2022ರ ಜನವರಿ 14ರ ಒಳಗೆ 14 ಸಾವಿರ ಯುನಿಟ್ XUV700 ಕಾರುಗಳ ವಿತರಣೆಗೆ ಸಿದ್ದವಾದ Mahindra

ಹೊಚ್ಚ ಹೊಸ ಮಹೀಂದ್ರಾ(Mahindra) ಎಕ್ಸ್‌ಯುವಿ700(XUV700) ಎಸ್‌ಯುವಿ ಮಾದರಿಯು ಭಾರತದಲ್ಲಿ ಬಿಡುಗಡೆಯ ನಂತರ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಇದುವರೆಗೆ ಸುಮಾರು 65 ಸಾವಿರಕ್ಕೂ ಹೆಚ್ಚು ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದೆ.

2022ರ ಜನವರಿ 14ರ ಒಳಗೆ 14 ಸಾವಿರ ಯುನಿಟ್ XUV700 ಕಾರುಗಳ ವಿತರಣೆಗೆ ಸಿದ್ದವಾದ Mahindra

ಮಹೀಂದ್ರಾ ಕಂಪನಿಯು ಈಗಾಗಲೇ ಬುಕ್ಕಿಂಗ್ ಆಧಾರದ ಮೇಲೆ ಹೊಸ ಕಾರು ವಿತರಣೆಯನ್ನು ಆರಂಭಿಸಿದ್ದು, ಭಾರೀ ಪ್ರಮಾಣದ ಬುಕ್ಕಿಂಗ್ ದಾಖಲಾಗಿರುವುದರಿಂದ ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆಯನ್ನು ಸಹ ತೀವ್ರಗೊಳಿಸಲಾಗಿದೆ. ಬುಕ್ಕಿಂಗ್ ಪ್ರಮಾಣಕ್ಕೆ ಅನುಗುಣವಾಗಿ ವಿತರಣೆಯನ್ನು ತೀವ್ರಗೊಳಿಸಿರುವ ಕಂಪನಿಯು ಮುಂಬರುವ ಜನವರಿ 14ರ ಒಳಗಾಗಿ ಒಟ್ಟು 14 ಸಾವಿರ ಯುನಿಟ್ ಕಾರುಗಳನ್ನು ವಿತರಿಸುವ ಗುರಿಹೊಂದಿದೆ.

2022ರ ಜನವರಿ 14ರ ಒಳಗೆ 14 ಸಾವಿರ ಯುನಿಟ್ XUV700 ಕಾರುಗಳ ವಿತರಣೆಗೆ ಸಿದ್ದವಾದ Mahindra

ಹೊಸ ಎಕ್ಸ್‌ಯುವಿ700 ಕಾರು ಮಾದರಿಯನ್ನು ಬಿಡುಗಡೆಗೊಳಿಸಿದ ಮೊದಲ ದಿನವೇ ಮಹೀಂದ್ರಾ ಕಂಪನಿಯು 25 ಸಾವಿರ ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡರೆ ಮತ್ತು ಎರಡನೇ ದಿನದ ಬುಕ್ಕಿಂಗ್ ಅವಧಿಯಲ್ಲಿ ಮತ್ತೆ 25 ಸಾವಿರ ಬುಕ್ಕಿಂಗ್ ಪಡೆದುಕೊಳ್ಳುವ ಮೂಲಕ ಹೊಸ ದಾಖಲೆಯೊಂದಿಗೆ ಇದುವರೆಗೆ ಮಹೀಂದ್ರಾ ಕಂಪನಿಯು ಬರೋಬ್ಬರಿ 65 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ.

2022ರ ಜನವರಿ 14ರ ಒಳಗೆ 14 ಸಾವಿರ ಯುನಿಟ್ XUV700 ಕಾರುಗಳ ವಿತರಣೆಗೆ ಸಿದ್ದವಾದ Mahindra

ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರಿನ ಮೊದಲ 25 ಸಾವಿರ ಯುನಿಟ್‌ಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯನ್ನು ರೂ. 22.89 ಲಕ್ಷ ಬೆಲೆ ಹೊಂದಿರಲಿವೆ.

2022ರ ಜನವರಿ 14ರ ಒಳಗೆ 14 ಸಾವಿರ ಯುನಿಟ್ XUV700 ಕಾರುಗಳ ವಿತರಣೆಗೆ ಸಿದ್ದವಾದ Mahindra

ಮೊದಲ ದಿನದ 25 ಸಾವಿರ ಯುನಿಟ್ ನಂತರ ಎರಡನೇ ದಿನ ದಾಖಲಾಗಿರುವ 25 ಸಾವಿರ ಯುನಿಟ್ ಕಾರುಗಳಿಗೆ ಕಂಪನಿಯು ರೂ. 12.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22.99 ಲಕ್ಷಕ್ಕೆ ಬೆಲೆ ಹೆಚ್ಚಿಸಿದ್ದು, 50 ಸಾವಿರ ಯುನಿಟ್ ನಂತರ ಕಾರು ಖರೀದಿಸುವ ಗ್ರಾಹಕರಿಗೆ ಇನ್ನಷ್ಟು ದುಬಾರಿಯಾಗಿರಲಿದೆ.

2022ರ ಜನವರಿ 14ರ ಒಳಗೆ 14 ಸಾವಿರ ಯುನಿಟ್ XUV700 ಕಾರುಗಳ ವಿತರಣೆಗೆ ಸಿದ್ದವಾದ Mahindra

ಉತ್ಪಾದನೆಯ ಆಧಾರದ ಮೇಲೆ ಬುಕ್ಕಿಂಗ್ ಮಾಡಲಾದ ಹೊಸ ಕಾರುಗಳ ವಿತರಣೆಯು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಕಂಪನಿಯು ಮೊದಲ 25 ಸಾವಿರ ಯುನಿಟ್‌ಗಳಿಗೆ ಒಂದು ಬೆಲೆ ಮತ್ತು ನಂತರದ 25 ಸಾವಿರ ಯನಿಟ್‌ಗಳಿಗೆ ಬೆಲೆ ಹೆಚ್ಚಿಸಿದೆ.

2022ರ ಜನವರಿ 14ರ ಒಳಗೆ 14 ಸಾವಿರ ಯುನಿಟ್ XUV700 ಕಾರುಗಳ ವಿತರಣೆಗೆ ಸಿದ್ದವಾದ Mahindra

ಇನ್ನು ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ಎನ್ನುವ ವಿವಿಧ ವೆರಿಯೆಂಟ್‌ಗಳೊಂದಿಗೆ ಆಕರ್ಷಕ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿದ್ದು, ಕಂಪನಿಯೇ ಜೋಡಣೆ ಮಾಡುವ 7 ಸೀಟರ್ ಮಾದರಿಗಳನ್ನು ಹೊರತುಪಡಿಸಿ 5 ಸೀಟರ್ ಹೊಂದಿರುವ ಮಾದರಿಗಳಲ್ಲಿ 7 ಸೀಟರ್ ಬಯಸುವ ಗ್ರಾಹಕರು ಹೆಚ್ಚುವರಿ ರೂ. 70 ಸಾವಿರ ಪಾವತಿ ಮಾಡಬೇಕಾಗುತ್ತದೆ.

2022ರ ಜನವರಿ 14ರ ಒಳಗೆ 14 ಸಾವಿರ ಯುನಿಟ್ XUV700 ಕಾರುಗಳ ವಿತರಣೆಗೆ ಸಿದ್ದವಾದ Mahindra

ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

2022ರ ಜನವರಿ 14ರ ಒಳಗೆ 14 ಸಾವಿರ ಯುನಿಟ್ XUV700 ಕಾರುಗಳ ವಿತರಣೆಗೆ ಸಿದ್ದವಾದ Mahindra

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

2022ರ ಜನವರಿ 14ರ ಒಳಗೆ 14 ಸಾವಿರ ಯುನಿಟ್ XUV700 ಕಾರುಗಳ ವಿತರಣೆಗೆ ಸಿದ್ದವಾದ Mahindra

ಹೊಸ ಕಾರಿನಲ್ಲಿ ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್, 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಪಡೆದುಕೊಂಡಿದೆ.

2022ರ ಜನವರಿ 14ರ ಒಳಗೆ 14 ಸಾವಿರ ಯುನಿಟ್ XUV700 ಕಾರುಗಳ ವಿತರಣೆಗೆ ಸಿದ್ದವಾದ Mahindra

ಎಕ್ಸ್‌ಯುವಿ700 ಮಾದರಿಯ ಸೈಡ್ ಪ್ರೋಫೈಲ್ ಮತ್ತು ಹಿಂಬದಿಯ ವಿನ್ಯಾಸವು ಕೂಡಾ ಸಾಕಷ್ಟು ಹೊಸತನದಿಂದ ಕೂಡಿದ್ದು, ಹಿಂಬದಿಯ ಫೆಂಡರ್‌ನೊಂದಿಗೆ ಹರಡಿಕೊಂಡಿರುವ ವಿಭಜಿತ ಟೈಲ್‌ಲ್ಯಾಂಪ್, ವಿನೂತನ ವಿನ್ಯಾಸದ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್, ಶಾರ್ಕ್ ಫಿನ್ ಆಂಟೆನಾ, ರೂಫ್ ಸ್ಪಾಯ್ಲರ್ ಪಡೆದುಕೊಂಡಿದೆ.

2022ರ ಜನವರಿ 14ರ ಒಳಗೆ 14 ಸಾವಿರ ಯುನಿಟ್ XUV700 ಕಾರುಗಳ ವಿತರಣೆಗೆ ಸಿದ್ದವಾದ Mahindra

ಹಾಗೆಯೇ ಹೊಸ ಕಾರಿನಲ್ಲಿ 10.25 ಇಂಚಿನ ಡಿಜಿಟಲ್ ಮತ್ತು ಇನ್ಪೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲೂ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್ ಮತ್ತು ಏರ್ ಪ್ಯೂರಿಫ್ಲೈರ್ ಸೌಲಭ್ಯಗಳಿವೆ.

2022ರ ಜನವರಿ 14ರ ಒಳಗೆ 14 ಸಾವಿರ ಯುನಿಟ್ XUV700 ಕಾರುಗಳ ವಿತರಣೆಗೆ ಸಿದ್ದವಾದ Mahindra

ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂ ಸೌಲಭ್ಯವು ಹೊಸ ಕಾರಿನ ಪ್ರಮುಖ ಸುರಕ್ಷಾ ಸೌಲಭ್ಯವಾಗಿದ್ದು, ಇದರ ಜೊತೆಗೆ 7-ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್, ಲೆನ್ ಕಿಪ್ ಅಸಿಸ್ಟ್ ಸೌಲಭ್ಯ ಹೊಂದಿದೆ.

Article Published On: Thursday, October 28, 2021, 18:41 [IST]
English summary
Mahindra planning 14000 units xuv700 deliveries in 75 days
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+