ಮೊದಲ ತಿಂಗಳು ಕಾರು ಮಾರಾಟದಲ್ಲಿ ಹೆಕ್ಟರ್, ಸಫಾರಿ, ಅಲ್ಕಾಜರ್ ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಮಹೀಂದ್ರಾ ಎಕ್ಸ್‌ಯುವಿ700(Mahindra XUV700) ಕಾರು ಮಾದರಿಯು ಹೊಸ ದಾಖಲೆಗೆ ಕಾರಣವಾಗಿದ್ದು, ಹೊಸ ಕಾರು ಮೊದಲ ತಿಂಗಳ ಕಾರು ಮಾರಾಟದಲ್ಲಿಯೇ ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಿದೆ.

ಮೊದಲ ತಿಂಗಳು ಕಾರು ಮಾರಾಟದಲ್ಲಿ ಹೆಕ್ಟರ್, ಸಫಾರಿ, ಅಲ್ಕಾಜರ್ ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಅತ್ಯುತ್ತಮ ತಾಂತ್ರಿಕ ಅಂಶಗಳು, ವಿಭಿನ್ನವಾದ ವಿನ್ಯಾಸ, ತಂತ್ರಜ್ಞಾನ ಸೌಲಭ್ಯಗಳು, ಬೆಲೆ ಮತ್ತು ಎಂಜಿನ್ ಆಯ್ಕೆಯಲ್ಲಿ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಮಹೀಂದ್ರಾ ಎಕ್ಸ್‌ಯುವಿ ಮಾದರಿಯು ಬಿಡುಗಡೆ ನಂತರ ಇದುವರೆಗೆ 65 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ಮಹೀಂದ್ರಾ ಕಂಪನಿಯು ಹೊಸ ಕಾರನ್ನು ಉತ್ಪಾದನಾ ಸಾಮಾರ್ಥ್ಯಕ್ಕೆ ಅನುಗುಣವಾಗಿ ಮೊದಲ ತಿಂಗಳ ಅವಧಿಯಲ್ಲಿ ಸುಮಾರು 1,370 ಯುನಿಟ್‌ಗಳನ್ನು ವಿತರಣೆ ಮಾಡಿದೆ.

ಮೊದಲ ತಿಂಗಳು ಕಾರು ಮಾರಾಟದಲ್ಲಿ ಹೆಕ್ಟರ್, ಸಫಾರಿ, ಅಲ್ಕಾಜರ್ ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಕಳೆದ ತಿಂಗಳು ಕೊನೆಯ ವಾರದಲ್ಲಿ ಹೊಸ ಕಾರಿನ ವಿತರಣೆಯು ಆರಂಭವಾಗಿದ್ದು, ನವೆಂಬರ್ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಕಾರು ವಿತರಣೆಯಾಗಲಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಂಪನಿಯು ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಮೊದಲ ತಿಂಗಳು ಕಾರು ಮಾರಾಟದಲ್ಲಿ ಹೆಕ್ಟರ್, ಸಫಾರಿ, ಅಲ್ಕಾಜರ್ ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಎಕ್ಸ್‌ಯುವಿ700 ಮಾದರಿಯು ಎಂಜಿ ಹೆಕ್ಟರ್, ಟಾಟಾ ಸಫಾರಿ ಮತ್ತು ಹ್ಯುಂಡೈ ಅಲ್ಕಾಜರ್ ಮಾದರಿಗಳಿಗೆ ಹೆಚ್ಚಿನ ಸ್ಪರ್ಧೆ ನೀಡುತ್ತಿದ್ದು, ಬೆಲೆ ಮತ್ತು ಎಂಜಿನ್ ಆಯ್ಕೆ ವಿಚಾರದಲ್ಲಿ ಎಕ್ಸ್‌ಯುವಿ700 ಗ್ರಾಹಕರನ್ನು ಆಕರ್ಷಿಸುತ್ತಿದೆ.

ಮೊದಲ ತಿಂಗಳು ಕಾರು ಮಾರಾಟದಲ್ಲಿ ಹೆಕ್ಟರ್, ಸಫಾರಿ, ಅಲ್ಕಾಜರ್ ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯನ್ನು ರೂ. 22.89 ಲಕ್ಷ ಬೆಲೆ ಹೊಂದಿದೆ.

ಮೊದಲ ತಿಂಗಳು ಕಾರು ಮಾರಾಟದಲ್ಲಿ ಹೆಕ್ಟರ್, ಸಫಾರಿ, ಅಲ್ಕಾಜರ್ ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

ಮೊದಲ ತಿಂಗಳು ಕಾರು ಮಾರಾಟದಲ್ಲಿ ಹೆಕ್ಟರ್, ಸಫಾರಿ, ಅಲ್ಕಾಜರ್ ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಎಂಜಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಮಾದರಿಗಳು 1.5-ಲೀಟರ್ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 13.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.19.99 ಲಕ್ಷ ಬೆಲೆ ಹೊಂದಿದೆ.

ಮೊದಲ ತಿಂಗಳು ಕಾರು ಮಾರಾಟದಲ್ಲಿ ಹೆಕ್ಟರ್, ಸಫಾರಿ, ಅಲ್ಕಾಜರ್ ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಟಾಟಾ ಸಫಾರಿ ಕಾರು ಮಾದರಿಯು 2.0-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 6 ಸೀಟರ್ ಮತ್ತು 7 ಸೀಟರ್ ಆಸನ ಸೌಲಭ್ಯಗಳನ್ನು ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.99 ಲಕ್ಷದಿಂದ ಟಾಪ್ ಎಂಡ್ ಮಾದರಿಯ ರೂ.23.17 ಲಕ್ಷ ಬೆಲೆ ಹೊಂದಿದೆ.

ಮೊದಲ ತಿಂಗಳು ಕಾರು ಮಾರಾಟದಲ್ಲಿ ಹೆಕ್ಟರ್, ಸಫಾರಿ, ಅಲ್ಕಾಜರ್ ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಇನ್ನು ಹ್ಯುಂಡೈ ಅಲ್ಕಾಜರ್ ಎಸ್‌ಯುವಿ ಮಾದರಿಯು 1.5-ಲೀಟರ್ ಡೀಸೆಲ್ ಮತ್ತು 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿದ್ದು, ಅಲ್ಕಾಜರ್ ಕಾರು ಆರಂಭಿಕವಾಗಿ ರೂ. 16.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.14 ಲಕ್ಷ ಬೆಲೆ ಹೊಂದಿದೆ.

ಮೊದಲ ತಿಂಗಳು ಕಾರು ಮಾರಾಟದಲ್ಲಿ ಹೆಕ್ಟರ್, ಸಫಾರಿ, ಅಲ್ಕಾಜರ್ ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಹೀಗಾಗಿ ಪ್ರತಿಸ್ಪರ್ಧಿ ಕಾರು ಮಾದರಿಗಳ ಆರಂಭಿಕ ಆವೃತ್ತಿಗಳ ನಡುವಿನ ಬೆಲೆ ವ್ಯತ್ಯಾಸ ಮತ್ತು ಬಲಿಷ್ಠ ಎಂಜಿನ್ ಆಯ್ಕೆಯು ಎಕ್ಸ್‌ಯುವಿ700 ಮಾದರಿಯ ಬೇಡಿಕೆಯನ್ನು ಹೆಚ್ಚಿಸಿದ್ದು, ಹೊಸ ಕಾರು ಕೇವಲ ಎಸ್‌ಯುವಿ ಗ್ರಾಹಕರನ್ನು ಮಾತ್ರ ಕಂಪ್ಯಾಕ್ಟ್ ಎಸ್‌ಯುವಿ ಖರೀದಾರರನ್ನು ಸೆಳೆಯುತ್ತಿದೆ.

ಮೊದಲ ತಿಂಗಳು ಕಾರು ಮಾರಾಟದಲ್ಲಿ ಹೆಕ್ಟರ್, ಸಫಾರಿ, ಅಲ್ಕಾಜರ್ ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಮಹೀಂದ್ರಾ ಕಂಪನಿಯು ಬುಕ್ಕಿಂಗ್ ಪ್ರಮಾಣಕ್ಕೆ ಅನುಗುಣವಾಗಿ ವಿತರಣೆಯನ್ನು ತೀವ್ರಗೊಳಿಸಿದ್ದು, ಮುಂಬರುವ ಜನವರಿ 14ರ ಒಳಗಾಗಿ ಒಟ್ಟು 14 ಸಾವಿರ ಯುನಿಟ್ ಕಾರುಗಳನ್ನು ವಿತರಿಸುವ ಗುರಿಹೊಂದಿದೆ.

ಮೊದಲ ತಿಂಗಳು ಕಾರು ಮಾರಾಟದಲ್ಲಿ ಹೆಕ್ಟರ್, ಸಫಾರಿ, ಅಲ್ಕಾಜರ್ ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ಎನ್ನುವ ವಿವಿಧ ವೆರಿಯೆಂಟ್‌ಗಳೊಂದಿಗೆ ಆಕರ್ಷಕ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿದ್ದು, ಕಂಪನಿಯೇ ಜೋಡಣೆ ಮಾಡುವ 7 ಸೀಟರ್ ಮಾದರಿಗಳನ್ನು ಹೊರತುಪಡಿಸಿ 5 ಸೀಟರ್ ಹೊಂದಿರುವ ಮಾದರಿಗಳಲ್ಲಿ 7 ಸೀಟರ್ ಬಯಸುವ ಗ್ರಾಹಕರು ಹೆಚ್ಚುವರಿ ರೂ. 70 ಸಾವಿರ ಪಾವತಿ ಮಾಡಬೇಕಾಗುತ್ತದೆ.

ಮೊದಲ ತಿಂಗಳು ಕಾರು ಮಾರಾಟದಲ್ಲಿ ಹೆಕ್ಟರ್, ಸಫಾರಿ, ಅಲ್ಕಾಜರ್ ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ

ಹೊಸ ಕಾರಿನ 2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

Article Published On: Wednesday, November 3, 2021, 16:31 [IST]
English summary
Mahindra xuv700 suv beats safari alcazar hector in first month sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+