ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರ ಸ್ಥಗಿತಗೊಳಿಸಲಿದೆ Mahindra

ಕೋವಿಡ್ ಭೀತಿ ನಡುವೆಯೂ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆ ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡುತ್ತಿದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra

ಹೊಸ ವಾಹನಗಳ ಉತ್ಪಾದನೆಗಾಗಿ ಅತಿಅವಶ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್(ಸೆಮಿಕಂಡಕ್ಟರ್) ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ. ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತ ಮಾತ್ರವಲ್ಲ ವಿಶ್ವದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದ್ದು, ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra

ವಿದೇಶಿ ಮಾರುಕಟ್ಟೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದ್ದ ಎಲೆಕ್ಟ್ರಾನಿಕ್ ಚಿಪ್ ಪ್ರಮಾಣವು ತಗ್ಗಿರುವುದರಿಂದ ದೇಶದಲ್ಲಿನ ಉತ್ಪಾದನಾ ಲಭ್ಯತೆ ಆಧರಿಸಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯೂ ಹೆಚ್ಚಳವಾಗುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್‌ಗಳಿಲ್ಲದೆ ಪ್ರಮುಖ ಕಾರು ಕಂಪನಿಯು ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿವೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra

ಎಲೆಕ್ಟ್ರಾನಿಕ್ ಚಿಪ್ ಇಲ್ಲದೆ ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸಲು ಸಾಧ್ಯವಿಲ್ಲ. ಕಾರಿನಲ್ಲಿರುವ ಡಿಸ್ ಪ್ಲೇ, ಸ್ಪೀಕರ್, ಸ್ಟ್ಯಾಬಿಲಿಟಿ ಕಂಟ್ರೋಲ್, ಲೈಟಿಂಗ್, ಕಾರ್ ಕನೆಕ್ಟ್ ಫೀಚರ್ಸ್ ಸೇರಿ ಪ್ರಮುಖ ತಾಂತ್ರಿಕ ಸಾಧನಗಳು ಕಾರ್ಯನಿರ್ವಹಿಸಲು ಸೆಮಿ ಕಂಡಕ್ಟರ್ ಅವಶ್ಯವಾಗಿವೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra

ಆದರೆ ಕೋವಿಡ್ ಪರಿಣಾಮ ಬಿಡಿಭಾಗಗಳ ಪೂರೈಕೆಯ ಸರಪಳಿಯಲ್ಲಿ ಆಗಿರುವ ಸಮಸ್ಯೆಯೇ ಎಲೆಕ್ಟ್ರಾನಿಕ್ ಚಿಪ್ ಕೊರತೆಗೆ ಪ್ರಮುಖ ಕಾರಣವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳಿಗೆ ಪೂರೈಕೆಯಾಗಬೇಕಿದ್ದ ಹೆಚ್ಚಿನ ಪ್ರಮಾಣದ ಎಲೆಕ್ಟ್ರಾನಿಕ್ ಚಿಪ್ ಸ್ಟಾಕ್ ಇದೀಗ ಲ್ಯಾಪ್‌ಟಾಪ್‌, ಮೊಬೈಲ್‌ಗಳು ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನ ಉತ್ಪಾದನೆಗೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra

ಹೀಗಾಗಿ ಎಲೆಕ್ಟ್ರಾನಿಕ್ ಚಿಪ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವು ವಿಶ್ವಾದ್ಯಂತ ಪ್ರಮುಖ ಕಾರು ಕಂಪನಿಗಳಿಗೆ ಹೊಡೆತ ನೀಡುತ್ತಿದ್ದು, ದೇಶದ ಪ್ರಮುಖ ಕಾರು ಉತ್ಪಾದನಾ ಕಂಪನಿಯಾಗಿರುವ ಮಹೀಂದ್ರಾ (Mahindra) ಸಹ ಸೆಮಿ ಕಂಡಕ್ಟರ್ ಕೊರತೆ ಎದುರಿಸುತ್ತಿದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra

ಕಳೆದ ವರ್ಷದ ಅಕ್ಟೋಬರ್‌ನಲ್ಲೂ ಸೆಮಿ ಕಂಡಕ್ಟರ್ ಕೊರೆತೆಯಿಂದಾಗಿಯೇ ಒಂದು ವಾರಗಳ ಕಾಲ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದ ಮಹೀಂದ್ರಾ ಕಂಪನಿಯು ಇದೀಗ ಮತ್ತೆ ಕಾರು ಉತ್ಪಾದನೆ ಸ್ಥಗಿತಗೊಳಿಸಲು ಮುಂದಾಗಿದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra

ಸೆಮಿ ಕಂಡಕ್ಟರ್ ಸ್ಟಾಕ್ ಪ್ರಮಾಣವನ್ನು ಆಧರಿಸಿ ಒಂದು ವಾರಗಳ ಕಾಲ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವ ಮಹೀಂದ್ರಾ ಕಂಪನಿಯು ಲಾಭಾಂಶದ ಕುರಿತು ಕಳವಳ ವ್ಯಕ್ತಪಡಿಸಿದ್ದು, ಬಿಡಿಭಾಗಗಳ ಕೊರತೆ ನಿಗಿಸುವಂತೆ ಫಾಡಾ ಸಂಸ್ಥೆಗೆ ಮನವಿ ಮಾಡಿದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra

ಕೇವಲ ಮಹೀಂದ್ರಾ ಕಂಪನಿ ಮಾತ್ರ ಮಾರುತಿ ಸುಜುಕಿ ಸಹ ಸೆಮಿ ಕಂಡಕ್ಟರ್ ಕೊರತೆಯಿಂದಾಗಿ ಕಾರು ಉತ್ಪಾದನೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿನ್ನಡೆ ಅನುಭವಿಸಿದ್ದು, ಕಳೆದ ತಿಂಗಳ ಮಾರುತಿ ಸುಜುಕಿ ಕಾರು ಉತ್ಪಾದನೆಯಲ್ಲಿ ಶೇ.60 ರಷ್ಟು ಇಳಿಕೆಯಾಗಿದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra

ಬಿಡಿಬಿಭಾಗಗಳ ಕೊರೆತೆಯು ಮುಂದುವರೆದಲ್ಲಿ ಸೆಪ್ಟೆಂಬರ್‌ ಅವಧಿಯ ಕಾರು ಮಾರಾಟವು ಮತ್ತಷ್ಟು ಕುಸಿಯುವ ಸಾಧ್ಯತೆಗಳಿದ್ದು, ಸೆಮಿ ಕಂಡಕ್ಟರ್ ಉತ್ಪಾದನಾ ಕಂಪನಿಗಳ ಮೇಲೆ ಆಟೋ ಉತ್ಪಾದನಾ ಮತ್ತು ಎಲೆಕ್ಟ್ರಿಕ್ ಉತ್ಪನ್ನ ಉತ್ಪಾದನಾ ಕಂಪನಿಗಳು ಒತ್ತಡ ಹೇರುತ್ತಿರುವುದು ಪರಿಸ್ಥಿತಿ ಮತ್ತಷ್ಟು ವಿಷಮವಾಗುತ್ತಿದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra

ತಗ್ಗಿದ ಪೂರೈಕೆ ಪ್ರಮಾಣವು ಕಡಿಮೆಯಿರುವುರಿಂದ ಪರಿಸ್ಥಿತಿ ತಿಳಿಗೊಳ್ಳಲು ಇನ್ನು ಕೆಲ ತಿಂಗಳುಗಳೇ ಬೇಕಿದ್ದು, ಎಲೆಕ್ಟ್ರಿಕ್ ಚಿಪ್ ಕೊರತೆಯು ಜಾಗತಿಕ ಬಿಕ್ಕಟ್ಟಾಗಿ ಪರಿಣಮಿಸಿದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra

ಭಾರತದಲ್ಲಿ ವಿವಿಧ ಕಂಪನಿಗಳು ಸೆಮಿಕಂಡಕ್ಟರ್ ಉತ್ಪಾದನಾ ಸೌಲಭ್ಯ ಹೊಂದಿದ್ದರೂ ಸೆಮಿಕಂಡಕ್ಟರ್‌ ಉತ್ಪಾದನೆಗೆ ಬೇಕಿರುವ ವಿವಿಧ ರಾಸಾಯನಿಕ ವಸ್ತುಗಳಿಗೆ ಚೀನಾ ಮತ್ತು ತೈವಾನ್ ಮಾರುಕಟ್ಟೆಯನ್ನು ಅವಲಂಬಿಸಿರುವುದಲ್ಲದೆ ಸಣ್ಣ ಪ್ರಮಾಣದ ಉತ್ಪಾದನಾ ಯುನಿಟ್ ಹೊಂದಿವೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra

ಇದರಿಂದಾಗಿ ಹೊಸ ಕಾರುಗಳನ್ನು ಖರೀದಿಸುವ ಯೋಜನೆಯಲ್ಲಿರುವ ಗ್ರಾಹಕರು ಬುಕ್ಕಿಂಗ್ ನಂತರ ಹೆಚ್ಚು ದಿನಗಳ ಕಾಲ ಕಾಯುವಂತಾಗಲಿದೆ. ವರದಿಗಳ ಪ್ರಕಾರ, ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ ಮಾಡಲಾದ ಕಾರುಗಳ ವಿತರಣೆಯು ವಿಳಂಬವಾಗಬಹುದಾಗಿದೆ ಎನ್ನಲಾಗಿದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra ಎಲೆಕ್ಟ್ರಾನಿಕ್ ಚಿಪ್ ಕೊರತೆ: ಕಾರುಗಳ ಉತ್ಪಾದನೆಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಿದೆ Mahindra

ಬಿಡಿಭಾಗಗಳ ಕೊರತೆ ಎದುರಿಸುತ್ತಿರುವ ಕೆಲವು ಕಾರು ಕಂಪನಿಗಳು ತಮ್ಮ ಹೊಸ ಕಾರುಗಳ ಸಾಮಾನ್ಯ ಕಾಯುವ ಅವಧಿಯು 2 ತಿಂಗಳಿನಿಂದ ಇದೀಗ 5ರಿಂದ 6 ತಿಂಗಳಿಗೆ ನಿಗದಿಪಡಿಸುತ್ತಿದ್ದು, ಮುಂಬರುವ ಹಬ್ಬದ ಸಂಭ್ರಮದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಕಾರು ವಿತರಣೆಯು ವಿಳಂಬವಾಗಲಿದೆ.

Article Published On: Friday, September 3, 2021, 11:12 [IST]
English summary
Mahindra to cut car production due to global chip shortage crisis details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+