ಐಷಾರಾಮಿ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ವಿಶೇಷತೆಗಳು

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಇತ್ತೀಚೆಗೆ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ನವೀಕರಿಸಿದ ಮಾದರಿಯು ಈಗ ಸುಧಾರಿತ ಸ್ಟೈಲಿಂಗ್, ಹೆಚ್ಚು ತಂತ್ರಜ್ಞಾನ ಮತ್ತು ಹೊಸ ಮತ್ತು ನವೀಕರಿಸಿದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಐಷಾರಾಮಿ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ವಿಶೇಷತೆಗಳು

2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯು ಗ ಡೀಸೆಲ್ ಆಯ್ಕೆಯನ್ನು ಸಹ ಪಡೆಯುತ್ತದೆ. ಹೊಸ ವೆಲಾರ್ ಹಿಂದಿನ ಮಾದರಿಗೆ ಹೋಲಿಸಿದರೆ ಹಲವಾರು ಹೊಸ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ಹೊಸ ವೆಲಾರ್ ಮಾದರಿಯು ರೇಂಜ್ ರೋವರ್ ಸರಣಿಯಲ್ಲಿ ತಾಂತ್ರಿಕವಾಗಿ ಸುಧಾರಿತ ಐಷಾರಾಮಿ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ವಿಶೇಷತೆಗಳು ಇಲ್ಲಿದೆ.

ಐಷಾರಾಮಿ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ವಿಶೇಷತೆಗಳು

ವಿನ್ಯಾಸ

ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ಮುಂಭಾಗದಲ್ಲಿ ಹನಿ ಕಾಬ್ ಗ್ರಿಲ್ ಅನ್ನು ಹೊಂದಿದೆ. ಹಿಂಭಾಗವು ಸ್ಲೋಪಿಂಗ್ ರೂಫ್ ರೈಲ್ ಮತ್ತು ಟೈಲ್ ಲ್ಯಾಂಪ್ ಗಳ ಸುತ್ತಲೂ ಮತ್ತು ಸಿಲ್ವರ್ ಅಸ್ಸೆಂಟ್ ಗಳನ್ನು ಹೊಂದಿವೆ,

ಐಷಾರಾಮಿ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ವಿಶೇಷತೆಗಳು

ಬಣ್ಣಗಳು

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯು ನಾಲ್ಕು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದು ಫ್ಯೂಜಿ ವೈಟ್, ಪೋರ್ಟೊಫಿನೊ ಬ್ಲೂ, ಸಾರ್ಟೋರಿನಿ ಬ್ಲ್ಯಾಕ್ ಮತ್ತು ಸಿಲಿಕಾನ್ ಸಿಲ್ವರ್ ಬಣ್ಣಗಳಾಗಿದೆ.

ಐಷಾರಾಮಿ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ವಿಶೇಷತೆಗಳು

ಎಂಜಿನ್

ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯಲ್ಲಿ ಈಗ ಡೀಸೆಲ್ ಆಯ್ಕೆಯನ್ನು ಸಹ ಪಡೆದುಕೊಂಡಿದೆ, ಇದು ಇಂಜಿನಿಯಮ್ 2.0-ಲೀಟರ್ ಆಯಿಲ್ ಬರ್ನರ್ ಎಂಜಿನ್ ಆಗಿದೆ. ಈ ಎಂಜಿನ್ 177 ಬಿಹೆಚ್‌ಪಿ ಮತ್ತು 430 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಐಷಾರಾಮಿ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ವಿಶೇಷತೆಗಳು

ಇದರೊಂದಿಗೆ 2.0-ಲೀಟರ್ ಇಂಜಿನಿಯಮ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 247 ಬಿಹೆಚ್‍ಪಿ ಪವರ್ ಮತ್ತು 365 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಐಷಾರಾಮಿ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ವಿಶೇಷತೆಗಳು

ಇಂಟಿರಿಯರ್

ಈ ಹೊಸ ಎಸ್‍ಯುವಿಯು ಐಷಾರಾಮಿ ಇಂಟಿರಿಯರ್ ಅನ್ನು ಹೊಂದಿದೆ. ಈ ಎಸ್‍ಯುವಿಯು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸ್ಟ್ಯಾಂಡರ್ಡ್ 10-ಇಂಚಿನ ಟಚ್‌ಸ್ಕ್ರೀನ್, 10-ಇಂಚಿನ ಕಡಿಮೆ ಟಚ್‌ಸ್ಕ್ರೀನ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋನೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಇಂಟರ್ಫೇಸ್ ಅನ್ನು ಹೊಂದಿದೆ. ಸಿಸ್ಟಮ್ ಅನ್ನು ಮೆರಿಡಿಯನ್ ಸೌಂಡ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ.

ಐಷಾರಾಮಿ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ವಿಶೇಷತೆಗಳು

ಫೀಚರ್ಸ್

ಹೊಸ ರೇಂಜ್ ರೋವರ್ ವೆಲಾರ್ 3ಡಿ ಸರೌಂಡ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಏರ್ ಸಸ್ಪೆಂಕ್ಷನ್, ಪಿಬಿ 2.5 ಫಿಲ್ಟರ್‌ನೊಂದಿಗೆ ಕ್ಯಾಬಿನ್ ಏರ್ ಮುಂತಾದ ಹೊಸ ಫೀಚರ್ಸ್ ಗಳನ್ನು ಹೊಂದಿವೆ. ಎಸ್‌ಯುವಿ ಸ್ಯಾಟಿನ್ ಕ್ರೋಮ್ ಪ್ಯಾಡಲ್ ಶಿಫ್ಟರ್‌ಗಳು, ಚರ್ಮದ ಸುತ್ತಿದ ಸ್ಟೀರಿಂಗ್ ವೀಲ್ ಮತ್ತು ಸ್ಥಿರ ಪನೋರಮಿಕ್ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ.

ಐಷಾರಾಮಿ 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ವಿಶೇಷತೆಗಳು

ಬೆಲೆ

ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ಪೆಟ್ರೋಲ್ ಮಾದರಿಯ ಬೆಲೆಯು ಭಾರತದ ರೂ.79.87 ಲಕ್ಷವಾಗಿದ್ದರೆ, ಡೀಸೆಲ್ ಮಾದರಿಯ ಬೆಲೆಯು ರೂ.80.71 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

More from DriveSpark

Article Published On: Monday, June 21, 2021, 21:47 [IST]
English summary
Top Highlights: Range Rover Velar Suv. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+