ಮೇ ಅವಧಿಯಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ
ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕೋವಿಡ್‌ನಿಂದಾಗಿ ಇಳಿಕೆಯಾಗಿರುವ ಹೊಸ ವಾಹನಗಳ ಮಾರಾಟವನ್ನು ಸುಧಾರಿಸಲು ಪ್ರಮುಖ ಕಾರುಗಳ ಮೇಲೆ ಹಲವಾರು ಕೊಡುಗೆ ಹಾಗೂ ನಗದು ರಿಯಾಯಿತಿಗಳನ್ನು ನೀಡುತ್ತಿದ್ದು, ಅರೆನಾ ಕಾರು ಮಾದರಿಗಳ ಮೇಲೆ ವಿಶೇಷ ರಿಯಾಯ್ತಿ ಘೋಷಣೆ ಮಾಡಿದೆ.

ಮಾರುತಿ ಸುಜುಕಿ ಕಂಪನಿಯು ಕೋವಿಡ್ ಪರಿಣಾಮ ಇಳಿಕೆಯಾಗುತ್ತಿರುವ ಕಾರು ಮಾರಾಟವನ್ನು ಸುಧಾರಿಸಲು ವಿವಿಧ ಕೊಡುಗೆಗಳೊಂದಿಗೆ ನಗದು ರಿಯಾಯಿತಿಗಳನ್ನು ಘೋಷಣೆ ಮಾಡಿದ್ದು, ಮಾರುತಿ ಸುಜುಕಿಯ ಅರೆನಾ ಪ್ಲಾಟ್‌ಫಾರಂ ಅಡಿಯಲ್ಲಿರುವ ಕಾರು ಮಾದರಿಗಳ ಮೇಲೆ ರಿಯಾಯಿತಿ ಹಾಗೂ ಕೊಡುಗೆಗಳ ಬಗೆಗೆ ಈ ಲೇಖನದಲ್ಲಿ ತಿಳಿಯೋಣ. ಹೊಸ ಆಫರ್‌ಗಳಲ್ಲಿ ನಗದು ರಿಯಾಯ್ತಿ, ವಿನಿಯಮ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಮಾರುತಿ ಸುಜುಕಿ ತನ್ನ ಎಂಟ್ರಿ ಲೆವೆಲ್ ಆಲ್ಟೊ ಕಾರಿನ ಮೇಲೆ ರೂ.17 ಸಾವಿರ ನಗದು ರಿಯಾಯಿತಿ ಹಾಗೂ ರೂ.18 ಸಾವಿರ ವಿನಿಮಯ ಬೋನಸ್ ನೀಡುತ್ತಿದೆ. ಹಾಗೆಯೇ ಎಸ್ ಪ್ರೆಸ್ಸೊ ಕಾರಿನ ಮೇಲೆ ಕಂಪನಿಯು ರೂ.14 ಸಾವಿರ ನಗದು ರಿಯಾಯಿತಿ ಹಾಗೂ ರೂ.18 ಸಾವಿರ ವಿನಿಮಯ ಬೋನಸ್ ನೀಡುತ್ತಿದೆ.

ಮಿನಿ ವ್ಯಾನ್ ಮಾರುತಿ ಇಕೊ ಕಾರಿನ ಮೇಲೆ ರೂ.10 ಸಾವಿರ ನಗದು ರಿಯಾಯಿತಿ ಹಾಗೂ ರೂ.15 ಸಾವಿರ ವಿನಿಮಯ ಬೋನಸ್ ನೀಡಲಾಗುತ್ತದೆ. ಇದರ ಜೊತೆಗೆ ಕಂಪನಿಯ ಜನಪ್ರಿಯ ವ್ಯಾಗನ್-ಆರ್ ಕಾರಿನ ಪೆಟ್ರೋಲ್ ಮಾದರಿಯ ಮೇಲೆ ರೂ.8,000 ನಗದು ರಿಯಾಯಿತಿ ನೀಡಿದರೆ, ಸಿಎನ್‌ಜಿ ಮಾದರಿಯ ಮೇಲೆ ರೂ.13,000 ರಿಯಾಯಿತಿ ನೀಡಲಾಗುತ್ತದೆ.

ಮಾರುತಿ ಸುಜುಕಿ ಕಂಪನಿಯು ತನ್ನ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರಿನ ಮೇಲೆ ರೂ.15 ಸಾವಿರ ನಗದು ಇಲ್ಲವೆ ರೂ. 18 ಸಾವಿರ ಎಕ್ಸ್‌ಚೆಂಜ್ ಲಭ್ಯವಿದ್ದು, ಸ್ವಿಫ್ಟ್ ಕಾರಿನ ಎಲ್‌ಎಕ್ಸ್‌ಐ ರೂಪಾಂತರದ ಮೇಲೆ ರೂ.30 ಸಾವಿರ ನಗದು ರಿಯಾಯಿತಿ ನೀಡುತ್ತಿದೆ.

ಸ್ವಿಫ್ಟ್ ಕಾರಿನ ಇತರೆ ಮಾದರಿಗಳ ಬೆಲೆ 10 ಸಾವಿರದಿಂದ ರೂ. 20 ಸಾವಿರ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತಿದ್ದು, ವಿಟಾರಾ ಬ್ರೆಝಾ ಮೇಲೆ ರೂ. 10 ಸಾವಿರ ನಗದು ರಿಯಾಯಿತಿ ಮತ್ತು ರೂ. 20 ಸಾವಿರಿ ವಿನಿಮಯ ಬೋನಸ್ ಘೋಷಣೆ ಮಾಡಿದೆ.

ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿದ್ದು, ಹೊಸ ದರಪಟ್ಟಿಯ ಪ್ರಮುಖ ಕಾರು ಮಾದರಿಗಳು ಶೇ.1.60ರಷ್ಟು ದುಬಾರಿಯಾಗಿವೆ.
MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಈ ಹಿಂದೆ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಬಿಡಿಭಾಗಗಳ ವೆಚ್ಚವು ನಿರಂತರವಾಗಿ ಹೆಚ್ಚುತ್ತಿರುವ ಪರಿಣಾಮ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಕಂಡಿವೆ.

ಆಟೋ ಕಂಪನಿಗಳು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಶೇ. 1.50ರಿಂದ ಶೇ.2 ರಷ್ಟು ಬೆಲೆ ಹೆಚ್ಚಳವಾಗುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ. 50 ಸಾವಿರದಿಂದ ರೂ.1 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 60 ಸಾವಿರದಿಂದ ರೂ. 1 ಲಕ್ಷಕ್ಕೂ ಅಧಿಕ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗಿರುವ ಪರಿಣಾಮ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.


Click it and Unblock the Notifications