ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ(Maruti Suzuki) ಕಂಪನಿಯು ಹೊಸ ವಾಹನಗಳ ಮಾರಾಟವನ್ನು ಉತ್ತೇಜಿಸಲು ಪ್ರಮುಖ ಕಾರುಗಳ ಮೇಲೆ ದಸರಾ ಸಂಭ್ರಮಕ್ಕಾಗಿ ಅಕ್ಟೋಬರ್ ತಿಂಗಳಾಂತ್ಯದ ತನಕ ವಿವಿಧ ಆಫರ್‌ಗಳನ್ನು ನೀಡುತ್ತಿದ್ದು, ಅರೆನಾ ಮತ್ತು ನೆಕ್ಸಾ ಎರಡು ಮಾದರಿ ಕಾರುಗಳ ಮೇಲೂ ವಿಶೇಷ ರಿಯಾಯ್ತಿ ಘೋಷಣೆ ಮಾಡಿದೆ.

ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ಕೋವಿಡ್ ಪರಿಣಾಮ ಹೆಚ್ಚುತ್ತಿರುವ ಸ್ವಂತ ವಾಹನಗಳ ಬಳಕೆಯ ಪರಿಣಾಮ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಕಾರು ಮಾರಾಟವನ್ನು ಉತ್ತೇಜಿಸಲು ವಿವಿಧ ಕೊಡುಗೆಗಳೊಂದಿಗೆ ನಗದು ರಿಯಾಯಿತಿಗಳನ್ನು ಘೋಷಣೆ ಮಾಡಿದೆ. ಮಾರುತಿ ಸುಜುಕಿಯು ಅರೆನಾ ಮತ್ತು ನೆಕ್ಸಾ ಎರಡು ಪ್ಲಾಟ್‌ಫಾರಂ ಕಾರು ಮಾದರಿಗಳ ಮೇಲೂ ವಿಶೇಷ ರಿಯಾಯಿತಿ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್‌ಬ್ಯಾಕ್, ಎಕ್ಸ್‌ಚೆಂಜ್, ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯವಿವೆ.

ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ಮಾರುತಿ ಸುಜುಕಿ ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿದ್ದು, ನವರಾತ್ರಿ ಸಂಭ್ರಮಕ್ಕಾಗಿ ನಿಗದಿತ ಅವಧಿಯಲ್ಲಿ ಬುಕ್ಕಿಂಗ್ ಮಾಡುವ ಗ್ರಾಹಕರಿಗಾಗಿ ವಿವಿಧ ಆಫರ್‌ಗಳ ಜೊತೆಗೆ ಹೆಚ್ಚುವರಿಯಾಗಿ ರೂ. 5 ಸಾವಿರ ಕ್ಯಾಶ್‌ಬ್ಯಾಕ್ ಆಫರ್ ಪ್ರಕಟಿಸಿದೆ.

ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ಎಂಟ್ರಿ ಲೆವೆಲ್ ಕಾರು ಮಾದರಿಯಾಗಿರುವ ಆಲ್ಟೊ ಆರಂಭಿಕ ಮಾದರಿಯ ಖರೀದಿ ಮೇಲೆ ಕಂಪನಿಯು ರೂ.25 ಸಾವಿರ ನಗದು ರಿಯಾಯಿತಿ ಹಾಗೂ ರೂ.15 ಸಾವಿರ ವಿನಿಮಯ ಬೋನಸ್ ನೀಡುತ್ತಿದ್ದು, ಆಲ್ಟೊ ಇತರೆ ವೆರಿಯೆಂಟ್‌ಗಳ ಖರೀದಿ ಮೇಲೆ ರೂ. 20 ಸಾವಿರ ತನಕ ನಗದು ರಿಯಾಯ್ತಿ, ರೂ. 18 ಸಾವಿರ ತನಕ ವಿನಿಮಯ ಬೋನಸ್ ಮತ್ತು ರೂ. 3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಪಡೆಯಬಹುದಾಗಿದೆ.

ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ಮೈಕ್ರೊ ಎಸ್‌ಯುವಿ ಮಾದರಿಯಾದ ಎಸ್ ಪ್ರೆಸ್ಸೊ(S-Presso) ಕಾರಿನ ಮೇಲೆ ಕಂಪನಿಯು ರೂ.30 ಸಾವಿರ ನಗದು ರಿಯಾಯಿತಿ ಹಾಗೂ ರೂ.10 ಸಾವಿರ ವಿನಿಮಯ ಬೋನಸ್ ಮತ್ತು ರೂ. 3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ ನೀಡುತ್ತಿದ್ದು, ಸೆಲೆರಿಯೊ ಕಾರು ಮಾದರಿಗಾಗಿ ರೂ. 18 ಸಾವಿರ ವಿನಿಮಯ ಬೋನಸ್ ನೀಡುತ್ತಿದೆ.

ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ವ್ಯಾಗನ್ಆರ್ ಕಾರು ಖರೀದಿಯ ಮೇಲೆ ರೂ.5 ಸಾವಿರ ನಗದು ರಿಯಾಯತಿ ಮತ್ತು ರೂ.10 ಸಾವಿರ ವಿನಿಮಯ ಬೋನಸ್ ನೀಡುತ್ತಿದ್ದು, ಮಿನಿ ವ್ಯಾನ್ ಇಕೊ ಆವೃತ್ತಿಯ ಮೇಲೆ ರೂ.5 ಸಾವಿರ ನಗದು ರಿಯಾಯಿತಿ ಹಾಗೂ ರೂ.10 ಸಾವಿರ ವಿನಿಮಯ ಬೋನಸ್ ನೀಡಲಾಗುತ್ತದೆ.

ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ಹೊಸ ಆಫರ್‌ಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಸ್ವಿಫ್ಟ್‌ ಕಾರಿನ ವಿವಿಧ ರೂಪಾಂತರಗಳಿಗೆ ಅನುಗುಣವಾಗಿ ರೂ. 16,500 ತನಕ ನಗದು ರಿಯಾಯಿತಿ ನೀಡುತ್ತಿದ್ದು, ವಿಟಾರಾ ಬ್ರೆಝಾ ಮೇಲೆ ಕಂಪನಿಯು ರೂ. 5 ಸಾವಿರ ನಗದು ರಿಯಾಯಿತಿ ಮತ್ತು ರೂ. 18 ಸಾವಿರ ತನಕ ವಿನಿಮಯ ಬೋನಸ್ ಘೋಷಣೆ ಮಾಡಿದೆ.

ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ಡಿಜೈರ್ ಕಾರು ಖರೀದಿಯ ಮೇಲೆ ಮಾರುತಿ ಸುಜುಕಿ ಕಂಪನಿಯು ರೂ. 7 ಸಾವಿರ ನಗದು ರಿಯಾಯಿತಿ ಮತ್ತು ರೂ. 10 ಸಾವಿರ ತನಕ ವಿನಿಮಯ ಬೋನಸ್ ಘೋಷಣೆ ಮಾಡಿದ್ದು, ಡಿಜೈರ್ ಸ್ಪೆಷಲ್ ಎಡಿಷನ್ ಮೇಲೆ ರೂ. 21,500 ನಗದು ರಿಯಾಯ್ತಿ ಪಡೆದುಕೊಂಡಿದೆ.

ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ಹೊಸ ಆಫರ್‌ಗಳಲ್ಲಿ ಎರ್ಟಿಗಾ ಎಂಪಿವಿ ಮೇಲೆ ಯಾವುದೇ ಆಫರ್ ನೀಡುತ್ತಿಲ್ಲವಾದರೂ ಡೀಲರ್ಸ್ ಮಟ್ಟದಲ್ಲಿ ಕೆಲವು ವಿಶೇಷ ಕೊಡುಗೆಗಳನ್ನು ನೀಡಲಾಗಿದ್ದು, ನೆಕ್ಸಾ ಕಾರುಗಳು ಸಹ ಉತ್ತಮ ಆಫರ್ ಹೊಂದಿವೆ.

ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ಮಾರುತಿ ಸುಜುಕಿ ನೆಕ್ಸಾ ಕಾರು ಮಾದರಿಗಳಾದ ಬಲೆನೊ, ಇಗ್ನಿಸ್, ಸಿಯಾಜ್, ಎಸ್-ಕ್ರಾಸ್ ಕಾರುಗಳ ಮೇಲೆ ಆಫರ್ ನೀಡುತ್ತಿದ್ದು, ಹೊಸ ಆಫರ್ ನೆಕ್ಸಾ ಮಾದರಿಯಾದ ಎಸ್-ಕ್ರಾಸ್ ಮಾದರಿಯ ಮೇಲೆ ಹೆಚ್ಚಿನ ಕೊಡುಗೆಗಳನ್ನು ನೀಡಲಾಗುತ್ತಿದೆ.

ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ಬಲೆನೊ ಕಾರು ಖರೀದಿಯ ಮೇಲೆ ಮಾರುತಿ ಸುಜುಕಿ ಕಂಪನಿಯು ಗರಿಷ್ಠ ರೂ.18,700 ನಗದು ರಿಯಾಯಿತಿ ಮತ್ತು ರೂ. 10 ಸಾವಿರ ತನಕ ವಿನಿಮಯ ಬೋನಸ್ ಘೋಷಣೆ ಮಾಡಿದ್ದು, ಬಲೆನೊ ಸಿವಿಟಿ ಮಾದರಿಗಳ ಮೇಲೆ ನಗದು ರಿಯಾಯ್ತಿ ನೀಡಿಲ್ಲವಾದರೂ ರೂ.10 ಸಾವಿರ ವಿನಿಮಯ ಬೋನಸ್ ಮತ್ತು ರೂ. 2,500 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ಹಾಗೆಯೇ ಇಗ್ನಿಸ್ ಕಾರು ಖರೀದಿಯ ಮೇಲೆ ಮಾರುತಿ ಸುಜುಕಿ ಕಂಪನಿಯು ಗರಿಷ್ಠ ರೂ. 19,200 ನಗದು ರಿಯಾಯಿತಿ ಮತ್ತು ರೂ. 10 ಸಾವಿರ ತನಕ ವಿನಿಮಯ ಬೋನಸ್ ಘೋಷಣೆ ಮಾಡಿದ್ದು, ರೂ. 2,500 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ಸಿಯಾಜ್ ಕಾರು ಖರೀದಿಯ ಮೇಲೆ ಮಾರುತಿ ಸುಜುಕಿ ಕಂಪನಿಯು ಗರಿಷ್ಠ ರೂ. 24,990 ನಗದು ರಿಯಾಯಿತಿ ಮತ್ತು ರೂ. 25 ಸಾವಿರ ತನಕ ವಿನಿಮಯ ಬೋನಸ್ ಘೋಷಣೆ ಮಾಡಿದ್ದು, ರೂ. 2,500 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ದಸರಾ ಆಫರ್: Maruti Suzuki ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್!

ಇನ್ನುಳಿದಂತೆ ಹೈ ಎಂಡ್ ಕಾರು ಮಾದರಿಯಾದ ಎಸ್-ಕ್ರಾಸ್ ಕ್ರಾಸ್ ಓವರ್ ಎಸ್‌ಯುವಿ ಕಾರು ಖರೀದಿಯ ಮೇಲೆ ಮಾರುತಿ ಸುಜುಕಿ ಕಂಪನಿಯು ಗರಿಷ್ಠ ರೂ.15 ನಗದು ರಿಯಾಯಿತಿ ಮತ್ತು ರೂ. 25 ಸಾವಿರ ತನಕ ವಿನಿಮಯ ಬೋನಸ್ ಘೋಷಣೆ ಮಾಡಿದ್ದು, ರೂ. 5 ಸಾವಿರ ತನಕ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

Article Published On: Friday, October 8, 2021, 11:09 [IST]
English summary
Maruti suzuki offers and discounts for festive season details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+