Just In
- 8 hrs ago
ಹೊಸ ಹೂಡಿಕೆಯೊಂದಿಗೆ ಇವಿ ವಾಹನ ಉತ್ಪಾದನೆ ಹೆಚ್ಚಿಸಲು ನಿರ್ಧರಿಸಿದ ಒಕಿನಾವ - 10 hrs ago
ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ವಿಶೇಷತೆಗಳು - 10 hrs ago
ಲಾಕ್ಡೌನ್ ಹಿನ್ನಲೆಯಲ್ಲಿ ಬೈಕ್ಗಳ ವಾರಂಟಿ ವಿಸ್ತರಿಸಿದ ಕೆಟಿಎಂ ಮತ್ತು ಹಸ್ಕ್ವರ್ನಾ - 11 hrs ago
ಎಲೆಕ್ಟ್ರಿಕ್ ಕಾರು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ ಲ್ಯಾಂಬೊರ್ಗಿನಿ
Don't Miss!
- News
ಕರ್ನಾಟಕಕ್ಕೆ ಬಂತು 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ - Lifestyle
ಬುಧವಾರವಾರದ ದಿನ ಭವಿಷ್ಯ: ಈ ರಾಶಿಯ ವ್ಯಾಪಾರಸ್ಥರಿಗೆ ಇಂದು ಅದೃಷ್ಟ ಖುಲಾಯಿಸಲಿದೆ - Finance
ಟಾಟಾ ಮೋಟಾರ್ಸ್ ನಾಲ್ಕನೇ ತ್ರೈಮಾಸಿಕ ವರದಿ: ಒಟ್ಟು ನಿವ್ವಳ ನಷ್ಟ 7,605 ಕೋಟಿ ರೂಪಾಯಿ - Education
National Test Abhyas App: ಜೆಇಇ ಮತ್ತು ನೀಟ್ ಪರೀಕ್ಷೆ ಅಧ್ಯಯನಕ್ಕೆ ನ್ಯಾಷನಲ್ ಟೆಸ್ಟ್ ಅಭ್ಯಾಸ್ ಆಪ್ - Movies
ಕಿರುತೆರೆ ಹಿರಿಯ ಕಲಾವಿದರಿಗೆ, ತಂತ್ರಜ್ಞರಿಗೆ ಉಚಿತ ಕೊರೊನಾ ಲಸಿಕೆ - Sports
ಐಪಿಎಲ್ : ಅತಿಹೆಚ್ಚು ಪಂದ್ಯಗಳಲ್ಲಿ ಅಜೇಯನಾಗಿ ಉಳಿದಿರುವ ಆಟಗಾರ ಯಾರು ಗೊತ್ತಾ? - Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ! - Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಥಾರ್ ಎಸ್‌ಯುವಿ ಕಾರಿನಲ್ಲಿ ಮತ್ತೊಂದು ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಮಹೀಂದ್ರಾ
ಮಹೀಂದ್ರಾ ಕಂಪನಿಯು ಕಳೆದ ವರ್ಷ ಅಕ್ಟೋಬರ್ 2ರಂದು ಹೊಸ ತಲೆಮಾರಿನ ಥಾರ್ ಎಸ್‌ಯುವಿ ಬಿಡುಗಡೆಯ ಮೂಲಕ ಆಫ್ ರೋಡ್ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇದೀಗ ಹೊಸ ಕಾರಿನಲ್ಲಿ ಮತ್ತೊಂದು ಹೊಸ ವೆರಿಯೆಂಟ್ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಹೊಸ ತಲೆಮಾರಿನ ಥಾರ್ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಥಾರ್ ಕಾರಿನ ಮತ್ತೊಂದು ಹೊಸ ವೆರಿಯೆಂಟ್ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ವೆರಿಯೆಂಟ್ ಅನ್ನು ಸಿಲ್ವರ್ ಬಣ್ಣದೊಂದಿಗೆ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ. ಆದರೆ ಹೊಸ ಮಾದರಿಯು ಕೇವಲ ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆಯಾ ಅಥವಾ ಹೊಸ ವೆರಿಯೆಂಟ್ ಪಡೆದುಕೊಳ್ಳುತ್ತಾ ಎನ್ನುವ ಸ್ಪಷ್ಟ ಮಾಹಿತಿಗಳಿಲ್ಲ.

ಆದರೆ ಕೆಲವು ಮಾಹಿತಿಗಳ ಪ್ರಕಾರ ಥಾರ್ ಹೊಸ ಕಾರಿನಲ್ಲಿ ಕನ್ವರ್ಟಿಬಲ್ ಹಾರ್ಡ್ ಟಾಪ್ ಬಿಡುಗಡೆ ಮಾಡಬಹುದೆಂಬ ಮಾಹಿತಿಗಳಿದ್ದು, ಶೀಘ್ರದಲ್ಲೇ ಹೊಸ ಥಾರ್ ಮಾದರಿಯು ಅಧಿಕೃತವಾಗಿ ಖರೀದಿ ಲಭ್ಯವಾಗಲಿದೆ.

ಥಾರ್ ಆರಂಭಿಕ ಆವೃತ್ತಿಯ ಸ್ಥಗಿತದ ನಂತರ ಹೊಸ ಎಂಟ್ರಿ ಲೆವಲ್ ಮಾದರಿಯನ್ನು ಪರಿಚಯಿಸುತ್ತಿರಬಹುದು ಎನ್ನುವ ಕೆಲವು ಮಾಹಿತಿಗಳಿದ್ದು, ಹೊಸ ಮಾದರಿಯು ಮುಂಬರುವ ಕೆಲವೇ ದಿನಗಳಲ್ಲಿ ಬಿಡುಗಡೆಯ ಉದ್ದೇಶದಿಂದ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿದೆ.

ಇನ್ನು ಗ್ರಾಹಕರ ಬೇಡಿಕೆಯೆಂತೆ ಥಾರ್ ಆರಂಭಿಕ ಆವೃತ್ತಿಗಳಾದ ಎಎಕ್ಸ್ ಪೆಟ್ರೋಲ್ ಸ್ಟ್ಯಾಂಡರ್ಡ್ ಸಿಕ್ಸ್ ಸೀಟರ್, ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಮತ್ತು ಎಎಕ್ಸ್ ಸಿಕ್ಸ್ ಸೀಟರ್ ಡೀಸೆಲ್ ಸಾಫ್ಟ್ ಟಾಪ್ ಮಾದರಿಗಳನ್ನು ಸ್ಥಗಿತಗೊಳಿಸಿರುವ ಕಂಪನಿಯು ಹೈ ಎಂಡ್ ಮಾದರಿಗಳ ಮಾರಾಟದ ಮೇಲೆ ಹೆಚ್ಚು ಗಮನಹರಿಸಿದೆ. ವೆರಿಯೆಂಟ್ ಬದಲಾವಣೆ ನಂತರ ಥಾರ್ ಕಾರು ಆರಂಭಿಕ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.10 ಲಕ್ಷದಿಂದ ಟಾಪ್ ಮಾದರಿಯು ರೂ. 14.15 ಲಕ್ಷ ಬೆಲೆ ಪಡೆದುಕೊಂಡಿದ್ದು, ಬೆಲೆ ಬದಲಾವಣೆಯ ನಂತರ ಆರಂಭಿಕ ಕಾರು ಮಾದರಿಯು ಮತ್ತಷ್ಟು ದುಬಾರಿಯಾಗಲಿದೆ.
ಕ್ಲಾಸಿಕ್ ಬೈಕ್ ಪ್ರಿಯರಿಗಾಗಿ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಹೊಸ ಮಿಟಿಯೊರ್ 350 ಹೇಗಿದೆ? ಈ ವಿಡಿಯೋ ನೋಡಿ..
ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದೆ ಎನ್ನಬಹುದು.

ಹೊಸ ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.
MOST READ: ಗ್ರಾಹಕರ ದೂರು ಹಿನ್ನೆಲೆ...ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಸಬ್ಸಿಡಿ ರದ್ದು

ಹೊಸ ಕಾರಿನ ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

ಹಾಗೆಯೇ ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸೆಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್, ರಿಯರ್ ವ್ಯೂ ಕ್ಯಾಮೆರಾ ಜೋಡಿಸಲಾಗಿದೆ.



Click it and Unblock the Notifications












