ನಾಲ್ಕು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಕೋವಿಡ್ ಪರಿಣಾಮ ಸ್ವಂತ ವಾಹನ ಬಳಕೆ ಹೆಚ್ಚುತ್ತಿರುವುದು ಕಾರು ಉತ್ಪಾದನಾ ಕಂಪನಿಗಳಿಗೆ ವರವಾಗಿ ಪರಿಣಮಿಸಿದ್ದರೂ ಆರ್ಥಿಕ ಸಂಕಷ್ಟದ ಸಮಯದಲ್ಲಿ ವಾಹನ ಖರೀದಿಯೂ ಅಷ್ಟು ಸುಲಭವಾಗಿಲ್ಲ. ಈ ಹಿನ್ನಲೆಯಲ್ಲಿ ಅನುಕೂಲಕ್ಕೆ ತಕ್ಕಂತೆ ವಾಹನಗಳನ್ನು ಲೀಸ್ ಪಡೆದುಕೊಳ್ಳುವ ಪ್ರಕ್ರಿಯೆಯು ಹೆಚ್ಚುತ್ತಿದ್ದು, ಕಾರುಗಳ ಲೀಸ್ ಪ್ರಕ್ರಿಯೆಯಲ್ಲಿ ಮಾರುತಿ ಸುಜುಕಿ ಮುಂಚೂಣಿಯಲ್ಲಿದೆ.

ನಾಲ್ಕು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಹೊಸ ಕಾರ್ ಲೀಸ್ ಯೋಜನೆ ಅಡಿ ಮಾರುತಿ ಸುಜುಕಿ ಕಂಪನಿಯು ವಿವಿಧ ಕಾರುಗಳ ಮೇಲೆ ನಿಗದಿತ ಅವಧಿಗೆ ಇಂತಿಷ್ಟು ಪ್ರಮಾಣದ ದರ ನಿಗದಿ ಮಾಡಿದ್ದು, ಕಾರು ಮಾದರಿಗಳು ಮತ್ತು ಲೀಸ್ ಅವಧಿಯ ಮೇಲೆ ದರವನ್ನು ನಿಗದಿ ಮಾಡಲಾಗುತ್ತದೆ. ಇದು ಇಳಿಕೆಯಾಗಿರುವ ಹೊಸ ವಾಹನಗಳ ಮಾರಾಟ ಪ್ರಮಾಣವನ್ನು ಸುಧಾರಿಸಲು ನೇರವಾಗುತ್ತಿದ್ದು, ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳು ಲೀಸ್ ಆಯ್ಕೆಗೆ ಚಾಲನೆ ನೀಡಿವೆ.

ನಾಲ್ಕು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ದೆಹಲಿ, ಮುಂಬೈ, ಬೆಂಗಳೂರು, ಹೈದ್ರಾಬಾದ್, ಪುಣೆಯಲ್ಲಿ ಈಗಾಗಲೇ ಲೀಸ್ ಕಾರುಗಳ ಆಯ್ಕೆಗೆ ಚಾಲನೆ ನೀಡಿರುವ ಮಾರುತಿ ಸುಜುಕಿಯು ಇದೀಗ ಮಂಗಳೂರು, ಮೈಸೂರು, ಇಂಧೋರ್ ಮತ್ತು ಜೈಪುರ್‌ಗೂ ವಿಸ್ತರಣೆ ಮಾಡಿದೆ.

ನಾಲ್ಕು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ಆರಂಭಿಸಿರುವ ಹೊಸ ಕಾರ್ ಸಬ್‌ಸ್ಕೈಬ್‌ ಹೆಸರಿನ ಲೀಸ್ ಕಾರುಗಳ ಯೋಜನೆಯು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಅರೆನಾ ಮತ್ತು ನೆಕ್ಸಾ ಎರಡು ಮಾರಾಟ ಮಳಿಗೆಗಳಲ್ಲೂ ಲೀಸ್ ಆಯ್ಕೆಗಳು ಲಭ್ಯವಿವೆ.

ನಾಲ್ಕು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಅರೆನಾ ಕಾರು ಮಳಿಗೆಗಳಲ್ಲಿ ವ್ಯಾಗನ್ಆರ್, ಸ್ವಿಫ್ಟ್, ಡಿಜೈರ್, ವಿಟಾರಾ ಬ್ರೆಝಾ ಮತ್ತು ಎರ್ಟಿಗಾ ಕಾರುಗಳ ಮೇಲೆ ಲೀಸ್ ಆಯ್ಕೆ ಲಭ್ಯವಿದ್ದಲ್ಲಿ ನೆಕ್ಸಾ ಕಾರು ಮಾರಾಟ ಮಳಿಗೆಗಳಲ್ಲಿ ಇಗ್ನಿಸ್, ಸಿಯಾಜ್, ಬಲೆನೊ, ಎಸ್-ಕ್ರಾಸ್ ಮತ್ತು ಎಕ್ಸ್ಎಲ್6 ಕಾರುಗಳನ್ನು ಲೀಸ್ ಪಡೆಯಬಹುದಾಗಿದೆ.

ನಾಲ್ಕು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಆಕರ್ಷಕ ಬೆಲೆಗಳಲ್ಲಿ ಲೀಸ್ ಕಾರುಗಳು..!

ಮಾರುತಿ ಸುಜುಕಿಯು ಪ್ರತಿ ದಿನಕ್ಕೆ ಕನಿಷ್ಠ ರೂ.450ರಿಂದ ಗರಿಷ್ಠ ರೂ.1,100 ದರ ಅನ್ವಯವಾಗುವಂತೆ ಲೀಸ್ ಕಾರುಗಳ ದರವನ್ನು ನಿಗದಿಪಡಿಸಿದ್ದು, ಹೊಸ ಲೀಸ್ ಕಾರಿಗೆ ನೋಂದಣಿ ಮಾಡಿದ 15 ದಿನದೊಳಗಾಗಿ ಕಾರಿನ ಮಾಲೀಕತ್ವವನ್ನು ಹಸ್ತಾಂತರ ಮಾಡಲಿದೆ.

ನಾಲ್ಕು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಲೀಸ್ ಪಡೆದ ಕಾರುಗಳ ದರವನ್ನು ಪ್ರತಿ ತಿಂಗಳು ಪಾವತಿಸಬೇಕಿದ್ದು, ಕನಿಷ್ಠ 12 ತಿಂಗಳು ಲೀಸ್ ಅವಧಿಯನ್ನು ಆಯ್ಕೆಯನ್ನು ಪಡೆದುಕೊಳ್ಳಬೇಕು. ಗ್ರಾಹಕರ ತಮ್ಮ ಆದ್ಯತೆ ಮೇರೆಗೆ ಕಾರುಗಳನ್ನು 12, 24, 36 ಮತ್ತು 48 ತಿಂಗಳಿಗೆ ಲೀಸ್ ಪಡೆದುಕೊಳ್ಳಬಹುದಾಗಿದ್ದು, ಲೀಸ್ ಮೊತ್ತದಲ್ಲೇ ಕಾರಿನ ನಿರ್ವಹಣಾ ವೆಚ್ಚ, ಪಾಲಿಸಿ ಶುಲ್ಕಗಳು ಒಳಗೊಂಡಿರುತ್ತವೆ.

ನಾಲ್ಕು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಲೀಸ್ ಕಾರುಗಳ ಪಟ್ಟಿಯಲ್ಲಿ ವ್ಯಾಗನ್ಆರ್ ಎಲ್ಎಕ್ಸ್ಐ 1.0 ಲೀಟರ್ ಮ್ಯಾನುವಲ್ ಮಾದರಿಯು ಪ್ರತಿ ತಿಂಗಳಿಗೆ ಆರಂಭಿಕವಾಗಿ ರೂ. 13,508 ದರ ಹೊಂದಿದ್ದಲ್ಲಿ ಹೈ ಎಂಡ್ ಮಾದರಿಯಾದ ಎಕ್ಸ್ಎಲ್6 ಅಲ್ಪಾ ಆಟೋಮ್ಯಾಟಿಕ್ ಆವೃತ್ತಿಯು ರೂ.32,216 ಶುಲ್ಕ ಹೊಂದಿದೆ.

ನಾಲ್ಕು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಲೀಸ್ ಕಾರುಗಳಿಗೆ ವಾರ್ಷಿಕವಾಗಿ ಗರಿಷ್ಠ 25 ಸಾವಿರ ಕಿ.ಮೀ ನಿಗದಿಪಡಿಸಲಾಗಿದ್ದು, ಒಂದು ವರ್ಷದಲ್ಲಿ 25 ಸಾವಿರ ಕಿ.ಮೀ ಗಿಂತಲೂ ಹೆಚ್ಚು ಸಂಚರಿಸಿದ್ದಲ್ಲಿ ಪ್ರತಿ ಕಿ.ಮೀ ಹೆಚ್ಚುವರಿಗಾಗಿ ರೂ.5 ರಂತೆ ತೆರಿಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ನಾಲ್ಕು ಹೊಸ ನಗರಗಳಲ್ಲಿ ಕಾರ್ ಲೀಸ್ ಆಯ್ಕೆ ತೆರೆದ ಮಾರುತಿ ಸುಜುಕಿ

ಒಂದು ವೇಳೆ ಲೀಸ್ ಪಡೆದುಕೊಂಡ ಅವಧಿಗಿಂತಲೂ ಮೊದಲೇ ಕಾರು ಹಿಂದಿರುಗಿಸುವ ಸಂದರ್ಭ ಎದುರಾದಲ್ಲಿ ಅದಕ್ಕೂ ಅವಕಾಶಗಳನ್ನು ನೀಡಲಾಗಿದ್ದು, ಅವಧಿಗಿಂತಲೂ ಮುಂಚಿತವಾಗಿ ಕಾರು ಹಿಂದಿರುಗಿಸುವುದಾರರೇ ಕೆಲವು ಷರತ್ತುಗಳಿಗೆ ಬದ್ದವಾಗಿರಬೇಕಿರುತ್ತದೆ.

Article Published On: Tuesday, June 29, 2021, 12:41 [IST]
English summary
Maruti Suzuki Monthly Subscription Plan Expanded. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+