫರ್‌ಗಳ ಮೂಲಕ ಕಾರು ಮಾರಾಟದಲ್ಲಿ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದೆ. ಹೀಗಾಗ ಹೊಸ ವರ್ಷದ ಸಂಭ್ರಮದಲ್ಲಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರನ್ನು ಸೆಳೆಯಲು ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದ ಕಂಪನಿಯು ಹೊಸ ಆಫರ್‌ಗಳನ್ನು ಫೆಬ್ರುವರಿ ಅವಧಿಗೂ ಮುಂದುವರಿಸಿದೆ. ಹಾಗಾದ್ರೆ ಯಾವ ಕಾರಿನ ಖರೀದಿ ಮೇಲೆ ಎಷ್ಟು ಆಫರ್ ಲಭ್ಯವಿದೆ ಎಂಬುವುದನ್ನು ಇಲ್ಲಿ ತಿಳಿಯೋಣ.

ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಕೆಯುವಿ100 ನೆಕ್ಸ್ಟ್

ಮಹೀಂದ್ರಾ ಎಂಟ್ರಿ ಲೆವಲ್ ಮೈಕ್ರೋ ಎಸ್‌ಯುವಿ ಕಾರು ಮಾದರಿಯಾದ ಕೆಯುವಿ100 ನೆಕ್ಸ್ಟ್ ಕಾರು ಮಾದರಿಯ ಮೇಲೆ ರೂ.38 ಸಾವಿರದಷ್ಟು ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದೆ.

ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಎಕ್ಸ್‌ಯುವಿ300

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಎಕ್ಸ್‌ಯುವಿ300 ಕಾರು ಖರೀದಿಯ ಮೇಲೆ ಒಟ್ಟು ರೂ. 44,500 ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್‌ನಲ್ಲಿ ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿರುವುದಲ್ಲದೆ ಆಯ್ದ ಡೀಲರ್ಸ್‌ಗಳಲ್ಲಿ ರೂ. 62 ಸಾವಿರ ತನಕ ಉಳಿತಾಯ ಮಾಡಬಬಹುದಾಗಿದೆ.

ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಬೊಲೆರೊ ಎಸ್‌ಯುವಿ

ಮಹೀಂದ್ರಾ ಜನಪ್ರಿಯ ಬೊಲೆರೊ ಕಾರು ಖರೀದಿ ಮೇಲೆ ಒಟ್ಟು ರೂ.24 ಸಾವಿರ ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್ ಆಫರ್, ಕಾರ್ಪೊರೆಟ್ ಬೊನಸ್ ಮತ್ತು ಕ್ಯಾಶ್ ಡಿಸ್ಕೌಂಟ್ ಸಹ ಲಭ್ಯವಿರಲಿವೆ. ಜೊತೆಗೆ ಆಯ್ದ ಮಾದರಿಗಳ ಮೇಲೆ ವಿಸ್ತರಿತ ವಾರಂಟಿ ಸೌಲಭ್ಯವು ಸಹ ಲಭ್ಯವಾಗಲಿದ್ದು, ನ್ಯೂ ಜನರೇಷನ್ ಮಾದರಿಗಳ ಬಿಡುಗಡೆಗಾಗಿ ಹೊಸ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಾಗುತ್ತಿದೆ.

ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಸ್ಕಾರ್ಪಿಯೋ ಎಸ್‌ಯುವಿ

ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಕಾರು ಖರೀದಿಯ ಮೇಲೆ ರೂ. 39,500 ಸಾವಿರ ತನಕ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳು ಎಕ್ಸ್‌ಚೆಂಜ್ ಬೋನಸ್, ಕ್ಯಾಶ್ ಡಿಸ್ಕೌಂಟ್ ಮತ್ತು ಎಸ್5 ವೆರಿಯೆಂಟ್ ಮೇಲೆ ಹೆಚ್ಚುವರಿಯಾಗಿ ರೂ.10 ಸಾವಿರ ಕ್ಯಾಶ್ ಡಿಸ್ಕೌಂಟ್ ಲಭ್ಯವಿದೆ.

ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಎಕ್ಸ್‌ಯುವಿ500 ಎಸ್‌ಯುವಿ

ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ500 ಕಾರು ಖರೀದಿಯ ಮೇಲೆ ರೂ.80,800 ಡಿಸ್ಕೌಂಟ್ ನೀಡುತ್ತಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಡಿಸ್ಕೌಂಟ್ ಲಭ್ಯವಿದೆ. ಹೊಸ ಆಫರ್‌ಗಳಲ್ಲಿ ರೂ. 36,800 ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ ಎಕ್ಸ್‌ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಮರಾಜೋ ಎಂಪಿವಿ

ಮರಾಜೋ ಎಂಪಿವಿ ಕಾರು ಖರೀದಿಯ ಮೇಲೆ ಮಹೀಂದ್ರಾ ಕಂಪನಿಯು ರೂ. 36 ಸಾವಿರ ತನಕ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ರೂ. 15 ಸಾವಿರ ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ ಎಕ್ಸ್‌ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಅಲ್ಟುರಾಸ್ ಜಿ4 ಎಸ್‌ಯುವಿ

ಮಹೀಂದ್ರಾ ಕಂಪನಿ ತನ್ನ ಹೈ ಎಂಡ್ ಎಸ್‌ಯುವಿ ಕಾರು ಮಾದರಿಯಾದ ಅಲ್ಟುರಾಸ್ ಜಿ4 ಕಾರು ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಹೊಸ ಕಾರು ಖರೀದಿಸುವ ಗ್ರಾಹಕರಿಗೆ ರೂ. 3.06 ಲಕ್ಷದಷ್ಟು ಆಫರ್ ನೀಡುತ್ತಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಹೊಸ ಆಫರ್‌ನಲ್ಲಿ 2.20 ಲಕ್ಷ ಕ್ಯಾಶ್ ಡಿಸ್ಕೌಂಟ್, ರೂ. 50 ಸಾವಿರ ಎಕ್ಸ್‌ಚೆಂಜ್ ಆಫರ್, ರೂ.16 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಸೇರಿದಂತೆ ರೂ.20 ಸಾವಿರದಷ್ಟು ಆಕ್ಸೆಸರಿಸ್ ಕೊಡುಗೆಗಳನ್ನು ನೀಡಲಾಗುತ್ತದ್ದು, ಹೊಸ ಆಫರ್‌ಗಳು ಈ ತಿಂಗಳು 28ಕ್ಕೆ ಮುಕ್ತಾಯಗೊಳ್ಳಲಿವೆ.

Article Published On: Tuesday, February 9, 2021, 12:35 [IST]
English summary
Mahindra Offering Attractive Discounts In February. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+