ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಹೊಸ ವಿನ್ಯಾಸ, ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಆಫ್ ರೋಡ್ ಎಸ್‌ಯುವಿ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಿರುವ ನ್ಯೂ ಜನರೇಷನ್ ಮಹೀಂದ್ರಾ ಥಾರ್(Mahindra Thar) ಕಾರು ಮಾದರಿಯು ಬಿಡುಗಡೆಯಾಗಿ ಯಶಸ್ವಿ ಒಂದು ವರ್ಷ ಪೂರೈಸಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಆಫ್ ರೋಡ್ ಎಸ್‌ಯುವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿದೆ.

ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಮಹೀಂದ್ರಾ ಕಂಪನಿಯು 2020ರ ಅಕ್ಟೋಬರ್ 2ರಂದು ಥಾರ್ ಎಸ್‌ಯುವಿ ಕಾರು ಮಾದರಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿತ್ತು. ಹೊಸ ಕಾರು ಇದುವರೆಗೆ ಬರೋಬ್ಬರಿ ಸುಮಾರು 75 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ದಿನಂಪ್ರತಿ 200ರಿಂದ 250 ಗ್ರಾಹಕರು ಸರಾಸರಿಯಾಗಿ ಹೊಸ ಕಾರು ಖರೀದಿಗೆ ಬುಕ್ಕಿಂಗ್ ದಾಖಲಿಸುತ್ತಿದ್ದಾರೆ.

ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಹೊಸ ಥಾರ್ ಕಾರಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿರುವ ಮಹೀಂದ್ರಾ ಕಂಪನಿಯು ಕಳೆದ ಕೆಲ ತಿಂಗಳ ಅವಧಿಯಲ್ಲಿ ಹೆಚ್ಚಿನ ಮಟ್ಟದ ಬುಕ್ಕಿಂಗ್ ಪಡೆದುಕೊಂಡಿದೆ.

ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಬೇಡಿಕೆ ಹೆಚ್ಚಿರುವ ಹಿನ್ನಲೆಯಲ್ಲಿ ನಾಸಿಕ್ ಕಾರು ಘಟಕದಲ್ಲಿನ ಉತ್ಪಾದನಾ ಪ್ರಮಾಣವನ್ನು ಸಹ ಹೆಚ್ಚಳ ಮಾಡಲಾಗಿದ್ದು, ಬುಕ್ಕಿಂಗ್ ನಂತರ ಹೊಸ ಕಾರು ಪಡೆದುಕೊಳ್ಳಲು ಸದ್ಯ ಕನಿಷ್ಠ 5 ರಿಂದ 8 ತಿಂಗಳು ಕಾಲ ಕಾಯಲೇಬೇಕಾಗುತ್ತದೆ.

ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಹೊಸ ಕಾರಿನ ಕಾಯುವಿಕೆ ಅವಧಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದ್ದು, ಸಾಫ್ಟ್ ಟಾಪ್ ಮಾದರಿಗಳು ಕಡಿಮೆ ಅವಧಿಯಲ್ಲಿ ವಿತರಣೆಯಾಗಲಿದ್ದರೆ ಡೀಸೆಲ್ ಆಟೋಮ್ಯಾಟಿಕ್ ಹಾರ್ಡ್ ಟಾಪ್ ಮಾದರಿಗಳ ಖರೀದಿಗೆ ಹೆಚ್ಚು ಕಾಯಬೇಕಿದೆ.

ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಆಫ್ ರೋಡಿಂಗ್ ವೈಶಿಷ್ಟ್ಯತೆಯೊಂದಿಗೆ ತನ್ನದೆ ಆದ ಜನಪ್ರಿಯೆತೆ ಹೊಂದಿರುವ ಥಾರ್ ಕಾರು ಮಾದರಿಯು ಸಾಮಾನ್ಯ ಕಾರು ಮಾದರಿಗಳಂತೆ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.78 ಲಕ್ಷದಿಂದ ಟಾಪ್ ಮಾದರಿಯು ರೂ. 15.08 ಲಕ್ಷ ಬೆಲೆಯೊಂದಿಗೆ ಅತ್ಯುತ್ತಮ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಹೊಸ ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಹೊಸ ಕಾರಿನ ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸೆಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್, ರಿಯರ್ ವ್ಯೂ ಕ್ಯಾಮೆರಾ ಜೋಡಿಸಲಾಗಿದೆ.

ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಇನ್ನು ಮಹೀಂದ್ರಾ ಕಂಪನಿಯು ಥಾರ್ ಕಾರು ಮಾರಾಟದಲ್ಲಿ ಮತ್ತಷ್ಟು ಹೊಸ ಬದಲಾವಣೆಗೆ ಮುಂದಾಗಿದ್ದು, ಹೊಸ ಕಾರಿನಲ್ಲಿ ವಿನೂತನ ಎಂಜಿನ್ ಆಯ್ಕೆ ಹೊಂದಿರುವ ಥಾರ್ ಬೆಸ್ ವೆರಿಯೆಂಟ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಹೊಸ ಕಾರಿನಲ್ಲಿ ನವೀಕರಿಸಲಾದ ಮತ್ತೊಂದು ಎಂಟ್ರಿ ಲೆವಲ್ ಮಾದರಿಯನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಆರಂಭದಲ್ಲಿ ಬಿಡುಗಡೆ ಮಾಡಿದ್ದ ಎಂಟ್ರಿ ಲೆವಲ್ ಸ್ಥಗಿತದ ನಂತರ ಮತ್ತೊಂದು ಹೊಚ್ಚ ಹೊಸ ಮಾದರಿಯನ್ನು ಪರಿಚಯಿಸುವ ಉದ್ದೇಶದಿಂದ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿದೆ.

ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಮಾಹಿತಿಗಳ ಪ್ರಕಾರ, ಥಾರ್ ಆರಂಭಿಕ ಮಾದರಿಯು ಸಂಪೂರ್ಣ ಹೊಸ ಎಂಜಿನ್ ಆಯ್ಕೆಯೊಂದಿಗೆ ಅತಿ ಕಡಿಮೆ ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿದ್ದು, ತ್ರಿ ಸಿಲಿಂಡರ್ ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಬಹುದು ಎನ್ನಲಾಗಿದೆ.

ಮೊದಲ ವರ್ಷದ ಸಂಭ್ರಮ: ಆಫ್ ರೋಡ್ ಕಾರ್ ಬುಕ್ಕಿಂಗ್‌ನಲ್ಲಿ Mahindra Thar ಹೊಸ ದಾಖಲೆ

ಹೊಸ ವೆರಿಯೆಂಟ್ ಅನ್ನು ಆಫ್ ರೋಡ್‌ಗೆ ಬದಲಾಗಿ ಅರ್ಬನ್ ಮಾದರಿಯಾಗಿ ಬಿಡುಗಡೆ ಮಾಡುತ್ತಿದ್ದು, 4x4 ಡ್ರೈವ್ ಸಿಸ್ಟಂ ಬದಲಾಗಿ 2 ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಮಾಡುತ್ತಿದ್ದು, ಬೆಲೆ ಕಡಿತಗೊಳಿಸಲು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಕೈಬಿಡಲಾಗುತ್ತಿದ್ದರೂ ಎಂಟ್ರಿ ಲೆವಲ್ ಆಫ್ ರೋಡ್ ಪ್ರಿಯರಿಗಾಗಿ ಹೊಸ ವೆರಿಯೆಂಟ್ ಆಕರ್ಷಿಸಲಿದೆ.

Most Read Articles

Kannada
English summary
Mahindra thar suv bookings cross 75 000 units details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X