ಹೊಸ ಫೀಚರ್‌ನೊಂದಿಗೆ ಬಿಡುಗಡೆಗೊಂಡ ಮಾರುತಿ ಸುಜುಕಿ ಸೂಪರ್ ಕ್ಯಾರಿ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಸೂಪರ್ ಕ್ಯಾರಿ ಲೈಟ್ ಕಮರ್ಷಿಯಲ್ ವೆಹಿಕಲ್ (ಎಲ್‌ಸಿವಿ) ಸೂಪರ್ ಕ್ಯಾರಿ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಮಾರುತಿ ಸುಜುಕಿ ಸೂಪರ್ ಕ್ಯಾರಿ ಮಾದರಿಯು ರಿವರ್ಸ್ ಪಾರ್ಕಿಂಗ್ ಅಸಿಸ್ಟ್ (ಆರ್‌ಪಿಎಎಸ್) ಸಿಸ್ಟಂ ಅನ್ನು ಪಡೆದುಕೊಂಡಿದೆ.

ಈ ಹೊಸ ಸುರಕ್ಷತಾ ವೈಶಿಷ್ಟ್ಯವು ಈಗ ವಾಹನದ ಮೇಲೆ ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಆಗಿ ಲಭ್ಯವಿರುತ್ತದೆ. ಹೊಸ ವೈಶಿಷ್ಟ್ಯದ ಸೇರ್ಪಡೆಯ ಹೊರತಾಗಿ, ಸೂಪರ್ ಕ್ಯಾರಿ ಹಿಂದಿನ ಮಾದರಿಗೆ ಹೋಲಿಸಿದರೆ ರೂ.18,000 ದುಬಾರಿಯಾಗಿದೆ. ಇದೀಗ ಈ ಹೊಸ ಸೂಪರ್ ಕ್ಯಾರಿ ಮಾದರಿಯ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.4.48 ಲಕ್ಷಗಳಾಗಿದೆ.

ಮಾರುತಿ ಸುಜುಕಿ ಸೂಪರ್ ಕ್ಯಾರಿ ಮಾದರಿಯ ಎಲ್ಲಾ ರೂಪಾಂತರಗಳು ಆರ್‌ಪಿಎಎಸ್ ಸಿಸ್ಟಂ ಅನ್ನು ಹೊಂದಿರುತ್ತದೆ. ಈ ಹೊಸ ಫೀಚರ್ ಮತ್ತು ಇದರ ಬೆಲೆಯ ಬದಲಾವಣೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಯನ್ನು ಹೊಂದಿಲ್ಲ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಾರುತಿ ಸುಜುಕಿ 2016ರಲ್ಲಿ ಸೂಪರ್ ಕ್ಯಾರಿಯೊಂದಿಗೆ ಕಮರ್ಷಿಯಲ್ ವಾಹನಗಳ ವಿಭಾಗಕ್ಕೆ ಕಾಲಿಟ್ಟಿತ್ತು. ಮಾರುತಿ ಸುಜುಕಿ ಸೂಪರ್ ಕ್ಯಾರಿ ಕಮರ್ಷಿಯಲ್ ವಾಹನಗಳ ವಿಭಾಗದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಮಿನಿ-ಟ್ರಕ್ ಆಗಿದೆ

ಈ ಸೂಪರ್ ಕ್ಯಾರಿ ಸಿಎನ್‌ಜಿಯು ಸ್ಮಾರ್ಟ್ ಹೈಬ್ರಿಡ್ ವಾಹನಗಳನ್ನು ಒಳಗೊಂಡಿರುವ ಬ್ರ್ಯಾಂಡ್‌ನ 'ಮಿಷನ್ ಗ್ರೀನ್ ಮಿಲಿಯನ್' ನ ಭಾಗವಾಗಿದೆ. ವಿಶೇಷವಾಗಿ ಮಿನಿ ಲೈಟ್ ಕಮರ್ಷಿಯಲ್ ವೆಹಿಕಲ್ ವಿಭಾಗದ ವಾಹನಗಳ ಬಳೆಕೆದಾರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಈ ಸೂಪರ್ ಕ್ಯಾರಿಯು ಹೆಚ್ಚು ಪವರ್, ವಿಶಾಲವಾದ ಸ್ಪೇಸ್, ಉತ್ತಮ ಗುಣಮಟ್ಟ ಮತ್ತು ಬಹುಮುಖ ಡೆಕ್ ಅನ್ನು ಹೊಂದಿರುವುದು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಸೂಪರ್ ಕ್ಯಾರಿ ವ್ಯಾನ್ - ಸ್ಟ್ಯಾಂಡರ್ಡ್, ಎಸ್-ಸಿಎನ್‌ಜಿ ಹಾಗೂ ಕ್ಯಾಪ್ ಚಾಸಿಸ್ ಮಾದರಿಗಳಲ್ಲಿ ಮಾರಾಟವಾಗುತ್ತದೆ.

ಸ್ಟ್ಯಾಂಡರ್ಡ್ ಮಾದರಿಯಲ್ಲಿ 1.2 ಲೀಟರಿನ, 4 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, ಎಸ್-ಸಿಎನ್‌ಜಿ ಮಾದರಿಯಲ್ಲಿ 1.2 ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಎಂಜಿನ್ ಅನ್ನು ಕ್ಯಾಪ್ ಚಾಸಿಸ್ ಮಾದರಿಯಲ್ಲಿಯೂ ಅಳವಡಿಸಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸೂಪರ್ ಕ್ಯಾರಿ ಮಿನಿಟ್ರಕ್ 2183 ಎಂಎಂ ಉದ್ದ ಮತ್ತು 1488 ಎಂಎಂ ಅಗಲದ ಡೆಕ್ ಅನ್ನು ಹೊಂದಿದೆ, ಇದು ಸರಕು ಸಾಮಾನುಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಇದು 740 ಕೆಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಹೊಸ ಮಿನಿಟ್ರಕ್ 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಈ ವಾಹನದಲ್ಲಿ ಹಲವಾರು ಫೀಚರ್ ಗಳನ್ನು ಹೊಂದಿದೆ. ಇದರಲ್ಲಿ ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಸೀಟ್-ಬೆಲ್ಟ್ ರಿಮೈಂಡರ್, ಲಾಕ್ ಮಾಡಬಹುದಾದ ಗ್ಲೋವ್‌ಬಾಕ್ಸ್, ದೊಡ್ಡ ಲೋಡಿಂಗ್ ಡೆಕ್ ಮತ್ತು ಇನ್ನು ಹಲವು ಫೀಚರ್ ಗಳಿವೆ.

ಸೂಪರ್ ಕ್ಯಾರಿ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಲೈಟ್ ಕಮರ್ಷಿಯಲ್ ವೆಹಿಕಲ್ (ಎಲ್‌ಸಿವಿ) ಆಗಿದೆ. ಮಾರುತಿ ಸುಜುಕಿ ಸೂಪರ್ ಕ್ಯಾರಿ ಎಲ್‌ಸಿವಿ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಏಸ್ ಗೆ ಪೈಪೋಟಿಯನ್ನು ನೀಡುತ್ತದೆ. ಮಾರುತಿ ಸುಜುಕಿ ಸೂಪರ್ ಕ್ಯಾರಿಯು ದೇಶದ ಮೊದಲ 4 ಸಿಲಿಂಡರ್ ಚಾಲಿತ ಮಿನಿ ಟ್ರಕ್ ಎಂಬ ಹೆಗ್ಗಳಿಕೆಯೊಂದಿಗೆ ಹಲವಾರು ವಿಶೇಷತೆಗಳನ್ನು ಕೂಡ ಒಳಗೊಂಡಿವೆ.


Click it and Unblock the Notifications








