ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ(Maruti Suzuki) ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಿಸಲು ಮುಂದಾಗಿದೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಕೋವಿಡ್‌ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ. ಮಾರುತಿ ಸುಜುಕಿ ಸಹ ಮುಂದಿನ ತಿಂಗಳು ಜನವರಿ 1ರಿಂದಲೇ ಬೆಲೆ ಹೆಚ್ಚಳ ಮಾಡುವುದಾಗಿ ಸುಳಿವು ನೀಡಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ವಾಹನ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿದ್ದು, 2021ರಲ್ಲೇ ಮಾರುತಿ ಸುಜುಕಿ ಕಂಪನಿಯು ನಾಲ್ಕು ಬಾರಿ ದರ ಹೆಚ್ಚಿಸಿದೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಉತ್ಪಾದನಾ ವೆಚ್ಚಗಳನ್ನು ಸರಿದೂಗಿಸಲು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿ ರೂ. 50 ಸಾವಿರದಿಂದ ರೂ.1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 80 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮವೇ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮ ಕಳೆದ ಜನವರಿ, ಏಪ್ರಿಲ್‌ ಮತ್ತು ಜೂನ್‌ನಲ್ಲಿ ಮತ್ತು ಅಗಸ್ಟ್‌ನಲ್ಲಿ ಕೆಲವು ಕಾರುಗಳ ಬೆಲೆ ಏರಿಕೆ ಮಾಡಿದ್ದ ಮಾರುತಿ ಸುಜುಕಿಯು ಇದೀಗ ಮತ್ತೊಮ್ಮೆ ದರ ಹೆಚ್ಚಿಸುತ್ತಿದ್ದು, ಜನವರಿ 1ರಿಂದ ಅನ್ವಯವಾಗುವಂತೆ ಹೊಸ ದರ ಪಟ್ಟಿ ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿದೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಹೊಸ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದರೂ ಕೂಡಾ ಬಿಡಿಭಾಗಗಳ ಕೊರತೆ ಹಿನ್ನಲೆಯಲ್ಲಿ ವಾಹನ ಮಾರಾಟದಲ್ಲಿ ಪ್ರಮುಖ ಕಾರು ಕಂಪನಿಗಳು ಹಿನ್ನಡೆ ಅನುಭವಿಸುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿನ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕಾರಿನ ಬೆಲೆ ಹೆಚ್ಚಳಕ್ಕೆ ಕಾರಣವಾಗಿರುವುದಲ್ಲದೆ ವಿತರಣೆ ಅವಧಿಯಲ್ಲೂ ಹೆಚ್ಚಳಕ್ಕೆ ಕಾರಣವಾಗಿದೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಎಲೆಕ್ಟ್ರಾನಿಕ್ ಚಿಪ್(ಸೆಮಿ ಕಂಡಕ್ಟರ್) ಕೊರತೆಯು ಆಟೋ ಉತ್ಪಾದನಾ ಕಂಪನಿಗಳಿಗೆ ಸಂಕಷ್ಟಕ್ಕಿಡು ಮಾಡಿದ್ದು, ಹೊಸ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ಉತ್ಪಾದನೆಯನ್ನು ತೀವ್ರಗೊಳಿಸಲು ಅಗತ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕಾಡುತ್ತಿದೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಕಳೆದ ವರ್ಷದ ಕೋವಿಡ್ ಅವಧಿಯಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಾಹನ ಬಿಡಿಭಾಗಗಳ ಪೂರೈಕೆ ಸರಪಳಿಯಲ್ಲಿ ಆದ ಅಸ್ತವ್ಯಸ್ತವೇ ಇದೀಗ ಹೊಸ ವಾಹಗಳ ಉತ್ಪಾದನೆ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದ್ದು, ಸೆಮಿ ಕಂಡಕ್ಟರ್‌ಗಳಿಗಾಗಿ ಭಾರತೀಯ ಆಟೋ ಉದ್ಯಮವು ಸಂಪೂರ್ಣವಾಗಿ ವಿದೇಶಿ ಕಂಪನಿಗಳನ್ನೇ ಅವಲಂಬಿಸಿವೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಕೋವಿಡ್ ಪರಿಸ್ಥಿತಿ ಸುಧಾರಿಸಿರುವುದರಿಂದ ಆಟೋಮೊಬೈಲ್ ಜೊತೆಗೆ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳಾದ ಲ್ಯಾಪ್‌ಟಾಪ್‌, ಮೊಬೈಲ್‌ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಸಾಧನಗಳಿಗೆ ಭಾರೀ ಬೇಡಿಕೆ ಹರಿದುಬರುತ್ತಿದ್ದು, ಆಟೋಮೊಬೈಲ್ ವಲಯಕ್ಕೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿದ್ದ ಸೆಮಿ ಕಂಡಕ್ಟರ್ ಪೂರೈಕೆಯು ಎಲೆಕ್ಟ್ರಾನಿಕ್ ಸಾಧನ ಉತ್ಪಾದನಾ ಕಂಪನಿಗಳಿಗೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಹೀಗಾಗಿ ಸೆಮಿ ಕಂಡಕ್ಟರ್ ಪೂರೈಕೆ ತಗ್ಗಿರುವುದಿಂದ ಆಟೋ ಮೊಬೈಲ್ ಕ್ಷೇತ್ರದ ಮೇಲೆ ಪರಿಣಾಮ ಉಂಟು ಮಾಡುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕೇವಲ ಭಾರತದಲ್ಲಿ ಮಾತ್ರವಲ್ಲ ಯುರೋಪ್, ಅಮೆರಿಕಾ ಹಾಗೂ ಏಷ್ಯಾದ ಪ್ರಮುಖ ದೇಶಗಳಲ್ಲಿನ ವಾಹನ ಉತ್ಪಾದನೆಯು ಮೇಲೂ ಪರಿಣಾಮ ಉಂಟುಮಾಡುತ್ತಿದೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಇದರಿಂದ ಸೆಮಿ ಕಂಡಕ್ಟರ್ ಕೊರತೆಯೂ ವಾಹನ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಮಾರುತಿ ಸುಜುಕಿ ಸೇರಿದಂತೆ ಪ್ರಮುಖ ಕಾರು ಕಂಪನಿಗಳು ಹೊಸ ವರ್ಷದ ಆರಂಭದಲ್ಲಿಯೇ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿವೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಹೊಸ ದರಪಟ್ಟಿಯಲ್ಲಿ ಅರೆನಾ ಮತ್ತು ನೆಕ್ಸಾ ಎರಡು ಮಾದರಿಗಳಲ್ಲೂ ದರ ಹೆಚ್ಚಿಸಲಾಗುತ್ತಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ಕಂಪನಿಯು ರೂ. 5 ಸಾವಿರದಿಂದ ರೂ. 20 ಸಾವಿರ ತನಕ ಬೆಲೆ ಏರಿಕೆ ಮಾಡಬಹುದಾಗಿದೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಎರಡು ಮಾದರಿಯ ಕಾರು ಮಾರಾಟ ಸೌಲಭ್ಯವನ್ನು ಹೊಂದಿದ್ದು, ಸಾಮಾನ್ಯ ಕಾರು ಮಾದರಿಗಳನ್ನು ಅರೆನಾ ಮಾರಾಟ ಮಳಿಗೆಗಳಲ್ಲಿ ಮತ್ತು ಪ್ರೀಮಿಯಂ ಕಾರು ಮಾದರಿಗಳನ್ನು ನೆಕ್ಸಾ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡುತ್ತದೆ.

ಶೀಘ್ರದಲ್ಲಿಯೇ ಕಾರುಗಳ ದರ ಹೆಚ್ಚಿಸಲು ಮುಂದಾದ ಮಾರುತಿ ಸುಜುಕಿ

ಅರೆನಾ ಮಾರಾಟ ಮಳಿಗೆಯಲ್ಲಿ ಎಸ್-ಪ್ರೆಸ್ಸೊ, ಸ್ವಿಫ್ಟ್, ವಿಟಾರಾ ಬ್ರೆಝಾ, ಆಲ್ಟೊ, ವ್ಯಾಗನ್ಆರ್, ಡಿಸೈರ್, ಇಕೋ, ಸೆಲೆರಿಯೊ, ಎರ್ಟಿಗಾ ಕಾರುಗಳ ಮಾರಾಟ ಸೌಲಭ್ಯ ಹೊಂದಿದ್ದರೆ ನೆಕ್ಸಾದಲ್ಲಿ ಇಗ್ನಿಸ್, ಬಲೆನೊ, ಎರ್ಟಿಗಾ ಎಕ್ಸ್6, ಎಸ್-ಕ್ರಾಸ್ ಮತ್ತು ಸಿಯಾಜ್ ಕಾರುಗಳ ಮಾರಾಟ ಸೌಲಭ್ಯ ಹೊಂದಿದೆ.

Article Published On: Thursday, December 2, 2021, 20:35 [IST]
English summary
Maruti suzuki cars prices to increase by january 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+