24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಮಹೀಂದ್ರಾ(Mahindra) ಕಂಪನಿಯು ತನ್ನ ಹೊಸ ಎಕ್ಸ್‌ಯುವಿ700(XUV700) ಮಾದರಿಯ ಬಿಡುಗಡೆಯೊಂದಿಗೆ ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗುತ್ತಿದ್ದು, ಕಂಪನಿಯು ಇದೀಗ ಹೊಸ ಕಾರಿನ ಮೂಲಕ ಸ್ಪೀಡ್ ಎಂಡ್ಯೂರೆನ್ಸ್ ಚಾಲೆಂಜ್‌ನಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆದಿದೆ.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಹೊಸ ಎಕ್ಸ್‌ಯುವಿ700 ಮಾದರಿಗಳು ಮಹೀಂದ್ರಾ ಎಸ್‌ಯುವಿ ಪ್ರೂವಿಂಗ್ ಟ್ರ್ಯಾಕ್(MSPT) ನಲ್ಲಿ ದಿನದ 24 ಗಂಟೆಗಳ ತಡೆರಹಿತ ಚಾಲನೆ ನಡೆಸಿ ಹೊಸ ದಾಖಲೆಗೆ ಕಾರಣವಾಗಿದ್ದು, ಟ್ರ್ಯಾಕ್ ಡ್ರೈವ್ ಮೂಲಕವೇ ಹೊಸ ಎಸ್‌ಯುವಿ ಸರಾಸರಿಯಾಗಿ 4 ಸಾವಿರ ಕಿ.ಮೀ ಚಲಿಸಿ ಹೊಸ ದಾಖಲೆಯನ್ನು ತಮ್ಮದಾಗಿಸಿಕೊಂಡಿದೆ.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಸ್ಪೀಡ್ ಎಂಡ್ಯೂರೆನ್ಸ್ ಚಾಲೆಂಜ್‌ನಲ್ಲಿ ಈ ಹಿಂದೆ ದಿನದ 24 ಗಂಟೆಗಳ ಚಲಿಸುವ ಮೂಲಕ 3,161 ಕಿ.ಮೀ ದಾಖಲೆ ಹೊಂದಿದ್ದ ಎಕ್ಸ್‌ಯುವಿ500 ದಾಖಲೆಯನ್ನು ಇದೀಗ ಎಕ್ಸ್‌ಯುವಿ700 ಮಾದರಿಯು ಹೊಸ ದಾಖಲೆ ನಿರ್ಮಿಸಿದೆ.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಸಂಪೂರ್ಣವಾಗಿ ನಿರ್ಬಂಧಿತ ಪ್ರದೇಶದಲ್ಲಿ ನಡೆದ ಸ್ಪೀಡ್ ಎಂಡ್ಯೂರೆನ್ಸ್ ಚಾಲೆಂಜ್‌ನಲ್ಲಿ ಮಹೀಂದ್ರಾ ಕಂಪನಿಯ ನುರಿತ ಚಾಲಕರ ತಂಡವು 24 ಗಂಟೆಗಳ ಚಾಲನೆಯ ಮೂಲಕ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಇಂಧನ ತುಂಬಿಸಲು ನಿಗದಿತ ಅವಧಿಯನ್ನು ಹೊರತುಪಡಿಸಿ ಯಾವುದೇ ವಿಶ್ರಾಂತಿ ತೆಗೆದುಕೊಳ್ಳದೆ ಕಾರು ಚಾಲನೆ ಮಾಡಲಾಗಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ನಡೆದ ಟ್ರ್ಯಾಕ್ ಟೆಸ್ಟ್‌ನಲ್ಲಿ ಹೊಸ ಕಾರು ಅದ್ಬುತ ಪ್ರದರ್ಶನ ನೀಡಿವೆ.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಪ್ರತಿ ಗಂಟೆಗೆ ಸರಾಸರಿಯಾಗಿ 170-180 ಕಿ.ಮೀ/ಗಂ ವೇಗದಲ್ಲಿ ಚಲಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದು, ಭಾರತದ ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ ಒಕ್ಕೂಟದ ಕಟ್ಟುನಿಟ್ಟಿನ ನಿಯಮಗಳು ಮತ್ತು ವೀಕ್ಷಣೆಯ ಅಡಿಯಲ್ಲಿ ಈ ಟ್ರ್ಯಾಕ್ ಡ್ರೈವ್ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಟ್ರ್ಯಾಕ್ ಡ್ರೈವ್‌ನಲ್ಲಿ ಎಕ್ಸ್‌ಯುವಿ700 ಮಾದರಿಯ ಡೀಸೆಲ್ ಮ್ಯಾನುವಲ್ ರೂಪಾಂತರವು ಗರಿಷ್ಠ ದೂರ(4384.73ಕಿ.ಮೀ) ಡೀಸೆಲ್ ಆಟೋಮ್ಯಾಟಿಕ್ ವೆರಿಯಂಟ್ (4256.12 ಕಿಮೀ), ಪೆಟ್ರೋಲ್ ಮ್ಯಾನುವಲ್(4232.01 ಕಿಮೀ) ಮತ್ತು ಪೆಟ್ರೋಲ್ ಆಟೋಮ್ಯಾಟಿಕ್ ವೆರಿಯಂಟ್ 4155.65 ಕಿಮೀ ಚಲಿಸಿದವು.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಇನ್ನು ಹೊಚ್ಚ ಹೊಸ ಎಕ್ಸ್‌ಯುವಿ700 ಎಸ್‌ಯುವಿ ಮಾದರಿಯು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾದ ಕೇವಲ ಗಂಟೆಗಳಲ್ಲಿ 50 ಸಾವಿರಕ್ಕಿಂತಲೂ ಹೆಚ್ಚು ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದೆ.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಹೊಸ ಎಕ್ಸ್‌ಯುವಿ700 ಎಸ್‌ಯುವಿ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಮಾರಾಟಗೊಳ್ಳಲಿದ್ದು, ಬರೋಬ್ಬರಿ 21 ವೆರಿಯೆಂಟ್ ಹೊಂದಿರುವ ಹೊಸ ಕಾರಿನ ಮೊದಲ 25 ಸಾವಿರ ಯುನಿಟ್ ಖರೀದಿಸುವ ಗ್ರಾಹಕರಿಗೆ ಕಂಪನಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯು ರೂ. 22.89 ಲಕ್ಷಕ್ಕೆ ವಿತರಣೆಯಾಗಲಿದೆ.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

25 ಸಾವಿರ ಯುನಿಟ್ ನಂತರ ಹೊಸ ಕಾರು ವಿತರಣೆ ಪಡೆದುಕೊಳ್ಳಲಿರುವ ಗ್ರಾಹಕರಿಗೆ ಹೊಸ ಕಾರಿನ ಬೆಲೆಯು ಆರಂಭಿಕವಾಗಿ ರೂ. 12.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.22.99 ಲಕ್ಷ ಅನ್ವಯವಾಗಲಿದೆ. 50 ಸಾವಿರ ಯುನಿಟ್ ನಂತರ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಇನ್ನಷ್ಟು ದುಬಾರಿಯಾಗಿರಲಿದ್ದು, 50 ಸಾವಿರ ಯುನಿಟ್ ನಂತರದ ಹೊಸ ಕಾರಿನ ದರ ಪಟ್ಟಿಯು ಮುಂಬರುವ ದಿನಗಳಲ್ಲಿ ಲಭ್ಯವಾಗಲಿದೆ.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಹೊಸ ಕಾರಿನಲ್ಲಿ 2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್, 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಪಡೆದುಕೊಂಡಿದೆ.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಎಕ್ಸ್‌ಯುವಿ700 ಮಾದರಿಯ ಸೈಡ್ ಪ್ರೋಫೈಲ್ ಮತ್ತು ಹಿಂಬದಿಯ ವಿನ್ಯಾಸವು ಕೂಡಾ ಸಾಕಷ್ಟು ಹೊಸತನದಿಂದ ಕೂಡಿದ್ದು, ಹಿಂಬದಿಯ ಫೆಂಡರ್‌ನೊಂದಿಗೆ ಹರಡಿಕೊಂಡಿರುವ ವಿಭಜಿತ ಟೈಲ್‌ಲ್ಯಾಂಪ್, ವಿನೂತನ ವಿನ್ಯಾಸದ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್, ಶಾರ್ಕ್ ಫಿನ್ ಆಂಟೆನಾ, ರೂಫ್ ಸ್ಪಾಯ್ಲರ್ ಪಡೆದುಕೊಂಡಿದೆ.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಹಾಗೆಯೇ ಹೊಸ ಕಾರಿನಲ್ಲಿ 10.25 ಇಂಚಿನ ಡಿಜಿಟಲ್ ಮತ್ತು ಇನ್ಪೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲೂ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್ ಮತ್ತು ಏರ್ ಪ್ಯೂರಿಫ್ಲೈರ್ ಸೌಲಭ್ಯಗಳಿವೆ.

24 ಗಂಟೆಗಳಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ Mahindra XUV700

ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂ ಸೌಲಭ್ಯವು ಹೊಸ ಕಾರಿನ ಪ್ರಮುಖ ಸುರಕ್ಷಾ ಸೌಲಭ್ಯವಾಗಿದ್ದು, ಇದರ ಜೊತೆಗೆ 7-ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್, ಲೆನ್ ಕಿಪ್ ಅಸಿಸ್ಟ್ ಸೌಲಭ್ಯ ಹೊಂದಿದೆ.

Article Published On: Thursday, October 14, 2021, 10:45 [IST]
English summary
Mahindra xuv700 shatters national 24 hours endurance record details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+