ಪ್ರಮುಖ ಕಾರು ಮಾದರಿಗಳಿಗೆ ಹೊಸ ಮಾದರಿಯ ಟೈರ್ ಮತ್ತು ಬ್ಯಾಟರಿ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಕಾರು ಮಾರಾಟದಲ್ಲಿ ಅಗ್ರಗಣ್ಯ ಕಂಪನಿಯಾಗಿ ಹೊರಹೊಮ್ಮಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಿಗಾಗಿ ವಿವಿಧ ಮಾದರಿಯ ಟೈರ್ ಮತ್ತು ಬ್ಯಾಟರಿ ಆಯ್ಕೆಗಳನ್ನು ಪರಿಚಯಿಸಿದೆ.

ಪ್ರಮುಖ ಕಾರು ಮಾದರಿಗಳಿಗೆ ಹೊಸ ಮಾದರಿಯ ಟೈರ್ ಮತ್ತು ಬ್ಯಾಟರಿ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ತನ್ನದೇ ಆದ ಮಾರುತಿ ಜಿನಿಯಸ್ ಆಕ್ಸೆಸರಿಸ್(ಎಂಜಿಎ) ಪ್ಲ್ಯಾಟ್‌ಫಾರ್ಮ್ ಮೂಲಕ ಹಲವಾರು ಅಧಿಕೃತ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದು, ಎಂಜಿಎ ಪ್ಲ್ಯಾಟ್‌ಫಾರ್ಮ್‌ನಲ್ಲಿ ಹೊಸದಾಗಿ ಟೈರ್ ಮತ್ತು ಬ್ಯಾಟರಿ ಆಯ್ಕೆಗಳನ್ನು ನೀಡಲಾಗುತ್ತಿದೆ. ಆಸಕ್ತ ಗ್ರಾಹಕರು ಆನ್‌ಲೈನ್ ಮೂಲಕ ಹೊಸ ಆಕ್ಸೆಸರಿಸ್‌ಗಳನ್ನು ಖರೀದಿ ಮಾಡಬಹುದಾಗಿದ್ದು, ಆನ್‌ಲೈನ್ ಮೂಲಕ ಆಕ್ಸಸರಿಸ್ ಖರೀದಿಯ ಸಂದರ್ಭದಲ್ಲಿ ನಿಮ್ಮ ಹತ್ತಿರದ ಡೀಲರ್ಸ್ ಗುರುತಿಸಬಹುದು.

ಪ್ರಮುಖ ಕಾರು ಮಾದರಿಗಳಿಗೆ ಹೊಸ ಮಾದರಿಯ ಟೈರ್ ಮತ್ತು ಬ್ಯಾಟರಿ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಆನ್‌ಲೈನ್‌ನಲ್ಲಿ ಆಕ್ಸೆಸರಿಸ್ ಖರೀದಿ ನಂತರ ಬಿಡಿಭಾಗಗಳ ಜೋಡಣೆಗಾಗಿ ಅಧಿಕೃತ ಡೀಲರ್ಸ್ ಜೋಡಣೆ ಮಾಡಬಹುದಾಗಿದ್ದು, ನಿಮಗೆ ಅನುಕೂಲಕರವಾಗ ಸಂದರ್ಭಕ್ಕೆ ಅನುಗುಣವಾಗಿ ಆಕ್ಸೆಸರಿಸ್ ಜೋಡಣೆಗೆ ಸಮಯಾವಕಾಶ ತೆಗೆದುಕೊಳ್ಳಬಹುದು.

ಪ್ರಮುಖ ಕಾರು ಮಾದರಿಗಳಿಗೆ ಹೊಸ ಮಾದರಿಯ ಟೈರ್ ಮತ್ತು ಬ್ಯಾಟರಿ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಎಂಜಿಎ ಪ್ಲ್ಯಾಟ್‌ಫಾರ್ಮ್‌ನಲ್ಲಿನಲ್ಲಿ ಮಾರುತಿ ಸುಜುಕಿಯು ಟೈರ್ ವಿಭಾಗದಲ್ಲಿ ಸಿಯೆಟ್, ಜೆಕೆ ಟೈರ್, ಗುಡ್ಇಯರ್ ಮತ್ತು ಬ್ರಿಡ್ಜ್‌ಸ್ಟೋನ್ ಮಾದರಿಗಳನ್ನು ಪರಿಚಯಿಸಿದ್ದು, ಬ್ಯಾಟರಿ ವಿಭಾಗದಲ್ಲಿ ಗ್ರಾಹಕರು ಎಕ್ಸೈಡ್ ಮತ್ತು ಅಮರಾನ್ ಮಾದರಿಗಳ ಆಯ್ಕೆ ನೀಡಲಾಗಿದೆ.

ಪ್ರಮುಖ ಕಾರು ಮಾದರಿಗಳಿಗೆ ಹೊಸ ಮಾದರಿಯ ಟೈರ್ ಮತ್ತು ಬ್ಯಾಟರಿ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಕಾರು ಮಾದರಿ ಮತ್ತು ಆಕ್ಸೆಸರಿಸ್ ಗುಣಮಟ್ಟದ ಆಧಾರ ಮೇಲೆ ಟೈರ್ ಮತ್ತು ಬ್ಯಾಟರಿಗಳ ಬೆಲೆ ನಿರ್ಧಾರವಾಗಲಿದ್ದು, ಆನ್‌ಲೈನ್ ಮೂಲಕ ಗ್ರಾಹಕರು ಟೈರ್ ಮತ್ತು ಬ್ಯಾಟರಿಗಳ ಜೋಡಣೆ ಮಾಡಿಕೊಂಡು ದರ ಮಾಹಿತಿ ಪಡೆದುಕೊಳ್ಳಬಹುದು. ಇನ್ನು ಮಾರುತಿ ಸುಜುಕಿಯು ಏಪ್ರಿಲ್ ಅವಧಿಗಾಗಿ ಗ್ರಾಹಕರನ್ನು ಸೆಳೆಯಲು ತನ್ನ ಪ್ರಮುಖ ಕಾರುಗಳ ಮೇಲೆ ಹಲವಾರು ಕೊಡುಗೆ ಹಾಗೂ ನಗದು ರಿಯಾಯಿತಿಗಳನ್ನು ನೀಡುತ್ತಿದ್ದು, ಅರೆನಾ ಮತ್ತು ನೆಕ್ಸಾ ಎರಡು ಮಾದರಿಗಳ ಮೇಲೆ ಆಫರ್ ಲಭ್ಯವಿದೆ.

ಪ್ರಮುಖ ಕಾರು ಮಾದರಿಗಳಿಗೆ ಹೊಸ ಮಾದರಿಯ ಟೈರ್ ಮತ್ತು ಬ್ಯಾಟರಿ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಹೊಸ ಕಾರುಗಳ ಬೆಲೆ ಏರಿಕೆಯ ನಡುವೆ ಗ್ರಾಹಕರಿಗೆ ಯುಗಾದಿ ಪ್ರಯುಕ್ತ ಹೊಸ ಕೊಡುಗೆಗಳು ಹಾಗೂ ನಗದು ರಿಯಾಯಿತಿಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ನಗದು ರಿಯಾಯ್ತಿ, ವಿನಿಯಮ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಪ್ರಮುಖ ಕಾರು ಮಾದರಿಗಳಿಗೆ ಹೊಸ ಮಾದರಿಯ ಟೈರ್ ಮತ್ತು ಬ್ಯಾಟರಿ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಕಾರು ಮಾರಾಟಕ್ಕಾಗಿ ನೆಕ್ಸಾ ಮತ್ತು ಅರೆನಾ ಪ್ಲಾಟ್‌ಫಾರ್ಮ್ ಹೊಂದಿರುವ ಮಾರುತಿ ಸುಜುಕಿ ಕಂಪನಿಯು ಸಾಮಾನ್ಯ ಕಾರು ಮಾದರಿಗಳನ್ನು ಅರೆನಾದಲ್ಲಿ ಮತ್ತು ಪ್ರೀಮಿಯಂ ಕಾರುಗಳನ್ನು ನೆಕ್ಸಾದಲ್ಲಿ ಮಾರಾಟ ಮಾಡುತ್ತಿದ್ದು, ಪ್ರತ್ಯೇಕ ಮಾರಾಟ ಸೌಲಭ್ಯದೊಂದಿಗೆ ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ಪ್ರಮುಖ ಕಾರು ಮಾದರಿಗಳಿಗೆ ಹೊಸ ಮಾದರಿಯ ಟೈರ್ ಮತ್ತು ಬ್ಯಾಟರಿ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ನೆಕ್ಸಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಮಾರುತಿ ಸುಜುಕಿ ಕಂಪನಿಯು ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್ಎಲ್6 ಮತ್ತು ಎಸ್-ಕ್ರಾಸ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಎಸ್-ಕ್ರಾಸ್ ಕಾರಿನ ಹೈ ಎಂಡ್ ಮಾದರಿಯ ಮೇಲೆ ಗರಿಷ್ಠ ಆಫರ್ ನೀಡಲಾಗುತ್ತಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಪ್ರಮುಖ ಕಾರು ಮಾದರಿಗಳಿಗೆ ಹೊಸ ಮಾದರಿಯ ಟೈರ್ ಮತ್ತು ಬ್ಯಾಟರಿ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಹಾಗೆಯೇ ಅರೆನಾದಲ್ಲಿ ಆಲ್ಟೊ, ಎಸ್‌ಪ್ರೆಸ್ಸೊ, ವ್ಯಾಗನ್‌ಆರ್, ಸೆಲೆರಿಯೊ, ಇಕೊ, ಸ್ವಿಫ್ಟ್, ಡಿಜೈರ್, ವಿಟಾರಾ ಬ್ರೆಝಾ, ಎರ್ಟಿಗಾ ಮಾದರಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದರಲ್ಲಿ ಸ್ವಿಫ್ಟ್ ಹೈ ಎಂಡ್ ಕಾರಿನ ಮೇಲೆ ಸಾಕಷ್ಟು ಹೊಸ ಕೊಡುಗೆಗಳನನ್ನು ನೀಡಲಾಗುತ್ತಿದೆ.

Most Read Articles

Kannada
English summary
Maruti Suzuki Introduced NewTyres And Batteries Under MGA Range, Find Here More Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X