ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ
ಬಹುನೀರಿಕ್ಷಿತ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ ಮಾದರಿಯು ಇದೇ ತಿಂಗಳು 14ರಂದು ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಮಹೀಂದ್ರಾ ಕಂಪನಿಯು ಹೊಸ ಕಾರಿನ ಇಂಟಿರಿಯರ್ ಮಾಹಿತಿ ಹಂಚಿಕೊಂಡಿದೆ.

ಮಹೀಂದ್ರಾ ಕಂಪನಿಯು ಹೊಸ ಎಕ್ಸ್‌ಯುವಿ700 ಎಸ್‌ಯುವಿ ಮಾದರಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಕಾರನ್ನು ಆಧರಿಸಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗುತ್ತಿದೆ. ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಈಗಾಗಲೇ ಹಲವು ಮಾಹಿತಿಗಳನ್ನು ಹಂಚಿಕೊಂಡಿರುವ ಮಹೀಂದ್ರಾ ಕಂಪನಿಯು ಇದೀಗ ಹೊಸ ಟೀಸರ್ ವಿಡಿಯೋ ಮೂಲಕ ಪ್ರಮುಖ ಫೀಚರ್ಸ್‌ಗಳ ಜೋಡಣೆಯನ್ನು ಖಚಿತಪಡಿಸಿದೆ.

ಎಕ್ಸ್‌ಯುವಿ ಸರಣಿಯಲ್ಲಿ ಹೊಸ ಬದಲಾವಣೆಗಾಗಿ ಎಕ್ಸ್‌ಯುವಿ500 ಕಾರು ಮಾದರಯನ್ನೇ ಮಹೀಂದ್ರಾ ಕಂಪಿಯು ವಿಸ್ತರಿತ ವ್ಹೀಲ್ ಬೆಸ್ ಜೊತೆ ಹಲವಾರು ಹೊಸ ತಾಂತ್ರಿಕ ಉನ್ನತೀಕರಿಸಿ ಎಕ್ಸ್‌ಯುವಿ700 ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಗಳಲ್ಲೇ ಅತಿ ಹೆಚ್ಚು ತಂತ್ರಜ್ಞಾನ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

ಹೊಸ ಎಕ್ಸ್‌ಯುವಿ700 ಮಾದರಿಯು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಆಸನ ಸೌಲಭ್ಯ ಹೊಂದಿರಲಿದ್ದು, ಎಕ್ಸ್‌ಯುವಿ700 ಬಿಡುಗಡೆಯ ನಂತರ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಮಾರಾಟದಿಂದ ಸ್ಥಗಿತಗೊಳ್ಳಲಿದೆ.

ಹೊಸ ಕಾರಿನಲ್ಲಿ ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳಾದ ಆಟೋ ಬೂಸ್ಟರ್ ಹೆಡ್‌ಲ್ಯಾಂಪ್, ಸೆಗ್ಮೆಂಟ್ ಫಸ್ಟ್ ಲಾರ್ಜ್ ಸನ್‌ರೂಫ್, ಡ್ರೈವರ್ ಡ್ರಾವ್ಸಿನೆಸ್ ಡಿಟೆಕ್ಷನ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳಿದ್ದು, ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿಯು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಲಿದೆ.
ಮಹೀಂದ್ರಾ ಹಂಚಿಕೊಂಡಿರುವ ಹೊಸ ಟೀಸರ್ ವಿಡಿಯೋದಲ್ಲಿಯೂ ಕೂಡಾ ಹೊಸ ಕಾರಿನಲ್ಲಿ ಮತ್ತಷ್ಟು ಐಷಾರಾಮಿ ಸೌಲಭ್ಯಗಳಿವುದು ಖಚಿತವಾಗಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಅತಿದೊಡ್ಡ ಇನ್‌ಟೈನ್‌ಮೆಂಟ್ ಸಿಸ್ಟಂ ಮತ್ತು ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ವಿವಿಧ ಡ್ರೈವಿಂಗ್ ಮೋಡ್‌ಗಳು, ವೈರ್‌ಲೆಸ್ ಸ್ಮಾರ್ಟ್‌ಫೋರ್ನ್ ಚಾರ್ಜರ್ ಸೌಲಭ್ಯಗಳಿರುವುದು ಹೊಸ ಟೀಸರ್‌ನಲ್ಲಿ ಖಚಿತವಾಗಿದೆ.

ಹಾಗೆಯೇ ಹೊಸ ಕಾರಿನಲ್ಲಿ ಎಲ್ಇಡಿ ಫಾಗ್ ಲ್ಯಾಂಪ್, ಸಿಲ್ವರ್ ಕೋಟ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್, ಡ್ಯುಯಲ್ ಟೋನ್ ಹೊಂದಿರುವ ಮಲ್ಟಿ ಸ್ಪೋರ್ಕ್ ಅಲಾಯ್ ವ್ಹೀಲ್, ಸ್ಪೋರ್ಟಿ ರಿಯರ್ ಬಂಪರ್, ಅಂಡರ್ ಬಾಡಿ ಫ್ಲಕ್ಸ್ ಸ್ಕೀಡ್ ಪ್ಲೇಟ್, ಬೂಟ್ ಲಿಡ್, ಶಾರ್ಕ್ ಫಿನ್ ಆಂಟೆನಾ, ರೂಫ್ ಸ್ಪಾಯ್ಲರ್ ಜೋಡಿಸಲಾಗಿದೆ.

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಮಾದರಿಯು 7 ಸೀಟರ್ ಹೊಂದಿದ್ದರೂ ಹಿಂಬದಿಯ ಆಸನಗಳು ವಯಸ್ಕ ಪ್ರಯಾಣಿಕರು ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಎಕ್ಸ್‌ಯುವಿ700 ಮಾದರಿಯಲ್ಲಿ ವಿಸ್ತರಿತ ವ್ಹೀಲ್‌ಬೆಸ್ ನೀಡಿರುವುದರಿಂದ ಮೂರನೇ ಸಾಲಿನ ಆಸನಗಳು ಸಾಕಷ್ಟು ಸ್ಥಳಾವಕಾಶ ಹೊಂದಿದ್ದು, ಮುಂಬರುವ ದಿನಗಳಲ್ಲಿ ಎಕ್ಸ್‌ಯುವಿ500 ಮಾದರಿಯು 5 ಸೀಟರ್ ಮಾದರಿಯಲ್ಲಿ ಮರುಬಿಡುಗಡೆಯಾಗಲಿದೆ.

ಎಕ್ಸ್‌ಯುವಿ700 ಬಿಡುಗಡೆ ಮಾಡಿದ ನಂತರ ಎಕ್ಸ್‌ಯುವಿ500 ಮಾರಾಟವನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಿರುವ ಮಹೀಂದ್ರಾ ಕಂಪನಿಯು 5 ಸೀಟರ್ ಮಾದರಿಯಲ್ಲಿ ಮರುಬಿಡುಗಡೆ ಮಾಡಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 7 ಸೀಟರ್ ಮಾದರಿಗಾಗಿ ಎಕ್ಸ್‌ಯುವಿ700 ಮತ್ತು 5 ಸೀಟರ್ ಮಾದರಿಗಾಗಿ ಎಕ್ಸ್‌ಯುವಿ500 ಮಾದರಿಯನ್ನು ಮಾರಾಟ ಮಾಡಲಿದೆ.

ಹೊಸ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿ ಮಹತ್ವದ ಬದಲಾವಣೆಗಾಗಿ ಬಲಿಷ್ಠ ವಿನ್ಯಾಸದೊಂದಿಗೆ ಆಕರ್ಷಕ ಫೀಚರ್ಸ್‌ಗಳನ್ನು ಜೋಡಣೆ ಮಾಡಿದ್ದು, ಮರುವಿನ್ಯಾಸಗೊಳಿಸಲಾದ ವರ್ಟಿಕಲ್ ಗ್ರಿಲ್ ಸ್ಲಾಟ್ ಜೊತೆ ಜೆ ಆಕಾರದಲ್ಲಿರುವ ಎಲ್ಇಡಿ ಹೆಡ್‌ಲೈಟ್ಸ್‌ನೊಂದಿಗೆ ಅತಿದೊಡ್ಡ ಬದಲಾವಣೆಯಾಗಿ ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಬ್ರಾಂಡ್ ಲೋಗೋ ಮತ್ತಷ್ಟು ಮೆರಗು ನೀಡಲಿದೆ.

ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ವಿವಿಧ ಎಂಜಿನ್ ಆಯ್ಕೆಯಲ್ಲಿ ಒಟ್ಟು 11 ವೆರಿಯೆಂಟ್‌ಗಳನ್ನು ಪಡೆದುಕೊಳ್ಳಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳನ್ನು ಹೊಂದಿರುವ ಹೊಸ ಕಾರಿನಲ್ಲಿ ಪವರ್‌ಫುಲ್ ಎಂಜಿನ್ ಆಯ್ಕೆ ಹೊಂದಿರಲಿದೆ.

ಹೊಸ ಕಾರಿನ 2.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 180-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದ್ದರೆ ಹೊಸದಾಗಿ ನೀಡಲಾಗುತ್ತಿರುವ 2.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 210 ಬಿಎಚ್‌ಪಿ ಉತ್ಪಾದನಾ ಮಾದರಿಯಾಗುವ ಸಾಧ್ಯತೆಗಳಿವೆ.

ಈ ಮೂಲಕ ಮಹೀಂದ್ರಾ ಕಂಪನಿಯು 5 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ500 ಮತ್ತು 7 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ700 ಮಾರಾಟ ಮಾಡಲಿದ್ದು, ಇತ್ತೀಚೆಗೆ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿರುವ ಹಿನ್ನಲೆಯಲ್ಲಿ ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಈ ಬದಲಾವಣೆ ತರುತ್ತಿದೆ.

ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.51 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.20.03 ಲಕ್ಷ ಬೆಲೆ ಹೊಂದಿದ್ದು, ನ್ಯೂ ಜನರೇಷನ್ ಮಾದರಿಯು ಹಳೆಯ ಆವೃತ್ತಿಗಿಂತ ಹೆಚ್ಚುವರಿಯಾಗಿ ರೂ. 80 ಸಾವಿರದಿಂದ ರೂ. 1.50 ಲಕ್ಷದಷ್ಟು ದುಬಾರಿಯಾಗಿರಲಿದೆ.


Click it and Unblock the Notifications








