ಜುಲೈ ಅವಧಿಯಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕೋವಿಡ್‌ನಿಂದಾಗಿ ಇಳಿಕೆಯಾಗಿರುವ ಹೊಸ ವಾಹನಗಳ ಮಾರಾಟವನ್ನು ಸುಧಾರಿಸಲು ಪ್ರಮುಖ ಕಾರುಗಳ ಮೇಲೆ ಜುಲೈ ಅವಧಿಗಾಗಿ ವಿವಿಧ ಆಫರ್‌ಗಳನ್ನು ನೀಡುತ್ತಿದ್ದು, ಅರೆನಾ ಕಾರು ಮಾದರಿಗಳ ಮೇಲೆ ವಿಶೇಷ ರಿಯಾಯ್ತಿ ಘೋಷಣೆ ಮಾಡಿದೆ.

ಜುಲೈ ಅವಧಿಯಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ

ಮಾರುತಿ ಸುಜುಕಿ ಕಂಪನಿಯು ಕೋವಿಡ್ ಪರಿಣಾಮ ಇಳಿಕೆಯಾಗುತ್ತಿರುವ ಕಾರು ಮಾರಾಟವನ್ನು ಸುಧಾರಿಸಲು ವಿವಿಧ ಕೊಡುಗೆಗಳೊಂದಿಗೆ ನಗದು ರಿಯಾಯಿತಿಗಳನ್ನು ಘೋಷಣೆ ಮಾಡಿದ್ದು, ಮಾರುತಿ ಸುಜುಕಿಯ ಅರೆನಾ ಪ್ಲಾಟ್‌ಫಾರಂ ಅಡಿಯಲ್ಲಿರುವ ಕಾರು ಮಾದರಿಗಳ ಮೇಲೆ ರಿಯಾಯಿತಿ ಹಾಗೂ ಕೊಡುಗೆಗಳ ಬಗೆಗೆ ಈ ಲೇಖನದಲ್ಲಿ ತಿಳಿಯೋಣ. ಹೊಸ ಆಫರ್‌ಗಳಲ್ಲಿ ನಗದು ರಿಯಾಯ್ತಿ, ವಿನಿಯಮ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಜುಲೈ ಅವಧಿಯಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ

ಎಂಟ್ರಿ ಲೆವೆಲ್ ಕಾರು ಮಾದರಿಯಾಗಿರುವ ಆಲ್ಟೊ 800 ಖರೀದಿ ಮೇಲೆ ಕಂಪನಿಯು ರೂ.15 ಸಾವಿರ ನಗದು ರಿಯಾಯಿತಿ ಹಾಗೂ ರೂ.18 ಸಾವಿರ ವಿನಿಮಯ ಬೋನಸ್ ನೀಡುತ್ತಿದ್ದು, ಆಲ್ಟೊ ಇತರೆ ವೆರಿಯೆಂಟ್‌ಗಳ ಖರೀದಿ ಮೇಲೆ ರೂ. 25 ಸಾವಿರ ತನಕ ನಗದು ರಿಯಾಯ್ತಿ ಮತ್ತು ರೂ. 18 ಸಾವಿರ ತನಕ ವಿನಿಮಯ ಬೋನಸ್ ಪಡೆಯಬಹುದಾಗಿದೆ.

ಜುಲೈ ಅವಧಿಯಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ

ಮೈಕ್ರೊ ಎಸ್‌ಯುವಿ ಮಾದರಿಯಾದ ಎಸ್ ಪ್ರೆಸ್ಸೊ ಕಾರಿನ ಮೇಲೆ ಕಂಪನಿಯು ರೂ.14 ಸಾವಿರ ನಗದು ರಿಯಾಯಿತಿ ಹಾಗೂ ರೂ.18 ಸಾವಿರ ವಿನಿಮಯ ಬೋನಸ್ ನೀಡುತ್ತಿದ್ದು, ಸಿಎನ್‌ಜಿ ಮಾದರಿಯ ಮೇಲೆ ಕೆಲವು ಹೆಚ್ಚುವರಿ ರಿಯಾಯ್ತಿಗಳನ್ನು ಪಡೆಯಬಹುದಾಗಿದೆ.

ಜುಲೈ ಅವಧಿಯಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ

ಮಿನಿ ವ್ಯಾನ್ ಮಾರುತಿ ಇಕೊ ಕಾರಿನ ಮೇಲೆ ರೂ.10 ಸಾವಿರ ನಗದು ರಿಯಾಯಿತಿ ಹಾಗೂ ರೂ.18 ಸಾವಿರ ವಿನಿಮಯ ಬೋನಸ್ ನೀಡಲಾಗುತ್ತದೆ. ಇದರ ಜೊತೆಗೆ ಕಂಪನಿಯ ಜನಪ್ರಿಯ ವ್ಯಾಗನ್-ಆರ್ ಕಾರಿನ ಪೆಟ್ರೋಲ್ ಮಾದರಿಯ ಮೇಲೆ ರೂ.8,000 ನಗದು ರಿಯಾಯಿತಿ ನೀಡಿದರೆ, ಸಿಎನ್‌ಜಿ ಮಾದರಿಯ ಮೇಲೆ ರೂ.13,000 ರಿಯಾಯಿತಿ ನೀಡಲಾಗುತ್ತದೆ.

ಜುಲೈ ಅವಧಿಯಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ

ಮಾರುತಿ ಸುಜುಕಿ ಕಂಪನಿಯು ತನ್ನ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರಿನ ಮೇಲೆ ರೂ.15 ಸಾವಿರ ನಗದು ಇಲ್ಲವೆ ರೂ. 18 ಸಾವಿರ ಎಕ್ಸ್‌ಚೆಂಜ್ ಲಭ್ಯವಿದ್ದು, ಸ್ವಿಫ್ಟ್‌ ಕಾರಿನ ವಿವಿಧ ರೂಪಾಂತರಗಳಿಗೆ ಅನುಗುಣವಾಗಿ ರೂ.35 ಸಾವಿರದಿಂದ ರೂ.40 ಸಾವಿರ ತನಕ ನಗದು ರಿಯಾಯಿತಿ ಲಭ್ಯವಿದೆ.

ಜುಲೈ ಅವಧಿಯಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ

ಹಾಗೆಯೇ ವಿಟಾರಾ ಬ್ರೆಝಾ ಮೇಲೆ ಕಂಪನಿಯು ರೂ. 15 ಸಾವಿರ ನಗದು ರಿಯಾಯಿತಿ ಮತ್ತು ರೂ. 25 ಸಾವಿರ ತನಕ ವಿನಿಮಯ ಬೋನಸ್ ಘೋಷಣೆ ಮಾಡಿದ್ದು, ಟ್ಯಾಕ್ಸಿ ಗ್ರಾಹಕರಿಗಾಗಿ ಟೂರ್ ಎಂ ಎಚ್ 1 ಪೆಟ್ರೋಲ್, ಎಚ್ 2 ಪೆಟ್ರೋಲ್ ಮತ್ತು ಟೂರ್ ವಿ ಪೆಟ್ರೋಲ್ ಮಾದರಿಗಳಿಗೆ ಕ್ರಮವಾಗಿ ರೂ.5 ಸಾವಿರದಿಂದ ರೂ. 50 ಸಾವಿರ ತನಕ ಆಫರ್ ನೀಡುತ್ತಿದೆ.

ಜುಲೈ ಅವಧಿಯಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ

ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ಕಾರುಗಳ ಬೆಲೆಯನ್ನು ಇದೇ ತಿಂಗಳು ಹೆಚ್ಚಳ ಮಾಡಲು ನಿರ್ಧರಿಸಿದ್ದು, ಹೊಸ ದರಪಟ್ಟಿಯು ಶೀಘ್ರದಲ್ಲೇ ಪ್ರಕಟವಾಗಲಿದೆ.

ಜುಲೈ ಅವಧಿಯಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ

ಈ ಹಿಂದೆ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಳು ಇದೀಗ ಬಿಡಿಭಾಗಗಳ ವೆಚ್ಚವು ನಿರಂತರವಾಗಿ ಹೆಚ್ಚುತ್ತಿರುವ ಪರಿಣಾಮ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಕಂಡಿವೆ.

ಜುಲೈ ಅವಧಿಯಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ

ಆಟೋ ಕಂಪನಿಗಳು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಶೇ. 1.50ರಿಂದ ಶೇ.2 ರಷ್ಟು ಬೆಲೆ ಹೆಚ್ಚಳ ಮಾಡುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ. 50 ಸಾವಿರದಿಂದ ರೂ.1 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಜುಲೈ ಅವಧಿಯಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 60 ಸಾವಿರದಿಂದ ರೂ. 1 ಲಕ್ಷಕ್ಕೂ ಅಧಿಕ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗಿರುವ ಪರಿಣಾಮ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

Article Published On: Wednesday, July 7, 2021, 8:45 [IST]
English summary
Maruti Suzuki Announces Cash Discount And Benefits For Selected Car Models.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+