ಥಾರ್ ಹೊಸ ಎಂಟ್ರಿ ಲೆವಲ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ನ್ಯೂ ಜನರೇಷನ್ ಥಾರ್ ಎಸ್‌ಯುವಿ ಬಿಡುಗಡೆಯ ನಂತರ ಗ್ರಾಹಕರ ಬೇಡಿಕೆಯೆಂತೆ ವಿವಿಧ ವೆರಿಯೆಂಟ್‌ಗಳ ಮಾರಾಟದಲ್ಲಿ ಪ್ರಮುಖ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಹೊಸ ಕಾರಿನಲ್ಲಿ ಶೀಘ್ರದಲ್ಲೇ ನವೀಕರಿಸಲಾದ ಮತ್ತೊಂದು ಎಂಟ್ರಿ ಲೆವಲ್ ಜೊತೆಗೆ ಮಧ್ಯಮ ಕ್ರಮಾಂಕದಲ್ಲೂ ಮತ್ತಷ್ಟು ಹೊಸ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ.

ಥಾರ್ ಹೊಸ ಎಂಟ್ರಿ ಲೆವಲ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಹೊಸ ತಲೆಮಾರಿನ ಥಾರ್ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಥಾರ್ ಕಾರಿನ ಹೊಸ ವೆರಿಯೆಂಟ್ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ವೆರಿಯೆಂಟ್ ಅನ್ನು ಸಿಲ್ವರ್ ಬಣ್ಣದೊಂದಿಗೆ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ. ಥಾರ್ ಮಾದರಿಯಲ್ಲಿ ಈ ಹಿಂದೆ ಎರಡು ಎಂಟ್ರಿ ಲೆವಲ್ ಮಾದರಿಗಳ ಮಾರಾಟವನ್ನು ತೆಗೆದುಹಾಕಿದ್ದ ಮಹೀಂದ್ರಾ ಕಂಪನಿಯು ಹೊಸ ಆವೃತ್ತಿ ಮಾರಾಟ ಮಾಡಲಿದ್ದು, ಮಧ್ಯಮ ಕ್ರಮಾಂಕದ ಆವೃತ್ತಿಗಳಲ್ಲಿ ಕನ್ವರ್ಟಿಬಲ್ ಹಾರ್ಡ್ ಟಾಪ್ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಥಾರ್ ಹೊಸ ಎಂಟ್ರಿ ಲೆವಲ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಥಾರ್ ಆರಂಭಿಕ ಆವೃತ್ತಿಯ ಸ್ಥಗಿತದ ನಂತರ ಹೊಸ ಎಂಟ್ರಿ ಲೆವಲ್ ಮಾದರಿಯನ್ನು ಪರಿಚಯಿಸುವ ಉದ್ದೇಶದಿಂದ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, ಹೊಸ ಆವೃತ್ತಿಯು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿವೆ.

ಥಾರ್ ಹೊಸ ಎಂಟ್ರಿ ಲೆವಲ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಟಾಪ್ ಎಂಡ್ ಮಾದರಿಗಳನ್ನು ನಾಲ್ಕು ಆಸನ ಸೌಲಭ್ಯದೊಂದಿಗೆ ಬಿಡುಗಡೆ ಮಾಡುವ ಮಹೀಂದ್ರಾ ಕಂಪನಿಯು ಎಂಟ್ರಿ ಲೆವಲ್ ಮಾದರಿಯಲ್ಲಿ 6 ಸೀಟರ್ ಸೌಲಭ್ಯ ನೀಡಲಿದೆ. 6 ಸೀಟರ್ ಮಾದರಿಯಲ್ಲಿ ಹಿಂಬದಿಯ ಆಸನಗಳು ಬೆಂಚ್ ಸೀಟ್ ಮಾದರಿಗಳಾಗಿದ್ದು, ಮುಂಭಾಗ ಎರಡು ಮತ್ತು ಹಿಂಬದಿಯಲ್ಲಿ ಮಡಿಕೆ ಮಾಡಬಹುದಾದ ಬೆಂಚ್ ಸೀಟ್ ಇರಲಿವೆ.

ಥಾರ್ ಹೊಸ ಎಂಟ್ರಿ ಲೆವಲ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಇನ್ನು ಗ್ರಾಹಕರ ಬೇಡಿಕೆಯೆಂತೆ ಥಾರ್ ಆರಂಭಿಕ ಆವೃತ್ತಿಗಳಾದ ಎಎಕ್ಸ್ ಪೆಟ್ರೋಲ್ ಸ್ಟ್ಯಾಂಡರ್ಡ್ ಸಿಕ್ಸ್ ಸೀಟರ್, ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಮತ್ತು ಎಎಕ್ಸ್ ಸಿಕ್ಸ್ ಸೀಟರ್ ಡೀಸೆಲ್ ಸಾಫ್ಟ್ ಟಾಪ್ ಮಾದರಿಗಳನ್ನು ಸ್ಥಗಿತಗೊಳಿಸಿರುವ ಕಂಪನಿಯು ಹೈ ಎಂಡ್ ಮಾದರಿಗಳ ಮಾರಾಟದ ಮೇಲೆ ಹೆಚ್ಚು ಗಮನಹರಿಸಿದೆ. ವೆರಿಯೆಂಟ್ ಬದಲಾವಣೆ ನಂತರ ಥಾರ್ ಕಾರು ಆರಂಭಿಕ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.10 ಲಕ್ಷದಿಂದ ಟಾಪ್ ಮಾದರಿಯು ರೂ. 14.15 ಲಕ್ಷ ಬೆಲೆ ಪಡೆದುಕೊಂಡಿದ್ದು, ಬೆಲೆ ಬದಲಾವಣೆಯ ನಂತರ ಆರಂಭಿಕ ಕಾರು ಮಾದರಿಯು ಮತ್ತಷ್ಟು ದುಬಾರಿಯಾಗಲಿದೆ.

ಥಾರ್ ಹೊಸ ಎಂಟ್ರಿ ಲೆವಲ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದೆ ಎನ್ನಬಹುದು.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಥಾರ್ ಹೊಸ ಎಂಟ್ರಿ ಲೆವಲ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಹೊಸ ಕಾರಿನ ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

ಥಾರ್ ಹೊಸ ಎಂಟ್ರಿ ಲೆವಲ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಹಾಗೆಯೇ ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಥಾರ್ ಹೊಸ ಎಂಟ್ರಿ ಲೆವಲ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸೆಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್, ರಿಯರ್ ವ್ಯೂ ಕ್ಯಾಮೆರಾ ಜೋಡಿಸಲಾಗಿದೆ.

More from DriveSpark

Article Published On: Monday, March 15, 2021, 18:20 [IST]
English summary
Mahindra Thar Spotted Testing With Side Facing Rear Seats. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+