7 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Maruti Ertiga
ಮಾರುತಿ ಸುಜುಕಿ ಎರ್ಟಿಗಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ 7,00,000 ಯೂನಿಟ್‌ಗಳು ಮಾರಾಟವಾಗಿ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ತಲುಪಿದೆ. ಈ ಮಾರುತಿ ಸುಜುಕಿ ಎರ್ಟಿಗಾ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಂಪಿವಿ ಮಾದರಿಗಳಲ್ಲಿ ಒಂದಾಗಿದೆ.

ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯು 2012ರ ಏಪ್ರಿಲ್ ತಿಂಗಳಿನಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿತ್ತು. ಅಕ್ಟೋಬರ್ ಅಂತ್ಯದವರೆಗೆ, ಎರ್ಟಿಗಾ ಒಟ್ಟು 6,99,215 ಯುನಿಟ್‌ಗಳನ್ನು ಮಾರಾಟವಾಗಿತ್ತು. 7,00,000-ಯೂನಿಟ್ ಮಾರ್ಕ್‌ನಿಂದ ಕೇವಲ 785 ಕಡಿಮೆಯಾಗಿತ್ತು. ಇದು ನವೆಂಬರ್‌ನ ಮೊದಲ ಕೆಲವು ದಿನಗಳಲ್ಲಿ ದಾಟಿದೆ. ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ 8,146 ಯುನಿಟ್‌ಗಳ ಸರಾಸರಿ ಮಾಸಿಕ ಮಾರಾಟವನ್ನು ಹೊಂದಿರುವ ಮಾರುತಿ ಸುಜುಕಿ ಈ ಮಾದರಿಯು ಮುಂದಿನ ಫೈನಾನ್ಸ್ ಆಫ್ ಇಯರ್'ಗೆ 1,00,000-ಯೂನಿಟ್ ಮಾರಾಟದ ಮಾರ್ಕ್ ಅನ್ನು ಸಾಧಿಸುವ ಸಾಧ್ಯತೆಯಿದೆ.

ಬಿಡುಗಡೆಯಾದಾಗಿನಿಂದ, ಎರ್ಟಿಗಾ ಒಟ್ಟು 3,44,174 ಡೀಸೆಲ್ ರೂಪಾಂತರಗಳು, 2,97,285 ಪೆಟ್ರೋಲ್ ರೂಪಾಂತರಗಳು ಮತ್ತು ಇತ್ತೀಚೆಗೆ ಬಿಡುಗಡೆಯಾದ CNG ರೂಪಾಂತರದ 57,756 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದರರ್ಥ ಡೀಸೆಲ್ ಎಂಜಿನ್ ಹೊಂದಿರುವ ಎರ್ಟಿಗಾ 2020ರ ಏಪ್ರಿಲ್ ತಿಂಗಳಿನಲ್ಲಿ ಸ್ಥಗಿತಗೊಂಡಿತ್ತು. ಇದರ ಒಟ್ಟು ಮಾರಾಟದ 49.22 ಪ್ರತಿಶತವನ್ನು ಹೊಂದಿದೆ.

ಸಿಎನ್‌ಜಿ ಎರ್ಟಿಗಾಗೆ ಇದು ಆರಂಭಿಕ ದಿನವಾಗಿದ್ದರೂ, ಪರಿಸರ ಸ್ನೇಹಿ ರೂಪಾಂತರವು ತನ್ನ ಅಸ್ತಿತ್ವವನ್ನು ಅನುಭವಿಸುತ್ತಿರುವಂತೆ ತೋರುತ್ತಿದೆ. ಈ ವರ್ಷದ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಮಾರಾಟವಾದ 65,174 ಎರ್ಟಿಗಾಗಳಲ್ಲಿ, CNG ರೂಪಾಂತರವು 41 ಪ್ರತಿಶತ ಅಥವಾ 26,783 ಯುನಿಟ್‌ಗಳನ್ನು ಹೊಂದಿದೆ, ಉಳಿದವು ಪೆಟ್ರೋಲ್ ಆಗಿದೆ.

ಎರ್ಟಿಗಾ ಎಂಪಿವಿಯು ಅರೆನಾ ಡೀಲರುಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಂಪಿವಿಗಳ ಪಟ್ಟಿಯಲ್ಲಿ ಎರ್ಟಿಗಾ ನಂ.1 ಸ್ಥಾನದಲ್ಲಿದೆ. ಇತ್ತೀಚೆಗೆ ಎಂಪಿವಿಗಳ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಇದರಿಂದ ಮಾರುತಿ ಸುಜುಕಿ ಎರ್ಟಿಗಾದಲ್ಲಿ ಹಲವು ನವೀಕರಣಗಳನ್ನು ನಡೆಸುತ್ತಾ ಬಂದಿದೆ. ಇದೀಗ ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ಎಂಪಿವಿಯಲ್ಲಿ ಗಮನಾರ್ಹವಾದ ನವೀಕರಣವನ್ನು ನಡೆಸಲು ಸಜ್ಜಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಮಾದರಿಯ ಬಗ್ಗೆ ಹೇಳುವುದಾದರೆ, ಇದರಲ್ಲಿ ಏಕೈಕ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವ ಸಾಮರ್ಥ್ಯವನ್ನು ಹೊಂದಿದೆ,

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, 15 ಇಂಚಿನ ವ್ಹೀಲ್ ಗಳು, ಆಂಡ್ರಾಯ್ಡ್ ಆಟೋ ಮತ್ತು ಕಾರ್‌ಪ್ಲೇಯೊಂದಿಗೆ 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಇದರೊಂದಿಗೆ ಎರ್ಟಿಗಾ ಎಂಪಿವಿಯೊಂದಿಗೆ ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, ಹಿಂಭಾಗದ ಎಸಿಯೊಂದಿಗೆ ಆಟೋ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಕಪ್ ಹೋಲ್ಡರ್ಸ್ ಮತ್ತು ಸ್ಪೀಕರ್ ಆಡಿಯೊ ಸಿಸ್ಟಂ ಅನ್ನು ಒಳಗೊಂಡಿದೆ.

ಈ ಮಾರುತಿ ಎರ್ಟಿಗಾ ಎಂಪಿವಿಯಲ್ಲಿ ಸುರಕ್ಷತೆಗಾಗಿ, ಎಂಪಿವಿ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಇಎಸ್‌ಪಿ, ಹಿಲ್ ಹೋಲ್ಡ್ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಫ್ರಂಟಲ್ ಏರ್‌ಬ್ಯಾಗ್ ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕಾರೇಜ್‌ಗಳೊಂದಿಗೆ ಎಬಿಎಸ್ ಅನ್ನು ಹೊಂದಿದೆ.

ಭಾರತದಲ್ಲಿ ಮಾರುತಿ ಸುಜುಕಿಯ ಮುಖ್ಯ ಪ್ರತಿಸ್ಪರ್ಧಿ ಹ್ಯುಂಡೈ ಕಂಪನಿಯು ಕ್ರೆಟಾವನ್ನು ಆಧರಿಸಿ ಅಲ್ಕಾಜರ್ 7-ಸೀಟರ್ ಮಾದರಿಯನ್ನು ಬಿಡುಗಡೆಗೊಳಿಸುವುದರಿಂದ ಪೈಪೋಟಿ ಹೆಚ್ಚಾಗುತ್ತದೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಹಲವು 7-ಸೀಟರ್ ಮಾದರಿಗಳ ಆಯ್ಕೆಗಳಿವೆ. ಅಲ್ಲದೇ 7-ಸೀಟರ್ ಮಾದರಿಗಳ ಬೇಡಿಕೆ ನಡುವೆ ಪೈಪೋಟಿ ಹೆಚ್ಚಾಗಿದೆ. ಇದರಿಂದ ಮಾರುತಿ ಸುಜುಕಿಯು ಮುಂದಿನ ವರ್ಷ ಬಿಡುಗಡೆ ಮಾಡಲು ನವೀಕರಿಸಿದ ಎರ್ಟಿಗಾವನ್ನು ಸಿದ್ಧಪಡಿಸುತ್ತಿದೆ.

ಭಾರತದಲ್ಲಿ ಮಾರುತಿ ಸುಜುಕಿಯ ಮುಖ್ಯ ಪ್ರತಿಸ್ಪರ್ಧಿ ಹ್ಯುಂಡೈ ಕಂಪನಿಯು ಕ್ರೆಟಾವನ್ನು ಆಧರಿಸಿ ಅಲ್ಕಾಜರ್ 7-ಸೀಟರ್ ಮಾದರಿಯನ್ನು ಬಿಡುಗಡೆಗೊಳಿಸುವುದರಿಂದ ಪೈಪೋಟಿ ಹೆಚ್ಚಾಗುತ್ತದೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಹಲವು 7-ಸೀಟರ್ ಮಾದರಿಗಳ ಆಯ್ಕೆಗಳಿವೆ. ಅಲ್ಲದೇ 7-ಸೀಟರ್ ಮಾದರಿಗಳ ಬೇಡಿಕೆ ನಡುವೆ ಪೈಪೋಟಿ ಹೆಚ್ಚಾಗಿದೆ. ಇದರಿಂದ ಮಾರುತಿ ಸುಜುಕಿಯು ಮುಂದಿನ ವರ್ಷ ಬಿಡುಗಡೆ ಮಾಡಲು ನವೀಕರಿಸಿದ ಎರ್ಟಿಗಾವನ್ನು ಸಿದ್ಧಪಡಿಸುತ್ತಿದೆ.

ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಂಪಿವಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಹೊಸ ಟೊಯೊಟಾ ಎಂಪಿವಿಯು ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯನ್ನು ಆಧರಿಸಿ ಅಭಿವೃದ್ದಿ ಪಡಿಸಲಾಗುತ್ತದೆ. ಒಟ್ಟಿನಲ್ಲಿ ಎಂಪಿವಿ ವಿಭಾಗದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಮಾರಾಟದಲ್ಲಿ ತನ್ನ ಮಿಂಚಿನ ಓಟ ಮುಂದುವರೆಸಿದೆ.


Click it and Unblock the Notifications